ETV Bharat / entertainment

ಮಾರ್ಟಿನ್​​ TO ಕಂಗುವ: 2024ರಲ್ಲಿ ಬಾಕ್ಸ್​​ ಆಫೀಸ್​ನಲ್ಲಿ ಮುಗ್ಗರಿಸಿದ ಬಿಗ್​ ಬಜೆಟ್​​ ಸಿನಿಮಾಗಳು - YEAR ENDER 2024

ಬಿಗ್​ ಬಜೆಟ್ ಮತ್ತು ಸ್ಟಾರ್ ಪವರ್ ಹೊರತಾಗಿಯೂ ಮಾರ್ಟಿನ್​​, ಜಿಗ್ರಾ, ಇಂಡಿಯನ್ 2, ಕಂಗುವ ಸೇರಿ ಹಲವು ಸಿನಿಮಾಗಳು ಈ ವರ್ಷ ಬಾಕ್ಸ್ ಆಫೀಸ್‌ನಲ್ಲಿ ಮುಗ್ಗರಿಸಿವೆ.

Martin poster
ಮಾರ್ಟಿನ್ ಪೋಸ್ಟರ್​ (Photo: Film Poster)
author img

By ETV Bharat Entertainment Team

Published : 2 hours ago

2024 ಕೊನೆಗೊಳ್ಳುತ್ತಿದೆ. ಈ ವರ್ಷ ಚಿತ್ರರಂಗ ಮತ್ತು ಪ್ರೇಕ್ಷಕರ ಅಭಿಪ್ರಾಯವನ್ನು ಮೆಲುಕು ಹಾಕುವ ಸಮಯ ಬಂದಿದೆ. ಕೇವಲ ಅದ್ಧೂರಿ ಪ್ರಚಾರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸನ್ನು ಖಾತರಿಪಡಿಸದು ಎಂಬುದು ಸಾಬೀತಾಗಿದೆ. ಸ್ಟಾರ್ ಪವರ್, ಬಿಗ್​ ಬಜೆಟ್‌ ಮತ್ತು ಪ್ಯಾನ್-ಇಂಡಿಯನ್ ಟ್ರೆಂಡುಗಳ ಹೊರತಾಗಿಯೂ ಪ್ರೇಕ್ಷಕರು ಹೆಚ್ಚು ವಿವೇಚನಾಶೀಲರಾಗಿದ್ದಾರೆ ಅವರು ಹೆಚ್ಚಿನದ್ದನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಈ ವರ್ಷ ಸಾಬೀತುಪಡಿಸಿದೆ. ಪ್ರೇಕ್ಷಕರು ಕೇವಲ ಬಿಗ್​ ಬಜೆಟ್‌, ಜನಪ್ರಿಯ ನಟರು ಅಥವಾ ಅದ್ಧೂರಿ ಪ್ರಚಾರಗಳಿಗೆ ಮಾರುಹೋಗುವುದಿಲ್ಲ. ಒಂದೊಳ್ಳೆ ಕಂಟೆಂಟ್​ ಆಧಾರಿತ ಸಿನಿಮಾಗಳನ್ನು ನಿರೀಕ್ಷಿಸುತ್ತಿದ್ದಾರೆ. ತಮ್ಮ ಭರವಸೆಗಳನ್ನು ಪೂರೈಸಲು ವಿಫಲವಾದ ಸಿನಿಮಾಗಳನ್ನು ಹಿಂದು ಮುಂದು ನೋಡದೇ ತಿರಸ್ಕರಿಸಿದ್ದಾರೆ.

