ETV Bharat / health

ಮಧುಮೇಹಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತೇ?: ಈ ಕುರಿತ ಸಂಶೋಧನೆ ಏನು ಹೇಳುತ್ತೆ ತಿಳಿಯೋಣ - HOW MUCH WATER DO DIABETICS DRINK

How much water do diabetics drink: ಮಧುಮೇಹಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಎಂಬುದರ ಕುರಿತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದ ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಸಂಶೋಧನೆಯಲ್ಲಿ ಪ್ರಮುಖವಾಗಿ ಯಾವೆಲ್ಲಾ ವಿಷಯಗಳನ್ನು ತಿಳಿಸಲಾಗಿದೆ ಎಂದು ಅರಿತುಕೊಳ್ಳೋಣ.

WATER HEALTH BENEFITS BODY  HOW MANY GLASSES OF WATER TO DRINK  DIABETIC PATIENT WATER INTAKE  HOW MUCH WATER DO DIABETICS DRINK
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Dec 2, 2024, 11:11 AM IST

How much water do diabetic Patient Drink: ಮನುಷ್ಯ ಆರೋಗ್ಯಯತವಾಗಿ ಜೀವನ ನಡೆಸಬೇಕಾದರೆ ನೀರು ಅಗತ್ಯವಾಗಿದೆ. ನಮ್ಮ ದೇಹದಲ್ಲಿ ಅರ್ಧಕ್ಕಿಂತ ಹೆಚ್ಚು ನೀರು ಇದೆ. ಸಾಕಷ್ಟು ನೀರು ಕುಡಿಯುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂದು ಹಲವು ಅಧ್ಯಯನಗಳು ತೋರಿಸಿವೆ. ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಮಧುಮೇಹಿಗಳು ದಿನಕ್ಕೆ ಎಷ್ಟು ಪ್ರಮಾಣದಲ್ಲಿ ನೀರು ಕುಡಿದರೆ ದೇಹಕ್ಕೆ ಹಲವು ಪ್ರಯೋಜನಗಳನ್ನು ಲಭಿಸುತ್ತದೆ ಎಂಬುದನ್ನು ವೈಜ್ಞಾನಿಕವಾಗಿ ಬಹಿರಂಗಪಡಿಸಿದ್ದಾರೆ. ಸಂಶೋಧಕರು ಹಿಂದಿನ ನಡೆದ 18 ಅಧ್ಯಯನಗಳನ್ನು ಪರಿಶೀಲಿಸಿದ್ದಾರೆ ಮತ್ತು ಅದರಿಂದ ಹಲವಾರು ಅಂಶಗಳನ್ನು ಗುರುತಿಸಿದ್ದಾರೆ.

ಸಂಶೋಧನೆ ಏನು ತಿಳಿಸುತ್ತೆ: ನ್ಯೂಟ್ರಿಷನ್ ರಿವ್ಯೂಸ್ ನಿಯತಕಾಲಿಕದಲ್ಲಿ ಪ್ರಕಟವಾದ ವಾಟರ್ ಮತ್ತು ಹೆಲ್ತ್ ಅಧ್ಯಯನವು ಪ್ರತಿದಿನ 8 ಗ್ಲಾಸ್ ನೀರನ್ನು ಕುಡಿಯುವ ಜನರು ಕಿಡ್ನಿ ಸ್ಟೋನ್​ ಆಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಜೊತೆಗೆ ದೇಹದ ತೂಕವನ್ನು ಕಡಿಮೆ ಮಾಡಲು ನೀರು ಸಹಾಯ ಮಾಡುತ್ತದೆ ಎಂದು ಕಂಡು ಹಿಡಿದಿದೆ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಬೊಜ್ಜು ಸಮಸ್ಯೆಯಿಂದ ಪಾರಾಗಬಹುದು ಎಂದು ಸಂಶೋಧನೆಯಿಂದ ತಿಳಿದು ಬಂದಿದೆ.

ನಮ್ಮಲ್ಲಿ ಅನೇಕ ಜನರು ಆಗಾಗ್ಗೆ ತಲೆನೋವಿನಿಂದ ಬಳಲುತ್ತಿದ್ದಾರೆ. ಅಂತಹವರು ಮೂರು ತಿಂಗಳವರೆಗೆ ಹೆಚ್ಚು ನೀರು ಕುಡಿದರೆ ಸಾಕು ಪರಿಹಾರ ಸಿಗುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ.

ಅಧಿಕ ರಕ್ತದ ಗ್ಲೂಕೋಸ್ ಮಟ್ಟವನ್ನು ಹೊಂದಿರುವ ಮಧುಮೇಹ ಪೀಡಿತರು 8 ವಾರಗಳವರೆಗೆ ದಿನಕ್ಕೆ ಹೆಚ್ಚುವರಿ ನಾಲ್ಕು ಗ್ಲಾಸ್ ನೀರನ್ನು ಕುಡಿಯುವುದರಿಂದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ. ಮೂತ್ರಕೋಶದ ಸೋಂಕಿನಿಂದ ಬಳಲುತ್ತಿರುವ ಮಹಿಳೆಯರು ದಿನಕ್ಕೆ ಹೆಚ್ಚುವರಿ 6 ಗ್ಲಾಸ್ ನೀರನ್ನು ಕುಡಿಯಲು ಸಲಹೆ ನೀಡುತ್ತಾರೆ.

