ETV Bharat / entertainment

ಅಡ್ಡಗಟ್ಟಿದ ಫೋಟೋಗ್ರಾಫರ್​​ಗಳ ಮೇಲೆ ಕೋಪಗೊಂಡ ರಣ್​ಬೀರ್​ ಕಪೂರ್​​, ಆಲಿಯಾ ಭಟ್​​​: ವಿಡಿಯೋ - RANBIR KAPOOR

ಪಾಪರಾಜಿಗಳ ವರ್ತನೆಗೆ ರಾಲಿಯಾ ದಂಪತಿ ಅಸಮಾಧಾನಗೊಂಡಿದ್ದು, ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ.

Ranbir Kapoor
ನಟ ರಣ್​ಬೀರ್​ ಕಪೂರ್ (Photo source: ANI)
author img

By ETV Bharat Entertainment Team

Published : Oct 26, 2024, 4:56 PM IST

ಬಾಲಿವುಡ್​ನ ಜನಪ್ರಿಯ ತಾರಾ ದಂಪತಿ ರಣ್​​ಬೀರ್ ಕಪೂರ್ ಹಾಗೂ ಆಲಿಯಾ ಭಟ್​ಗೆ ಸಂಬಂಧಿಸಿದಂತೆ ಪಾಪರಾಜಿಗಳ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​​ ಸದ್ದು ಮಾಡುತ್ತಿದೆ. ಆಲಿಯಾ ಅವರ ತಾಯಿ ಸೋನಿ ರಜ್ದಾನ್ ಅವರ ಜನ್ಮದಿನವನ್ನು ಆಚರಿಸುವ ಸಲುವಾಗಿ ಅಕ್ಟೋಬರ್ 25ರಂದು ಹೊರಬಂದಿದ್ದರು. ಆದ್ರೆ ಪಾಪರಾಜಿಗಳ ವರ್ತನೆಗೆ ರಾಲಿಯಾ ದಂಪತಿ ಕೋಪಗೊಂಡಿದ್ದಾರೆ.

ಆಲಿಯಾ ಭಟ್​ ಬೊಟೊಕ್ಸ್‌ನಿಂದ ಭಾಗಶಃ ಪಾರ್ಶ್ವವಾಯುವಿಗೆ ಒಳಗಾಗಿದ್ದಾರೆ ಎಂಬ ವದಂತಿಗಳೊಂದಿಗೆ ಪ್ರಾರಂಭವಾದ ಅವರ ದಿನ ರಣ್​​ಬೀರ್ ಕಪೂರ್​ ತಮ್ಮ ಶಾಂತತೆಯನ್ನು ಕಳೆದುಕೊಳ್ಳುವುದರೊಂದಿಗೆ ಕೊನೆಗೊಂಡಿತು. ರೆಸ್ಟೋರೆಂಟ್‌ನಿಂದ ಹೊರಬರುವಾಗ ಪಾಪರಾಜಿಗಳ ಗುಂಪು ಮುಗಿಬಿದ್ದಿದ್ದು, ರಣ್​ಬೀರ್​​ ಕಪೂರ್​​ ರೊಚ್ಚಿಗೆದ್ದಿದ್ದಾರೆ. ಆಲಿಯಾ ಪ್ರತಿಕ್ರಿಯಿಸದೇ, ಸಿಟ್ಟನ್ನು ಸಹಿಸಿಕೊಂಡು ಮುನ್ನಡೆದಿದ್ದಾರೆ.

ಇಂಟರ್​ನೆಟ್​ನಲ್ಲಿ ಶರವೇಗದಲ್ಲಿ ವೈರಲ್​ ಆಗುತ್ತಿರುವ ವಿಡಿಯೋದಲ್ಲಿ, ರಣ್​​ಬೀರ್ - ಆಲಿಯಾ ಮುಂಬೈನ ಪಾಪ್ಯುಲರ್​ ರೆಸ್ಟೋರೆಂಟ್​ನಿಂದ ಹೊರಡುತ್ತಿರುವುದನ್ನು ಕಾಣಬಹುದು. ಅಲ್ಲಿ ಪಾಪರಾಜಿಗಳು ಫೋಟೋ ವಿಡಿಯೋ ಸೆರೆಹಿಡಿಯುವ ಭರದಲ್ಲಿ ಜೋಡಿಯ ಮಾರ್ಗವನ್ನು ಅಡ್ಡಗಟ್ಟಿದ್ದಾರೆ. ಶಾಂತ ವರ್ತನೆಗೆ ಹೆಸರುವಾಸಿಯಾಗಿರುವ ಸೂಪರ್​ ಸ್ಟಾರ್ ರಣ್​​​ಬೀರ್ ಕಪೂರ್​​ ಅವರು ಗೊಂದಲದ ವಾತಾವರಣದಲ್ಲಿ ತಮ್ಮ ಶಾಂತತೆಯನ್ನು ಕಳೆದುಕೊಂಡರು. 'ಕ್ಯಾ ಕರ್ ರಹೇ ಹೋ ಆಪ್ ಲೋಗ್?' (ನೀವೇನು ಮಾಡುತ್ತಿದ್ದೀರಾ?) ಎಂದು ಸಿಟ್ಟಿನಿಂದ ಕೇಳುತ್ತಾ ತಮ್ಮ ಅಸಮಧಾನ ಹೊರಹಾಕಿದರು. ಕಾರ್​ ಡೋರ್ ಬಳಿಯಿದ್ದ ಫೋಟೋಗ್ರಾಫರ್​ನನ್ನು ತಮ್ಮ ಕೈಯಿಂದ ಎಳೆದು, ಸೈಡಿಗಟ್ಟಿ ಕಾರಿನೊಳಗೆ ಆಲಿಯಾರನ್ನು ಕಳುಹಿಸಿದರು. ನಂತರ ತಾವು ಕೂಡಾ ಒಳಹೋಗಿ ಕುಳಿತರು.