ಸೂಪರ್​ ಸ್ಟಾರ್ಸ್ ಮತ್ತು ವ್ಯಾಪಕ ಪ್ರಚಾರದ ಹೊರತಾಗಿಯೂ ಹಲವು ಬಿಗ್​ ಬಜೆಟ್ ಚಿತ್ರಗಳು ಬಾಕ್ಸ್​ ಆಫೀಸ್​ನಲ್ಲಿ ಸೋತಿವೆ. ದಾಖಲೆಗಳನ್ನು ಪುಡಿಗಟ್ಟಲಿವೆ ಎಂಬ ನಿರೀಕ್ಷೆಗಳಿದ್ದರೂ ಕೆಲ ಚಲನಚಿತ್ರಗಳು ದೊಡ್ಡ ಮಟ್ಟದ ಪ್ರಚಾರದ ಹೊರತಾಗಿಯೂ ಯಶಸ್ಸಿನ ಗ್ಯಾರಂಟಿ ಇಲ್ಲ ಎಂಬುದನ್ನು ಸಾಬೀತು ಮಾಡಿವೆ. ಬಹುನಿರೀಕ್ಷಿತ ಮಾರ್ಟಿನ್​, ಇಂಡಿಯನ್ 2ನಿಂದ ಹಿಡಿದು ಸರ್ಫಿರಾ, ವೇದ, ಕ್ರಾಕ್​, ಉಲಜ್​, ಖೇಲ್ ಖೇಲ್ ಮೇ ಮತ್ತು ಔರಾನ್ ಮೇ ಕಹಾನ್ ದಮ್ ಥಾ ವರೆಗೆ ಈ ವರ್ಷದ ಅನೇಕ ಬಿಗ್​ ಪ್ರಾಜೆಕ್ಟ್‌ಗಳಿಗೆ​ ಹಿನ್ನಡೆಯಾಗಿದೆ.

ಮಾರ್ಟಿನ್​: ಸ್ಯಾಂಡಲ್​ವುಡ್​ನ ಆ್ಯಕ್ಷನ್ ಪ್ರಿನ್ಸ್​​ ಧ್ರುವ ಸರ್ಜಾ ಮುಖ್ಯಭೂಮಿಕೆಯ 'ಮಾರ್ಟಿನ್​​' ಸಿನಿಮಾ ಅಕ್ಟೋಬರ್​​ 11ರಂದು ಪ್ಯಾನ್​​ ವರ್ಲ್ಡ್ ಮಟ್ಟದಲ್ಲಿ ಬಿಡುಗಡೆ ಆಯಿತು. ಎ.ಪಿ.ಅರ್ಜುನ್​​ ನಿರ್ದೇಶನದ ಈ ಚಿತ್ರ ದೊಡ್ಡ ಮಟ್ಟದಲ್ಲೇ ಪ್ರಚಾರ ನಡೆಸಿತ್ತು. ಉದಯ್​ ಕೆ.ಮೆಹ್ತಾ ನಿರ್ಮಾಣದ ಸಿನಿಮಾ ರಾಜ್ಯವಲ್ಲದೇ ಹೊರರಾಜ್ಯಗಳಲ್ಲೂ ಪ್ರಮೋಶನಲ್​ ಈವೆಂಟ್​ಗಳನ್ನು ನಡೆಸಿ ಗಮನ ಸೆಳೆದಿತ್ತು. ಸರಿಸುಮಾರು 100 ಕೋಟಿ ರೂ. ಬಜೆಟ್​ನ ಚಿತ್ರ 25 ಕೋಟಿ ರೂ. ಗಳಿಸಿದೆ ಎಂದು ವರದಿಯಾಗಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್​ ಸ್ಯಾಕ್ನಿಲ್ಕ್ ವರದಿ ಪ್ರಕಾರ 22.72 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಅದ್ಧೂರಿ ಪ್ರಚಾರದ, ಗ್ರ್ಯಾಂಡ್​ ರಿಲೀಸ್​ ಹೊರತಾಗಿಯೂ ಸಿನಿಮಾ ಮಿಶ್ರ ಪ್ರತಿಕ್ರಿಯೆ ಪಡೆದಿದೆ.

