ಕರ್ನಾಟಕ

karnataka

ETV Bharat / entertainment

ದೊಡ್ಡ ಮಟ್ಟದಲ್ಲಿ 'ಟಾಕ್ಸಿಕ್' ಸಿನಿಮಾ ತಯಾರಾಗುತ್ತಿದೆ: ಯಶ್‌ - ಟಾಕ್ಸಿಕ್ ಸಿನಿಮಾ

'ಟಾಕ್ಸಿಕ್'​ ಸಿನಿಮಾ ಶೂಟಿಂಗ್​ ಬಗ್ಗೆ ನಟ ಯಶ್​ ಅವರು ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

Etv Bharat ಟಾಕ್ಸಿಕ್ ಸಿನಿಮಾ ಶೂಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್​
ಟಾಕ್ಸಿಕ್ ಸಿನಿಮಾ ಶೂಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡ ರಾಕಿಂಗ್ ಸ್ಟಾರ್ ಯಶ್​

By ETV Bharat Karnataka Team

Published : Feb 15, 2024, 4:08 PM IST

ಕೆಜಿಎಫ್ ಸೀಕ್ವೆಲ್ ಚಿತ್ರಗಳ ಮೂಲಕ ಬಹುದೊಡ್ಡ ಯಶಸ್ಸು ಗಳಿಸಿರುವ ನಟ ಯಶ್​ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಕೆಜಿಎಫ್ ಬಳಿಕ ತಮ್ಮ ಮುಂದಿನ ಚಿತ್ರ 'ಟಾಕ್ಸಿಕ್'​ ಎಂದು ಕಳೆದ ತಿಂಗಳು ಅನೌನ್ಸ್ ಮಾಡಿದ್ದರು. ಚಿತ್ರದ ಮೋಷನ್​ ಪಿಕ್ಚರ್‌ ಬಿಡುಗಡೆ ಮಾಡುವ ಮೂಲಕ ಸಿನಿರಂಗದಲ್ಲಿ ಬಾರಿ ಸದ್ದು ಮಾಡಿದ್ದರು. ಮೋಷನ್ ಪಿಕ್ಚರ್​ ರಿಲೀಸ್ ಆಗಿ ಒಂದು ತಿಂಗಳು ಕಳೆದಿದ್ದು​ ಚಿತ್ರದ ಲೇಟೆಸ್ಟ್ ಅಪ್‌ಡೇಟ್ಸ್​ ಅನ್ನು ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ. ಇತ್ತೀಚೆಗೆ ಸ್ನೇಹಿತನ ಜಿಮ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್‌ ಚಿತ್ರದ ಕುರಿತು ಕೆಲವು ಮಾಹಿತಿ ನೀಡಿದ್ದಾರೆ.

ಕಿಟ್ಟೀಸ್ ಮಸಲ್ ಪ್ಲಾನೆಟ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಯಶ್

ತಮ್ಮ ಪರ್ಸನಲ್ ಜಿಮ್ ಟ್ರೈನರ್ ಪಾನಿಪುರಿ ಕಿಟ್ಟಿ ಹೊಸದಾಗಿ 'ಕಿಟ್ಟೀಸ್ ಮಸಲ್ ಪ್ಲಾನೆಟ್' ಎಂಬ ಜಿಮ್‌ ಕೇಂದ್ರ ತೆರೆದಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯಶ್ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದರು. "ಆದಷ್ಟು ಬೇಗ ಶೂಟಿಂಗ್ ಶುರುವಾಗಲಿದೆ. ಪ್ರೀ ಪ್ರೊಡಕ್ಷನ್ಸ್ ಕೆಲಸಗಳು ಚಾಲ್ತಿಯಲ್ಲಿವೆ. ವಾರಕ್ಕೊಂದು ಸುದ್ದಿ ಬರ್ತಿದೆ. ನಾನಾಗಿಯೇ ಹೇಳುವವರೆಗೂ ಕಾಯಿರಿ. ಶೂಟಿಂಗ್ ಇಲ್ಲ ಎಂದು ನಾನು ಸುಮ್ಮನೆ ಕುಳಿತಿಲ್ಲ. ತುಂಬಾ ಬ್ಯುಸಿ ಇದ್ದೀನಿ. ಸಾಕಷ್ಟು ತಯಾರಿಗಳು ನಡೆಯುತ್ತಿವೆ" ಎಂದರು.

ಕಿಟ್ಟೀಸ್ ಮಸಲ್ ಪ್ಲಾನೆಟ್​ ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಯಶ್

"ಸಿನಿಮಾಗೆ ಸಂಬಂಧಿಸಿದಂತೆ ದೊಡ್ಡ ಪ್ಲಾನ್‌ಗಳು ಆಗುತ್ತಿವೆ. ದೊಡ್ಡ ಮಟ್ಟದಲ್ಲಿಯೇ ಟಾಕ್ಸಿಕ್ ತಯಾರಾಗುತ್ತಿದೆ. ಟಾಕ್ಸಿಕ್ ಅನ್ನು ಪಕ್ಕಾ ಪ್ಲಾನ್ ಮಾಡಿ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡ್ತಿದ್ದೇವೆ" ಎಂದು ಹೇಳಿದರು. ಸಿನಿಮಾವನ್ನು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿನ್ ಬಹು ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುತ್ತಿದೆ ಎಂಬ ವಿಚಾರಗಳು ಕೇಳಿಬರುತ್ತಿವೆ.

ABOUT THE AUTHOR

...view details