ETV Bharat / entertainment

ಅಭಿಷೇಕ್ ಬಚ್ಚನ್​-ಐಶ್ವರ್ಯಾ ರೈ 'ಗ್ರೇ ಡಿವೋರ್ಸ್'ಗೆ ಮುಂದಾಗಿದ್ದಾರಾ? ಏನಿದು ಗ್ರೇ ಡಿವೋರ್ಸ್!

ಬಾಲಿವುಡ್​ ಸ್ಟಾರ್​ ದಂಪತಿ ಐಶ್ವರ್ಯಾ ರೈ-ಅಭಿಷೇಕ್​ ಬಚ್ಚನ್ ಸಂಸಾರದಲ್ಲಿ ಬಿರುಕು ಮೂಡಿದ್ದು, ಸದ್ಯದಲ್ಲೇ 'ಗ್ರೇ ಡೈವೋರ್ಸ್' ಪಡೆಯಲಿದ್ದಾರೆ ಎಂಬ ಊಹಾಪೋಹ ಹರಿದಾಡುತ್ತಿದೆ. ಅಷ್ಟಕ್ಕೂ ಗ್ರೇ ಡಿವೋರ್ಸ್ ಅಂದ್ರೇನು ಅನ್ನೋ ಮಾಹಿತಿ ಇಲ್ಲಿದೆ.

ಅಭಿಷೇಕ್ ಬಚ್ಚನ್​-ಐಶ್ವರ್ಯಾ ರೈ 'ಗ್ರೇ ಡಿವೋರ್ಸ್'ಗೆ ಮುಂದಾಗಿದ್ದಾರಾ?
ಅಭಿಷೇಕ್ ಬಚ್ಚನ್​-ಐಶ್ವರ್ಯಾ ರೈ 'ಗ್ರೇ ಡಿವೋರ್ಸ್'ಗೆ ಮುಂದಾಗಿದ್ದಾರಾ? (Instagram - Aishwarya Rai Bachchan)
author img

By ETV Bharat Karnataka Team

Published : 2 hours ago

ಸೋಷಿಯಲ್​ ಮೀಡಿಯಾ ಓಪನ್​ ಮಾಡಿದರೆ ಸಾಕು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ನಟ ಅಭಿಷೇಕ್​ ಬಚ್ಚನ್​ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂಬ ಪೋಸ್ಟರ್​ಗಳು, ವದಂತಿಗಳು ಮೊಬೈಲ್​ ಸ್ಕ್ರೋಲ್ ಮಾಡಿದಷ್ಟು ಬರುತ್ತಿದೆ. ಸ್ಟಾರ್​ ನಟ-ನಟಿಯರು ಬೇರೆಯಾಗುವುದು ವಿಶೇಷವೇನಲ್ಲ. ಆದರೆ 16 ವರ್ಷಗಳಿಗೂ ಹೆಚ್ಚು ಕಾಲ ದಾಂಪತ್ಯ ಜೀವನ ನಡೆಸಿ, ಎದೆಯೆತ್ತರಕ್ಕೆ ಬೆಳೆದ ಮಗಳಿದ್ದಾಗ ಅಭಿಷೇಕ್​ ಬಚ್ಚನ್​ ದಂಪತಿಗೆ ಡಿವೋರ್ಸ್​ ಯಾಕೆ? ಎಂಬ ಪ್ರಶ್ನೆ ನೆಟ್ಟಿಗರದ್ದು. ವಿಚ್ಛೇದನ ಬೇಕಾ-ಬೇಡ್ವಾ ಅದು ಅವರವರ ವೈಯಕ್ತಿಕ ವಿಚಾರ. ಒಂದು ವೇಳೆ ವದಂತಿಯಂತೆ ಐಶ್ವರ್ಯಾ ರೈ-ಅಭಿಷೇಕ್​ ಬಚ್ಚನ್ ಡಿವೋರ್ಸ್​ ಪಡೆದದ್ದೇ ಆದರೆ ಇವರೂ ಕೂಡ ಟ್ರೆಂಡ್​ನಲ್ಲಿರುವ ಗ್ರೇ ಡಿವೋರ್ಸ್​ ಕ್ಯಾಟಗರಿಗೆ ಸೇರಲಿದ್ದಾರೆ.

