ನವದೆಹಲಿ: ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಫ್ಯಾಟಿ ಲಿವರ್ ಸಮಸ್ಯೆ ಹೆಚ್ಚಳ ಕಾಣುತ್ತಿದೆ. ಇಂತಹ ಯಕೃತ್ ಸಮಸ್ಯೆ ಹೊಂದಿರುವವರು ಸಂಸ್ಕರಿತ ಕೊಬ್ಬು ಆಗಿರುವ ತುಪ್ಪ ಮತ್ತು ಕೊಬ್ಬರಿ ಎಣ್ಣೆ ಸೇವನೆಯನ್ನು ಮಿತಗೊಳಿಸುವುದು ಅಗತ್ಯ ಎಂದು ಹೆಪಟಾಲಾಜಿಸ್ಟ್ ಸಲಹೆ ನೀಡಿದ್ದಾರೆ
ಫ್ಯಾಟಿ ಲಿವರ್ ಸಮಸ್ಯೆಯು ಸ್ಥೂಲಕಾಯ ಮತ್ತು ಮಧುಮೇಹದೊಂದಿಗೆ ಸಂಬಂಧ ಹೊಂದಿದೆ. ಅಧಿಕ ಮಟ್ಟದ ಕಾರ್ಬೋಹೈಡ್ರೇಟ್ ಬಳಕೆಯು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ದೀರ್ಘಕಾಲ ಇನ್ಸುಲಿನ್ ಮಟ್ಟವೂ ಇನ್ಸುಲಿನ್ ಪ್ರತಿರೋಧಕಕ್ಕೆ ಕಾರಣವಾಗುತ್ತದೆ. ಇದು ಮೆಟಾಬಾಲಿಸಂ ಮತ್ತು ಅಧಿಕ ಗ್ಲುಕೋಸ್ ಅನ್ನು ಫ್ಯಾಟಿ ಆಸಿಡ್ ಆಗಿ ಮಾಡಿ, ಯಕೃತ್ನಲ್ಲಿ ಸಂಗ್ರಹ ಮಾಡುತ್ತದೆ.
ಫ್ಯಾಟಿ ಲಿವರ್ನಲ್ಲಿ ಎರಡು ವಿಧಗಳನ್ನು ಕಾಣಬಹುದಾಗಿದೆ. ಒಂದು ಆಲ್ಕೋಹಾಲಿಕ್ ಫ್ಯಾಟಿ ಲಿವರ್ (ಎಫ್ಎಲ್ಡಿ) ಮತ್ತು ಆಲ್ಕೋಹಾಲೇತರ ಫ್ಯಾಟಿ ಲಿವರ್ ಸಮಸ್ಯೆ (ಎನ್ಎಎಫ್ಎಲ್ಡಿ/ ಎಂಎಎಸ್ಎಲ್ಡಿ) ಇವು ಯಕೃತ್ ಊರಿಯುತ ಮತ್ತು ಹಾನಿಗೆ ಕಾರಣವಾಗಿ, ನಿಧಾನವಾಗಿ ಫೈಬ್ರೊಸಿಸ್, ಸಿರೋಸಿಸ್ ಅಥವಾ ಯಕೃತ್ ಕ್ಯಾನ್ಸರ್ಗೆ ಕಾರಣವಾಗುತ್ತದೆ. ದೀರ್ಘಾವಧಿಯ ಯಕೃತ್ ಕಾಯಿಲೆಯಲ್ಲಿನ ರೋಗಿಗಳು ಗಂಭೀರ ಪರಿಸ್ಥಿತಿ ಎದುರಿಸಬಹುದು.
ಭಾರತದ ವಿಚಾರದಲ್ಲಿ ನೀವು ಎನ್ಎಎಫ್ಎಲ್ಡಿ ಸಮಸ್ಯೆ ಹೊಂದಿದ್ದರೆ, ಸಂಸ್ಕರಿತ ಕೊಬ್ಬಿನ ಮೂಲವನ್ನು ಆಹಾರದಲ್ಲಿ ಕಡಿತಗೊಳಿಸಿ ಎಂದು ಪ್ರಖ್ಯಾತ ಯಕೃತ್ ವೈದ್ಯರಾದ ಡಾ ಅಬೆ ಫಿಲಿಪ್ಸ್ ತಿಳಿಸಿದ್ದಾರೆ.