ಅಜವಾನ ಅಥವಾ ಓಂ ಕಾಳು ಭಾರತೀಯ ಮಸಾಲೆ ಪದಾರ್ಥವಾಗಿದೆ. ಇದನ್ನು ಸಾಮಾನ್ಯವಾಗಿ ಅಜೀರ್ಣ, ಗ್ಯಾಸ್ ಮತ್ತು ಹೊಟ್ಟೆ ನೋವಿನಂತಹ ಜಠರ, ಕರುಳಿನ ಸಮಸ್ಯೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ಅಜವಾನದ ಕಾಳುಗಳು ಕಾರ್ಮಿನೇಟಿವ್, ಆ್ಯಂಟಿಮೈಕ್ರೊಬಿಯಲ್ ಮತ್ತು ಪಿತ್ತಜನಕಾಂಗವನ್ನು ರಕ್ಷಿಸುವ ಗುಣಗಳನ್ನು ಹೊಂದಿವೆ.
ಅಜವಾನ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ಬ್ರಾಂಕೋಡಿಲೇಟರಿ (ಶ್ವಾಸಕೋಶಕ್ಕೆ ಗಾಳಿಯ ಹರಿವನ್ನು ಹೆಚ್ಚಿಸುವ ವಸ್ತು) ಗುಣಲಕ್ಷಣಗಳನ್ನು ಹೊಂದಿದೆ. ಅಜವಾನ ನೀರು ಸೇವನೆಯು ಅಜೀರ್ಣ ಮತ್ತು ಆಮ್ಲೀಯತೆಗೆ ಪರಿಣಾಮಕಾರಿ ಮನೆಮದ್ದು ಆಗಿದೆ. ಒಂದು ಲೋಟ ಬಿಸಿನೀರಿನಲ್ಲಿ ಸ್ವಲ್ಪ ಹುರಿದ ಅಜವಾನವನ್ನು ಸೇರಿಸುವ ಮೂಲಕ ಇದನ್ನು ತಯಾರಿಸಬಹುದು. ಅಜವಾನದ ಪುಡಿಯನ್ನು ಸಂಧಿವಾತ ರೋಗಿಗಳಿಗೆ ರಾಮಬಾಣವಾಗಿದೆ. ಜೊತೆಗೆ ಮಲಬದ್ಧತೆಯು ನಿವಾರಣೆಯಾಗುತ್ತದೆ. ಇದು ಅದರ ವಿರೇಚಕ ಗುಣಲಕ್ಷಣಗಳನ್ನು ಹೊಂದಿದೆ. ಅಜವಾನದ ಕುರಿತ ಪ್ರಮುಖ ಎಚ್ಚರಿಕೆಯೆಂದರೆ, ಗರ್ಭಾವಸ್ಥೆಯಲ್ಲಿ ಇದನ್ನು ಸೇವಿಸಬಾರದು. ಏಕೆಂದರೆ, ಇದು ಗರ್ಭಪಾತಕ್ಕೆ ಕಾರಣವಾಗಬಹುದು.
ಅಜವಾನಕ್ಕೆ ಯಾವೆಲ್ಲಾ ಹೆಸರುಗಳಿವೆ?:ಟ್ರಾಕಿಸ್ಪರ್ಮಮ್ ಅಮ್ಮಿ, ಬಿಷಪ್ಸ್ ವೀಡ್, ಡಿಪ್ಯಾಕ, ಯಮಾನಿ, ಯಮಾನಿಕಾ, ಜೈನ್, ಯವನ್, ಜವಾನ್, ಯವಾನಿ, ಯೋಯಾನ, ಅಜ್ಮಾ, ಅಜ್ಮೋ, ಜವೈನ್, ಜೇವೈನ್, ಓಮಾ, ಯೋಮ್, ಓಮು, ಓಮನ್, ಓಂ ಕಾಳು, ಜುಡಕಾನ್, ಆನ್ವಮಾ, ಜುಡಕನ್, ವಾಮು ಹೆಸರಿನಿಂದಲೂ ಕರೆಯುತ್ತಾರೆ.
ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ: ಅಜವಾನದಲ್ಲಿರುವ ಹಲವಾರು ಸಾರಭೂತ ತೈಲಗಳು, ವಿಶೇಷವಾಗಿ ಥೈಮೋಲ್ ಮತ್ತು ಕಾರ್ವಾಕ್ರೋಲ್, ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅವುಗಳೆಂದರೆ ಸಾಲ್ಮೊನೆಲ್ಲಾ ಮತ್ತು ಇ.ಕೋಲಿಯಂತಹ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ. ಇದು ಆಹಾರ ವಿಷ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.
ರಕ್ತದೊತ್ತಡ ಕಡಿಮೆ ಮಾಡುತ್ತೆ:ಅಜವಾನದಲ್ಲಿರುವ ಥೈಮಾಲ್ ನಿಮ್ಮ ಹೃದಯದ ರಕ್ತನಾಳಗಳಿಗೆ ಕ್ಯಾಲ್ಸಿಯಂ ಪ್ರವೇಶಿಸುವುದನ್ನು ತಡೆಯುವ ಮೂಲಕ ರಕ್ತದೊತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇಲಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಇದು ಬೆಳಕಿಗೆ ಬಂದಿದೆ.
ಜೀರ್ಣಕಾರಿ ಆರೋಗ್ಯ:ಅಜವಾನನಲ್ಲಿರುವ ಸಕ್ರಿಯ ಕಿಣ್ವಗಳು ಹೊಟ್ಟೆಯ ಆಮ್ಲದ ಹರಿವನ್ನು ಸುಧಾರಿಸುತ್ತದೆ. ಇದರಿಂದಾಗಿ ಅಜೀರ್ಣ, ಉಬ್ಬುವುದು ಮತ್ತು ಅನಿಲದಿಂದ ಪರಿಹಾರವನ್ನು ನೀಡುತ್ತದೆ. ಈ ಕಾಳು ಪೆಪ್ಟಿಕ್ ಹುಣ್ಣುಗಳು ಮತ್ತು ಅನ್ನನಾಳ, ಹೊಟ್ಟೆ ಮತ್ತು ಕರುಳಿನಲ್ಲಿನ ಗಾಯಗಳಿಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಅಜವಾನ ಕಿಣ್ವಗಳನ್ನು ಹೊಂದಿರುತ್ತದೆ. ಇವು ಹೊಟ್ಟೆಯ ಆಮ್ಲವನ್ನು ಸುಧಾರಿಸುತ್ತದೆ. ಇದು ಅಜೀರ್ಣ, ಗ್ಯಾಸ್ಟ್ರಿಕ್ನಂತಹ ಸಮಸ್ಯೆಗಳನ್ನು ದೂರ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಅಲ್ಸರ್ ವಾಸಿಯಾಗುತ್ತದೆ. ಮತ್ತು ಅನ್ನನಾಳ, ಹೊಟ್ಟೆ ಮತ್ತು ಕರುಳುಗಳಲ್ಲಿ ಊತ ಕಡಿಮೆಯಾಗುತ್ತದೆ.
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಗೆ ಪರಿಹಾರ:ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ಅಜವಾನದ ನೀರನ್ನು ಕುಡಿಯುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕರಗಿಸಬಹುದು. ಅಜವಾನ ಸೇವನೆಯು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದರಿಂದ ದೇಹದ ಇತರ ಸಮಸ್ಯೆಗಳೂ ದೂರವಾಗುತ್ತವೆ. ಇದರಿಂದ ತೂಕವೂ ಕಡಿಮೆಯಾಗುತ್ತದೆ. ಇದರ ಔಷಧೀಯ ಗುಣಗಳು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಜವಾನ ಕಾಳನ್ನು ಕೊಲೆಸ್ಟ್ರಾಲ್ ಕರಗಿಸುವ ಗುಣ ಹೊಂದಿದೆ.