ETV Bharat / state

KPC ಶಾಲೆ ಅಭಿವೃದ್ಧಿಗೆ ಎಡಿಬಿ ಬ್ಯಾಂಕ್​ನಿಂದ ₹2 ಸಾವಿರ ಕೋಟಿ ಸಾಲ: ಸಚಿವ ಮಧು ಬಂಗಾರಪ್ಪ - MADHU BANGARAPPA

ಶಿಕ್ಷಣ ಇಲಾಖೆಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​ ಎರಡು ಸಾವಿರ ಕೋಟಿ ರೂ ಹಣ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ಸಚಿವ ಮಧು ಬಂಗಾರಪ್ಪ
ಸಚಿವ ಮಧು ಬಂಗಾರಪ್ಪ (ETV Bharat)
author img

By ETV Bharat Karnataka Team

Published : Jan 31, 2025, 10:42 PM IST

ಶಿವಮೊಗ್ಗ: "ಶಿಕ್ಷಣ ಇಲಾಖೆಗೆ ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್​ ಎರಡು ಸಾವಿರ ಕೋಟಿ ರೂ ಹಣ ಬಿಡುಗಡೆ ಮಾಡಲು ಒಪ್ಪಿಗೆ ನೀಡಿದೆ. ನಾವು ಇದಕ್ಕೆ 500 ಕೋಟಿ ರೂ ಸೇರಿಸಿ ಒಟ್ಟು ಎರಡೂವರೆ ಸಾವಿರ ಕೋಟಿ ರೂ ವೆಚ್ಚದಲ್ಲಿ ಒಟ್ಟು 800 ಶಾಲೆಗಳನ್ನು ಅಭಿವೃದ್ದಿ ಪಡಿಸುತ್ತೇವೆ" ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, "ಶಿಕ್ಷಣ ಇಲಾಖೆಗೆ ಇದೇ ಮೊದಲ ಬಾರಿಗೆ ಭಾರಿ ಸಾಲ ನೀಡಿದೆ. ಇದನ್ನು ಹಂತ ಹಂತವಾಗಿ ವಾಪಸ್ ನೀಡಲಾಗುತ್ತದೆ. ನಾವು ಸಾಲ ತೆಗೆದುಕೊಳ್ಳಲು ಕೇಂದ್ರ ಸರ್ಕಾರವೇ ಕಾರಣವಾಗಿದೆ. ನಮ್ಮ ಸರ್ಕಾರಕ್ಕೆ ಕಡಿಮೆ ಅನುದಾನ ನೀಡುತ್ತಿದೆ. ನೀಟ್ ಕೋಚಿಂಗ್ 25 ಸಾವಿರ ಮಕ್ಕಳಿಗೆ ಸೀಮಿತಗೊಳಿಸಿದ್ದೆವು, ಈಗ ಅದನ್ನು ಎಲ್ಲಾ ಮಕ್ಕಳಿಗೆ ವಿಸ್ತರಣೆ ಮಾಡಲಾಗುತ್ತಿದೆ. ಶಿಕ್ಷಣದಲ್ಲಿ ಎಐ ತಾಂತ್ರಿಕತೆ ಅಳವಡಿಸಲಾಗುತ್ತದೆ. ಮಕ್ಕಳ ಬಾಡಿ ಲಾಂಗ್ವೇಜ್​ ಸರಿ ಮಾಡಲು ಎಐ ಅನ್ನು ಬಳಸಿಕೊಳ್ಳಲಿದ್ದೇವೆ" ಎಂದು ಮಾಹಿತಿ ನೀಡಿದರು.

"ಗಣಿತ ಗಣಕ ಕಾರ್ಯಕ್ರಮದ ಮೂಲಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಪೋಷಕರ ಫೋನ್​ಗೆ ಕರೆ ಮಾಡಿ ಮಕ್ಕಳಿಗೆ ಪಾಠ ಕಲಿಸುತ್ತಿದ್ದಾರೆ. ಎಲ್​ಕೆಜಿ - ಯುಕೆಜಿಗೆ ಚಿಲಿಪಿಲಿ ಯೋಜನೆಯಡಿ ಪಾಠ ಮಾಡಿಕೊಡಲಾಗುತ್ತಿದೆ. ಅತಿಥಿ‌ ಉಪನ್ಯಾಸಕರನ್ನು ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿಯೇ ನೇಮಕ ಮಾಡಲಾಗಿದೆ. ಇದರಿಂದ ಶಾಲೆಗಳು ಚೆನ್ನಾಗಿ‌ ನಡೆಯುತ್ತಿದೆ. ತಾಲೂಕು ಎಜುಕೇಶನ್ ಕಮಿಟಿಯಲ್ಲಿ ಶಾಸಕರು ಸಭೆ ನಡೆಸಬೇಕಿದೆ. ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಪುನಃ ಶಾಲೆಗೆ ಕರೆತರುವ ಯತ್ನ ಮಾಡಲಾಗುತ್ತಿದೆ" ಎಂದು ಹೇಳಿದರು.

