ETV Bharat / business

ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಅನಧಿಕೃತ ಶುಲ್ಕದ ಹೊರೆಯೇ?; ಹಾಗಾದರೆ ಸಮಸ್ಯೆ ಈ ರೀತಿ ಪರಿಹರಿಸಿಕೊಳ್ಳಬಹುದು! - HOW TO RESOLVE CREDIT CARD DISPUTES

ಕ್ರೆಡಿಟ್ ಕಾರ್ಡ್ ಕಂಪನಿಗಳು ವಹಿವಾಟಿನ ಮೇಲೆ ಅನಧಿಕೃತ ಶುಲ್ಕವನ್ನು ವಿಧಿಸುತ್ತಿವೆಯೇ?; ಹಾಗಾದರೆ ಆ ಸಮಸ್ಯೆಯನ್ನು ಹೇಗೆ ಸರಿಪಡಿಸಿಕೊಳ್ಳುವುದು? - ಇಲ್ಲಿದೆ ಸಂಪೂರ್ಣ ಮಾಹಿತಿ

how-to-resolve-credit-card-disputes-how-do-you-initiate-a-dispute-for-an-unauthorised-charge
ಕ್ರೆಡಿಟ್ ಕಾರ್ಡ್ ವಹಿವಾಟಿನ ಮೇಲೆ ಅನಧಿಕೃತ ಶುಲ್ಕದ ಹೊರೆಯೇ?; ಹಾಗಾದರೆ ಸಮಸ್ಯೆ ಈ ರೀತಿ ಪರಿಹರಿಸಿಕೊಳ್ಳಬಹುದು! (ETV Bharat)
author img

By ETV Bharat Karnataka Team

Published : Oct 25, 2024, 9:28 AM IST

How To Resolve Credit Card Disputes: ಈಗೀಗ ಬಹುತೇಕರ ಬದುಕು ಕ್ರೆಡಿಟ್​ ಕಾರ್ಡ್​ ಇಲ್ಲದೆಯೇ ಮುಂದೆ ಸಾಗುವುದಿಲ್ಲ. ಹಾಗಾಗಿ ಈ ಕಾರ್ಡ್​ಗಳು ಇಂದು ಅನೇಕ ಜನರ ದೈನಂದಿನ ಹಣಕಾಸಿನ ಅಭ್ಯಾಸಗಳ ಭಾಗವಾಗಿವೆ. ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಬಾಕಿ ಮರುಪಾವತಿ ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ಅನಧಿಕೃತ ಶುಲ್ಕಗಳು, ತಪ್ಪಾದ ಬಿಲ್ಲಿಂಗ್ ಲೆಕ್ಕಾಚಾರಗಳು ಮತ್ತು ಭರವಸೆಯಂತೆ ಸೇವೆಗಳನ್ನು ನೀಡದಿರುವುದು, ಇಂತಹ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಇದರಿಂದ ಗ್ರಾಹಕರು ತಾಳ್ಮೆ ಕಳೆದುಕೊಳ್ಳುವಂತಾಗುತ್ತದೆ. ಆದರೆ ಇಂತಹ ತಪ್ಪುಗಳನ್ನು ನೀವು ಪ್ರಶ್ನಿಸಿ ಪರಿಹಾರ ಕಂಡುಕೊಳ್ಳುವ ಅವಕಾಶ ಇದೆ.

ಕ್ರೆಡಿಟ್ ಕಾರ್ಡ್‌ಗಳ ಮೂಲಕ ಆನ್‌ಲೈನ್ ಖರ್ಚು ಏಪ್ರಿಲ್ 2024 ರ ವೇಳೆಗೆ 1 ಲಕ್ಷ ಕೋಟಿಯನ್ನು ತಲುಪಿದೆ ಎಂದು ಸಂಬಂಧಿತ ಮೂಲಗಳು ಮಾಹಿತಿ ನೀಡಿವೆ. ಇದಲ್ಲದೇ 2022 ರಿಂದ ಕ್ರೆಡಿಟ್ ಕಾರ್ಡ್ ವಿವಾದಗಳಲ್ಲಿ ಶೇಕಡಾ 20 ರಷ್ಟು ಹೆಚ್ಚಳವಾಗಿದೆ ಎಂದು ತಿಳಿದು ಬಂದಿದೆ. ಕ್ರೆಡಿಟ್ ಕಾರ್ಡ್‌ಗಳ ಬಳಕೆ ಹೆಚ್ಚುತ್ತಿರುವಾಗ ಇಂತಹ ವಿವಾದಗಳು ಅನಿವಾರ್ಯ. ಆದರೆ, ಇಂತಹ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಹುದು ಅಂತಾರೆ ತಜ್ಞರು.

ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ವಿವಾದಗಳು ಉದ್ಭವಿಸಿದಾಗ, ಗ್ರಾಹಕರು ಕಾರ್ಡ್ ನೀಡುವ ಕಂಪನಿಯನ್ನು ಸಂಪರ್ಕಿಸಿ ಅವರ ಸಮಸ್ಯೆಯನ್ನು ಹೇಳಿಕೊಳ್ಳುತ್ತಾರೆ. ಕ್ರೆಡಿಟ್ ಕಾರ್ಡ್ ಕಂಪನಿಯು ಗ್ರಾಹಕರು ನೀಡಿದ ದೂರನ್ನು ಸ್ವೀಕರಿಸಿ ಪರಿಶೀಲನೆ ಮಾಡುತ್ತದೆ ಮತ್ತು ಅಗತ್ಯವಿದ್ದರೆ ಹೆಚ್ಚುವರಿ ಮಾಹಿತಿ ಕೇಳುತ್ತದೆ. ಆದರೆ ಗ್ರಾಹಕರ ಹಕ್ಕು ನಿಜವೆಂದು ಕಂಡು ಬಂದರೆ, ಕಡಿತವಾದ ಮೊತ್ತವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಸಮಸ್ಯೆಗಳನ್ನು ಯಾವಾಗ ರೈಸ್​ ಮಾಡಬಹುದು ಎಂಬುದರ ಬಗ್ಗೆ ತಿಳಿಯೋಣ.

ಕ್ರೆಡಿಟ್ ಕಾರ್ಡ್ ಸಮಸ್ಯೆಗಳ ಬಗ್ಗೆ ಯಾವಾಗ ಪ್ರಶ್ನಿಸಬೇಕು?

  • ಅನಧಿಕೃತ ಶುಲ್ಕಗಳು: ಕ್ರೆಡಿಟ್ ಕಾರ್ಡ್ ಬಾಕಿಯನ್ನು ಪಾವತಿಸುವಾಗ ಯಾವುದೇ ಅನಧಿಕೃತ ಶುಲ್ಕಗಳು ಪತ್ತೆಯಾದರೆ ತಕ್ಷಣವೇ ಕ್ರೆಡಿಟ್ ಸಂಸ್ಥೆಗೆ ವರದಿ ಮಾಡಬೇಕು.
  • ಬಿಲ್ಲಿಂಗ್ ದೋಷಗಳು: ನಕಲಿ ಶುಲ್ಕಗಳು ಮತ್ತು ತಪ್ಪಾದ ಮೊತ್ತಗಳು ನಿಮ್ಮ ಬಿಲ್​​​ನಲ್ಲಿ ದಾಖಲಾಗಿದೆಯಾ ಇಲ್ಲವೇ ಎಂಬ ಬಗ್ಗೆ ನಿಯಮಿತವಾಗಿ ಪರಿಶೀಲಿಸಿ. ಅಂತಹ ವಿಷಯವಿದ್ದರೆ ಸಾಲ ಸಂಸ್ಥೆಯನ್ನು ತಕ್ಷಣವೇ ಸಂಪರ್ಕಿಸಿ ಪ್ರಶ್ನಿಸಬೇಕು
  • ಸರಕು ಮತ್ತು ಸೇವೆಗಳ ವಿವಾದಗಳು: ಕ್ರೆಡಿಟ್ ಕಾರ್ಡ್ ಕಂಪನಿಯು ನಿಗದಿತ ಸೇವೆ ನೀಡುವ ಭರವಸೆ ನೀಡದಿದ್ದರೆ, ಅಥವಾ ಹೇಳಿದಂತೆ ಸೇವೆಯನ್ನು ಕೊಡದಿದ್ದರೆ, ಅವುಗಳ ಮೇಲೆ ವಿಧಿಸಲಾದ ಶುಲ್ಕಗಳನ್ನು ಪ್ರಶ್ನಿಸಬಹುದು.
  • ವಂಚನೆ: ಗುರುತಿನ ಕಳ್ಳತನ ಮತ್ತು ಫಿಶಿಂಗ್ ಹಗರಣಗಳನ್ನು ಗುರುತಿಸಿ ಮತ್ತು ತಕ್ಷಣವೇ ಕಾರ್ಡ್ ನೀಡುವ ಕಂಪನಿಯನ್ನು ಸಂಪರ್ಕಿಸಿ ದೂರು ನೀಡಬೇಕು.

