How to Make Eggless Plum Cake at Home: ಕ್ರಿಸ್‌ಮಸ್‌ನಿಂದ ಹೊಸ ವರ್ಷದ ಆರಂಭದವರೆಗೂ ಎಲ್ಲೆಲ್ಲೂ ಕೇಕ್‌ಗಳ ಭರಾಟೆ ಜೋರಾಗಿರುತ್ತದೆ. ಎಲ್ಲರೂ ತಮ್ಮ ತಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸುತ್ತಾರೆ. ಕೇಕ್ ಎಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಇಷ್ಟವಾಗುತ್ತದೆ. ವಿಶ್ವದೆಲ್ಲೆಡೆ ಕ್ರಿಸ್‌ಮಸ್ ಸಂಭ್ರಮ ಜೋರಾಗಿಯೇ ನಡೆಯುತ್ತಿದೆ.
ಈ ಹಬ್ಬದ ಸಮಯದಲ್ಲಿ ಬೇಕರಿಗಳು ತಮ್ಮ ಬೆಲೆಯನ್ನು ಹೆಚ್ಚಿಸದ ಕಾರಣಕ್ಕೆ ಗುಣಮಟ್ಟದ ಬಗ್ಗೆ ಗಮನ ಹರಿಸುವ ಸಾಧ್ಯತೆಯು ಕಡಿಮೆಯಿರುತ್ತದೆ. ಈ ಹಬ್ಬಕ್ಕೆ ಬೇಕರಿಯಿಂದ ಕೇಕ್ ಕೊಳ್ಳುವ ಬದಲು, ಮನೆಯಲ್ಲೇ ಸುಲಭವಾಗಿ ಎಗ್‌ಲೆಸ್ ಪ್ಲಮ್ ಕೇಕ್ ತಯಾರಿಸಿ ನೋಡಿ. ಈ ಕೇಕ್ನ ರುಚಿಯು ಅದ್ಭುತವಾಗಿರುತ್ತದೆ. ಎಗ್‌ಲೆಸ್ ಪ್ಲಮ್ ಕೇಕ್ಗೆ ಬೇಕಾಗುವ ಪದಾರ್ಥಗಳೇನು ಹಾಗೂ ಸಿದ್ಧಪಡಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯೋಣ..
ಎಗ್‌ಲೆಸ್ ಪ್ಲಮ್ ಕೇಕ್ಗೆ ಬೇಕಾಗುವ ಪದಾರ್ಥಗಳಿವು:
- ಏಪ್ರಿಕಾಟ್ - 60 ಗ್ರಾಂ
- ಚೆರ್ರಿ ಹಣ್ಣುಗಳು - 100 ಗ್ರಾಂ
- ಖರ್ಜೂರ - 60 ಗ್ರಾಂ
- ಕ್ರ್ಯಾನ್‌ಬೆರಿ - 60 ಗ್ರಾಂ
- ಟೂಟಿ ಫ್ರೂಟಿ - 1/4 ಕಪ್
- ಕಪ್ಪು ಒಣದ್ರಾಕ್ಷಿ - 60 ಗ್ರಾಂ
- ಒಣದ್ರಾಕ್ಷಿ - 60 ಗ್ರಾಂ
- ವಾಲ್‌ನಟ್ಸ್ - 25 ಗ್ರಾಂ
- ಗೋಡಂಬಿ - 60 ಗ್ರಾಂ
- ಬಾದಾಮಿ - 50 ಗ್ರಾಂ
- ಲವಂಗ - 7
- ದಾಲ್ಚಿನ್ನಿ - ಸ್ವಲ್ಪ
- ಜಾಪತ್ರೆ - ಸ್ವಲ್ಪ
- ಶುಂಠಿ - 3/4 ಇಂಚು
- ಏಲಕ್ಕಿ - 6
- ಜಾಯಿಕಾಯಿ - ಸ್ವಲ್ಪ
- ಟೆಟ್ರಾ ಪ್ಯಾಕ್ ಆರೆಂಜ್ ಜ್ಯೂಸ್ - 1 ಕಪ್
- ಬ್ರೌನ್ ಸಕ್ಕರೆ - ಕಾಲು (1/4) ಕಪ್
ಸಿರಪ್ಗಾಗಿ:
- ಸಕ್ಕರೆ - 1 ಕಪ್
- ಬಿಸಿ ನೀರು - 1 ಕಪ್
- ಮೈದಾ - 300 ಗ್ರಾಂ
- ಬೇಕಿಂಗ್ ಪೌಡರ್ - ಒಂದೂವರೆ ಟೀಸ್ಪೂನ್
- ಅಡಿಗೆ ಸೋಡಾ - 1 ಟೀಸ್ಪೂನ್
- ಉಪ್ಪು - ಸ್ವಲ್ಪ
- ಕರಗಿದ ಬೆಣ್ಣೆ - 200 ಗ್ರಾಂ
- ವೆನಿಲ್ಲಾ ಎಸೆನ್ಸ್ - 1 ಟೀಸ್ಪೂನ್
ಎಗ್‌ಲೆಸ್ ಪ್ಲಮ್ ಕೇಕ್ ತಯಾರಿಸುವ ವಿಧಾನ:
- ಮೊದಲು ಮಿಕ್ಸಿಂಗ್ ಜಾರ್‌ಗೆ ಲವಂಗ, ದಾಲ್ಚಿನ್ನಿ, ಜಾಪತ್ರೆ, ಶುಂಠಿ, ಏಲಕ್ಕಿ ಮತ್ತು ಜಾಯಿಕಾಯಿ ಸೇರಿಸಿ ನುಣ್ಣಗೆ ರುಬ್ಬಿಕೊಂಡು ಪಕ್ಕಕ್ಕೆ ಇರಿಸಿಕೊಳ್ಳಿ.