ಏನಿದು ಗ್ರೇ ಡಿವೋರ್ಸ್:? ಇದು ನಮ್ಮ ದೇಶಕ್ಕೆ ಹೊಸ ಪದ. ತಲೆ ಕೂದಲು ಗ್ರೇ ಬಣ್ಣಕ್ಕೆ ತಿರುಗುವ ಸಂದರ್ಭದಲ್ಲಿ ದಂಪತಿಗಳು ವಿಚ್ಛೇದನ ಪಡೆದುಕೊಳ್ಳುವುದಕ್ಕೆ ಗ್ರೇ ಡಿವೋರ್ಸ್ ಎನ್ನುತ್ತಾರೆ. ಅಂದರೆ 10-30 ವರ್ಷ ಸಂಸಾರ ನಡೆಸಿ ಬಳಿಕ ಬೇರೆಯಾಗಲು ಮುಂದಾಗುವ ಜೋಡಿಗಳು. ಇತ್ತೀಚೆಗೆ ಗ್ರೇ ವಿಚ್ಛೇದನವು ಭಾರತದಲ್ಲಿ ಬೇರೂರಲು ಪ್ರಾರಂಭಿಸಿದೆ.

ಈ ಬಗ್ಗೆ ವೇದ ಪುನರ್ವಸತಿ ಮತ್ತು ಸ್ವಾಸ್ಥ್ಯದ ಹಿರಿಯ ಮನಶಾಸ್ತ್ರಜ್ಞ ಆಶಿ ತೋಮರ್ ವಿವರಿಸಿದ್ದಾರೆ. "ಭಾರತದಲ್ಲಿ ವಯಸ್ಸಾದ ದಂಪತಿಗಳಲ್ಲಿ ವಿಚ್ಛೇದನಗಳ ಹೆಚ್ಚಳವು ವಿಕಸನಗೊಳ್ಳುತ್ತಿರುವ ಸಮಾಜ ಮತ್ತು ಕೆಲವು ಸಾಂಸ್ಕೃತಿಕ ವಿಚಾರಧಾರೆಗಳಿಂದಾಗಿರಬಹುದು. ಇಷ್ಟಪಟ್ಟೇ ಮದುವೆಯಾದರೂ ಬಳಿಕ ಸ್ವತಂತ್ರವಾಗಿ ಬದುಕಲು ಇಚ್ಛಿಸಿ ಗಂಡ-ಹೆಂಡತಿ ಬೇರೆಯಾಗುತ್ತಾರೆ. ಈಗಿನ ಮಹಿಳೆಯರು ಆರ್ಥಿಕವಾಗಿ ಸದೃಢ ಮತ್ತು ಸ್ವತಂತ್ರರಾಗಿದ್ದಾರೆ. ಹೀಗಾಗಿ ವಿವಾಹ ಸಂಬಂಧಗಳನ್ನು ತೊರೆದು ಬರುತ್ತಾರೆ. ಇದು ಹಿಂದೆ ಕಷ್ಟಕರವಾಗಿತ್ತು, "ಎಂದು ತೋಮರ್ ಹೇಳುತ್ತಾರೆ.

ಇದುವರೆಗೆ ಗ್ರೇ ಡಿವೋರ್ಸ್ ಪಡೆದವರು ಯಾರ್ಯಾರು:

ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್​.
ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್​. (File photo)

