ಶಿವಮೊಗ್ಗ: 2025ರ ಮೊದಲ ಮಂಗನ ಕಾಯಿಲೆಯ ಪಾಸಿಟಿವ್ ಪ್ರಕರಣ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಪತ್ತೆಯಾಗಿದೆ.
ತೀರ್ಥಹಳ್ಳಿ ತಾಲೂಕಿನ ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 63 ವರ್ಷದ ವೃದ್ಧರೊಬ್ಬರಲ್ಲಿ ಪಾಸಿಟಿವ್ ಕಂಡು ಬಂದಿದೆ. ಇವರಿಗೆ ಮೊದಲು ಜ್ವರ ಕಂಡು ಬಂದಿತ್ತು. ಇವರನ್ನು ದೇವಂಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಸಿದಾಗ ಅನುಮಾನಗೊಂಡು, ಶಿವಮೊಗ್ಗದ ಕೆಎಫ್ಡಿ ಲ್ಯಾಬ್ನಲ್ಲಿ ತಪಾಸಣೆ ನಡೆಸಲಾಯಿತು. ಆಗ ಕೆಎಫ್ಡಿ ಸಾಬೀತಾಗಿದೆ.
ಸದ್ಯ ಕೆಎಫ್ಡಿ ಪಾಸಿಟಿವ್ ಬಂದಿರುವ ರೋಗಿಯನ್ನು ತೀರ್ಥಹಳ್ಳಿಯ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಕಿತ್ಸೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ 23 ವರ್ಷದ ಯುವಕನಲ್ಲೂ ಸಹ ಕೆಎಫ್ಡಿ ಕಂಡು ಬಂದಿದೆ.
ಶಿವಮೊಗ್ಗ ಡಿಎಫ್ಓ ನಟರಾಜ್ ಅವರನ್ನು ಈಟಿವಿ ಭಾರತ ದೂರವಾಣಿ ಮೂಲಕ ಸಂಪರ್ಕಿಸಿದಾಗ, ನಮ್ಮ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಒಬ್ಬರಲ್ಲಿ ಕೆಎಫ್ಡಿ ಪತ್ತೆಯಾಗಿದೆ. ಸದ್ಯ ಅವರು ಆರೋಗ್ಯವಾಗಿದ್ದು, ಇನ್ನೆರಡು ದಿನಗಳಲ್ಲಿ ಅವರು ಮನೆಗೆ ವಾಪಸ್ ಆಗಬಹುದು. ರೋಗ ಹರಡುವುದನ್ನು ತಡೆಯಲು ನಾವು ಜಿಲ್ಲೆಯಲ್ಲಿ ಕೆಎಫ್ಡಿ ಹಾಟ್ ಸ್ಪಾಟ್ ಎಂದು ಗುರುತಿಸಿರುವ ಭಾಗದಲ್ಲಿ ಹೆಚ್ಚಿನ ತಪಾಸಣೆ ನಡೆಸುತ್ತಿದ್ದೇವೆ. ಮಳೆ ಬಂದರೆ ಕೆಎಫ್ಡಿ ಹರಡುವುದನ್ನು ತಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹೆಚ್ಎಂಪಿವಿ ಕೋವಿಡ್ ವೈರಸ್ನಂತೆ ಭಯಾನಕವಲ್ಲ : ತಜ್ಞ ವೈದ್ಯರೊಂದಿಗೆ ಈಟಿವಿ ಭಾರತ ಸಂದರ್ಶನ