2012ರ ಹಿಟ್ ಸಿನಿಮಾ 'ಕಾಕ್‌ಟೈಲ್'ನ ಮುಂದಿನ ಭಾಗ ಬರಲಿದೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ. ವರದಿಗಳ ಪ್ರಕಾರ, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಶಾಹಿದ್ ಕಪೂರ್ ಜೊತೆ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಹೋಮಿ ಅದಾಜಾನಿಯಾ ನಿರ್ದೇಶನದ ಮೊದಲ ಭಾಗ ದೀಪಿಕಾ ಪಡುಕೋಣೆ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿದ ಸಿನಿಮಾ. ಬೋಲ್ಡ್ ವೆರೋನಿಕಾ ಪಾತ್ರವನ್ನು ಅದ್ಭುತವಾಗಿ ಚಿತ್ರಿಸಿದ್ದರು. ಡಯಾನಾ ಪೆಂಟಿ ಅವರು ಕಾಯ್ ಮೀರಾ ಎಂಬ ಮತ್ತೊಂದು ಪ್ರಮುಖ ಪಾತ್ರ ನಿರ್ವಹಿಸಿದ್ದರೆ, ಸೈಫ್ ಅಲಿ ಖಾನ್ ಚಾರ್ಮಿಂಗ್ ಪ್ಲೇಬಾಯ್ ಗೌತಮ್ ಕಪೂರ್ ಅಥವಾ ಗುಟ್ಲು ಆಗಿ ಕಾಣಿಸಿಕೊಂಡಿದ್ದರು.
'ಕಾಕ್‌ಟೈಲ್ 2'ನಲ್ಲಿ ರಶ್ಮಿಕಾ ಮತ್ತು ಕೃತಿ ಯಾವ ಪಾತ್ರಗಳನ್ನು ನಿರ್ವಹಿಸಲಿದ್ದಾರೆ ಎಂಬುದರ ಕುರಿತು ಅಭಿಮಾನಿಗಳು ಊಹಿಸಲು ಶುರುಮಾಡಿದ್ದಾರೆ. ಸೀಕ್ವೆಲ್ ಫ್ರೆಶ್ ಟ್ವಿಸ್ಟ್ಗಳುಳ್ಳ ಕಥಾಹಂದರವನ್ನು ಒಳಗೊಂಡಿರಲಿದೆ ಎಂಬ ನಿರೀಕ್ಷೆಯಿದೆ. ರಶ್ಮಿಕಾ, ಅನಿಮಲ್ ಮತ್ತು ಪುಷ್ಪಾ 2ರ ಯಶಸ್ಸಿನಲೆಯಲ್ಲಿ ಮುಳುಗಿರುವ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ವೆರೋನಿಕಾ ಪಾತ್ರಕ್ಕೆ ಜೀವ ತುಂಬಲಿದ್ದಾರೆ ಅನ್ನೋ ವದಂತಿಗಳಿವೆ. ದಿಟ್ಟ ವ್ಯಕ್ತಿತ್ವ, ಭಾವನಾತ್ಮಕವಾಗಿ ದುರ್ಬಲ ಮತ್ತು ಮುಕ್ತ ಮನೋಭಾವದ ಜೀವನಶೈಲಿಗೆ ಹೆಸರುವಾಸಿಯಾದ ಪಾತ್ರವಿದು. ಪಾತ್ರ ಆಂತರಿಕ ಸಂಘರ್ಷದ ಆಳ ತಿಳುವಳಿಕೆಯನ್ನು ಬಯಸಿದೆ. ಈ ಪಾತ್ರಕ್ಕೆ ರಶ್ಮಿಕಾ ಬರಬಹುದು ಅನ್ನೋದು ಸದ್ಯದ ಊಹೆ.