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್: 13 ವರ್ಷಗಳ ದಾಂಪತ್ಯದ ನಂತರ ಬಾಲಿವುಡ್ ನಟರಾದ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ವಿಚ್ಛೇದನ ಪಡೆದಿದ್ದರು. ಇವರ ಡಿವೋರ್ಸ್ ಬಹಳ ಹಿಂದಿನದಾದರೂ ಅವರ ಪ್ರತ್ಯೇಕತೆಯು ಗ್ರೇ ವಿಚ್ಛೇದನದ ವರ್ಗಕ್ಕೆ ಸೇರುತ್ತದೆ. ಸೈಫ್‌ಗಿಂತ 12 ವರ್ಷ ದೊಡ್ಡವರಾಗಿದ್ದ ಅಮೃತಾ ಡಿವೋರ್ಸ್ ನಂತರ ಜೀವನದಲ್ಲಿ ಒಂಟಿ ಮಹಿಳೆಯಾಗಿ ತಮ್ಮ ಭಾವನಾತ್ಮಕ ಮತ್ತು ಸಾಮಾಜಿಕ ಸವಾಲುಗಳನ್ನು ಎದುರಿಸಿದರು. ಆದರೆ ಸೈಫ್ ಕರೀನಾ ಕಪೂರ್ ಅವರನ್ನು ಮದುವೆಯಾದರು.

ಕಮಲ್ ಹಾಸನ್ ಮತ್ತು ಸಾರಿಕಾ ಠಾಕೂರ್ ತಮ್ಮ ಕಿರಿಯ ಮಗಳೊಂದಿಗೆ
ಕಮಲ್ ಹಾಸನ್ ಮತ್ತು ಸಾರಿಕಾ ಠಾಕೂರ್ ತಮ್ಮ ಕಿರಿಯ ಮಗಳೊಂದಿಗೆ (File photo)

ಕಮಲ್ ಹಾಸನ್ ಮತ್ತು ಸಾರಿಕಾ: ಅಪ್ರತಿಮ ನಟ ಕಮಲ್ ಹಾಸನ್ ಮತ್ತು ನಟಿ ಸಾರಿಕಾ ಠಾಕೂರ್ ಅವರು 16 ವರ್ಷ ಸಂಸಾರ ನಡೆಸಿ ಓರ್ವ ಮಗಳನ್ನು(ಶ್ರುತಿ ಹಾಸನ್​) ಪಡೆದು 2004ರಲ್ಲಿ ಬೇರೆಯಾದರು. ಡಿವೋರ್ಸ್ ಬಳಿಕ ನಟಿ ಸಾರಿಕಾ ಠಾಕೂರ್​ ಅಕ್ಷರಾ ಹಾಸನ್​ಗೆ ಜನ್ಮ ನೀಡಿದರು.​ ತನ್ನ ಜೀವನವನ್ನು ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಪುನರ್​ನಿರ್ಮಾಣ ಮಾಡಲು ಸಾರಿಕಾ ವಿಚ್ಛೇದನ ಪಡೆದರು ಎಂದು ವರದಿಯಾಗಿದೆ.

ಓಂ ಪುರಿ ಮತ್ತು ನಂದಿತಾ ಪುರಿ
ಓಂ ಪುರಿ ಮತ್ತು ನಂದಿತಾ ಪುರಿ (File photo)

ಓಂ ಪುರಿ ಮತ್ತು ನಂದಿತಾ ಪುರಿ: ಈ ದಂಪತಿ ತಮ್ಮ 26 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದ್ದಾರೆ. ಅವರ ಸಂಬಂಧವು ಹೊರಗಿನಿಂದ ಉತ್ತಮವಾಗಿ ತೋರುತ್ತಿತ್ತು. ಆದರೆ ಕಾಲಾನಂತರದಲ್ಲಿ ಕಾಣಿಸಿಕೊಂಡ ವೈಯಕ್ತಿಕ ಭಿನ್ನಾಭಿಪ್ರಾಯಗಳ ಭಾರದಿಂದ ಸಂಬಂಧ ಮುರಿದುಹೋಯಿತು.

ಇದನ್ನೂ ಓದಿ: ಸಲ್ಮಾನ್ ಖಾನ್‌ಗೆ ಜೀವ ಬೆದರಿಕೆ ವಿಚಾರ: ಜೆಮ್‌ಶೆಡ್‌ಪುರದ ವ್ಯಕ್ತಿ ಬಂಧಿಸಿದ ಮುಂಬೈ ಪೊಲೀಸರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.