ETV Bharat / entertainment

'ನಾನು ಏನು ಬೇಕಾದರೂ ಮಾಡಬಲ್ಲೆ': ಅಭಿಷೇಕ್​ ಬಚ್ಚನ್​​ ಜೊತೆಗಿನ ಡೇಟಿಂಗ್​ ವದಂತಿಗೆ ನಿಮ್ರತ್ ಕೌರ್ ಪ್ರತಿಕ್ರಿಯೆ - NIMRAT KAUR

ಅಭಿಷೇಕ್ ಬಚ್ಚನ್ ಜೊತೆಗಿನ ಡೇಟಿಂಗ್ ವದಂತಿಗಳಿಂದ ಬೇಸತ್ತಿರುವ ಬಾಲಿವುಡ್​​ ನಟಿ ನಿಮ್ರತ್ ಕೌರ್ ಮೌನ ಮುರಿದಿದ್ದಾರೆ.

Nimrat Kaur, Abhishek Bachchan
ನಿಮ್ರತ್ ಕೌರ್, ಅಭಿಷೇಕ್​ ಬಚ್ಚನ್​​ (Photo source: IANS)
author img

By ETV Bharat Entertainment Team

Published : Oct 26, 2024, 7:02 PM IST

ಬಾಲಿವುಡ್​​ ನಟಿ ನಿಮ್ರತ್ ಕೌರ್ ಅವರ ಹೆಸರು ಸದ್ಯ ಸಖತ್​ ಸುದ್ದಿಯಲ್ಲಿದೆ. ದಾಸ್ವಿ ಚಿತ್ರದ ಸಹ-ನಟ ಅಭಿಷೇಕ್ ಬಚ್ಚನ್ ಜೊತೆಗಿನ ಡೇಟಿಂಗ್ ವದಂತಿಗಳು ಹೊರಹೊಮ್ಮಿದ ನಂತರ, ಅಭಿಷೇಕ್​ ಮತ್ತು ಐಶ್ವರ್ಯಾ ದಂಪತಿಯ ವಿಚ್ಛೇದನದ ಸುತ್ತಲಿನ ವದಂತಿಗಳು ಉಲ್ಭಣಗೊಂಡಿವೆ. ಸೋಷಿಯಲ್​ ಕಾಮಿಡಿ ಡ್ರಾಮಾದಲ್ಲಿ ತೆರೆ ಹಂಚಿಕೊಂಡಿರುವ ಈ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂಬ ಬಗ್ಗೆ ಊಹಾಪೋಹಗಳು ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹರಡಿದ್ದು, ನೆಟ್ಟಿಗರ ಆಸಕ್ತಿ ಕೆರಳಿದೆ.

ಅಭಿಷೇಕ್ ಬಚ್ಚನ್​​ ಮತ್ತು ಐಶ್ವರ್ಯಾ ರೈ ಬಚ್ಚನ್ ನಡುವಿನ ವೈವಾಹಿಕ ಭಿನ್ನಾಭಿಪ್ರಾಯದಂತಹ ವರದಿಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ ಈ ವದಂತಿಗಳು ಹೊರಹೊಮ್ಮಿವೆ. ಜನಪ್ರಿಯ ತಾರಾ ಜೋಡಿಯ ವಿಚ್ಛೇದನಕ್ಕೆ ನಟಿ ನಿಮ್ರತ್ ಕೌರ್ ಕಾರಣವಾಗಿರಬಹುದಾ? ಎಂದು ಅನೇಕರು ಊಹಿಸುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ನಟಿ ನಿಮ್ರತ್ ಕೌರ್, ಪ್ರಬುದ್ಧತೆಯಿಂದ ವದಂತಿಗಳಿಗೆ ಪ್ರತಿಕ್ರಿಯಿಸಿದರು. ತಮ್ಮ ವೈಯಕ್ತಿಕ ಜೀವನದಲ್ಲಿ ಸಾರ್ವಜನಿಕರು ಹೊಂದಿರುವ ಆಸಕ್ತಿಯೊಂದಿಗೆ ವ್ಯವಹರಿಸಲು ಇರುವ ಸವಾಲುಗಳ ಬಗ್ಗೆಯೂ ಮಾತನಾಡಿದರು. "ನಾನು ಏನು ಬೇಕಾದರೂ ಮಾಡಬಲ್ಲೆ ಮತ್ತು ಜನರು ಇನ್ನೂ ಅವರಿಗೆ ಬೇಕಾದುದನ್ನೇ ಹೇಳುತ್ತಾರೆ. ಅಂತಹ ಗಾಸಿಪ್‌ಗಳನ್ನು ನಿಲ್ಲಿಸುವುದಿಲ್ಲ. ನಾನು ನನ್ನ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಬಯಸುತ್ತೇನೆ" ಎಂದು ತಿಳಿಸಿದರು.

