ಬಾಲಿವುಡ್ ಅಭಿನೇತ್ರಿ ಅನುಷ್ಕಾ ಶರ್ಮಾ ಮತ್ತು ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ದಂಪತಿಗೆ ಎರಡನೇ ಮಗುವಾಗಿದೆ. ಫೆಬ್ರವರಿ 15ರಂದು ಗಂಡು ಮಗು ಜನಿಸಿದ್ದು, 'ಅಕಾಯ್' ಎಂಬ ವಿಭಿನ್ನ- ಆಕರ್ಷಕ ಹೆಸರಿಟ್ಟಿದ್ದಾರೆ. ಕಳೆದ ಗುರುವಾರ ಮಗು ಜನಿಸಿದ್ದು, ನಿನ್ನೆ ರಾತ್ರಿ ಈ ಸುದ್ದಿಯನ್ನು ಸ್ಟಾರ್ ಕಪಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದಂಪತಿ ಸದ್ಯ ಎಲ್ಲಿದ್ದಾರೆ ಎಂಬ ನಿಖರ ಮಾಹಿತಿ ಹೊರಬಿದ್ದಿಲ್ಲ. ಆದರೆ ಲಂಡನ್ನಲ್ಲಿ ವಿರಾಟ್ ಅಡ್ಡಾಡುತ್ತಿರುವ ಫೋಟೋ ವೈರಲ್ ಆಗಿದೆ.
ಈ ಹಿಂದೆ ಲಂಡನ್ ಆಸ್ಪತ್ರೆಯಲ್ಲಿ ಅನುಷ್ಕಾ ಅವರ ಹೆರಿಗೆಯಾಗಲಿದೆ ಎಂಬ ವದಂತಿಗಳು ಹರಡಿದ್ದವು. ವಿರಾಟ್ ಅವರ ಫೋಟೋ ಲಂಡನ್ನಿಂದ ವೈರಲ್ ಆಗಿದ್ದು, ಊಹಾಪೋಹಗಳಿಗೆ ತುಪ್ಪ ಸುರಿದಿದೆ. ಆನ್ಲೈನ್ನಲ್ಲಿ ಶರವೇಗದಲ್ಲಿ ವೈರಲ್ ಆಗುತ್ತಿರುವ ಫೋಟೋದಲ್ಲಿ, ವಿರಾಟ್ ಲಂಡನ್ನ ಬೀದಿಗಳಲ್ಲಿ ಅಡ್ಡಾಡುತ್ತಿರುವಂತೆ ಕಾಣಿಸಿಕೊಂಡಿದ್ದಾರೆ. ಡಾರ್ಕ್ ಜಾಕೆಟ್, ಬಿಳಿ ಪ್ಯಾಂಟ್ ಮತ್ತು ಕ್ಯಾಪ್ ಧರಿಸಿದ್ದಾರೆ. ಈ ದಂಪತಿ ಲಂಡನ್ನಲ್ಲೇ ಇದ್ದಾರೆ ಎಂದು ಬಹುತೇಕ ನಂಬಲಾಗಿದೆ.
ಜನಪ್ರಿಯ ತಾರಾ ದಂಪತಿ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ನಿನ್ನೆ ಸಂಜೆ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸಂತಸ ವ್ಯಕ್ತಪಡಿಸಿದ ಜೋಡಿ, ಮಗನಿಗೆ ಅಕಾಯ್ ಎಂದು ನಾಮಕರಣ ಮಾಡಿದ್ದೇವೆಂದೂ ಕೂಡ ತಿಳಿಸಿದ್ದಾರೆ. ಈ ಸಂದರ್ಭ ತಮ್ಮ ಗೌಪ್ಯತೆ ಗೌರವಿಸುವಂತೆಯೂ ವಿನಂತಿಸಿದರು. ಆಶೀರ್ವಾದ ಮತ್ತು ಶುಭಾಶಯಗಳಿಗಾಗಿ ಎಲ್ಲರಿಗೂ ಧನ್ಯವಾದಗಳನ್ನು ಸಹ ಅರ್ಪಿಸಿದರು.