ನವದೆಹಲಿ: ಗೇಣಿದಾರ ಹಾಗೂ ಸಣ್ಣ ರೈತರು ಸರ್ಕಾರದ ಪ್ರಯೋಜನಗಳನ್ನು ಪಡೆಯಲು ವಿಫಲರಾಗುತ್ತಿದ್ದಾರೆ. ಇಂತಹವರಿಗಾಗಿ ಸರ್ಕಾರ ಸ್ಪಷ್ಟವಾದ ನೀತಿಯೊಂದನ್ನು ರೂಪಿಸಬೇಕಾಗಿದೆ ಎಂಬುದು ತಜ್ಞರ ಆಗ್ರಹವಾಗಿದೆ. ಈ ವಿಷಯದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವ ತಜ್ಞರು, ಭೂ ಗುತ್ತಿಗೆ ಕಾಯ್ದೆಯ ಅನುಪಸ್ಥಿತಿಯಲ್ಲಿ, ಸಣ್ಣ ಹಿಡುವಳಿದಾರರು ಮತ್ತು ಸಣ್ಣ ರೈತರು ಬೆಳೆ ವಿಮೆ, ಕಿಸಾನ್ ಕ್ರೆಡಿಟ್ ಕಾರ್ಡ್ ಮತ್ತು ಇತರ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದಿಲ್ಲ.
ಈ ಬಗ್ಗೆ ಈಟಿವಿ ಭಾರತ್ ಜತೆ ಮಾತನಾಡಿರುವ ಕೃಷಿ ತಜ್ಞ ಧರ್ಮೇಂದ್ರ ಮಲಿಕ್, " ಸಣ್ಣ ಹಿಡುವಳಿದಾರರು ಅಥವಾ ಸಣ್ಣ ರೈತರು ಸರ್ಕಾರದ ಯೋಜನೆಗಳನ್ನು ಪಡೆಯುವಲ್ಲಿ ಯಾವಾಗಲೂ ವಿಫಲರಾಗುತ್ತಾರೆ. ಆಂಧ್ರ ಪ್ರದೇಶ ಸರ್ಕಾರವು ಕೆಲವು ವರ್ಷಗಳ ಹಿಂದೆ ಅಂತಹ ರೈತರನ್ನು ಗುರುತಿಸಲು ಮತ್ತು ವಿಶಿಷ್ಟ ಗುರುತಿನ ಚೀಟಿಗಳನ್ನು ನೀಡಲು ಉಪಕ್ರಮವನ್ನು ತೆಗೆದುಕೊಂಡಿತು. ಆದರೆ ಭಾರತದ ಉಳಿದ ಭಾಗದಲ್ಲಿ ಇಂತಹ ಯಾವುದೇ ನೀತಿಗಳು ಜಾರಿಗೆ ಬಂದಿಲ್ಲ. ಹೀಗಾಗಿ ಗೇಣಿದಾರ ರೈತರು ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಬಹುತೇಕ ಭೂಮಾಲೀಕರು ಸರ್ಕಾರದ ಎಲ್ಲ ಸವಲತ್ತುಗಳನ್ನು ಪಡೆಯುತ್ತಾರೆ ಮತ್ತು ಹಿಡುವಳಿದಾರರು ಫಸಲ್ ಬಿಮಾ ಯೋಜನೆ, ಕೆಸಿಸಿ ಮತ್ತು ಸಬ್ಸಿಡಿಯಂತಹ ಪ್ರಯೋಜನಗಳಿಂದ ದೂರವೇ ಉಳಿಯುತ್ತಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಭೂ ಮಾಲೀಕರು ಮತ್ತು ಗೇಣಿದಾರ ರೈತರ ನಡುವೆ ಭೂ ಗುತ್ತಿಗೆ ಒಪ್ಪಂದ ಇರುವುದಿಲ್ಲ ಎಂದು ಮಲೀಕ್ ಹೇಳಿದ್ದಾರೆ.
ಸ್ಪಷ್ಟ ನೀತಿ ಜಾರಿಯಾಗದೇ ಬಗೆ ಹರಿಯದು ಸಮಸ್ಯೆ: ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಮತ್ತೊಬ್ಬ ತಜ್ಞ ನರೇಶ್ ಸಿರೋಹಿ ಮಾತನಾಡಿ, ನಾವು ಈ ಬಗ್ಗೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಭೂ ಗುತ್ತಿಗೆ ಒಪ್ಪಂದವನ್ನು ಕಾನೂನು ವ್ಯಾಪ್ತಿಗೆ ತರದೇ ಈ ಸಮಸ್ಯೆಯ ಪರಿಹಾರ ಸಾಧ್ಯವಿಲ್ಲ ಎಂದಿದ್ದಾರೆ. ಈ ಬಗ್ಗೆ ಯಾವುದೇ ಸೂಕ್ತ ಕಾನೂನು ಇರದೇ ಇರುವುದರಿಂದ ಗೇಣಿದಾರ ರೈತರು ಮತ್ತು ಭೂಮಾಲೀಕರು ಹಲವಾರು ಸಮಸ್ಯೆಗಳನ್ನು ಮತ್ತು ವಿವಾದಗಳನ್ನು ಎದುರಿಸಬೇಕಾಗುತ್ತದೆ.
2021-22 ರಿಂದ 2025-26 ರ ಅವಧಿಯಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್ರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಾಗಿ ಒಟ್ಟು 69515.71 ಕೋಟಿ ರೂ.ಗಳ ಕೊಡುಗೆಯನ್ನು ಕೇಂದ್ರ ಸರ್ಕಾರ ನೀಡಿದೆ. ಈ ಯೋಜನೆಯಡಿ ತಾಂತ್ರಿಕ ಉಪಕ್ರಮಗಳಿಗೆ ಧನಸಹಾಯ ಮಾಡಲು ಒಟ್ಟು 824.77 ಕೋಟಿ ರೂಪಾಯಿಗಳ ಒಟ್ಟು ಕಾರ್ಪಸ್‌ನೊಂದಿಗೆ ಮಾಹಿತಿ ಮತ್ತು ತಂತ್ರಜ್ಞಾನಕ್ಕಾಗಿ ನಿಧಿ ರಚಿಸಲು ಸರ್ಕಾರ ಅನುಮೋದನೆ ನೀಡಿದೆ ಎಂದು ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವ ರಾಮನಾಥ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ.
2023-24ರಲ್ಲಿ ಈ ಯೋಜನೆಯಡಿ ಬೆಳೆ ವಿಮೆಗಾಗಿ ದಾಖಲಾದ ರೈತರ ಅರ್ಜಿಗಳ ಸಂಖ್ಯೆ 14,29,45,872 ಆಗಿದ್ದರೆ, ಕ್ಲೈಮ್‌ಗಳು 15,504.87 ಕೋಟಿ ರೂ. ಆಗಿದೆ ಎಂದು ಅಂಕಿ- ಸಂಖ್ಯೆಗಳಿಂದ ಗೊತ್ತಾಗುತ್ತಿದೆ.
ಇದನ್ನು ಓದಿ: ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲದ ಮಿತಿ 5 ಲಕ್ಷಕ್ಕೆ ಹೆಚ್ಚಳ: ಆನ್ಲೈನ್ ಹಾಗೂ ಆಫ್ಲೈನ್ ಅರ್ಜಿ ಸಲ್ಲಿಕೆ ಹೇಗೆ?