ಇದಕ್ಕೂ ಮುನ್ನ ರಣ್​​​ಬೀರ್ ಅವರು ಸಂಜಯ್ ಲೀಲಾ ಬನ್ಸಾಲಿ ಅವರ ಆಫೀಸ್​ ಬಳಿ ಕಾಣಿಸಿಕೊಂಡಿದ್ದು, ಮುಂದಿನ ಸಿನಿಮಾ ಬಗ್ಗೆ ಅಭಿಮಾನಿ ಬಳಗ ಸೇರಿದಂತೆ ಚಿತ್ರರಂಗದ ಗಣ್ಯರಲ್ಲಿ ಉತ್ಸಾಹ ಹುಟ್ಟುಹಾಕಿದೆ. ಸ್ಟೈಲಿಶ್ ಬೀಜ್ ಟೀ-ಶರ್ಟ್, ಜೀನ್ಸ್ ಮತ್ತು ಟ್ರೆಂಡಿ ಆ್ಯಕ್ಸಸರಿಸ್​ನಲ್ಲಿ ಕಾಣಿಸಿಕೊಂಡ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ 'ಲವ್ ಅಂಡ್ ವಾರ್‌'ಗೆ ಸಂಬಂಧಿಸಿದ ಮೀಟಿಂಗ್‌ಗೆ ಹೋಗುವಾಗ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಈ ಚಿತ್ರದಲ್ಲಿ ಪತ್ನಿ ಆಲಿಯಾ ಭಟ್​ ಹಾಗೂ ಬಹುಬೆಡಿಕೆ ಟನ ನಟ ವಿಕ್ಕಿ ಕೌಶಲ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಈ ಪ್ರೊಜೆಕ್ಟ್​​​ ಮೂಲಕ ರಣ್​​ಬೀರ್ ಮತ್ತು ಬನ್ಸಾಲಿ ಮತ್ತೊಮ್ಮೆ ಸೇರಿ ಕೆಲಸ ಮಾಡಲಿದ್ದಾರೆ. 2007ರ ಸಾವರಿಯಾ ಚಿತ್ರದ ನಂತರ ಬರುತ್ತಿರುವ ಬನ್ಸಾಲಿ ಕಪೂರ್​ ಕಾಂಬಿನೇಶನ್​ನ ಸಿನಿಮಾವಾದ ಹಿನ್ನೆಲೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ಇದನ್ನೂ ಓದಿ: 'ಈ ಅವಕಾಶ ದುರ್ಬಳಕೆಯಾಗುತ್ತಿದೆ ಎಂದನಿಸುತ್ತದೆಯೇ?' ಬಿಗ್​ ಬಾಸ್​ ಮನೆಯಲ್ಲಿ ಯೋಗರಾಜ್​ ಭಟ್​ ಈ ಪ್ರಶ್ನೆ ಎತ್ತಿದ್ಯಾಕೆ?

ಆಲಿಯಾ ಭಟ್ ಸೌಂದರ್ಯ ವೃದ್ಧಿಗಾಗಿ ಬೊಟೊಕ್ಸ್ ಟ್ರೀಟ್​​ಮೆಂಟ್​ ಮಾಡಿಸಿಕೊಂಡಿದ್ದಾರೆ ಎಂದು ಹಲವು ವದಂತಿಗಳು ಹರಡಿವೆ. ಈ ಬಗ್ಗೆ ತಮ್ಮ ಹತಾಶೆ ವ್ಯಕ್ತಪಡಿಸಿದ್ದಾರೆ. ಕಾಸ್ಮೆಟಿಕ್ ವಿಧಾನಗಳ ಬಗ್ಗೆ ಪ್ರತಿಯೊಬ್ಬರ ಆಯ್ಕೆಗಳನ್ನು ಗೌರವಿಸುತ್ತೇನೆ ಎಂದು ಆಲಿಯಾ ಹೇಳಿದ್ದಾರೆ. ಊಹಾಪೂಹಗಳು "ಹಾಸ್ಯಾಸ್ಪದವನ್ನೂ ಮೀರಿವೆ" ಎಂದು ತಿಳಿಸಿದ್ದಾರೆ. ತಪ್ಪುದಾರಿಗೆಳೆಯುವ ವಿಷಯಗಳು, ವದಂತಿಗಳ ಬಗ್ಗೆ ತಮ್ಮ ಅಸಮಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ನನಸಾಯ್ತು ಜಗ್ಗೇಶ್ 40 ವರ್ಷಗಳ ಹಿಂದಿನ ಕನಸು: ಸಿನಿಮಾ ಇಂಡಸ್ಟ್ರಿ ಸೇವೆಗಾಗಿ 'ಜಗ್ಗೇಶ್ ಸ್ಟುಡಿಯೋಸ್'

ಇನ್ನು ಜೋಡಿಯ ಸಿನಿಮಾ ವಿಚಾರ ಗಮನಿಸೋದಾದರೆ, ಆಲಿಯಾ ತಮ್ಮ ಬಹುನಿರೀಕ್ಷಿತ ಆಲ್ಫಾ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಶಾರ್ವರಿ ವಾಘ್ ಜೊತೆ ಶೂಟಿಂಗ್​ನಲ್ಲಿ ನಿರತರಾಗಿದ್ದಾರೆ. ರಣ್​ಬೀರ್​​ ಪ್ರಸ್ತುತ ನಿತೇಶ್ ತಿವಾರಿ ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್​​ 'ರಾಮಾಯಣ'ದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸೌತ್ ಬ್ಯೂಟಿ ಸಾಯಿ ಪಲ್ಲವಿ ಸೀತೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.