ಕಂಗುವ: ಸೌತ್​​ ಸೂಪರ್​ ಸ್ಟಾರ್​ ಸೂರ್ಯ ಅವರ 'ಕಂಗುವ' ಈ ವರ್ಷದ ಮತ್ತೊಂದು ಬಿಗ್​ ಬಜೆಟ್ ಡಿಸಾಸ್ಟರ್. 350 ಕೋಟಿ ರೂಪಾಯಿ ಬಜೆಟ್‌ನ ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿತ್ತು. ಫ್ಯಾಂಟಸಿ ಆ್ಯಕ್ಷನ್ ಡ್ರಾಮಾವಾಗಿ ಬಿಡುಗಡೆಗೊಂಡ ಕಂಗುವ, ಸೂರ್ಯ ಅವರ ಸೂಪರ್ ಸ್ಟಾರ್​ಡಮ್​ ಅನ್ನು ಮತ್ತೊಮ್ಮೆ ಸಾಬೀತುಪಡಿಸುವ ಭರವಸೆ ಹೊಂದಿತ್ತು. ಆದಾಗ್ಯೂ, ಬಾಕ್ಸ್​ ಆಫೀಸ್​​ ಪ್ರಯಾಣ ಕಡಿಮೆ ಅಂಕಿಅಂಶಗಳೊಂದಿಗೆ ಪ್ರಾರಂಭವಾಯಿತು. ಕಥಾವಸ್ತು ಮತ್ತು ವಿಶುವಲ್​ ಎಫೆಕ್ಟ್ಸ್​​ ನೆಗೆಟಿವ್​ ವಿಮರ್ಶೆಯನ್ನು ಸ್ವೀಕರಿಸಿತು. ಅದ್ಧೂರಿ ಪ್ರಚಾರ ಮತ್ತು ಬಹುನಿರೀಕ್ಷೆಗಳ ಹೊರತಾಗಿಯೂ ಕಂಗುವ ಭಾರತದಲ್ಲಿ ಕೇವಲ 70 ಕೋಟಿ ರೂ. ಮತ್ತು ಜಾಗತಿಕವಾಗಿ 110 ಕೋಟಿ ರೂ.ಗೂ ಕಡಿಮೆ ಕಲೆಕ್ಷನ್​​ ಮಾಡಿತು.

ಇಂಡಿಯನ್​ 2: ಎಸ್.ಶಂಕರ್ ನಿರ್ದೇಶನದ 'ಇಂಡಿಯನ್ 2' ಹಿನ್ನಡೆ ಕಂಡ ಬಿಗ್ ಬಜೆಟ್​ ಚಿತ್ರಗಳಲ್ಲೊಂದು. ಕಮಲ್ ಹಾಸನ್ ಅವರ 1996ರ 'ಇಂಡಿಯನ್‌'ನ ಬಹುನಿರೀಕ್ಷಿತ ಸೀಕ್ವೆಲ್ ಇದಾಗಿದ್ದು, ಈ ವರ್ಷ ಸೋತ ಮತ್ತೊಂದು ಪ್ರಮುಖ ಸಿನಿಮಾ. ಹಲವು ವರ್ಷಗಳ ಕಾಲ ನಿರ್ಮಾಣ ಹಂತದಲ್ಲಿದ್ದ ಚಿತ್ರ ಹಲವು ಬಾರಿ ವಿಳಂಬ ಮತ್ತು ವಿವಾದಗಳನ್ನು ಎದುರಿಸಿದೆ. ಹೀಗೆ ಚಿತ್ರದ ಮೇಲಿನ ನಿರೀಕ್ಷೆ ಸಹ ಹೆಚ್ಚಾಗಿತ್ತು. ಸೇನಾಪತಿ ಪಾತ್ರದಲ್ಲಿ ದಕ್ಷಿಣ ಚಿತ್ರರಂಗದ ಬಹುಬೇಡಿಕೆ ನಟ ಕಮಲ್​ ಹಾಸನ್ ಮರಳಿದ ಹೊರತಾಗಿಯೂ, ಹಿಂದಿನ ಯಶಸ್ಸನ್ನು ಮುಂದುವರಿಸಲು ವಿಫಲವಾಯಿತು. 250 ಕೋಟಿ ರೂ ಬಜೆಟ್‌ನ ಬಿಗ್​ ಪ್ರಾಜೆಕ್ಟ್​ ಎಂದು ವರದಿಯಾದ ಈ ಚಿತ್ರ ದುರಾದೃಷ್ಟವಶಾತ್, ಜಾಗತಿಕವಾಗಿ 150 ಕೋಟಿ ರೂಪಾಯಿಗಳನ್ನಷ್ಟೇ ಕಲೆಕ್ಷನ್​ ಮಾಡಿತು.