- ಕಾಯಿ ಕಟ್ಟರ್ ಸಹಾಯದಿಂದ, ಏಪ್ರಿಕಾಟ್ಗಳನ್ನು ಒಂದು ಬಟ್ಟಲಿನಲ್ಲಿ ಸಮವಾಗಿ ಕತ್ತರಿಸಿ. ಚೆರ್ರಿ ಹಣ್ಣುಗಳು ಹಾಗೂ ಖರ್ಜೂರವನ್ನು ಸಹ ಕತ್ತರಿಸಿ. ಅದರ ನಂತರ ಕ್ರ್ಯಾನ್ಬೆರಿ, ಟೂಟಿ ಫ್ರೂಟಿ, ಕಪ್ಪು ಒಣದ್ರಾಕ್ಷಿ ಮತ್ತು ಒಣದ್ರಾಕ್ಷಿ ಸೇರಿಸಿ ಪಕ್ಕಕ್ಕೆ ಇರಿಸಿ.
- ಇನ್ನೊಂದು ಪಾತ್ರೆಯಲ್ಲಿ ವಾಲ್‌ನಟ್ಸ್, ಬಾದಾಮಿ ಮತ್ತು ಗೋಡಂಬಿಯನ್ನು ತೆಳುವಾಗಿ ಕತ್ತರಿಸಿ ಪಕ್ಕಕ್ಕೆ ಇಡಿ.
- ಏಪ್ರಿಕಾಟ್ ಹೊಂದಿರುವ ಬೌಲ್‌ಗೆ ಟೆಟ್ರಾ ಪ್ಯಾಕ್ ಆರೆಂಜ್ ಜ್ಯೂಸ್, ಕಾಲು ಚಮಚ ರುಬ್ಬಿದ ಮಸಾಲೆ ಮಿಶ್ರಣದ ಪುಡಿ, ಬ್ರೌನ್ ಸಕ್ಕರೆ ಸೇರಿಸಿ ಹಾಗೂ ಅವುಗಳನ್ನು ಒಂದೆರಡು ಗಂಟೆಗಳ ಕಾಲ ನೆನೆಸಿಡಿ.
- ಈಗ ಒಲೆ ಆನ್ ಮಾಡಿ ಹಾಗೂ ಒಂದು ಪಾತ್ರೆಯಲ್ಲಿ ಸಕ್ಕರೆ ಹಾಕಿ ಮಧ್ಯಮ ಉರಿಯಲ್ಲಿ ಕರಗಿಸಿ. ಗೋಲ್ಡನ್ ಕಲರ್ ಬರುವವರೆಗೆ ಕುದಿಸಿ. ಕುದಿಯುತ್ತಿರುವಾಗ, ಬಿಸಿನೀರನ್ನು ಸುರಿಯಿರಿ ಮತ್ತೆ ಒಂದು ನಿಮಿಷ ಕುದಿಸಿ, ಒಲೆ ಆಫ್ ಮಾಡಿ ಪಾತ್ರೆಯನ್ನು ಪಕ್ಕಕ್ಕೆ ಇರಿಸಿ.
- ಈಗ ಒಂದು ಪಾತ್ರೆಯಲ್ಲಿ ಮೈದಾ, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್ ಹಾಗೂ ಉಪ್ಪನ್ನು ಹಾಕಿ ಪಕ್ಕಕ್ಕೆ ಇರಿಸಿ.
- ಈಗ ಕೇಕ್ ತಯಾರಿಸಲು, 8 ಇಂಚಿನ ಅಚ್ಚನ್ನು ತೆಗೆದುಕೊಂಡು ಅದರೊಳಗೆ ಬೆಣ್ಣೆ ಅಥವಾ ಎಣ್ಣೆಯನ್ನು ಸವರಿ. ಅದರ ನಂತರ, ಬೌಲ್ ಕೆಳಭಾಗದಲ್ಲಿ ಬಟರ್ ಪೇಪರ್ ಅಥವಾ ಮೈದಾ ಹಿಟ್ಟನ್ನು ಸಿಂಪಡಿಸಿ ಹಾಗೂ ಅದನ್ನು ಪೂರ್ತಿಯಾಗಿ ಹರಡಿ ಮತ್ತು ಅದನ್ನು ಪಕ್ಕಕ್ಕೆ ಇಟ್ಟಕೊಳ್ಳಿ.
