Honda And Nissan Partnership: ಜಪಾನಿನ ಎರಡು ಕಾರು ಕಂಪನಿಗಳಾದ ಹೋಂಡಾ ಮತ್ತು ನಿಸ್ಸಾನ್ ಶೀಘ್ರದಲ್ಲೇ ಒಂದೇ ಕಂಪನಿಯನ್ನಾಗಿ ವಿಲೀನಗೊಳ್ಳಲಿವೆ ಎಂದು ವರದಿಯಾಗಿದೆ. ಹೋಂಡಾದ ಹೋಂಡಾ ಸಿಟಿ ಮತ್ತು ಹೋಂಡಾ ಅಮೇಜ್ ಭಾರತದಲ್ಲಿ ಅತ್ಯಂತ ಜನಪ್ರಿಯ ಕಾರುಗಳಾಗಿದ್ದು, ನಿಸ್ಸಾನ್ ಮೋಟಾರ್ಸ್‌ನ ನಿಸ್ಸಾನ್ ಮ್ಯಾಗ್ನೈಟ್ ಅತ್ಯಂತ ಕೈಗೆಟುಕುವ ಎಸ್‌ಯುವಿಗಳಲ್ಲಿ ಒಂದಾಗಿದೆ.
ಸದ್ಯ ಇಡೀ ಪ್ರಪಂಚದಲ್ಲಿ ಕೇವಲ ಎರಡು ಕ್ಷೇತ್ರಗಳಲ್ಲಿ ಮಾತ್ರ ದೊಡ್ಡ ಬದಲಾವಣೆಗಳು ಕಂಡುಬರುತ್ತಿವೆ. ಒಂದು ತಂತ್ರಜ್ಞಾನ, ಅಲ್ಲಿ ಎಐ ಅಭಿವೃದ್ಧಿ ನಡೆಯುತ್ತಿದೆ. ಎರಡನೆಯದು ಆಟೋಮೊಬೈಲ್, ಅಲ್ಲಿ ಇಂಧನ ಪರಿವರ್ತನೆಯ ಕೆಲಸ ಮಾಡಲಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಅತಿ ಶೀಘ್ರದಲ್ಲೇ ಎರಡು ಜಪಾನಿನ ಕಾರು ಕಂಪನಿಗಳಾದ ಹೋಂಡಾ ಮೋಟಾರ್ ಮತ್ತು ನಿಸ್ಸಾನ್ ಮೋಟಾರ್‌ನ ವಾಹನಗಳು ಸಹ ಒಂದೇ ಕಂಪನಿಯ ಅಡಿಯಲ್ಲಿ ಉತ್ಪಾದನೆಯಾಗಲಿವೆ. ಇದಕ್ಕಾಗಿ ಎರಡೂ ಕಂಪನಿಗಳು ಭರ್ಜರಿ ಯೋಜನೆ ರೂಪಿಸಿವೆ.
ನಿಸ್ಸಾನ್ ಮೋಟಾರ್ ಮತ್ತು ಹೋಂಡಾ ಮೋಟಾರ್ ಈಗ ವಿಲೀನದ ಬಗ್ಗೆ ಪರಸ್ಪರ ಮಾತುಕತೆ ನಡೆಸುತ್ತಿವೆ. ಜಪಾನ್‌ನ ನಿಕ್ಕಿಯ ವರದಿ ಪ್ರಕಾರ, ಜಾಗತಿಕ ಮಟ್ಟದಲ್ಲಿ ವಾಹನ ಉದ್ಯಮದಲ್ಲಿ ಬರುತ್ತಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಎರಡೂ ಕಂಪನಿಗಳು ಪರಸ್ಪರ ವಿಲೀನಗೊಳ್ಳಲು ಯೋಜಿಸಿವೆ. ಇದರ ಪರಿಣಾಮ ನಿಸ್ಸಾನ್ ಮೋಟಾರ್ ಮತ್ತು ರೆನಾಲ್ಟ್ ಷೇರುಗಳ ಮೇಲೂ ಕಂಡುಬಂದಿದೆ.