ಇದನ್ನೂ ಓದಿ: ಅಡ್ಡಗಟ್ಟಿದ ಫೋಟೋಗ್ರಾಫರ್​​ಗಳ ಮೇಲೆ ಕೋಪಗೊಂಡ ರಣ್​ಬೀರ್​ ಕಪೂರ್​​, ಆಲಿಯಾ ಭಟ್​​​: ವಿಡಿಯೋ

ಗೌಪ್ಯತೆಗೆ ತಮ್ಮ ಆದ್ಯತೆಯನ್ನು ಒತ್ತಿಹೇಳಿದ ಅವರು ಸಂದರ್ಶನದಲ್ಲಿ ವದಂತಿ ವಿಚಾರಗಳನ್ನು ಕಡಿಮೆ ಮಾಡಿ, ವೃತ್ತಿಜೀವನಕ್ಕೆ ಸಂಭಾಷಣೆಯನ್ನು ಕೇಂದ್ರೀಕರಿಸಲು ಪ್ರಯತ್ನಿಸಿದರು. ಅಭಿಷೇಕ್​ ಬಚ್ಚನ್​​ ಮತ್ತು ಐಶ್ವರ್ಯಾ ರೈ ವಿಚ್ಛೇದನ ಕುರಿತ ಊಹಾಪೋಹಗಳು, ಅಭಿಷೇಕ್​ ಜೊತೆ ನಿಮ್ರತ್ ಕೌರ್ ಡೇಟಿಂಗ್​​ನಂತಹ ವದಂತಿಗಳ ನಂತರ ಈ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇದನ್ನೂ ಓದಿ: 'ಈ ಅವಕಾಶ ದುರ್ಬಳಕೆಯಾಗುತ್ತಿದೆ ಎಂದನಿಸುತ್ತದೆಯೇ?' ಬಿಗ್​ ಬಾಸ್​ ಮನೆಯಲ್ಲಿ ಯೋಗರಾಜ್​ ಭಟ್​ ಈ ಪ್ರಶ್ನೆ ಎತ್ತಿದ್ಯಾಕೆ?

ನಿಮ್ರತ್ ಅವರ ನೇರನುಡಿ, ವದಂತಿಗಳು ಮತ್ತು ನೆಟ್ಟಿಗರ ಕುತೂಹಲಗಳ ಹೊರತಾಗಿಯೂ ತಮ್ಮ ಕೆಲಸದೆಡೆಗೆ ಗಮನ ಕೊಡುವ ಅವರ ಬದ್ಧತೆಯನ್ನು ಪ್ರತಿಬಿಂಬಿಸಿದೆ. ದಿ ಲಂಚ್‌ಬಾಕ್ಸ್ ಮತ್ತು ಏರ್‌ಲಿಫ್ಟ್‌ನಂತಹ ಸಿನಿಮಾಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಅವರು ತಮ್ಮ ಅಭಿನಯದಿಂದ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ತಮ್ಮ ಪ್ರತಿಭೆ ಮೇಲೆ ಗಮನ ಕೇಂದ್ರೀಕರಿಸಲು ಆದ್ಯತೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.