- ಈಗ ಒಂದು ಬೌಲ್ ತೆಗೆದುಕೊಂಡು ಎರಡು ಗಂಟೆಗಳ ಕಾಲ ನೆನೆಸಿದ ಹಣ್ಣುಗಳನ್ನು ಮತ್ತು ಕರಗಿದ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಇದಾದ ನಂತರ, ತಣ್ಣಗಾದ ಪಾಕಕ್ಕೆ ಮತ್ತು ಮೈದಾ ಹಿಟ್ಟನ್ನು ಸೇರಿಸಿ ಮತ್ತು ಕಟ್ ಮತ್ತು ಫೋಲ್ಡ್ ಪ್ರಕಾರವಾಗಿ ಮಿಶ್ರಣ ಮಾಡಿ.
- ಈಗ ಅದಕ್ಕೆ ಕತ್ತರಿಸಿದ ಬಾದಾಮಿ, ಗೋಡಂಬಿ ಮತ್ತು ವಾಲ್‌ನಟ್‌ಗಳನ್ನು ಸೇರಿಸಿ ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ ಮತ್ತೆ ಕಟ್ ಮತ್ತು ಫೋಲ್ಡ್ ರೀತಿ ಮಿಶ್ರಣ ಮಾಡಿ.
- ಈ ಮಿಶ್ರಣವನ್ನು ಕೇಕ್ ಅಚ್ಚಿನಲ್ಲಿ ಸುರಿಯಿರಿ ಮತ್ತು ಅದನ್ನು ಸಮವಾಗಿ ಹರಡಿ. ನಿಮ್ಮ ಆಯ್ಕೆಯ ಒಣ ಹಣ್ಣುಗಳಿಂದ ಅಲಂಕರಿಸಿ ಮತ್ತು ಪಕ್ಕಕ್ಕೆ ಇರಿಸಿ.
- ಈಗ ಸ್ಟೌ ಆನ್ ಮಾಡಿ ದಪ್ಪ ಅಗಲದ ಪಾತ್ರೆ ಇಡಿ. ಅದರಲ್ಲಿ ಸ್ಟ್ಯಾಂಡ್ ಇಟ್ಟು ಮುಚ್ಚಿ 5 ನಿಮಿಷ ಹೆಚ್ಚಿನ ಉರಿಯಲ್ಲಿ ಬಿಸಿ ಮಾಡಿ.
- ಆ ನಂತರ ಕೇಕ್ ಅಚ್ಚನ್ನು ಸ್ಟ್ಯಾಂಡ್ ಮೇಲೆ ಹಾಕಿ ಒತ್ತಡ ಹೊರಗೆ ಹೋಗದಂತೆ ಮುಚ್ಚಿ. ಸುಮಾರು 40 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ.
- 40 ನಿಮಿಷಗಳ ನಂತರ, ಟೂತ್‌ಪಿಕ್ ಸಹಾಯದಿಂದ ಕೇಕ್ ಬೆಂದಿದೆಯಾ, ಇಲ್ಲವೋ ಎಂಬುದನ್ನು ಪರಿಶೀಲಿಸಿ. ಅದು ಬೆಯದಿದ್ದರೆ, ಮತ್ತೆ 5 ರಿಂದ 10 ನಿಮಿಷ ಬೇಯಿಸಿ.
- ಅದರ ನಂತರ ಕೇಕ್ ಅಚ್ಚನ್ನು ತೆಗೆದುಕೊಂಡು ಅದನ್ನು ಬಟ್ಟೆಯಿಂದ ಮುಚ್ಚಿ ಮತ್ತು ಸುಮಾರು 2 ಗಂಟೆಗಳ ಕಾಲ ಪಕ್ಕಕ್ಕೆ ಇರಿಸಿ. ಆ ಬಳಿಕ ಅಚ್ಚಿನಿಂದ ಬೇರ್ಪಡಿಸಿ ತಟ್ಟೆಗೆ ತೆಗೆದುಕೊಂಡರೆ ಸೂಪರ್ ಟೇಸ್ಟಿ ಕ್ರಿಸ್‌ಮಸ್ ಸ್ಪೆಷಲ್ ಎಗ್ ಲೆಸ್ ಪ್ಲಮ್ ಕೇಕ್ ರೆಡಿ. ನೀವು ಇಷ್ಟಪಟ್ಟರೆ, ನಿಮ್ಮ ಮನೆಯಲ್ಲಿ ಇದನ್ನು ಪ್ರಯತ್ನಿಸಿ ಕುಟುಂಬದವರೊಂದಿಗೆ ಸವಿಯಿರಿ.
ಇದನ್ನೂ ಓದಿ: ಬೇಕರಿ ಸ್ಟೈಲ್ನ 'ವೆನಿಲಾ ಸ್ಪಾಂಜ್ ಕೇಕ್': ಮಕ್ಕಳಿಗಿದು ತುಂಬಾ ಇಷ್ಟ