ETV Bharat / health

ಯೂರಿಕ್ ಆ್ಯಸಿಡ್ ಸಮಸ್ಯೆ: ತಜ್ಞರು ಸೂಚಿಸುವ ಆಹಾರ ಸೇವಿಸಿದರೆ ಪರಿಹಾರ - DIET FOR URIC ACID

Uric Acid: ಯೂರಿಕ್ ಆ್ಯಸಿಡ್​ ಸಮಸ್ಯೆಯಿಂದ ಬಳಲುತ್ತಿರುವವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಗೊತ್ತಾ? ಈ ಆಹಾರ ಕ್ರಮಗಳನ್ನು ಅನುಸರಿಸಿದರೆ ಸುಲಭವಾಗಿ ಈ ಸಮಸ್ಯೆಗೆ ಪರಿಹಾರವಿದೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

URIC ACID FOODS TO AVOID  WHAT FRUITS TO EAT FOR URIC ACID  WHAT FOOD CAN EAT FOR URIC ACID
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : 12 hours ago

Uric Acid: ಯೂರಿಕ್ ಆ್ಯಸಿಡ್​ನಿಂದ ಉಂಟಾಗುವ ಗೌಟ್ ಪ್ರಪಂಚದಾದ್ಯಂತ ಅನೇಕರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಒಂದು. ದೀರ್ಘಕಾಲದ ಕಾಯಿಲೆಯಾದ ಗೌಟ್ ಹೊಂದಿರುವವರಲ್ಲಿ ನೋವು ತೀವ್ರವಾಗಿ ಕಂಡುಬರುತ್ತದೆ. ಕಾಯಿಲೆಯನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗದಿದ್ದರೂ ಕೂಡ ಕೆಲವು ಆಹಾರ ಕ್ರಮಗಳನ್ನು ಅನುಸರಿಸುವ ಮೂಲಕ ರೋಗದ ತೀವ್ರತೆಯನ್ನು ಕಡಿಮೆ ಮಾಡಬಹುದು. ತಜ್ಞರು ತಿಳಿಸುವ ಪ್ರಕಾರ, ಈ ಸಮಸ್ಯೆ ಹೊಂದಿರುವವರು ಯಾವ ರೀತಿಯ ಆಹಾರ ಸೇವಿಸಬೇಕು? ಯಾವ ರೀತಿಯ ಆಹಾರ ಸೇವಿಸಬಾರದು ಎಂಬುದನ್ನು ಇಲ್ಲಿ ನೋಡೋಣ.

ಗೌಟ್ ಈ ಕಾರಣದಿಂದ ಉಂಟಾಗುತ್ತೆ: ಔಷಧಿಗಳ ಜೊತೆಗೆ ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬದಲಾವಣೆಯೂ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿರುವ ಫ್ಯೂರಿನ್ ಎಂಬ ವಸ್ತುವಿನಿಂದ ಯೂರಿಕ್ ಆ್ಯಸಿಡ್ ರಕ್ತದೊಳಗೆ ಸೇರಿಕೊಳ್ಳುತ್ತದೆ ಎಂದು ಖ್ಯಾತ ಪೌಷ್ಟಿಕತಜ್ಞೆ ಡಾ.ಮಲ್ಲೀಶ್ವರಿ ತಿಳಿಸಿದ್ದಾರೆ.

ಚಯಾಪಚಯ ಅಸ್ವಸ್ಥತೆ ಮತ್ತು ನಿರ್ಜಲೀಕರಣದ ಕಾರಣದಿಂದಾಗಿ ಯೂರಿಕ್ ಆ್ಯಸಿಡ್ ದೇಹದಲ್ಲಿ ಸಂಗ್ರಹಗೊಳ್ಳುತ್ತವೆ. ಥೈರಾಯ್ಡ್ ಸಮಸ್ಯೆಯಿಂದ ಯೂರಿಕ್ ಆಮ್ಲವನ್ನು ಹೊರಹಾಕಲು ಕಷ್ಟವಾಗುತ್ತದೆ. ಈ ಕಾಯಿಲೆಯಿಂದ ಪುರುಷರಿಗಿಂತ ಮಹಿಳೆಯರ ಮೇಲೆ ಎರಡು ಪಟ್ಟು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಅಧ್ಯಯನಗಳು ಈಗಾಗಲೇ ಬಹಿರಂಗಪಡಿಸಿವೆ.

URIC ACID FOODS TO AVOID  WHAT FRUITS TO EAT FOR URIC ACID  WHAT FOOD CAN EAT FOR URIC ACID  ಯೂರಿಕ್ ಆ್ಯಸಿಡ್ ಸಮಸ್ಯೆ
ಯೂರಿಕ್ ಆ್ಯಸಿಡ್ ಸಮಸ್ಯೆ (Getty Images)

ಸೇವಿಸಬೇಕಾದ ಆಹಾರಗಳೇನು?:

  • ಒಣಹಣ್ಣುಗಳು
  • ಅಣಬೆಗಳು
  • ಪಾಲಕ್
  • ಮಜ್ಜಿಗೆ
  • ದ್ರಾಕ್ಷಿಗಳು
  • ಅನಾನಸ್
  • ಸ್ಟ್ರಾಬೆರಿ
  • ಅವಾಕಡೊ (Avocado)
  • ಚೆರ್ರಿಗಳು
  • ದ್ವಿದಳ ಧಾನ್ಯಗಳು

