ಕರ್ನಾಟಕ

karnataka

ETV Bharat / entertainment

ದುಬೈನಲ್ಲಿ ಜು.14ರಂದು 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಬಿಡುಗಡೆ - Vidyarthi Vidyarthiniyare - VIDYARTHI VIDYARTHINIYARE

ಜುಲೈ 14ರಂದು ದುಬೈನಲ್ಲಿ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರ ಬಿಡುಗಡೆ ಆಗಲಿದೆ.

vidyarthi vidyarthiniyare
'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರತಂಡ (ETV Bharat)

By ETV Bharat Karnataka Team

Published : Jul 4, 2024, 2:49 PM IST

'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸ್ಯಾಂಡಲ್​​ವುಡ್​​​ನಲ್ಲಿ ಕೆಲವು ವಿಶೇಷತೆಗಳಿಂದ ಸಿನಿಪ್ರಿಯರಲ್ಲಿ ಕುತೂಹಲ ಹೆಚ್ಚಿಸಿರುವ ಚಿತ್ರ. ಇದೇ ತಿಂಗಳ 19ರಂದು ಚಿತ್ರ ಪ್ರೇಕ್ಷಕರೆದುರು ಬರಲಿದೆ. ಅಂದೇ ಕೇರಳದಲ್ಲಿಯೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಮ್ಯಾಜಿಕ್ ಮಾಡಲಿದ್ದಾರೆ.

ಚಂದನ್​ ಶೆಟ್ಟಿ (ETV Bharat)

ಈ ತಿಂಗಳು ಬಿಡುಗಡೆಗೊಳ್ಳುತ್ತಿರುವ ಚಿತ್ರಗಳ ಸಾಲಿನಲ್ಲಿ ಈ ಸಿನಿಮಾ ಪ್ರೇಕ್ಷಕರನ್ನು ಆವರಿಸಿಕೊಂಡಿರುವ ರೀತಿ ವಿಶೇಷ. ಕಾಲೇಜ್​​ ಬೇಸ್​​​ನ ಸಿನಿಮಾ ಭಿನ್ನ ಜಾಡಿನಲ್ಲಿ ರೂಪುಗೊಂಡಿದೆ. ಇದೀಗ ಬಿಡುಗಡೆಯ ಹೊಸ್ತಿಲಲ್ಲಿದ್ದು, ಚಿತ್ರತಂಡ ಮತ್ತೊಂದಷ್ಟು ಖುಷಿ ಸಂಗತಿಗಳನ್ನು ಹೊತ್ತು ತಂದಿದೆ.

ಹೌದು. ಜುಲೈ 14ರಂದು ದುಬೈನಲ್ಲಿ ಚಿತ್ರ ಬಿಡುಗಡೆ ಆಗಲಿದೆ. ಪ್ರತಿಷ್ಠಿತ ಒಎಂಜಿ ಕಂಪೆನಿ ವಿತರಣಾ ಹಕ್ಕು ಪಡೆದುಕೊಂಡಿದೆ. ಇದಕ್ಕೆ ಬೇಕಾದ ಎಲ್ಲಾ ತಯಾರಿಗಳು ನಡೆದಿವೆ. ರ್ಯಾಪರ್ ಚಂದನ್ ಶೆಟ್ಟಿ ನಾಯಕನಾಗಿ ನಟಿಸಿರುವ ಚಿತ್ರದಲ್ಲಿ, ಯುವ ಸಮೂಹವನ್ನು ಆವರಿಸಿಕೊಳ್ಳುವ ಕಥೆ ಇದ್ದು, ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿಬಂದಿದೆ.

ಇದನ್ನೂ ಓದಿ:'ಚೌಕಿದಾರ್​' ಮುಹೂರ್ತ: ದಿಯಾ ಹೀರೋ ಪೃಥ್ವಿ ಅಂಬಾರ್​ಗೆ ಆ್ಯಕ್ಷನ್​ ಕಟ್​​ ಹೇಳಲಿದ್ದಾರೆ ರಥಾವರ ನಿರ್ದೇಶಕ - Chowkidar

'ರಾಕ್ಷಸ'ನ ಅವತಾರದಲ್ಲಿ ಪ್ರೇಕ್ಷಕರೆದುರು ಬರಲು ಪ್ರಜ್ವಲ್ ದೇವರಾಜ್ ರೆಡಿ; ಪೋಸ್ಟರ್ ರಿಲೀಸ್ - Prajwal Devaraj Rakshasha Poster

ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೋಚ್ ಸುಧಿ ಮುಂತಾದವರು ತಾರಾಗಣದಲ್ಲಿದ್ದಾರೆ.

ಸುಬ್ರಮಣ್ಯ ಕುಕ್ಕೆ ಮತ್ತು ಎ.ಸಿ.ಶಿವಲಿಂಗೇಗೌಡ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಜಿ.ಕಶ್ಯಪ್ ಕಾರ್ಯಕಾರಿ ನಿರ್ಮಾಪಕರು. ಕುಮಾರ್ ಗೌಡ ಛಾಯಾಗ್ರಹಣ ನಿರ್ವಹಿಸಿದ್ದಾರೆ. ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯವಿದೆ. ಪವನ್ ಗೌಡ ಸಂಕಲನ ಮಾಡಿದ್ದು, ಟೈಗರ್ ಶಿವು, ನರಸಿಂಹ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಇನ್ನುಳಿದಂತೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ABOUT THE AUTHOR

...view details