ವಿಮಾನ‌‌ ನಿಲ್ದಾಣ ಗುತ್ತಿಗೆ ನೀಡುವ ಕುರಿತು ಮಾತನಾಡಿ, "ಶಿವಮೊಗ್ಗ ವಿಮಾನ‌‌‌ ನಿಲ್ದಾಣವನ್ನು ಲೀಸ್ ನೀಡುವ ಬಗ್ಗೆ ಚರ್ಚೆ ನಡೆಸಲಾಗಿದೆ. ಇದನ್ನು ಸೀಮಿತ ಅವಧಿಗೆ ಅಂದರೆ 30 ವರ್ಷಕ್ಕೆ ಲೀಸ್​ ನೀಡುವ ಗುರಿ ಇದೆ. ವಿಮಾನ ನಿಲ್ದಾಣ ನಿರ್ವಹಣೆ ರಾಜ್ಯ ಸರ್ಕಾರಕ್ಕೆ ಹೊರೆ ಆಗುತ್ತಿದೆ" ಎಂದರು.

ಕುವೆಂಪು ವಿಶ್ವವಿದ್ಯಾನಿಲಯ ಅಭಿವೃದ್ಧಿ ಬಗ್ಗೆ ಮಾತನಾಡಿ, "ಕುವೆಂಪು ವಿವಿಯನ್ನು ಈ ಸ್ಥಿತಿಗೆ ತಂದವರು ಬಿಜೆಪಿಯವರೇ, ಇದನ್ನು ಸರಿ ಮಾಡುವ ಕೆಲಸವನ್ನು ಮಾಡುತ್ತಿದ್ದೆವೆ. ವಿಧಾನ ಪರಿಷತ್​​ ಸದಸ್ಯ ಡಿ.ಎಸ್.ಅರುಣ್ ಘಟಿಕೋತ್ಸವಕ್ಕೆ ತಡವಾಗಿ ಬಂದಿದ್ರು. ಅವರದೇ ಸರ್ಕಾರ ನೇಮಕ ಮಾಡಿದ್ದ ರಾಜ್ಯಪಾಲರಿಗೆ ಗೌರವ ನೀಡದೇ ಹೋಗಿದ್ದು ಅರುಣ್​" ಎಂದು ಹೇಳಿದರು.

"ಮ್ಯಾಮ್ ಕೋಸ್ ಚುನಾವಣೆಗೆ ನಮ್ಮ‌ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ.‌ ಇದು ಸಹಕಾರಿ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಇರುತ್ತದೆ. ಈಗ ನಮ್ಮ ಪಕ್ಷದ ಆದೇಶದ ಮೇರೆಗೆ ಇಂದು ಶಿವಮೊಗ್ಗ ಸೇರಿದಂತೆ ಎನ್​ಆರ್​ ಪುರ ಹಾಗೂ ತರಿಕೇರಿಯಲ್ಲಿ ಸಭೆ ನಡೆಸಿದ್ದೇವೆ" ಎಂದು ತಿಳಿಸಿದರು.

ಇದನ್ನೂ ಓದಿ: ಸರ್ಕಾರಿ ಶಾಲಾ ಮಕ್ಕಳಿಗೆ ಅತ್ಯಾಧುನಿಕ ಡಿಜಿಟಲ್‌ ಶಿಕ್ಷಣ - ಮೂಲ ಸೌಲಭ್ಯ ಕಲ್ಪಿಸಿದ ಕಂಪನಿಗಳಿವು!

ಇದನ್ನೂ ಓದಿ: ಕೇಂದ್ರ ಬಜೆಟ್​ -2025; ನಿರ್ಮಲಾ ಸೀತಾರಾಮನ್ ಲೆಕ್ಕಾಚಾರದ ಮೇಲೆ ಮಲೆನಾಡಿಗರ ನಿರೀಕ್ಷೆಗಳೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.