ಮೈದಾನ್: ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನ 'ಮೈದಾನ್​' 2024ರ ಬಹುನಿರೀಕ್ಷಿತ ಚಲನಚಿತ್ರಗಳಲ್ಲೊಂದಾಗಿ ಸಖತ್​ ಸದ್ದು ಮಾಡಿತ್ತು. ಅಜಯ್ ದೇವಗನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸ್ಪೋರ್ಟ್ಸ್ ಡ್ರಾಮಾ 1950-60ರಲ್ಲಿ ಭಾರತೀಯ ಫುಟ್‌ಬಾಲ್ ರೂಪಿಸಿದ ಕೀರ್ತಿಗೆ ಪಾತ್ರರಾದ ಫುಟ್​ಬಾಲ್ ಕೋಚ್​​ ಸೈಯದ್ ಅಬ್ದುಲ್ ರಹೀಮ್ ಅವರ ಜೀವನವನ್ನಾಧರಿಸಿದೆ. 250 ಕೋಟಿ ಬಜೆಟ್‌ ಎಂದು ವರದಿಯಾಗಿದ್ದ ಈ ಪ್ರಾಜೆಕ್ಟ್​​ ಕ್ರೀಡಾ ಉತ್ಸಾಹಿಗಳಿಗೆ ಹಿಡಿಸುವುದಲ್ಲದೇ ಅಜಯ್​ ದೇವಗನ್ ಅವರ ಸ್ಟಾರ್ ಪವರ್‌ ಅನ್ನು ಮತ್ತೊಮ್ಮೆ ಸಾಬೀತುಪಡಿಸುವ ನಿರೀಕ್ಷೆಯಿತ್ತು. ಬಾಲಿವುಡ್​ಗೆ ಯಶಸ್ಸು ತಂದುಕೊಡುವ ಈದ್ ಹಬ್ಬದ ಸಮಯದಲ್ಲಿ ಬಿಡುಗಡೆಯಾದ ಈ ಚಿತ್ರ ಭಾರತದಲ್ಲಿ 52 ಕೋಟಿ ರೂ. ಮತ್ತು ಜಾಗತಿಕವಾಗಿ ಸುಮಾರು 68 ಕೋಟಿ ರೂಪಾಯಿ ಗಳಿಸಿತು. ನಾಯಕ ನಟನ ಅಭಿನಯ ಉತ್ತಮ ವಿಮರ್ಶೆ ಸ್ವೀಕರಿಸಿತಾದರೂ, ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಯಿತು.

ಇದನ್ನೂ ಓದಿ: ಹುಸಿಯಾಯ್ತು ಅಭಿಮಾನಿಗಳ ನಿರೀಕ್ಷೆ! 2024ರಲ್ಲಿ ಸಿನಿಮಾ ಮಾಡದ ಸ್ಯಾಂಡಲ್​​ವುಡ್​ ಸೂಪರ್​​ಸ್ಟಾರ್​ಗಳಿವರು

ಬಡೇ ಮಿಯಾನ್ ಚೋಟೆ ಮಿಯಾನ್: ಬಾಲಿವುಡ್​ನ ಬಹುಬೇಡಿಕೆಯ ನಟರಾದ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಮುಖ್ಯಭೂಮಿಕೆಯ ಬಡೇ ಮಿಯಾನ್ ಚೋಟೆ ಮಿಯಾನ್ ವಿಫಲವಾದ ಮತ್ತೊಂದು ಸಿನಿಮಾ. ಅಲಿ ಅಬ್ಬಾಸ್ ಜಾಫರ್ ನಿರ್ದೇಶನದ ಆ್ಯಕ್ಷನ್​​ ಕಾಮಿಡಿ ಸಿನಿಮಾ 350 ಕೋಟಿ ರೂಪಾಯಿಯ ಅದ್ದೂರಿ ಬಜೆಟ್​ನಲ್ಲಿ ನಿರ್ಮಾಣಗೊಂಡಿತ್ತು. ಆದ್ರೆ, ಚಿತ್ರ ಕೇವಲ 60 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿತ್ತು.

