ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಖ್ಯಾತಿಯ ಶಿವರಾಜ್‌ಕುಮಾರ್ ವೈದ್ಯಕೀಯ ಪ್ರಕ್ರಿಯೆ ಹಿನ್ನೆಲೆ ಇಂದು ಸಂಜೆ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ತಮ್ಮ ಪವರ್ಫುಲ್ ಪರ್ಫಾಮೆನ್ಸ್, ಸಿನಿಮಾ ಮೇಲಿನ ಸಮರ್ಪಣೆ ಮೂಲಕ ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನಮಾನ ಗಳಿಸಿರುವ ಹಿರಿಯ ನಟ, ಫ್ಲೋರಿಡಾದ ಮಿಯಾಮಿಯಲ್ಲಿ ಡಿಸೆಂಬರ್ 24 ರಂದು ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
ಶಿವರಾಜ್‌ಕುಮಾರ್ ಯುಎಸ್ಗೆ ಪ್ರಯಾಣ ಬೆಳೆಸಲಿರುವ ಹಿನ್ನೆಲೆ, ನಟನ ನಿವಾಸಕ್ಕೆ ಚಿತ್ರರಂಗ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ಕೊಡುತ್ತಿದ್ದಾರೆ. ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಸುದೀಪ್, ಮಾಜಿ ಸಚಿವ ಬಿ. ಸಿ ಪಾಟೀಲ್, ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವು ಗಣ್ಯರಿರುವ ಫೋಟೋಗಳು ಇಂಟರ್ನೆಟ್ನಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿವೆ. ಎಲ್ಲರೂ ಒಂದೇ ಸೂರಿನಡಿ ಸೇರಿ ಉಭಯ ಕುಶಲೋಪರಿ ವಿಚಾರಿಸಿದ್ದಾರೆ.

ಇಂದು ಹ್ಯಾಟ್ರಿಕ್ ಹೀರೋನ ನಿವಾಸಕ್ಕೆ ತೆರಳಿರುವ ಕಿಚ್ಚ ಸುದೀಪ್, ಶಿವಣ್ಣನೊಂದಿಗೆ ಸುದೀರ್ಘ ಸಮಯ ಕಳೆದಿದ್ದಾರೆ. ಜೊತೆಗೆ, ಅಣ್ಣನ ಸಮಾನರಾಗಿರುವ ಶಿವರಾಜ್‌ಕುಮಾರ್ ಅವರನ್ನು ಅಪ್ಪಿಕೊಂಡು ಭಾವುಕರಾದರು. ಸುದೀಪ್ ಕಣ್ಣಂಚಲ್ಲಿ ನೀರಿದ್ದು, ಇದೊಂದು ತೀರಾ ಆತ್ಮೀಯ ಕ್ಷಣವಾಗಿತ್ತು.