ಮೈಗ್ರೇನ್, ಮಧುಮೇಹ, ಕಡಿಮೆ ಬಿಪಿ, ಮೂತ್ರಕೋಶದ ಸೋಂಕು ಇತ್ಯಾದಿಗಳಿಂದ ಬಳಲುತ್ತಿರುವ ಜನರು ನೀರು ಕುಡಿಯುವುದರಿಂದ ಪ್ರಯೋಜನವನ್ನು ಪಡೆಯುತ್ತಾರೆ ಎಂದು ತಜ್ಞರು ತಿಳಿಸುತ್ತಾರೆ. ಆದರೆ, ಈ ವಿಷಯದಲ್ಲಿ ಯಾವುದೇ ಸ್ಪಷ್ಟ ವೈಜ್ಞಾನಿಕ ಪುರಾವೆಗಳು ಕಂಡುಬಂದಿಲ್ಲ. ನೀವು ನಿಯಮಿತವಾಗಿ 8 ಗ್ಲಾಸ್‌ಗಳಿಗಿಂತ ಹೆಚ್ಚು ನೀರನ್ನು ಕುಡಿದರೆ, ಹೆಚ್ಚುವರಿ ಆರೋಗ್ಯ ಪ್ರಯೋಜನಗಳು ಲಭಿಸುವುದಿಲ್ಲ. ಇದರ ಪರಿಣಾಮವಾಗಿ, ಹೆಚ್ಚು ಮೂತ್ರ ವಿಸರ್ಜಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಂತಹವರು ಕಡಿಮೆ ನೀರು ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ.

ಸಮರ್ಪಕ ನೀರನ್ನು ಏಕೆ ಕುಡಿಯಬೇಕು?

  • ಸಮರ್ಪಕ ನೀರು ಕುಡಿಯುವುದರಿಂದ ದೇಹದ ಪ್ರತಿಯೊಂದು ಜೀವಕೋಶವೂ ಆರೋಗ್ಯಕರವಾಗಿರುತ್ತದೆ.
  • ರಕ್ತನಾಳಗಳ ಮೂಲಕ ರಕ್ತವು ಸರಿಯಾಗಿ ಹರಿಯಲು ಸಹಾಯ ಮಾಡುತ್ತದೆ.
  • ಚಯಾಪಚಯ ತ್ಯಾಜ್ಯಗಳನ್ನು ಹೊರಹಾಕಲು ಸಾಧ್ಯವಾಗುತ್ತದೆ.
  • ದೇಹದ ಉಷ್ಣತೆಯನ್ನು ಬೆವರು ರೂಪದಲ್ಲಿ ನಿಯಂತ್ರಿಸಲು ಪೂರಕವಾಗುತ್ತದೆ.
  • ಶ್ವಾಸಕೋಶ ಹಾಗೂ ಬಾಯಿಯಂತಹ ಭಾಗಗಳಲ್ಲಿ ಲೋಳೆಯ ಪೊರೆಗಳಲ್ಲಿ ತೇವಾಂಶ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ.
  • ಕೀಲುಗಳ ನಯಗೊಳಿಸುವ ಸಾಮರ್ಥ್ಯ ಹೆಚ್ಚಿಸುತ್ತದೆ ಹಾಗೂ ಕುಶನ್ ಆಗಿ ಕಾರ್ಯನಿರ್ವಹಿಸುತ್ತದೆ.
  • ಮೂತ್ರಕೋಶದ ಸೋಂಕು ಹಾಗೂ ಹಾನಿಕಾರಕ ಬ್ಯಾಕ್ಟೀರಿಯಾ ನಿವಾರಿಸುತ್ತದೆ.
  • ಜೀರ್ಣಕ್ರಿಯೆ ಸುಗಮಗೊಳಿಸುತ್ತದೆ ಹಾಗೂ ಮಲಬದ್ಧತೆ ತಡೆಯುತ್ತದೆ.
  • ಜೀವಕೋಶಗಳಿಗೆ ಪೋಷಕಾಂಶಗಳು ಹಾಗೂ ಆಮ್ಲಜನಕವನ್ನು ಒದಗಿಸುತ್ತದೆ.
  • ಚರ್ಮವನ್ನು ತೇವಗೊಳಿಸುತ್ತದೆ ಜೊತೆಗೆ ಅದರ ಬಾಹ್ಯರೇಖೆಗಳನ್ನು ಸಂರಕ್ಷಿಸುತ್ತದೆ.

ಓದುಗರಿಗೆ ಸೂಚನೆ: ಈ ಲೇಖನದಲ್ಲಿ ನಿಮಗೆ ನೀಡಿರುವ ಎಲ್ಲಾ ಆರೋಗ್ಯ ಮಾಹಿತಿ, ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣತ ವೈದ್ಯರ ಸಲಹೆಗಳನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಮಧುಮೇಹಕ್ಕೆ ಇದುವೇ ಉತ್ತಮ ಪರಿಹಾರ; ಸಕ್ಕರೆಯ ಪ್ರಮಾಣ ಶೇ 50ರಷ್ಟು ಕಡಿಮೆ ಮಾಡುತ್ತೆ ಈರುಳ್ಳಿ: ವಿಜ್ಞಾನಿಗಳ ಪ್ರತಿಪಾದನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.