IRCTC Heritage of Madhya Pradesh Tour: ಮಧ್ಯಪ್ರದೇಶವು ವಿವಿಧ ಅತ್ಯುತ್ತಮ ಪ್ರವಾಸಿ ಸ್ಥಳಗಳನ್ನು ಹೊಂದಿದೆ. ಐತಿಹಾಸಿಕ, ಆಧ್ಯಾತ್ಮಿಕ, ನೈಸರ್ಗಿಕ ಸೌಂದರ್ಯ ಮತ್ತು ವನ್ಯಜೀವಿ ಅಭಯಾರಣ್ಯಗಳು ಇಲ್ಲಿವೆ. ಇವೆಲ್ಲಗಳನ್ನು ಒಮ್ಮೆ ವೀಕ್ಷಿಸುವುದು ಕೂಡ ಸ್ವಲ್ಪ ಕಷ್ಟವಾಗುತ್ತದೆ. ಇದರಿಂದ ಮಧ್ಯಪ್ರದೇಶದ ಪ್ರಮುಖ ಮೂರು ನಗರಗಳನ್ನು ವೀಕ್ಷಿಸಲು ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಸೂಪರ್ ಪ್ಯಾಕೇಜ್ನ್ನು ನಿಮಗಾಗಿ ತಂದಿದೆ. ಈ ಟೂರ್ ಪ್ಯಾಕೇಜ್‌ನ ಸಂಪೂರ್ಣ ವಿವರಗಳನ್ನು ತಿಳಿಯೋಣ.
IRCTC 'ಹೆರಿಟೇಜ್ ಆಫ್ ಮಧ್ಯಪ್ರದೇಶ' ಎಂಬ ಹೆಸರಿನಲ್ಲಿ ಪ್ರವಾಸದ ಪ್ಯಾಕೇಜ್ನ್ನು ಘೋಷಣೆ ಮಾಡಿದೆ. ಈ ಟೂರ್ ಪ್ಯಾಕೇಜ್‌ನಲ್ಲಿ 5 ರಾತ್ರಿ ಹಾಗೂ 6 ಹಗಲು ಒಳಗೊಂಡಿದೆ. ಈ ಪ್ರವಾಸದಲ್ಲಿ ಗ್ವಾಲಿಯರ್, ಖಜುರಾಹೊ ಹಾಗೂ ಓರ್ಚಾಗೆ ವೀಕ್ಷಿಸಬಹುದು. ರೈಲು ಪ್ರಯಾಣದ ಮೂಲಕ ಹೈದರಾಬಾದ್‌ನಿಂದ ಈ ಪ್ರವಾಸ ಪ್ರಾರಂಭವಾಗುತ್ತದೆ. ಈ ಪ್ರವಾಸವು ತಿಳಿಸಿರುವ ದಿನಾಂಕಗಳಲ್ಲಿ ಪ್ರತಿ ಶುಕ್ರವಾರ ಲಭ್ಯವಿದೆ.
ಪ್ರಯಾಣದ ಮಾಹಿತಿ:
- 1ನೇ ದಿನ: ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ- 12707) ಮೊದಲ ದಿನ ಸಂಜೆ 4.40ಕ್ಕೆ ಕಾಚಿಗುಡ ರೈಲು ನಿಲ್ದಾಣದಿಂದ ಹೊರಡಲಿದೆ. ಆ ರಾತ್ರಿಯು ಇಡೀ ಪ್ರಯಾಣ ನಡೆಯುತ್ತದೆ.
- 2ನೇ ದಿನ: ಎರಡನೇ ದಿನ ಮಧ್ಯಾಹ್ನ 2 ಗಂಟೆಗೆ ಗ್ವಾಲಿಯರ್ ತಲುಪಲಾಗುವುದು. ಅಲ್ಲಿಂದ ಹೋಟೆಲ್‌ಗೆ ತೆರಳಲಾಗುವುದು. ಫ್ರೆಶ್ ಆದ ನಂತರ ಮೊರೆನಾ ಪ್ರದೇಶಕ್ಕೆ ಹೊರಡಲಾಗುವುದು. ಅಲ್ಲಿ ಚೌಸತ್ ಯೋಗಿನಿ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ಬಳಿಕ ಗ್ವಾಲಿಯರ್‌ಗೆ ವಾಪಸ್ ಬಂದು, ಆ ರಾತ್ರಿ ಗ್ವಾಲಿಯರ್‌ನಲ್ಲಿ ತಂಗಲಾಗುವುದು.
