ಕರ್ನಾಟಕ

karnataka

ETV Bharat / health

ಡಾರ್ಕ್​ ಸರ್ಕಲ್​ ಸಮಸ್ಯೆ; ಉತ್ತಮ ಫಲಿತಾಂಶಕ್ಕೆ ಇಲ್ಲಿದೆ ವೈದ್ಯರ ಸಲಹೆ - Dark Circles Causes and Treatment

Dark Circles Causes and Treatment: ಕಣ್ಣಿನ ಕೆಳಗಿನ ಡಾರ್ಕ್​ ಸರ್ಕಲ್ ನಮ್ಮ ಸೌಂದರ್ಯವನ್ನು ಕೆಡಿಸುವುದರಲ್ಲಿ ಸಂಶಯವಿಲ್ಲ. ಡಾರ್ಕ್ ಸರ್ಕಲ್ ಹೋಗಲಾಡಿಸಲು ಅನೇಕ ಪ್ರಯತ್ನಗಳನ್ನು ಮಾಡಲಾಗುತ್ತದೆ. ಕ್ರೀಮ್​ಗಳು, ಲೋಷನ್​ಗಳು ಮತ್ತು ಮುಲಾಮುಗಳನ್ನು ಮುಖಕ್ಕೆ ಅನ್ವಯಿಸಲಾಗುತ್ತದೆ. ಡಾರ್ಕ್​ ಸರ್ಕಲ್ ತೊಂದರೆ ಕಾಣಿಸಿಲು ಪ್ರಮುಖ ಕಾರಣಗಳೇನು? ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಉತ್ತಮ ಫಲಿತಾಂಶ ದೊರೆಯುತ್ತದೆ ಎನ್ನುತ್ತಾರೆ ವೈದ್ಯರು.

DARK CIRCLES REASON AND REMEDY  DARK CIRCLES HOME REMEDIES  DARK CIRCLES REASON  DARK CIRCLES TREATMENT AT HOME
ಕಣ್ಣುಗಳ ಕೆಳಗಿನ ಡಾರ್ಕ್​ ಸರ್ಕಲ್ (ETV Bharat)

By ETV Bharat Health Team

Published : Sep 5, 2024, 1:08 PM IST

Dark Circles Causes and Treatment:ಕಣ್ಣುಗಳು ಮಾನವ ದೇಹದಲ್ಲಿ ಬಹಳ ಮುಖ್ಯ ಅಂಗಗಳು. ಇವು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ. ಅಂತಹ ಪ್ರಮುಖ ಕಣ್ಣುಗಳ ಅಡಿಯಲ್ಲಿ ಡಾರ್ಕ್​ ಸರ್ಕಲ್​ನಿಂದ ನಮ್ಮ ಸೌಂದರ್ಯವನ್ನು ಕಡಿಮೆ ಮಾಡುತ್ತದೆ. ಪ್ರಮುಖವಾಗಿ ನಿದ್ರೆಯ ಕೊರತೆ, ತೀವ್ರ ಒತ್ತಡ ಮತ್ತು ಖಿನ್ನತೆಯಿಂದ ಕಣ್ಣುಗಳ ಕೆಳಗೆ ಡಾರ್ಕ್​ ಸರ್ಕಲ್ ಕಾಣಿಸಿಕೊಳ್ಳುತ್ತದೆ.

ಇವು ಮಾತ್ರವಲ್ಲದೇ ಕಣ್ಣಿನಲ್ಲಿ ಯಾವುದೇ ಸೋಂಕುಗಳು ಉಂಟಾದಾಗ, ಚರ್ಮ ರೋಗಗಳು, ರಕ್ತಹೀನತೆ, ವಿಟಮಿನ್​ಗಳ ಕೊರತೆ, ಯಾವುದೇ ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಿರುವಾಗ, ಆಗಾಗ್ಗೆ ನಿರ್ಜಲೀಕರಣದಿಂದಲೂ ಕೂಡ ಡಾರ್ಕ್​ ಸರ್ಕಲ್ ಕಾಣಿಸಿಕೊಳ್ಳುತ್ತದೆ ಎಂದು ಖ್ಯಾತ ಚರ್ಮರೋಗ ತಜ್ಞೆ ಡಾ. ಪಿ.ಎಲ್. ಚಂದ್ರಾವತಿ ತಿಳಿಸುತ್ತಾರೆ. ಕಣ್ಣುಗಳ ಕೆಳಗೆ ಡಾರ್ಕ್​ ಸರ್ಕಲ್ ಕಾಣಿಸಿಕೊಳ್ಳಲು ಕಾರಣಗಳು ಮತ್ತು ಅದನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳೇನು ಎಂಬುದರ ಮಾಹಿತಿ ಇಲ್ಲಿದೆ..

