ETV Bharat / state

ವಿಶೇಷಚೇತನರಿಗೆ ಹುಬ್ಬಳ್ಳಿ ರೈಲ್ವೆ ವಿಭಾಗದಿಂದ ಡಿಜಿಟಲ್ ಗುರುತಿನ ಚೀಟಿ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ - DIGITAL IDENTITY CARD FOR DISABLED

ಹುಬ್ಬಳ್ಳಿ ರೈಲ್ವೆ ವಿಭಾಗದಿಂದ ವಿಶೇಷಚೇತನರಿಗಾಗಿ ಡಿಜಿಟಲ್ ಗುರುತಿನ ಚೀಟಿ ನೀಡಲಾಗುತ್ತಿದೆ. ಅದನ್ನು ಪಡೆಯುವುದು ಹೇಗೆ ಎಂಬುದರ ಬಗ್ಗೆ ರೈಲ್ವೆ ಮಾಹಿತಿ ಹಂಚಿಕೊಂಡಿದೆ.

hubballi-railway-division-introduces-digital-identity-card-for-disabled
ಹುಬ್ಬಳ್ಳಿ ರೈಲ್ವೆ ವಿಭಾಗದ ಕಚೇರಿ (ETV Bharat)
author img

By ETV Bharat Karnataka Team

Published : Feb 21, 2025, 6:01 PM IST

ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗವು ರಿಯಾಯಿತಿ ಸೌಲಭ್ಯಕ್ಕಾಗಿ ವಿಶೇಷಚೇತನರಿಗೆ ಆನ್‌ಲೈನ್‌ನಲ್ಲಿ 'ಡಿಜಿಟಲ್ ಗುರುತಿನ ಚೀಟಿ' (ID) ನೀಡುವಿಕೆಯನ್ನು ಪರಿಚಯಿಸಿದೆ.

ಇನ್ನು ಮುಂದೆ ವಿಶೇಷಚೇತನರು ರೈಲ್ವೆ ಕಚೇರಿಗಳಿಗೆ ಭೇಟಿ ನೀಡದೇ, ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಅರ್ಜಿ ಅನುಮೋದಿಸಿದ ನಂತರ ಡಿಜಿಟಲ್ ಗುರುತಿನ ಚೀಟಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಹುಬ್ಬಳ್ಳಿ ರೈಲ್ವೆ ವಿಭಾಗದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೋಂದಣಿಗಾಗಿ http://divyangjanid.indianrail.gov.in ಗೆ ಭೇಟಿ ನೀಡಬೇಕು. ಅರ್ಜಿ ಪ್ರಕ್ರಿಯೆಗೆ ನೆರವಾಗಲು ಬಳಕೆದಾರ ಕೈಪಿಡಿಯೂ ವೆಬ್​​ಸೈಟ್​​ನಲ್ಲಿ ಲಭ್ಯವಿದೆ.

ರೈಲಿನಲ್ಲಿ ಪ್ರಯಾಣಿಸಲು ರಿಯಾಯಿತಿ ಸೌಲಭ್ಯಕ್ಕಾಗಿ ಸಹಾಯಕರ (ಬೆಂಗಾವಲು) ಅಗತ್ಯವಿರುವ ಅಂಗವಿಕಲರು/ಪಾರ್ಶ್ವವಾಯು (Paraplegic) ಪೀಡಿತ ವ್ಯಕ್ತಿಗಳು, ಬೌದ್ಧಿಕ ವಿಶೇಷಚೇತನರು, ಸಂಪೂರ್ಣ ಶ್ರವಣ ಮತ್ತು ಮಾತಿನ ದುರ್ಬಲತೆ ಹೊಂದಿರುವ ವ್ಯಕ್ತಿಗಳು (ಎರಡೂ ಸ್ಥಿತಿಗಳು ಒಟ್ಟಿಗೆ), 90% ಅಥವಾ ಅದಕ್ಕಿಂತ ಹೆಚ್ಚಿನ ದೃಷ್ಟಿಹೀನತೆ ಹೊಂದಿರುವ ಅಂಧ ವ್ಯಕ್ತಿಗಳು ಈ ಡಿಜಿಟಲ್ ಐಡಿ ಕಾರ್ಡ್‌ ಪಡೆಯಬಹುದು. ರಿಯಾಯಿತಿ ಟಿಕೆಟ್‌ ಅನ್ನು ಟಿಕೆಟ್ ಕೌಂಟರ್‌, IRCTC ವೆಬ್‌ಸೈಟ್, UTS ಅಪ್ಲಿಕೇಶನ್ ಬಳಸಿ ಪಡೆಯಬಹುದು. ಬಳಕೆದಾರರರು https://pgportal.gov.in ನಲ್ಲಿ ದೂರುಗಳನ್ನು ನೋಂದಾಯಿಸಬಹುದು.

ಇದನ್ನೂ ಓದಿ: ಶಿವರಾತ್ರಿ: ಗೋಕರ್ಣ, ಮುರುಡೇಶ್ವರಕ್ಕೆ ಹುಬ್ಬಳ್ಳಿಯಿಂದ ವಿಶೇಷ ಬಸ್ ವ್ಯವಸ್ಥೆ

ಅರ್ಹ ಅರ್ಜಿದಾರರು ತಮ್ಮ ಗುರುತಿನ ಚೀಟಿ, ಜನ್ಮ ದಿನಾಂಕದ ಪ್ರಮಾಣಪತ್ರ (ಪೂರಕ), ವಿಳಾಸ ದಾಖಲೆ, ಸರ್ಕಾರಿ ವೈದ್ಯರು ನೀಡುವ ಅಂಗವೈಕಲ್ಯ ಪ್ರಮಾಣಪತ್ರ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು ವೆಬ್​​ಸೈಟ್​​ನಲ್ಲಿ ಅಪ್​ಲೋಡ್ ಮಾಡಬೇಕು (ದಾಖಲೆಗಳು PDF/JPEG/JPG/PNG ಸ್ವರೂಪದಲ್ಲಿ 600KB ಗಿಂತ ಕಡಿಮೆ ಇರಬೇಕು). ದಾಖಲೆಗಳ ಯಶಸ್ವಿ ಪರಿಶೀಲನೆಯ ನಂತರ, ಸ್ವಯಂಚಾಲಿತ ಸಂದೇಶ ತಲುಪುತ್ತದೆ. ಅರ್ಜಿದಾರರು ತಮ್ಮ ಅರ್ಜಿಯ ಸ್ಥಿತಿಯನ್ನು ಟ್ರ್ಯಾಕ್ ಮೂಲಕ ಸಹ ತಿಳಿಯಬಹುದಾಗಿದೆ ಎಂದು ಹುಬ್ಬಳ್ಳಿ ರೈಲ್ವೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಇದನ್ನೂ ಓದಿ: ಯದುವೀರ್​ ಒಡೆಯರ್​ ಮಗುವಿಗೆ ನಾಮಕರಣ: ಮೈಸೂರು 2ನೇ ಯುವರಾಜನ ಹೆಸರೇನು ಗೊತ್ತಾ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.