- 3ನೇ ದಿನ: ಮೂರನೇ ದಿನ ಬೆಳಗ್ಗೆ ಗ್ವಾಲಿಯರ್ ಕೋಟೆಗೆ ಭೇಟಿ ನೀಡಲಾಗುವುದು. ಉಪಹಾರದ ನಂತರ ಹೋಟೆಲ್‌ನಿಂದ ಚೆಕ್ಔಟ್ ಮಾಡಿದ ನಂತರ, ಜೈ ವಿಲಾಸ್ ಅರಮನೆಗೆ ಭೇಟಿ ನೀಡಲಾಗುವುದು. ಬಳಿಕ ಓರ್ಚಾಗೆ ಹೊರಡಲಾಗುವುದು. ಅಲ್ಲಿಗೆ ತಲುಪಿ ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿದ ಬಳಿಕ, ಓರ್ಚಾ ಫೋರ್ಟ್ಗೆ ಭೇಟಿ ನೀಡಲಾಗುವುದು. ಆ ರಾತ್ರಿ ಓರ್ಚಾದಲ್ಲಿ ಉಳಿದುಕೊಳ್ಳಲಾಗುವುದು.
- 4ನೇ ದಿನ: ನಾಲ್ಕನೇ ದಿನದ ಉಪಹಾರದ ಬಳಿಕ ಹೋಟೆಲ್‌ನಿಂದ ಚೆಕ್ಔಟ್ ಮಾಡಿದ ನಂತರ, ಖಜುರಾಹೊಗೆ ಪ್ರಯಾಣಿಸಲಾಗುವುದು. ಅಲ್ಲಿ ಸ್ಥಳೀಯ ದೇವಸ್ಥಾನಗಳಿಗೆ ಭೇಟಿ ನೀಡಲಾಗುವುದು. ಸಂಜೆ ದೀಪಾಲಂಕಾರ ಮತ್ತು ಧ್ವನಿ ಪ್ರದರ್ಶನ ನಡೆಯಲಿದೆ. ಮೊದಲೇ ಕಾಯ್ದಿರಿಸಿದ ಹೋಟೆಲ್‌ನಲ್ಲಿ ರಾತ್ರಿ ಖಜುರಾಹೋದಲ್ಲಿ ಉಳಿದುಕೊಳ್ಳಲಾಗುವುದು.
- 5ನೇ ದಿನ: ಐದನೇ ದಿನ ಹೋಟೆಲ್‌ನಲ್ಲಿ ಉಪಹಾರ ಸೇವಿಸಿದ ನಂತರ, ವೆಸ್ಟರ್ನ್ ಗ್ರೂಪ್ ಆಫ್ ಟೆಂಪಲ್ ಭೇಟಿ ನೀಡಲಾಗುವುದು. ಚೆಕ್ಔಟ್ ಮಾಡಿ ಮತ್ತು ಸತ್ನಾಗೆ ಹೋಗಲಾಗುವುದು. ಅಲ್ಲಿನ ರೈಲು ನಿಲ್ದಾಣದಿಂದ 11.25ಕ್ಕೆ ಹೈದರಾಬಾದ್‌ಗೆ ಪ್ರಯಾಣ ಆರಂಭವಾಗಲಿದೆ. ಇಡೀ ರಾತ್ರಿ ಪ್ರಯಾಣ ನಡೆಯುತ್ತದೆ.
- 6ನೇ ದಿನ: ಆರನೇ ದಿನ ಪ್ರವಾಸವು ಸಿಕಂದರಾಬಾದ್ ರೈಲು ನಿಲ್ದಾಣದಲ್ಲಿ ರಾತ್ರಿ 10 ಸಮಯಕ್ಕೆ ಕೊನೆಗೊಳ್ಳುತ್ತದೆ.
