ಕರ್ನಾಟಕ

karnataka

ETV Bharat / entertainment

ನವೆಂಬರ್ ಅಂತ್ಯಕ್ಕೆ ಸಸ್ಪೆನ್ಸ್ ಥ್ರಿಲ್ಲರ್ 'ನಾ ನಿನ್ನ ಬಿಡಲಾರೆ' ಬಿಡುಗಡೆ - NA NINNA BIDALARE

'ನಾ ನಿನ್ನ ಬಿಡಲಾರೆ' ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ.

Na Ninna Bidalare film team
'ನಾ ನಿನ್ನ ಬಿಡಲಾರೆ' (ETV Bharat)

By ETV Bharat Entertainment Team

Published : Oct 27, 2024, 1:13 PM IST

'ನಾ ನಿನ್ನ ಬಿಡಲಾರೆ'. ಇದು ಅಂದು ಅನಂತ್ ನಾಗ್-ಲಕ್ಷ್ಮೀ ಕಾಂಬಿನೇಷನ್​​ನಲ್ಲಿ ಮೂಡಿ ಬಂದ ಚಿತ್ರ. ಸಿನಿರಸಿಕರ ಪಾಲಿಗೆ 'ಎವರ್ ಗ್ರೀನ್' ಸಿನಿಮಾ ಕೂಡಾ ಹೌದು. ಇದೀಗ ಅದೇ ಟೈಟಲ್​ನೊಂದಿಗೆ ಹೊಸ ಚಿತ್ರತಂಡವೊಂದು ಪ್ರೇಕ್ಷಕರೆದುರು ಬರುತ್ತಿದೆ. ಈ ಕಾಲಕ್ಕೆ ತಕ್ಕ ಸಸ್ಪೆನ್ಸ್ ಥ್ರಿಲ್ಲರ್ ಕಂಟೆಂಟ್ ಒಳಗೊಂಡು ಹೊಸ ತಂಡ ಹೊಸ ಆಯಾಮದಲ್ಲಿ ಕನ್ನಡ ಪ್ರೇಕ್ಷಕರಿಗೆ ಮನರಂಜನೆ ಒದಗಿಸಲು ಅಣಿಯಾಗುತ್ತಿದೆ.

ಈಗಾಗಲೇ ಟೀಸರ್​ ಮೂಲಕ ಪ್ರೇಕ್ಷಕರಲ್ಲಿ ಸಂಪೂರ್ಣ ಸಿನಿಮಾ ನೋಡುವ ಕುತೂಹಲ ಮೂಡಿಸಿದೆ. ಅದರಂತೆ ಚಿತ್ರಮಂದಿರ ಪ್ರವೇಶಿಸುವ ದಿನವೂ ನಿಗದಿಯಾಗಿದೆ. ರಿಲೀಸ್​ ಡೇಟ್ ಅನೌನ್ಸ್ ಮಾಡುವ ಮೂಲಕ ಟೈಟಲ್​, ಪೋಸ್ಟರ್, ಟೀಸರ್​ನಿಂದಲೇ ಕನ್ನಡ‌ ಸಿನಿಪ್ರಿಯರಲ್ಲಿ ಕ್ಯೂರಿಯಾಸಿಟಿ ಕ್ರಿಯೇಟ್ ಮಾಡಿರುವ ನಾನಿನ್ನ ಬಿಡಲಾರೆ ತಂಡ ಪ್ರಚಾರ ಕಾರ್ಯ ಶುರು ಮಾಡಿಕೊಂಡಿದೆ. ಸದ್ಯದಲ್ಲೇ ಎರಡು ಹಾಡು ಹಾಗೂ ಥಿಯೇಟರಿಕಲ್ ಟ್ರೇಲರ್​​ ರಿಲೀಸ್ ಮಾಡೋ ಪ್ಲ್ಯಾನ್​ ನಡೆಯುತ್ತಿದೆ.

ನವೆಂಬರ್ ಅಂತ್ಯಕ್ಕೆ 'ನಾ ನಿನ್ನ ಬಿಡಲಾರೆ' ಬಿಡುಗಡೆ (ETV Bharat)

ಅಂಬಾಲಿ ಭಾರತಿ ಈ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿದ್ದು ಪಂಚಿ, ಸೀರುಂಡೆ ರಘು, ಕೆ.ಸ್.ಶ್ರೀಧರ್, ಮಹಂತೇಶ್, ಶ್ರೀನಿವಾಸ್ ಪ್ರಭು, ಹರಿಣಿ, ಲಕ್ಷ್ಮೀ ಸಿದ್ದಯ್ಯ, ಮಂಜುಳಾರೆಡ್ಡಿ ಮುಖ್ಯಭೂಮಿಕೆಯಲ್ಲಿದ್ದಾರೆ. ಕಮಲ ಉಮಾ ಭಾರತಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಂಬಾಲಿ ಭಾರತಿ ನಾಯಕಿಯಾಗಿ ನಟಿಸಿ, ನಿರ್ಮಿಸಿರುವ ನಾ ನಿನ್ನ ಬಿಡಲಾರೆ ಚಿತ್ರವನ್ನು ನವೀನ್ ಜಿ.ಎಸ್. ನಿರ್ದೇಶಿಸಿದ್ದಾರೆ. ವೀರೇಶ್ ಎಸ್.ಛಾಯಾಗ್ರಹಣ, ಎಮ್.ಎಸ್.ತ್ಯಾಗರಾಜು ಸಂಗೀತವಿರುವ ಚಿತ್ರಕ್ಕೆ ದೀಪಕ್ ಜಿ.ಎಸ್. ಸಂಕಲನವಿದೆ.

'ನಾ ನಿನ್ನ ಬಿಡಲಾರೆ' ಬಿಡುಗಡೆಗೆ ದಿನ ನಿಗದಿ (ETV Bharat)

ಇದನ್ನೂ ಓದಿ:ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟ ಮಾತಿನ ಮಲ್ಲ ಸೃಜನ್​ ಲೋಕೇಶ್​​: ಯಾರು ಎಲಿಮಿನೇಟ್​ ಆಗ್ಬೇಕು?

ಸದ್ಯ ಟೀಸರ್​ನಿಂದ ಗಮನ ಸೆಳೆಯುತ್ತಿರುವ ನಾನಿನ್ನ ಬಿಡಲಾರೆ ನವೆಂಬರ್‌ 29ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದೆ. ಲೈಲಾಕ್ ಎಂಟರ್ಟೈನ್ಮೆಂಟ್​ನ ಹೇಮಂತ್ ಈ ಚಿತ್ರವನ್ನು ರಾಜ್ಯದಾದ್ಯಂತ ವಿತರಿಸಲಿದ್ದಾರೆ.

ABOUT THE AUTHOR

...view details