ಕ್ರೆಡಿಟ್ ಕಾರ್ಡ್ ದೂರು ಮತ್ತು ಕ್ಲೈಮ್ ಪ್ರಕ್ರಿಯೆ

1. ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಯನ್ನು ಸಂಪರ್ಕಿಸುವುದು : ನೀವು ಯಾವುದೇ ಬಿಲ್ಲಿಂಗ್​ನಲ್ಲಿ ಸಮಸ್ಯೆ ಕಂಡುಕೊಂಡರೆ ಕ್ರೆಡಿಟ್ ಕಾರ್ಡ್ ನೀಡುವ ಕಂಪನಿಯನ್ನು ಸಂಪರ್ಕಿಸಿ. ದಿನಾಂಕ, ಮೊತ್ತ, ವ್ಯಾಪಾರಿ ಸೇರಿದಂತೆ ನಿಮ್ಮ ವಹಿವಾಟಿನ ಎಲ್ಲಾ ವಿವರಗಳನ್ನು ಅವರಿಗೆ ಒದಗಿಸಿ.

2. ಫೈಲಿಂಗ್ : ಕ್ಲೈಮ್ ವಿವರಗಳನ್ನು ಕ್ರೆಡಿಟ್ ಸಂಸ್ಥೆಗೆ ತಿಳಿಸಲು ವಿವಾದದ ನಮೂನೆಯನ್ನು ಭರ್ತಿ ಮಾಡಬೇಕು. ಆದರೆ ಫಾರ್ಮ್ ಸಲ್ಲಿಸುವಾಗ ಎಲ್ಲಾ ವಿವರಗಳನ್ನು ಸೇರಿಸಲಾಗಿದೆಯೇ ಎಂದು ಒಮ್ಮೆ ಪುನಃ ಪರಿಶೀಲಿಸಿ.

3. ತನಿಖಾ ಪ್ರಕ್ರಿಯೆ : ಗ್ರಾಹಕರು ಕ್ಲೈಮ್ ಮಾಡಿದ ನಂತರ, ಆಯಾ ಕ್ರೆಡಿಟ್ ಸಂಸ್ಥೆಯು ಅದನ್ನು ತನಿಖೆ ಮಾಡುತ್ತದೆ. ಈ ಆದೇಶದಲ್ಲಿ, ಹೇಳಿಕೆಯಲ್ಲಿನ ವಿವಾದಿತ ಮೊತ್ತವನ್ನು ತಾತ್ಕಾಲಿಕವಾಗಿ ತೆಗೆದುಹಾಕಲಾಗುತ್ತದೆ.

4. ಪರಿಹಾರ : ತನಿಖೆಯ ನಂತರ ಕಾರ್ಡ್ ನೀಡುವ ಕಂಪನಿ - ಅವರು ಖರೀದಿ ವಿವರಗಳ ಬಗ್ಗೆ ನಿಮಗೆ ತಿಳಿಸುತ್ತಾರೆ. ನಿಮ್ಮ ಕ್ಲೈಮ್ ಪರವಾಗಿದ್ದರೆ, ವಿವಾದಿತ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಕ್ರೆಡಿಟ್ ಕಾರ್ಡ್ ಪಾವತಿಗಳು, ಶುಲ್ಕಗಳು ಇತ್ಯಾದಿಗಳಲ್ಲಿನ ಸಮಸ್ಯೆಗಳನ್ನು ಪತ್ತೆಹಚ್ಚಲು ವಹಿವಾಟಿನ ದಿನಾಂಕದಿಂದ 180 ದಿನಗಳಲ್ಲಿ ನೀವು ದೂರನ್ನು ನೀಡಬಹುದು. ಈ ದೂರುಗಳನ್ನು ಸಾಮಾನ್ಯವಾಗಿ 45 ರಿಂದ 60 ದಿನಗಳಲ್ಲಿ ಪರಿಹರಿಸಲಾಗುತ್ತದೆ ಅಂತಾರೆ ತಜ್ಞರು.

ಇವುಗಳನ್ನು ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.