ಕರ್ನಾಟಕ

karnataka

ETV Bharat / entertainment

ಪ್ರಭಾಸ್ ಅಭಿನಯದ ಕಲ್ಕಿ 2898AD ಚಿತ್ರದ ಮೊದಲ ದಿನದ ಶೂಟಿಂಗ್​ನ ಬಗ್ಗೆ ನಟಿ ದಿಶಾ ಪಟಾನಿ ಹೇಳಿದ್ದೇನು? - Kalki 2898AD - KALKI 2898AD

ಪ್ರಭಾಸ್ ಅಭಿನಯದ ಕಲ್ಕಿ 2898AD ಚಿತ್ರದ ಮೊದಲ ದಿನದ ಶೂಟಿಂಗ್​ನ ಬಗ್ಗೆ ನಟಿ ದಿಶಾ ಪಟಾನಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Disha Patani  Prabhas  Kalki 2898AD
ಪ್ರಭಾಸ್ ಹಾಗೂ ನಟಿ ದಿಶಾ ಪಟಾನಿ (ETV Bharat and ANI)

By ETV Bharat Karnataka Team

Published : Jun 12, 2024, 9:58 AM IST

ನಟಿ ದಿಶಾ ಪಟಾನಿ ಅವರು ಪ್ರಭಾಸ್ ಅಭಿನಯದ ಕಲ್ಕಿ 2898AD ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಕೊಳ್ಳಲಿದ್ದಾರೆ. ಈ ಸಿನಿಮಾದ ಮೊದಲ ದಿನದ ಶೂಟಿಂಗ್​ನಲ್ಲಿ ಪಾಲ್ಗೊಂಡಿರುವ ಕುರಿತು ನಟಿ ದಿಶಾ ಪಟಾನಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಕಲ್ಕಿ 2898AD ಚಿತ್ರದಲ್ಲಿ ದಿಶಾ ಪಟಾನಿ, ಪ್ರಭಾಸ್:ದಿಶಾ ಪಟಾನಿ ಬಾಲಿವುಡ್‌ನ ಹಾಟ್ ಸುಂದರಿಯರಲ್ಲಿ ಒಬ್ಬರು. ಬಿಕಿನಿ ಮತ್ತು ಶಾರ್ಟ್ ಡ್ರೆಸ್‌ನಲ್ಲಿರುವ ಸೌಂದರ್ಯವು ಹುಡುಗರ ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಎಂಎಸ್ ಧೋನಿ ಚಿತ್ರದ ಮೂಲಕ ಉತ್ತಮ ಹೆಸರು ಪಡೆದ ಭಾಮಾ ನಂತರ ಬಾಘಿ 2, ಮಲಂಗ್, ಏಕ್ ವಿಲನ್ 2 ಮತ್ತು ಯೋಧ ಚಿತ್ರಗಳಲ್ಲಿ ಅಭಿನಯಯಿಸಿ ಜನಮನ ಸೆಳೆದಿದ್ದಾರೆ.

ಪ್ರಸ್ತುತ ದಿಶಾ ಪಟಾನಿ ಅವರು ಪ್ರಭಾಸ್ ಕಲ್ಕಿ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಚಿಕ್ಕ ದೃಶ್ಯವೊಂದರಲ್ಲಿ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಕಲ್ಕಿಯ ಸಿನಿಮಾದ ಮೊದಲ ದಿನದ ಅನುಭವದ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿರುವ ಮಾತುಗಳು ಭಾರಿ ವೈರಲ್ ಆಗಿವೆ.

''ಪ್ರಭಾಸ್ ಒಬ್ಬ ತುಂಬಾ ಸ್ವೀಟ್​ ವ್ಯಕ್ತಿ. ಅವರು ತುಂಬಾ ವಿನಮ್ರ ಮತ್ತು ಸಭ್ಯರು. ಅವರೊಂದಿಗೆ ಚಲನಚಿತ್ರಗಳನ್ನು ಮಾಡುವುದು ತುಂಬಾ ಸುಲಭ ಮತ್ತು ಆರಾಮದಾಯಕ" ಎಂದು ನಟಿ ದಿಶಾ ಪಟಾನಿ ಹೇಳಿದ್ದಾರೆ. ಶೂಟಿಂಗ್‌ನ ಮೊದಲ ದಿನ ಪ್ರಭಾಸ್ ತನಗೆ ಮಾತ್ರವಲ್ಲದೇ ಇಡೀ ಚಿತ್ರತಂಡಕ್ಕೆ ಮನೆಯಲ್ಲಿ ಮಾಡಿದ ಆಹಾರವನ್ನು ತಂದಿದ್ದರು ಎಂದು ಅವರು ತಿಳಿಸಿದರು.

ಕಲ್ಕಿ 2898 AD ಸಿನಿಮಾದ ಸ್ಟಾರ್​ ನಟರು:ಕಲ್ಕಿ ಸಿನಿಮಾದ ವಿಷಯವನ್ನು ಪೌರಾಣಿಕ ವೈಜ್ಞಾನಿಕ ಕಾಲ್ಪನಿಕ ರೀತಿಯಲ್ಲಿ ನಾಗ ಅಶ್ವಿನ್ ನಿರ್ದೇಶ ಮಾಡಿದ್ದಾರೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜೊತೆಗೆ ಯೂನಿವರ್ಸಲ್ ಸ್ಟಾರ್ ಕಮಲ್ ಹಾಸನ್, ಬಿಗ್ ಬಿ ಅಮಿತಾಬ್ ಬಚ್ಚನ್, ರಾಜೇಂದ್ರ ಪ್ರಸಾದ್, ಪಶುಪತಿ ಇತರರು ಈ ಚಿತ್ರದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸಲಿದ್ದಾರೆ. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತವಿದೆ.

ಇದನ್ನೂ ಓದಿ:ಜೂನ್ ಕೊನೆಗೆ ಗೆಳೆಯ ಜಹೀರ್ ಇಕ್ಬಾಲ್ ಜೊತೆ ಸೋನಾಕ್ಷಿ ಸಿನ್ಹಾ ವಿವಾಹ - Sonakshi Sinha

ABOUT THE AUTHOR

...view details