ಡಾರ್ಕ್​ ಸರ್ಕಲ್​ಗೆ ಕಾರಣಗಳು:

  • ರಾತ್ರಿ ಸರಿಯಾಗಿ ನಿದ್ದೆ ಮಾಡದೇ ಇರುವುದು
  • ರಕ್ತಹೀನತೆ ಸಮಸ್ಯೆ
  • ಕಣ್ಣುಗಳ ಸುತ್ತ ತುರಿಕೆ, ಅಲರ್ಜಿ
  • ಕಣ್ಣುಗಳು ಒಳಗೆ ಹೋದಂತಾಗುವುದು, ಚರ್ಮ ತೆಳುವಾಗುವುದು
  • ಅನುವಂಶಿಕ
  • ಸಾಕಷ್ಟು ನೀರು ಕುಡಿಯದೇ ಇರುವುದು
  • ಧೂಮಪಾನ
  • ಬಿಸಿಲಿನಲ್ಲಿ ಹೆಚ್ಚು ವ್ಯಾಯಾಮ ಮಾಡುವುದು
  • ಗಂಟೆಗಟ್ಟಲೆ ಓದುವುದು
  • ತುಂಬಾ ಟಿವಿ ನೋಡುವುದು
  • ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಂತಹ ಎಲೆಕ್ಟ್ರಾನಿಕ್ ವಸ್ತುಗಳ ಅತಿಯಾದ ಬಳಕೆ

ಡಾರ್ಕ್​ ಸರ್ಕಲ್ ತಡೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು:

ನಮ್ಮಲ್ಲಿ ಹಲವರು ಕಣ್ಣಿನ ಕೆಳಗಿನ ಡಾರ್ಕ್​ ಸರ್ಕಲ್​ಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಾರೆ. ಮಾರುಕಟ್ಟೆಯಲ್ಲಿ ಸಿಗುವ ಕ್ರೀಮ್ ಮತ್ತು ಲೋಷನ್​ಗಳನ್ನು ಬಳಸುತ್ತಾರೆ. ಆದರೆ, ಫೋಸಿಕ್ ಆಸಿಡ್ ಮತ್ತು ಅರ್ಬುಟಿನ್ ಹೊಂದಿರುವ ಕ್ರೀಮ್‌ಗಳಲ್ಲಿ ಕೆಲವು ಫಲಿತಾಂಶ ನೀಡುತ್ತವೆ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೆ, ಕಣ್ಣಿನ ಕೆಳಗಿನ ಡಾರ್ಕ್​ ಸರ್ಕಲ್ ಕಡಿಮೆ ಮಾಡಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗುತ್ತದೆ.

  • ಕಣ್ಣುಗಳಿಗೆ ಸರಿಯಾದ ವಿಶ್ರಾಂತಿ ನೀಡಬೇಕು.
  • ಮಾನಸಿಕ ಒತ್ತಡ ಮತ್ತು ಆತಂಕ ಕಡಿಮೆ ಮಾಡಿ.
  • ಕಣ್ಣುಗಳನ್ನು ಹೆಚ್ಚು ಉಜ್ಜಬೇಡಿ.
  • ಕನ್ನಡಕ ಹಾಕಿಕೊಂಡು ಹೊರಗೆ ಹೋಗಿ.
  • ಒಣ ತ್ವಚೆ ಇರುವವರು ಮಾಯಿಶ್ಚರೈಸರ್ ಹಚ್ಚಬೇಕು.
  • ರೋಸ್​ ವಾಟರ್​ ಅನ್ನು ಕಣ್ಣುಗಳಿಗೆ ಹಚ್ಚಬೇಕು.
  • ಕಲ್ಲಂಗಡಿ ಮತ್ತು ಸ್ಟ್ರಾಬೆರಿ ಸಿಪ್ಪೆಯನ್ನು ಡಾರ್ಕ್​ ಸರ್ಕಲ್ ಮೇಲೆ ಅನ್ವಯಿಸಿ.
  • ಡಾರ್ಕ್​ ಸರ್ಕಲ್ ಮೇಲೆ ಅನಾನಸ್ ರಸದಲ್ಲಿ ಅದ್ದಿದ ಹತ್ತಿ ಉಂಡೆಯನ್ನು ಉಜ್ಜಿಕೊಳ್ಳಿ.
  • ಆಲೂಗಡ್ಡೆ ಮತ್ತು ಸೌತೆಯಯನ್ನು ತೆಳುವಾಗಿ ಕತ್ತರಿಸಿ ಕಣ್ಣಿನ ಮೇಲೆ ಇಟ್ಟುಕೊಳ್ಳಿ.

ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಕಣ್ಣಿನ ಕೆಳಗಿರುವ ಡಾರ್ಕ್ ಸರ್ಕಲ್ ಹೋಗಲಾಡಿಸಲು ಹಲವು ಚಿಕಿತ್ಸಾ ವಿಧಾನಗಳಿವೆ ಎಂದು ವೈದ್ಯರು ಹೇಳುತ್ತಾರೆ. ಇದರಲ್ಲಿ ಲೇಸರ್ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯಂತಹ ಸುಧಾರಿತ ಚಿಕಿತ್ಸೆಗಳು ಸೇರಿವೆ. ಕಣ್ಣಿನ ಅಲರ್ಜಿಯನ್ನು ನಿರ್ಲಕ್ಷಿಸಬಾರದು ಮತ್ತು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು ಎಂದು ವಿವರಿಸಲಾಗಿದೆ. ಬಿಸಿಲಿನಿಂದಾಗಿ ಡಾರ್ಕ್ ಸರ್ಕಲ್ ಬರುವಾಗ ಕಣ್ಣಿಗೆ ಕನ್ನಡಕ ಮತ್ತು ತಲೆಗೆ ಟೋಪಿಗಳನ್ನು ಧರಿಸಲು ಸೂಚಿಸಲಾಗುತ್ತದೆ.

ಓದುಗರಿಗೆ ಸೂಚನೆ:ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:

ABOUT THE AUTHOR

...view details