ಎರಡೂ ಕಾರುಗಳನ್ನು ತಯಾರಿಸುತ್ತಿರುವ ಒಂದೇ ಕಂಪನಿ: ಮಾಹಿತಿ ಪ್ರಕಾರ, ಹೋಂಡಾ ಮತ್ತು ನಿಸ್ಸಾನ್ ಎರಡೂ ಒಂದೇ ಹೋಲ್ಡಿಂಗ್ ಕಂಪನಿ ಅಡಿಯಲ್ಲಿ ಕೆಲಸ ಮಾಡಬಹುದು. ಇದರ ನಂತರ, ಎರಡೂ ಕಾರುಗಳನ್ನು ಈ ಹೋಲ್ಡಿಂಗ್ ಕಂಪನಿ ಅಡಿಯಲ್ಲಿ ಉತ್ಪಾದಿಸಲಾಗುತ್ತದೆ. ಮಿತ್ಸುಬಿಷಿ ಮೋಟಾರ್ಸ್ ಅನ್ನು ಸಹ ಅದರಲ್ಲಿ ಸೇರಿಸುವ ಯೋಜನೆ ಇದೆ. ಈ ಕಂಪನಿಯು ಜನಪ್ರಿಯ ಪಜೆರೋ ಕಾರನ್ನು ತಯಾರಿಸುತ್ತದೆ. ನಿಸ್ಸಾನ್-ಹೋಂಡಾ-ಮಿತ್ಸುಬಿಷಿ ವಿಲೀನದ ನಂತರ, ಇದು ವಿಶ್ವದ ಅತಿದೊಡ್ಡ ಕಾರು ಕಂಪನಿಗಳಲ್ಲಿ ಒಂದಾಗಲಿದೆ. ಈ ವಿಲೀನದಲ್ಲಿ ಗರಿಷ್ಠ ಪಾಲನ್ನು ನಿಸ್ಸಾನ್ ಮೋಟಾರ್‌ನ ಸುಮಾರ್ಸ್ ಶೇ. 24ರಷ್ಟು ಆಗಿರಬಹುದು. ನಿಸ್ಸಾನ್ ಈ ಹಿಂದೆ ಫ್ರಾನ್ಸ್‌ನ ರೆನಾಲ್ಟ್ ಅನ್ನು ತನ್ನೊಂದಿಗೆ ವಿಲೀನಗೊಳಿಸಿದೆ.
ವಿಲೀನದ ನಂತರ ಹೊಸ ಕಂಪನಿಯು ಜಾಗತಿಕವಾಗಿ ಪ್ರತಿ ವರ್ಷ 80 ಲಕ್ಷ ಕಾರುಗಳ ಮಾರಾಟವನ್ನು ಮಾಡುತ್ತದೆ. ಆದರೂ ಇದು ಇನ್ನೂ ಜಪಾನ್‌ನ ಕಾರು ಕಂಪನಿ ಟೊಯೊಟಾ ಮೋಟಾರ್ ಮತ್ತು ಜರ್ಮನಿಯ ಫೋಕ್ಸ್‌ವ್ಯಾಗನ್‌ಗಿಂತ ಹಿಂದುಳಿದಿದೆ. 2023 ರಲ್ಲಿ ಟೊಯೊಟಾ 1.12 ಕೋಟಿ ಕಾರುಗಳನ್ನು ಮತ್ತು ವೋಕ್ಸ್‌ವ್ಯಾಗನ್ ವಿಶ್ವದಾದ್ಯಂತ 92 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ.
ಇದರ ಪರಿಣಾಮ ಭಾರತದಲ್ಲೂ ಕಾಣಿಸುತ್ತದೆಯೇ? ಹೋಂಡಾ ಮತ್ತು ನಿಸ್ಸಾನ್ ಎರಡೂ ಭಾರತದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಮಿತ್ಸುಬಿಷಿ ಇಲ್ಲಿಂದ ತನ್ನ ವ್ಯವಹಾರವನ್ನು ಮುಚ್ಚಿದೆ. ನಿಸ್ಸಾನ್‌ನ ರೆನಾಲ್ಟ್ ತನ್ನ ವಾಹನಗಳನ್ನು ಭಾರತದಲ್ಲಿಯೂ ಮಾರಾಟ ಮಾಡುತ್ತದೆ. ಈ ವಿಲೀನವು ಭಾರತದಲ್ಲಿ ಯಾವ ಪರಿಣಾಮವನ್ನು ಬೀರುತ್ತದೆ ಎಂಬುದರ ಕುರಿತು ಏನೂ ಸ್ಪಷ್ಟವಾಗಿಲ್ಲ. ಹೋಂಡಾ ಈ ವಿಲೀನದ ಸುದ್ದಿಯನ್ನು ಹೌದು ಎಂದು ಹೇಳಿಲ್ಲ ಅಥವಾ ನಿರಾಕರಿಸಿಲ್ಲ. ತಾನು ಮತ್ತು ನಿಸ್ಸಾನ್ ಹಲವು ಸಾಧ್ಯತೆಗಳನ್ನು ಪರಿಗಣಿಸುತ್ತಿದ್ದೇವೆ ಎಂದು ಅವರು ಖಚಿತವಾಗಿ ಹೇಳಿದ್ದಾರೆ.
ಭಾರತದಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ಇಂಡಿಯಾ ನಡುವೆ ವಿಶಿಷ್ಟವಾದ ಒಪ್ಪಂದವೂ ಇದೆ. ಈ ಕಂಪನಿಗಳು ತಮ್ಮ ಅನೇಕ ಮಾದರಿಗಳನ್ನು ತಮ್ಮ ನಡುವೆ ಹಂಚಿಕೊಳ್ಳುತ್ತವೆ. ಇವುಗಳಲ್ಲಿ, ಗ್ಲಾನ್ಜಾ, ಅರ್ಬನ್ ಕ್ರೂಸರ್‌ನಂತಹ ಕಾರುಗಳನ್ನು ಮಾರುತಿ ಸುಜುಕಿ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತದೆ. ಇದು ಅದರ ಬಲೆನೊ ಮತ್ತು ಬ್ರೆಜ್ಜಾದಂತಹ ಕಾರುಗಳ ಮರುಬ್ಯಾಡ್ಜ್ ಆವೃತ್ತಿಯಾಗಿದೆ.