ಜಿಗ್ರಾ: ಬಾಲಿವುಡ್‌ನ ಅತ್ಯಂತ ಯಶಸ್ವಿ ತಾರೆಯರಲ್ಲಿ ಓರ್ವರಾದ ಆಲಿಯಾ ಭಟ್ 'ಜಿಗ್ರಾ' ಚಿತ್ರದ ಮೂಲಕ ಅನಿರೀಕ್ಷಿತ ಸೋಲು ಎದುರಿಸಿದರು. ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಬೇಡಿಕೆ ಹೊಂದಿದ್ದರೂ, ಇತ್ತೀಚಿನ ವರ್ಷಗಳಲ್ಲಿ ಯಶಸ್ವಿ ಸಿನಿಮಾಗಳನ್ನೇ ಕೊಟ್ಟಿದ್ದರೂ ಈ ಚಿತ್ರ ಮಾತ್ರ ಸೋಲಿನ ರುಚಿ ಕಂಡಿತು. ವಾಸನ್ ಬಾಲಾ ನಿರ್ದೇಶನದ ಜಿಗ್ರಾ ತನ್ನ ಮೊದಲ ದಿನ 4.55 ಕೋಟಿ ರೂ. ಗಳಿಸಿ ನಿರಾಶಾದಾಯಕ ಬಾಕ್ಸ್​ ಆಫೀಸ್​ ಪ್ರಯಾಣ ಪ್ರಾರಂಭಿಸಿತು. ಚಿತ್ರದ ಸ್ಕ್ರಿಪ್ಟ್ ಮತ್ತು ಪ್ರದರ್ಶನವು ಅದರ ಸೋಲಿಗೆ ಕಾರಣವಾಯಿತು ಎಂದು ವಿಮರ್ಶಕರು ಸೂಚಿಸಿದ್ದಾರೆ. 80 ಕೋಟಿ ರೂ. ಬಜೆಟ್ ಮತ್ತು ಪ್ರಚಾರಕ್ಕಾಗಿ ಹೆಚ್ಚುವರಿಯಾಗಿ 10 ಕೋಟಿ ಖರ್ಚು ಮಾಡಲಾಗಿದ್ದರೂ ಕೂಡಾ ಜಿಗ್ರಾ ಬಾಕ್ಸ್​ ಆಫೀಸ್​​ನಲ್ಲಿ ಉತ್ತಮ ಪ್ರದರ್ಶನ ಕಾಣಲಿಲ್ಲ.

ಇದನ್ನೂ ಓದಿ: ಚಂದನ್‌ ಶೆಟ್ಟಿ-ನಿವೇದಿತಾ ಗೌಡ TO ರೆಹಮಾನ್​​​, ಧನುಷ್​: 2024ರಲ್ಲಿ ಅಭಿಮಾನಿಗಳಿಗೆ ಶಾಕ್ ಕೊಟ್ಟ ಸೆಲೆಬ್ರಿಟಿಗಳ ಡಿವೋರ್ಸ್ ಲಿಸ್ಟ್

ಹಾಗಾಗಿ, '2024' ಫಿಲ್ಮ್​​ಮೇಕರ್​ಗಳಿಗೆ ಎಚ್ಚರಿಕೆಯ ಕರೆ ಎಂದು ಸಾಬೀತಾಗಿದೆ. ಪ್ರೇಕ್ಷಕರ ಅಭಿರುಚಿ ಬದಲಾಗುತ್ತಿದ್ದು, ಕಂಟೆಂಟ್​ ಆಧಾರಿತ ಸಿನಿಮಾಗಳೆಡೆಗೆ ಹೆಚ್ಚು ಗಮನ ಕೊಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.