ನವದೆಹಲಿ: ಕೋವಾಕ್ಸಿನ್ ಸುರಕ್ಷತೆ ಕುರಿತು ಇತ್ತೀಚಿಗೆ ಬನರಾಸ್ ಹಿಂದೂ ವಿಶ್ವವಿದ್ಯಾಲಯ (ಬಿಎಚ್ಯು) ಪ್ರಕಟಿಸಿದ ಲೇಖನದ ವಿರುದ್ಧ ಶೋಕಾಸ್ ನೋಟಿಸ್ ಹೊರಡಿಸಲಾಗಿದೆ. ಅಲ್ಲದೇ, ತಮ್ಮ ತಪ್ಪು ಒಪ್ಪಿಕೊಳ್ಳುವ ದೋಷಾರೋಪಣೆ ಪ್ರಕಟಿಸದಿದ್ದರೆ ಕಾನೂನು ಮತ್ತು ಆಡಳಿತ ಕ್ರಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಚ್ಚರಿಸಿದೆ.
ಈ ಸಂಬಂಧ ಬಿಎಚ್ಯುನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರಿ ಸಂಖ್ವರ್ ಅವರಿಗೆ ಪತ್ರ ಬರೆದಿರುವ ಐಸಿಎಂಆರ್ ಪ್ರಧಾನ ನಿರ್ದೇಶಕ ರಾಜೀವ್ ಬಹ್ಲ್, 'Long-Term Safety Analysis of the BBV152 Coronavirus Vaccine in Adolescents and Adults: Findings from a l-Year Prospective Study in North India.' ಹೆಸರಿನಲ್ಲಿ ಪ್ರಕಟವಾದ ಅಧ್ಯಯನವೂ ತಪ್ಪಾಗಿದ್ದು, ತಪ್ಪು ದಾರಿಗೆ ಎಳೆಯುವ ಲೇಖನ ಎಂದು ಐಸಿಎಂಆರ್ ತಿಳಿಸಿದೆ
ಐಸಿಎಂಆರ್ನ ಯಾವುದೇ ಪೂರ್ವಾನುಮತಿ ಪಡೆಯದೇ ಅಧ್ಯಯನ ನಡೆಸಿರುವ ಜೆರಿಯಾಟ್ರಿಕ್ ಮೆಡಿಸಿನ್ನ ವಿಭಾಗದ ಮುಖ್ಯಸ್ಥ, ಡಾ ಸಂಖ ಸುಬ್ರಾ ಚಕ್ರವರ್ತಿ ಮತ್ತು ಡಾ ಉಪಿಂದರ್ ಕೌರ್ ಅವರ ನಡೆ ಕೂಡ ಅಸಬಂದ್ಧ ಮತ್ತು ಸ್ವೀಕಾರಾರ್ಹವಲ್ಲ ಎಂದು ಟೀಕಿಸಿದೆ
ಪ್ರಕಟವಾಗಿರುವ ಅಧ್ಯಯನವನ್ನು ತೆಗೆದು ಹಾಕಿ, ಈ ಸಂಬಂಧ ತತ್ಕ್ಷಣಕ್ಕೆ ದೋಷಾರೋಪಣೆ ಕೋರಬೇಕು. ಬಿಎಚ್ಯು ಈ ಹಿಂದೆ ಕೂಡ ಯಾವುದೇ ಪೂರ್ವಾನುಮತಿ ಇಲ್ಲದೇ ಅಧ್ಯಯನ ನಡೆಸಿರುವುದು ಕಂಡು ಬಂದಿದೆ. ಈ ಸಂಬಂಧ ಯಾಕೆ ನಾನು ಕಾನೂನು ಮತ್ತು ಆಡಳಿತಾತ್ಮಕ ಕ್ರಮವನ್ನು ನಿಮ್ಮ ವಿರುದ್ಧ ನಡೆಸಬಾರದು ಎಂದು ಕೂಡ ಡಾ ಬಹ್ಲ್ ಪತ್ರದಲ್ಲಿ ತಿಳಿಸಿದ್ದಾರೆ.
ಕೋವಾಕ್ಸಿನ್ನ ಸುರಕ್ಷತೆಯು ವಿಶ್ಲೇಷಣೆ ಕುರಿತು ಅಧ್ಯಯನ ಕಳಪೆಯಾಗಿ ವಿನ್ಯಾಸ ಮಾಡಲಾಗಿದೆ. ಅಧ್ಯಯನದಲ್ಲಿ ಲಸಿಕೆ ಪಡೆಯದವರು. ಲಸಿಕೆ ಪಡೆದವರ ನಡುವೆ ಆಗಿರುವ ಹಾನಿ ಕುರಿತು ಹೋಲಿಕೆಯಲ್ಲಿ ಯಾವುದೆ ನಿಯಂತ್ರಣವಿಲ್ಲ. ಈ ಹಿನ್ನೆಲೆಯಲ್ಲಿ ವರದಿಯನ್ನು ಕೋವಿಡ್ 19 ಲಸಿಕೆಯೊಂದಿಗೆ ಸಂಬಂಧ ಮಾಡಲು ಸಾಧ್ಯವಿಲ್ಲ ಎಂದು ಬಹ್ಲ್ ತಿಳಿಸಿದ್ದಾರೆ.