ಪ್ರವಾಸದ ದರ ಮಾಹಿತಿ:
- ಕಂಪರ್ಟ್ ಡಬಲ್ ಸೀಟು ಹಂಚಿಕೆ (3AC) (ವ್ಯಕ್ತಿಯೊಬ್ಬರಿಗೆ)- ₹22,260
- ಟ್ರಿಪಲ್ ಹಂಚಿಕೆ- 17,090
- ಹಾಸಿಗೆ ಸಹಿತ 5 ರಿಂದ 11 ವರ್ಷದ ಮಕ್ಕಳಿಗೆ ₹12,880
- ವಿತ್ ಔಟ್ ಬೆಡ್ (ಮಕ್ಕಳಿಗೆ)- ₹11,750 ಪಾವತಿಸಬೇಕಾಗುತ್ತದೆ.
- ಸ್ಟ್ಯಾಂಡರ್ಡ್ (SL) ಡಬಲ್ ಸೀಟು ಹಂಚಿಕೆ- 19,490
- ಟ್ರಿಪಲ್ ಹಂಚಿಕೆ- ₹14,320
- ಹಾಸಿಗೆ ಸಹಿತ 5 ರಿಂದ 11 ವರ್ಷದ ₹10,100
- ವಿತ್ ಔಟ್ ಬೆಡ್ ₹8,970 ಎಂದು ಶುಲ್ಕ ನಿಗದಿಪಡಿಸಲಾಗಿದೆ.
- ನೀವು ಗುಂಪು ಬುಕ್ಕಿಂಗ್ ಮಾಡಿದರೆ, ಬೆಲೆಗಳು ಕಡಿಮೆ ಇರುತ್ತದೆ.
ಪ್ಯಾಕೇಜ್‌ನಲ್ಲಿ ಏನಿರುತ್ತೆ?:
- ಪ್ರವಾಸದ ಪ್ಯಾಕೇಜ್‌ನಲ್ಲಿ ಟಿಕೆಟ್‌ಗಳು
- ಹೋಟೆಲ್‌ನಲ್ಲಿ ವಸತಿ ಮತ್ತು ಉಪಹಾರ
- ಪ್ರಯಾಣ ವಿಮೆ
- ಪ್ಯಾಕೇಜ್ ಪ್ರಕಾರ ಸ್ಥಳೀಯ ಸಾರಿಗೆಗಾಗಿ ವಾಹನ ಸೌಲಭ್ಯ
- ಪ್ರಸ್ತುತ ಈ ಪ್ಯಾಕೇಜ್ ಡಿಸೆಂಬರ್ 13 ಮತ್ತು ಡಿಸೆಂಬರ್ 27 ರಂದು ಲಭ್ಯವಿದೆ.
- ಈ ಪ್ರವಾಸದ ಪ್ಯಾಕೇಜ್ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಲು ಹಾಗೂ ಟೂರ್ ಪ್ಯಾಕೇಜ್ ಬುಕ್ಕಿಂಗ್ಗಾಗಿ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ನ್ನು ಸಂರ್ಕಿಸಬಹುದು: https://www.irctctourism.com/tourpackageBooking?packageCode=SHR096
ಇದನ್ನೂ ಓದಿ: ಚಳಿಗಾಲದ ವಿಶೇಷ ಪ್ರವಾಸ: IRCTC 'ವಂಡರ್ಸ್ ಆಫ್ ವಯನಾಡ್', ಕಡಿಮೆ ದರದಲ್ಲಿ ಆರು ದಿನ ಟೂರ್
ಒಂದೇ ಟೂರ್ನಲ್ಲಿ ಅಜಂತಾ, ಎಲ್ಲೋರಾ, ಮಿನಿ ತಾಜ್ ಮಹಲ್: IRCTC ಸೂಪರ್ ಪ್ಯಾಕೇಜ್, ದರವೂ ಅಗ್ಗ!