ವಹಿಸಬೇಕಾದ ಮುನ್ನೆಚ್ಚರಿಕೆಗಳೇನು?:

  • ಗೌಟ್ ಸಮಸ್ಯೆಯಿಂದ ಬಳಲುತ್ತಿರುವವರು ದೇಹ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಮದ್ಯ, ಧೂಮಪಾನದ ಜೊತೆಗೆ ಸಮುದ್ರ ಆಹಾರ ಹಾಗೂ ಮಾಂಸ ತ್ಯಜಿಸಬೇಕು. ಯೂರಿಕ್ ಆ್ಯಸಿಡ್​ ದೇಹದಿಂದ ಹೊರಗೆ ಹೋಗಬೇಕಾಗುತ್ತದೆ. ದೇಹದಲ್ಲಿ ನೀರಿನ ಶೇಕಡಾವಾರು ಪ್ರಮಾಣ ಹೆಚ್ಚಿರಬೇಕು ಎಂದು ಡಾ.ಮಲ್ಲೀಶ್ವರಿ ವಿವರಿಸಿದ್ದಾರೆ.
  • ಇದಕ್ಕಾಗಿ ದಿನಕ್ಕೆ ಕನಿಷ್ಠ 8 ಲೋಟ ನೀರು ಕುಡಿಯುವುದು ಒಳ್ಳೆಯದು. ನಮ್ಮ ಆಹಾರ ಸೇವನೆಯು ದ್ರವಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಕೆಲವರು ಪ್ರೋಟೀನ್‌ಗಾಗಿ ಹೆಚ್ಚು ಮಾಂಸ ಮತ್ತು ಮೀನುಗಳನ್ನು ತಿನ್ನುತ್ತಾರೆ. ಗೌಟ್ ಸಮಸ್ಯೆ ಇರುವವರು ಆದಷ್ಟು ಅವುಗಳನ್ನು ತಪ್ಪಿಸಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.
  • ಇದಲ್ಲದೆ, ವಿಶೇಷವಾಗಿ ಮದ್ಯಪಾನ ಮಾಡುವ ಅಭ್ಯಾಸವನ್ನು ಹೊಂದಿರುವವರು ಸಂಪೂರ್ಣವಾಗಿ ನಿಲ್ಲಿಸಬೇಕಾಗುತ್ತದೆ. ಆಲ್ಕೋಹಾಲ್ ದೇಹದಲ್ಲಿ ಯೂರಿಕ್ ಆ್ಯಸಿಡ್​ನ ಮಟ್ಟವನ್ನು 6.5 ರಷ್ಟು ಹೆಚ್ಚಿಸುತ್ತದೆ ಎಂದು ಅನೇಕ ಅಧ್ಯಯನಗಳು ಬಹಿರಂಗಪಡಿಸುತ್ತವೆ.
  • ಗೌಟ್ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ದೇಹವನ್ನು ಕ್ರಿಯಾಶೀಲವಾಗಿಡಲು ಪ್ರಯತ್ನಿಸಬೇಕು. ಇದಕ್ಕಾಗಿ ಈಜು, ನಡಿಗೆಯಂತಹ ವ್ಯಾಯಾಮಗಳನ್ನು ರೂಢಿಸಿಕೊಳ್ಳಬೇಕು ಎಂದು ತಜ್ಞರು ತಿಳಿಸಿದ್ದಾರೆ.
  • ಕೀಲುಗಳಲ್ಲಿ ಚಲನೆ ಇರುವುದನ್ನು ಖಚಿತಪಡಿಸಿಕೊಳ್ಳಬೇಕು. ವೈದ್ಯರು ನೀಡುವ ಔಷಧಿಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸಬೇಕು. ಸರಿಯಾದ ಆಹಾರ ಮತ್ತು ಲಘು ವ್ಯಾಯಾಮ ಮಾಡುವುದರಿಂದ ಸಮಸ್ಯೆಯನ್ನು ನಿಯಂತ್ರಿಸಬಹುದು ಎಂದು ಡಾ.ಮಲ್ಲೀಶ್ವರಿ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ ವೀಕ್ಷಿಸಿ: https://www.healthline.com/health/how-to-reduce-uric-acid

ಓದುಗರಿಗೆ ಮುಖ್ಯ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ನೀವು ಅಧಿಕ ಯೂರಿಕ್ ಆ್ಯಸಿಡ್ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಈ ಆಹಾರಗಳನ್ನು ತ್ಯಜಿಸಿದರೆ ತೊಂದರೆ ದೂರವಾಗುತ್ತೆ!

ಅಧಿಕ ಯೂರಿಕ್ ಆ್ಯಸಿಡ್​ ಸಮಸ್ಯೆ: ವೈದ್ಯರು ತಿಳಿಸಿದ ಆಹಾರ ಪದ್ಧತಿಯ ಮಾಹಿತಿ ಇಲ್ಲಿದೆ ನೋಡಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.