ETV Bharat / bharat

ಸಿಎಂ ಯೋಗಿ ಆದಿತ್ಯನಾಥ್​​ಗೆ ಕೊಲೆ ಬೆದರಿಕೆ: ಆರೋಪಿ ಬಂಧನ - THREATENS TO KILL CM YOGI

ತುರ್ತು ಸೇವಾ ಸಂಖ್ಯೆ 112ಕ್ಕೆ ಕರೆ ಮಾಡಿದ ವ್ಯಕ್ತಿಯೊಬ್ಬ ಜನವರಿ 26ರಂದು ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

up-man-dials-112-threatens-to-kill-cm-yogi-adityanath-arrested
ಸಿಎಂ ಯೋಗಿ ಆದಿತ್ಯನಾಥ್​ (ಐಎಎನ್ಎಸ್​)
author img

By PTI

Published : Dec 19, 2024, 11:25 AM IST

ಬರೇಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಕೊಲ್ಲುವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

ಅನಿಲ್​ ಎಂಬಾಂತ ಬಂಧಿತ ವ್ಯಕ್ತಿ. ತುರ್ತು ಸೇವಾ ಸಂಖ್ಯೆ 112ಕ್ಕೆ ಕರೆ ಮಾಡಿ, ಜನವರಿ 26ರಂದು ಸಿಎಂ ಯೋಗಿ ಆದಿತ್ಯನಾಥ್​ ಅವರನ್ನು ಗುಂಡಿಕ್ಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಅಲ್ಲದೇ, ಇಜತ್​ನಗರ್​ ಪೊಲೀಸ್​ ಠಾಣಾ ಅಧಿಕಾರಿ ಮತ್ತು ಇತರ ಅಧಿಕಾರಿಗಳಿಗೂ ಕೂಡ ಈತ ಬೆದರಿಕೆ ಹಾಕಿದ್ದ.

ಮಂಗಳವಾರ ರಾತ್ರಿ ಈತನ ಕರೆ ಸ್ವೀಕರಿಸಿದ ಬಳಿಕ ಪೊಲೀಸರು ಈತನ ಪತ್ತೆಗೆ ಮುಂದಾಗಿದ್ದರು. ಆದರೆ, ಆರೋಪಿಯ ಫೋನ್​ ಸ್ಪೀಚ್ಡ್​​ ಆಫ್​​ ಆಗಿದ್ದು, ರಾತ್ರಿ ಪೂರ ಈತನ ಶೋಧಕ್ಕೆ ಅವಿರತ ಪ್ರಯತ್ನ ನಡೆಸಲಾಯಿತು. ಕಡೆಗೆ ಆತನನ್ನು ಪತ್ತೆ ಮಾಡಿ, ಬಂಧಿಸಲಾಗಿದೆ ಎಂದು ಇಜತ್​ನಗರ್​ ಪೊಲೀಸ್​ ಠಾಣಾ ಅಧಿಕಾರಿ ಧನಂಜಯ್​ ಪಾಂಡೆ ತಿಳಿಸಿದ್ದಾರೆ.

ಆರೋಪಿ ವಿರುದ್ಧ ಎಫ್​ಐಆರ್​; ಎಫ್​ಐಆರ್​ ದಾಖಲಿಸಿರುವ ಪೊಲೀಸರು ಇದೀಗ ವಿಚಾರಣೆ ಆರಂಭಿಸಿದ್ದಾರೆ. ಆರೋಪಿಯನ್ನು ಗುರುವಾರ ನ್ಯಾಯಾಲಯದ ಮುಂದೆ ಕೂಡ ಹಾಜರು ಪಡಿಸಲಾಗುವುದು. ಈತನ ಬೆದರಿಕೆಗಳು ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುವ ಜೊತೆಗೆ, ಕೋಮು ಅಶಾಂತಿಯ ಭಯವನ್ನು ಸೃಷ್ಟಿಸಿತು ಎಂದಿದ್ದಾರೆ.

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಇದೀಗ ಕಾರ್ಯ ನಿರ್ವಹಿಸಲಾಗುತ್ತಿದ್ದು, ಆರೋಪಿಯ ಉದ್ದೇಶ ಮತ್ತು ಮಾನಸಿಕ ಸ್ಥಿತಿಯ ಬಗ್ಗೆ ಕೂಡಾ ತನಿಖೆ ನಡೆಸಲಾಗುತ್ತಿದೆ.

ಮಂಗಳವಾರ ಅನಿಲ್​ ಸ್ಥಳೀಯ ಪಿಆರ್‌ವಿ ತಂಡಕ್ಕೆ ದೂರು ದಾಖಲಿಸಿದ್ದು, ಅಲ್ಲಿ ತನ್ನ ಸ್ನೇಹಿತ ತನ್ನ ಮೋಟಾರ್‌ಸೈಕಲ್ ಪಡೆದು, ಅದನ್ನು ಹಿಂದಿರುಗಿಸಿಲ್ಲ ಎಂದು ಆರೋಪಿಸಿದ್ದಾನೆ. ಈ ವೇಳೆ ಆತನನ್ನು ವಿಚಾರಣೆ ನಡೆಸಿದಾಗ ಆತ, ಬಯ್ಯಲು ಆಂಭಿಸಿ, ಬೆದರಿಕೆ ಹಾಕಿದ್ದಾನೆ. 11ಗಂಟೆ ಸುಮಾರಿಗೆ 112ಕ್ಕೆ ಕರೆ ಮಾಡಿ, ಈ ರೀತಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ, ಇಬ್ಬರು ಮಕ್ಕಳು ಸೇರಿದಂತೆ 5 ಮಂದಿ ಸಾವು, ಮೂವರ ಸ್ಥಿತಿ ಚಿಂತಾಜನಕ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.