ಇದನ್ನೂ ಓದಿ: ಕೋವಿಡ್ ನಂತರ ಭಾರತದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ 'ಪುಷ್ಪ 2'
ಈ ಸಾಲಿನಲ್ಲಿ 62ನೇ ವರ್ಷಕ್ಕೆ ಕಾಲಿಟ್ಟಿರುವ ಶಿವರಾಜ್‌ಕುಮಾರ್, ಸ್ಯಾಂಡಲ್ವುಡ್ನಲ್ಲಿ ಫಿಟ್ನೆಸ್ ಐಕಾನ್ ಎಂದೇ ಪರಿಗಣಿಸಲ್ಪಟ್ಟಿದ್ದಾರೆ. ವಯಸ್ಸು ಅರವತ್ತೆರಡಾದ್ರೂ, ನಟ ಹ್ಯಾಡ್ಸಂ ಲುಕ್, ಅಮೋಘ ಅಭಿನಯ, ಸದಾ ಉತ್ಸುಕರಾಗಿ ಕಾಣುವ ಅವರ ಆ ಎನರ್ಜಿ ಅಪಾರ ಸಂಖ್ಯೆಯ ಅಭಿಮಾನಿಗಳು ಮತ್ತು ಸಹ ನಟರಿಗೆ ಪ್ರೇರಣೆ ಅಂತಲೇ ಹೇಳಬಹುದು. ಆದ್ರೀಗ ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುವ ಸಮಯ ಬಂದಿದ್ದು, ಇನ್ನೇನು ಕೆಲವೇ ಹೊತ್ತಲ್ಲಿ ಅಮೆರಿಕಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಇತ್ತೀಚೆಗಷ್ಟೇ ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಅವರು, ನಾನು ಆರೋಗ್ಯವಾಗಿದ್ದೇನೆ, ಅಭಿಮಾನಿಗಳು ಚಿಂತಿಸಬೇಡಿ, ಆದರೆ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿದ್ದೇನೆ ಎಂದು ತಿಳಿಸಿದ್ದರು. ತಮ್ಮ ವೈದ್ಯರೊಂದಿಗೆ ಸಮಾಲೋಚಿಸಿದ ನಂತರ ನಟ ಈ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ: ಆಸ್ಕರ್ ಅಂಗಳದಿಂದ ಹೊರ ಬಂದ 'ಲಾಪತಾ ಲೇಡಿಸ್', 'ಅನುಜಾ' ಮೇಲೆ ಭರವಸೆ
ಈ ಹಿಂದೆ ಶಿವಣ್ಣನ ಆಪ್ತರು ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ್ದರು. ಶಿವಣ್ಣನ ಅಭಿಮಾನಿಗಳಿಗೆ ಭಯ ಪಡಬೇಡಿ ಎಂದು ತಿಳಿಸಿದ್ದರು. ಶಿವರಾಜ್‌ಕುಮಾರ್ ಅವರು ಸಹ ಈ ಬಗ್ಗೆ ಈಗಾಗಲೇ ತಿಳಿಸಿದ್ದಾರೆ. ಡಿಸೆಂಬರ್ನಲ್ಲಿ ಪತ್ನಿ ಗೀತಾ ಸೇರಿದಂತೆ ಕೆಲ ಸ್ನೇಹಿತರು, ಕಟುಂಬ ಸದಸ್ಯರು ಅಮೆರಿಕಕ್ಕೆ ಪ್ರಯಾಣ ಬೆಳೆಲಿದ್ದಾರೆ. ಸರ್ಜರಿ ಮಾಡಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದರು. ಇದೀಗ ತಮ್ಮ ಕಮೀಟ್ಮೆಂಟ್ಗಳನ್ನು ಪೂರ್ಣಗೊಳಿಸಿರುವ ಶಿವರಾಜ್‌ಕುಮಾರ್, ಚಿಕಿತ್ಸೆ ನಂತರ ಒಂದಿಷ್ಟು ಸಮಯ ವಿಶ್ರಾಂತಿ ಪಡೆಯಲಿದ್ದಾರೆ. 2025ರ ನಂತರ ತಮ್ಮ ಸಿನಿಮಾ ಕೆಲಸಗಳನ್ನು ಶುರು ಮಾಡಲಿದ್ದಾರೆ.

ಇದನ್ನೂ ಓದಿ: 'ಇನ್ನು ನನ್ನ ಕೈಯಲ್ಲಿ ಆಗೋದಿಲ್ಲ': ಬಿಗ್ ಬಾಸ್ ಮನೆಯಲ್ಲಿ ತಲೆ ಚಚ್ಚಿಕೊಂಡ ಚೈತ್ರಾ ಕುಂದಾಪುರ
ಶಿವರಾಜಕುಮಾರ್ ಸಿನಿಮಾಗಳನ್ನು ಗಮನಿಸೋದಾದ್ರೆ ಕೊನೆಯದಾಗಿ ತೆರೆಕಂಡಿರುವ ಭೈರತಿ ರಣಗಲ್ ಸಿನಿಮಾ ಸೂಪರ್ ಹಿಟ್ ಆಗಿದೆ. ಇತ್ತೀಚೆಗಷ್ಟೇ ಪವನ್ ಒಡೆಯರ್ ಜೊತೆ ಹೊಸ ಸಿನಿಮಾ ಘೋಷಣೆಯಾಗಿದೆ. ಉಳಿದಂತೆ ಅರ್ಜುನ್ ಜನ್ಯ ನಿರ್ದೇಶನದ '45', ಹೇಮಂತ್ ರಾವ್ ನಿರ್ದೆಶನದ ಭೈರವನ ಕೊನೆ ಪಾಠ, 'A for ಆನಂದ್' ಹೀಗೆ 8 ರಿಂದ 10 ಸಿನಿಮಾಗಳು ನಟನ ಕೈಯಲ್ಲಿವೆ.