ಹೈದರಾಬಾದ್: ಕೈ ಹಿಡಿತದ ಸಾಮರ್ಥ್ಯವೂ ಭವಿಷ್ಯದ ಕಾಯಿಲೆಗಳ ಬಗ್ಗೆ ಪ್ರಮುಖ ಸುಳಿವು ನೀಡುತ್ತದೆ. ಇದನ್ನು ದುರ್ಬಲ ಮತ್ತು ಬಲಯುತ ಕೈಕುಲುಕುವಿಕೆಗೆ ಹೋಲಿಕೆ ಮಾಡಿದಾಗ ಇದು ಹೆಚ್ಚಿನ ಅಂಶವನ್ನು ತಿಳಿಸುತ್ತದೆ. ಅಲ್ಲದೇ, ವ್ಯಕ್ತಿಯೊಬ್ಬನ ದೇಹ ಎಷ್ಟು ಆರೋಗ್ಯಯುತವಾಗಿದೆ ಎಂಬುದನ್ನು ಇದರ ಮೂಲಕ ಮಾಪನ ಮಾಡಬಹುದಾಗಿದೆ.
ಕೈ ಹಿಡಿತದ ಸಾಮರ್ಥ್ಯವೂ ಹೃದಯಾಘಾತದ ಅಪಾಯ ಅಥವಾ ಮಧುಮೇಹದ ಅಪಾಯವನ್ನು ಮಾಪನ ಮಾಡಬಹುದು ಎಂದು ಹಿರಿಯ ಪತ್ರಕರ್ತರ ತೌಫಿಕ್ ರಶೀದ್ ತಿಳಿಸಿದ್ದಾರೆ. ಭಾರವಾದ ತರಕಾರಿ ತುಂಬಿದ ಬ್ಯಾಗ್ ಅನ್ನು ಕೊಂಡೊಯ್ಯುವುದು ಕಷ್ಟ, ಡಬ್ಬಿಗಳ ಮುಚ್ಚಳ ತೆಗೆಯುವಲ್ಲಿ ಕಷ್ಟವಾಗುತ್ತಿದೆ ಎಂದರೆ ನಿಮ್ಮ ದೇಹ ಕೆಲವು ರೋಗ ಲಕ್ಷಣವನ್ನು ಹೊಂದಿದೆ ಎಂದು ಅರ್ಥ.
ನಮ್ಮ ಕೈಗಳಿಂದ ಒಟ್ಟುಗೂಡಿಸುವ ಶಕ್ತಿಯ ಪ್ರಮಾಣವು ನಮ್ಮ ದೇಹವು ಎಷ್ಟು ಆರೋಗ್ಯಕರಯುತವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಕೈ ಹಿಡಿತದ ಬಲವೂ ನಮ್ಮ ಒಟ್ಟಾರೆ ದೇಹದ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಆರೋಗ್ಯಯುತ ವಯಸ್ಸಾಗುವಿಕೆ ಮತ್ತು ಒಟ್ಟಾರೆ ದೈಹಿಕ ಸಾಮರ್ಥ್ಯವನ್ನು ಮಾಪನ ಮಾಡಲು ಇದು ಉತ್ತಮವಾಗಿದೆ. ರಕ್ತದೊತ್ತಡ ಮತ್ತು ತೂಕದ ರೀತಿ ಇದನ್ನು ಕೂಡ ವೈದ್ಯರಿಂದ ಪರೀಕ್ಷಿಸುವ ಅಗತ್ಯವಿದೆ. ಕಡಿಮೆ ಕೈ ಹಿಡಿದ ಶಕ್ತಿಯು ಜೀವಕೋಶಗಳಲ್ಲಿ ವೇಗವಾಗಿ ವಯಸ್ಸಾಗುವುದನ್ನು ಸೂಚಿಸುತ್ತದೆ ಆದ್ದರಿಂದ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ.
ಪೋಷಕಾಂಶ ಜೀವನ ಗುಣಮಟ್ಟದೊಂದಿಗೆ ಹೊಂದಿದೆ ಸಂಬಂಧ:ಇತ್ತೀಚಿಗೆ ಈ ಕುರಿತು ಹ್ಯಾಂಡ್ ಗ್ರಿಪ್ ಸ್ಟ್ರೆಂಥ್ ಅಸ್ ಎ ಪ್ರೊಪೊಸ್ಡ್ ನ್ಯೂ ವಿಟಲ್ ಸೈನ್ ಆಫ್ ಹೆಲ್ತ್: ಎ ನರೆಟಿವ್ ರಿವ್ಯೂ ಹೆಸರಿನಲ್ಲಿ ಜರ್ನಲ್ ಹೆಲ್ತ್ನಲ್ಲಿ ಅಧ್ಯಯನ ಪ್ರಕಟವಾಗಿದೆ. ಭಾರತೀಯ ಮೂಲದ ಸಂಶೋಧಕರು ಹೇಳುವಂತೆ ಮಧುಮೇಹ, ಹೃದಯ ರಕ್ತನಾಳದ ಸಮಸ್ಯೆ, ಪಾರ್ಶ್ವವಾಯು ಮತ್ತು ಕೆಲವು ಕ್ಯಾನ್ಸರ್ ಸಾರ್ಕೊಪೆನಿಯಾ ಮತ್ತು ದುರ್ಬಲತೆ ಮುರಿತಗಳು ಕಡಿಮೆ ಕೈ ಹಿಡಿತದ ಬಲದೊಂದಿಗೆ ಸಂಬಂಧ ಹೊಂದಿದೆ. ಕಡಿಮೆ ಕೈ ಹಿಡಿತದ ಬಲವೂ ಆಸ್ಪತ್ರೆಗೆ ದಾಖಲಾಗುವುದು, ಪೋಷಕಾಂಶ ಪರಿಸ್ಥಿತಿ ಮತ್ತು ಒಟ್ಟಾರೆ ಸಾವು ಮತ್ತು ಒಟ್ಟಾರೆ ಜೀವನದ ಗುಣಮಟ್ಟದೊಂದಿಗೆ ಸಂಬಂಧ ಹೊಂದಿದೆ.
