ಹೈದರಾಬಾದ್: ಆರೋಗ್ಯಯುತ ಜೀವನಕ್ಕೆ ಸರಳ ಆಹಾರ ಸೇವನೆಯೊಂದೇ ಅಗತ್ಯವಾಗುವುದಿಲ್ಲ. ಸರಿಯಾದ ಸಮತೋಲಿತ ಆಹಾರ ಮತ್ತು ಎಷ್ಟು ತಿನ್ನಬೇಕು ಎಂದು ತಿಳಿಯುವುದು ಕೂಡಾ ಅಷ್ಟೇ ಅಗತ್ಯ ಎನ್ನುತ್ತಾರೆ ತಜ್ಞರು. ಆಹಾರ ಸಮತೋಲನ ಕಾಯ್ದುಕೊಳ್ಳದಿರುವುದು ಅನೇಕ ಬಾರಿ ಅಪಾಯಕಾರಿಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸೇವಿಸುವ ಆಹಾರದ ಹಿಂದೆಯೂ ಲೆಕ್ಕಾಚಾರ ಮಾಡುವುದು ಅಗತ್ಯವಾಗಿದೆ.
ದಿನಕ್ಕೆ ಎಷ್ಟು ಆಹಾರ ಸೇವಿಸಬೇಕು: ವಯಸ್ಸಿಗೆ ಅನುಗುಣವಾಗಿ ಇದರ ಲೆಕ್ಕಾಚಾರ ಇರುತ್ತದೆ. ಹುಟ್ಟಿದ ಮಗುವಿನಿಂದ ವಯೋವೃದ್ದವರೆಗೂ ಸರಿಯಾದ ಸಮತೋಲಿತ ಆಹಾರ ಅಗತ್ಯವಾಗಿದೆ. ಸಮತೋಲಿತ ಆಹಾರಗಳು ದೈಹಿಕ ಮತ್ತು ಮಾನಸಿಕ ಆರೋಗ್ಯ ಬೆಳವಣಿಗೆ ಜೊತೆಗೆ ವಯಸ್ಕ ಹಂತದಲ್ಲಿ ಕಾಣುವ ಜೀವನಶೈಲಿ ರೋಗದಿಂದ ರಕ್ಷಣೆಯನ್ನು ಕೊಡುತ್ತದೆ. ವಯಸ್ಕರು ಸುಧಾರಿತ ದೈಹಿಕ ಚಟುವಟಿಕೆ ಜೊತೆಗೆ ದಿನಕ್ಕೆ 2,000 ಕ್ಯಾಲೋರಿಸ್ ಆಹಾರ ಸೇವನೆಗೆ ಶಿಫಾರಸು ಮಾಡಲಾಗುತ್ತದೆ.
ಏನು ತಿನ್ನಬೇಕು?: ಸಮತೋಲಿತ ಆಹಾರವೂ ಒಂದೇ ಆಹಾರ ಮೂಲದಿಂದ ಸಿಗುವುದಿಲ್ಲ. ಇದು ಈ ಹಿನ್ನಲೆ ಆಹಾರ ಸಾಮಗ್ರಿಗಳ ಆಯ್ಕೆಯಲ್ಲಿ ಎಚ್ಚರವಹಿಸುವುದು ಅಗತ್ಯ. ನಿಮ್ಮ ಅರ್ಧದಷ್ಟು ತಟ್ಟೆ, ತರಕಾರಿ ಮತ್ತು ಹಣ್ಣಿನಿಂದ ಕೂಡಿರಬೇಕು. ಮತ್ತಿನ್ನರ್ಧ ಆಹಾರ ಅಕ್ಕಿ, ಗೋಧಿಯಂತಹ ಧಾನ್ಯ, ಸಿರಿಧಾನ್ಯ, ಮಾಂಸ, ಮೊಟ್ಟೆ, ಎಣ್ಣೆ ಬೀಜ, ಹಾಲುಗಳನ್ನು ಒಳಗೊಂಡಿರಬೇಕು. ಈ ರೀತಿಯ ವೈವಿಧ್ಯಮಯ, ಪೌಷ್ಠಿಕಾಂಶ ಸಮೃದ್ಧ ಆಹಾರ ಸೇವನೆಯಿಂದ ದೇಹ ಕೇವಲ ಮ್ಯಾಕ್ರೋನ್ಯೂಟ್ರಿಯಂಟ್ ಅಂದರೆ ಕಾರ್ಬೋಹೈಡ್ರೇಟ್ಸ್, ಪ್ರೋಟಿನ್, ಕೊಬ್ಬಿನ ಜೊತೆಗೆ ವಿಟಮಿನ್ ಮತ್ತು ಮಿನರಲ್ಸ್ನಂತಹ ಅಂಶಗಳನ್ನು ಪಡೆಯುತ್ತದೆ.