I Shahid Kapoor, Kriti Sanon, and Rashmika Mandanna coming together for Cocktail 2! 🍸🔥 The ultimate blend of charm, drama, and magic on one screen. Can’t wait to see this trio create history! 😍#ShahidKapoor #KritiSanon #RashmikaMandanna #Cocktail2 #Bollywood@MaddockFilms pic.twitter.com/vJzb5PNnzU
— 𝗗𝗘𝗩𝗔 𝟯𝟭𝘀𝘁 𝗝𝗔𝗡 🇵🇰 (@shanaticH) December 18, 2024
ಇದನ್ನೂ ಓದಿ: ಶಿವಣ್ಣನನ್ನು ತಬ್ಬಿ ಸುದೀಪ್ ಭಾವುಕ: ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳುತ್ತಿರುವ ಶಿವರಾಜ್ಕುಮಾರ್ ನಿವಾಸದಲ್ಲಿ ಗಣ್ಯರು
ಇನ್ನು, ಬಾಲಿವುಡ್ ಬ್ಯೂಟಿ ಕೃತಿ ಸನೋನ್ ತಮ್ಮ ಬಹುಮುಖ ಪ್ರತಿಭೆ ಮತ್ತು ಸ್ಟ್ರಾಂಗ್ ಸ್ಕ್ರೀನ್ ಪ್ರೆಸೆನ್ಸ್ಗೆ ಹೆಸರುವಾಸಿಯಾಗಿದ್ದಾರೆ. ಸಾಂಪ್ರದಾಯಿಕ ಮೀರಾ ಪಾತ್ರಕ್ಕೆ ಇವರು ಬರುವ ಸಾಧ್ಯತೆಗಳಿವೆ. ಬೋಲ್ಡ್ ವೆರೋನಿಕಾ ಪಾತ್ರಕ್ಕೂ ಜೀವ ತುಂಬುವ ಎಲ್ಲಾ ಸಾಧ್ಯತೆಗಳಿವೆ. ಇಬ್ಬರೂ ಪ್ರೀತಿ, ಸ್ನೇಹ ಮತ್ತು ಸ್ವಯಂ ಅನ್ವೇಷಣೆಯ ಕಥೆಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ನಿರೀಕ್ಷೆಯಿದೆ. ಕಾಂಪ್ಲೆಕ್ಸ್ ಕ್ಯಾರೆಕ್ಟರ್ಗಳನ್ನು ಸಲೀಸಾಗಿ ತೆರೆ ಮೇಲೆ ಚಿತ್ರಿಸುವುದಕ್ಕೆ ಹೆಸರುವಾಸಿಯಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಶಾಹಿದ್ ಕಪೂರ್ ಅವರು ನಾಯಕ ನಟ ಅಥವಾ ಪ್ಲೇಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ ಎಂದು ವರದಿಯಾಗಿದೆ. ಒಟ್ಟಾರೆ, ಮೂವರೂ ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯರಾಗಿದ್ದು, ಹಲವು ಯಶಸ್ವಿ ಸಿನಿಮಾಗಳನ್ನು ಮನರಂಜನಾ ಕ್ಷೇತ್ರಕ್ಕೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಮಾರ್ಟಿನ್ TO ಕಂಗುವ: 2024ರಲ್ಲಿ ಬಾಕ್ಸ್ ಆಫೀಸ್ನಲ್ಲಿ ಮುಗ್ಗರಿಸಿದ ಬಿಗ್ ಬಜೆಟ್ ಸಿನಿಮಾಗಳು
'ಕಾಕ್‌ಟೈಲ್ 2' ಡ್ರಾಮಾ ಮತ್ತು ರೊಮ್ಯಾನ್ಸ್ ಒಳಗೊಂಡು ಬರಲಿರುವ ಸಿನಿಮಾ ಎಂಬ ಭರವಸೆ ಇದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಟಾರ್ ಕಾಸ್ಟ್ ಮತ್ತು ಕಥಾಹಂದರದ ಬಗ್ಗೆ ಅಧಿಕೃತ ಅನೌನ್ಸ್ಮೆಂಟ್ಗಾಗಿ ಬಹಳ ಕಾತರದಿಂದ ಕಾಯುತ್ತಿದ್ದಾರೆ. ರಶ್ಮಿಕಾ, ಕೃತಿ ಮತ್ತು ಶಾಹಿದ್ ಅವರಂತಹ ಬಹುಬೇಡಿಕೆ ತಾರೆಯರ ತಂಡದೊಂದಿಗೆ, ತೆರೆ ಮೇಲೆ ಮ್ಯಾಜಿಕ್ ಮಾಡುವ ಭರವಸೆಯಿದ್ದು, ಸಿನಿಮಾ ಸುತ್ತಲಿನ ಊಹಾಪೋಹಗಳು ಹೆಚ್ಚುತ್ತಿವೆ.