ಈ ಅಧ್ಯಯನವೂ ಕೈ ಹಿಡಿತ ಬಲವೂ ಹೊಸ ಪ್ರಮುಖ ಚಿಹ್ನೆಯಾಗಿ ಪ್ರಸ್ತಾಪಿಸಬಹುದೆಂದು ಸೂಚಿಸುತ್ತದೆ, ಇದು ವೈದ್ಯಕೀಯ ಅಭ್ಯಾಸ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಒಳನೋಟವನ್ನು ನೀಡುತ್ತದೆ. ಈ ಅಧ್ಯಯನವೂ ಕೈ ಹಿಡಿತದ ಬಲವೂ ಆರೋಗ್ಯದ ಬಯೋಮಾರ್ಕ್ ಆಗಿ ಪ್ರಾಮುಖ್ಯತೆ ಹೊಂದಿದೆ ಎಂದು ತೋರಿಸಿದೆ. ಜೀವನದ ಉದ್ದಕ್ಕೂ ವಿವಿಧ ಆರೋಗ್ಯ ವಿಷಯ ಮತ್ತು ಸಾಮರ್ಥ್ಯವನ್ನು ಇದು ತೋರಿಸಿದೆ.
ಶತಮಾನಗಳಿಂದಲೂ ವ್ಯಕ್ತಿಯ ಆರೋಗ್ಯವನ್ನು ರಕ್ತದೊತ್ತಡ, ನಾಡಿ, ತಾಪಮಾನ, ಉಸಿರಾಟದ ಮೂಲಕ ಅಳೆಯಲಾಗುತ್ತಿದೆ. ಇದೀಗ ರಕ್ತದ ಸಕ್ಕರೆ ಮಟ್ಟ, ಆಮ್ಲಜನಕದ ಏರಿಳಿತ, ಶಕ್ತಿಯ ಧನಾತ್ಮಕ ಆರೋಗ್ಯದ ಮುನ್ಸೂಚಕ ಮತ್ತು ದೌರ್ಬಲ್ಯವನ್ನು ನಕಾರಾತ್ಮಕ ಆರೋಗ್ಯ ಫಲಿತಾಂಶದ ಮುನ್ಸೂಚಕವಾಗಿ ನೋಡುತ್ತಿದ್ದಾರೆ ಎಂದು ಅಧ್ಯಯನದ ಪ್ರಮುಖ ಲೇಖಕರು ಮತ್ತು ಅಪೋಲೋ ಇಂದ್ರಪ್ರಸ್ಥದ ಹಿರಿಯ ಮೂಳೆ ತಜ್ಞರಾದ ಡಾ ರಾಜು ವೈಶ್ಯ ತಿಳಿಸಿದ್ದಾರೆ.
ಯಾವುದು ವಯಸ್ಸಾಗುವಿಕೆಯ ಲಕ್ಷಣ:ಮೂಳೆಗಳ ಮುರಿತವು ವಯಸ್ಸಾಗುವಿಕೆಯ ಪ್ರಕ್ರಿಯೆ. ಒಬ್ಬ ವ್ಯಕ್ತಿಯು ವೇಗ, ನಿಧಾನ ವಯಸ್ಸಾಗುವಿಕೆಗೆ ಗುರಿಯಾಗುತ್ತಿದ್ದಾನಾ ಎಂಬುದರ ಬಗ್ಗೆ ಯಾವುದೇ ತನಿಖೆ ಮಾಡುತ್ತಿಲ್ಲ. ಈ ಹಿನ್ನೆಲೆ ಸ್ನಾಯುವಿನ ಬಲವು ಈ ವಯಸ್ಸಾದ ಪ್ರಕ್ರಿಯೆ ಮತ್ತು ಪ್ರಮಾಣ ಸೂಚಕವಾಗಿದೆ. ಈ ಸ್ನಾಯುವಿನ ಬಲವನ್ನು ವಿವಿಧ ಕಾಯಿಲೆಗಳಿಗೆ ಪರಸ್ಪರ ಸಂಬಂಧ ಹೊಂದಿದೆ ಎಂದಿದ್ದಾರೆ.