ಸರಿಯಾಗಿ ತಿನ್ನುತ್ತಿದ್ದೀರಾ?: ಭಾರತದಲ್ಲಿ ಅನೇಕ ಮಂದಿ ಮೈಕ್ರೋನ್ಯೂಟಿಯಟ್ ಕೊರತೆಯಿಂದ ಬಳಲುತ್ತಿದ್ದಾರೆ. ಕಾರಣ ಕಚ್ಛಾ ಧಾನ್ಯದ ಬದಲಾಗಿ ಅವರು, ಸಂಸ್ಕರಿಸಿದ ಧಾನ್ಯ- ಕಾಳು ಸೇವಿಸುತ್ತಿದ್ದಾರೆ. ತಾಜಾ ಸಿದ್ದಪಡಿಸಿದ ಆಹಾರಗಳಿಂದ ಅಗತ್ಯ ಪೌಷ್ಠಿಕಾಂಶ ಲಭ್ಯವಾಗುತ್ತದೆ. ದೇಹಕ್ಕೆ ಶೇ 50ರಷ್ಟು ಶಕ್ತಿಯು ಧಾನ್ಯಗಳಿಂದಲೇ ಬರುತ್ತದೆ. ಉಳಿದವು ಪ್ರೋಟಿನ್ ಮತ್ತು ಇತರ ಪೌಷ್ಟಿಕಾಂಶಗಳಿಂದ ಸಿಗಲಿದೆ. ರಾಷ್ಟ್ರೀಯ ಪೌಷ್ಟಿಕಾಂಶ ಸಂಸ್ಥೆ (ಎನ್ಐಎನ್) ಪತ್ತೆ ಮಾಡಿದಂತೆ ಭಾರತದಲ್ಲಿ ಜನರು ಶಕ್ತಿಯನ್ನು ಶೇ 50- 70ರಷ್ಟುನ್ನು ಧಾನ್ಯಗಳಿಂದ ಪಡೆದರೆ, ಕೇವಲ 6 ರಿಂದ 9ರಷ್ಟು ಪ್ರೋಟಿನ್ ಆಹಾರಗಳಿಂದ ಪಡೆಯುತ್ತಿದ್ದಾರೆ.
ಪೌಷ್ಟಿಕಾಂಶ ಕೊರತೆಗೆ ಕಾರಣವೇನು?:
ಹೆಚ್ಚುತ್ತಿರುವ ಆಹಾರದ ಬೆಲೆ: ಪೌಷ್ಟಿಕಾಂಶ ಕೊರತೆಯ ಅಂತರಕ್ಕೆ ಪ್ರಮುಖ ಕಾರಣವೇ ಆಹಾರ ಬೆಲೆ ಹೆಚ್ಚಳ. ಕಳೆದ ಐದು ವರ್ಷಗಳಿಂದ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಇದರಿಂದ ಸಮತೋಲಿತ ಆಹಾರಗಳು ಐಷಾರಾಮಿ ಆಗುತ್ತಿವೆ. ಕೆಲವು ರಾಜ್ಯಗಳಲ್ಲಿ ಆಹಾರ ಬೆಲೆ 2019 ರಿಂದ ಶೇ 30ರಷ್ಟು ಹೆಚ್ಚಾಗಿದೆ. ಇದರಿಂದ ಪೌಷ್ಟಿಕಾಂಶ ಸಮೃದ್ಧ ಆಹಾರ ಕೈಗೆಟುಕದಂತೆ ಆಗಿದೆ.
ಜಾಗೃತಿ ಕೊರತೆ: ಪೌಷ್ಟಿಕಾಂಶ ಸಂಬಂಧಿಸಿದಂತೆ ಅನೇಕ ಜನರಲ್ಲಿ ಅರಿವಿನ ಕೊರತೆ ಇದೆ. ಜೊತೆಗೆ ಅನಾರೋಗ್ಯಕರ, ಸಕ್ಕರೆ, ಉಪ್ಪು ಮತ್ತು ಕೊಬ್ಬಿನಂತಹ ಅಲ್ಟ್ರಾ ಸಂಸ್ಕರಿತ ಆಹಾರಗಳು ಅಧಿಕ ಮಾರುಕಟ್ಟೆ ಕೂಡ ಕಾರಣವಾಗಿದೆ. ತಮಿಳುನಾಡು ಮತ್ತು ಗುಜರಾತ್ನಂತಹ ಶ್ರೀಮಂತ ರಾಜ್ಯದಲ್ಲೂ ಪೌಷ್ಟಿಕಾಂಶದ ಅರವಿನ ಕೊರತೆ ಇದ್ದು, ಕಳಪೆ ಆಹಾರದ ಆಯ್ಕೆಗೆ ಕಾರಣವಾಗುತ್ತಿದೆ.
ಕಡಿಮೆ ವೆಚ್ಚದ, ಅಲ್ಟ್ರಾ ಪ್ರೊಸೆಸ್ಡ್ ಆಹಾರ ಮತ್ತು ಪಾನೀಯಗಳ ಸೇವನೆ ಹೆಚ್ಚಳವು ಮೈಕ್ರೋನೂಟ್ರಿಯೆಂಟ್ ಕೊರತೆ ಮತ್ತು ಸ್ಥೂಲಕಾಯಕ್ಕೆ ಕಾರಣವಾಗುತ್ತಿದೆ. ಹೌಸ್ ಹೋಲ್ಡ್ ಎಕ್ಸ್ಚೇಂಜ್ ಸರ್ವೆ (2022-23) ಪ್ರಕಾರ, ಗ್ರಾಮೀಣ ಭಾರತೀಯರು ಸಂಸ್ಕರಿತ ಆಹಾರದ ಮೇಲೆ ಮಾಸಿಕವಾಗಿ 9.6ರಷ್ಟು ವ್ಯಯ ಮಾಡಿದರೆ, ನಗರದಲ್ಲಿ ಶೇ 10.6ರಷ್ಟಿದೆ.