ಕರ್ನಾಟಕ

karnataka

ETV Bharat / entertainment

'ಇಳಯರಾಜ ಬಯೋಪಿಕ್' ಲಾಂಚ್ ಈವೆಂಟ್: ಧನುಷ್ ಭಾವುಕ; ಶೀಘ್ರದಲ್ಲೇ ಶೂಟಿಂಗ್​ ಶುರು - Ilaiyaraaja Biopic

ಚೆನ್ನೈನಲ್ಲಿಂದು 'ಇಳಯರಾಜ ಬಯೋಪಿಕ್' ಲಾಂಚ್​ ಈವೆಂಟ್​ ಜರುಗಿತು.

Ilaiyaraaja Biopic Launch event
'ಇಳಯರಾಜ ಬಯೋಪಿಕ್' ಲಾಂಚ್ ಈವೆಂಟ್

By ETV Bharat Karnataka Team

Published : Mar 20, 2024, 3:27 PM IST

Updated : Mar 20, 2024, 4:14 PM IST

ಸೌತ್ ಸೂಪರ್ ಸ್ಟಾರ್ ಧನುಷ್ ನಟನೆಯ ಮುಂದಿನ ಬಹುನಿರೀಕ್ಷಿತ ಪ್ರಾಜೆಕ್ಟ್ 'ಇಳಯರಾಜ ಬಯೋಪಿಕ್'. ಸಂಗೀತ ಮಾಂತ್ರಿಕ ಇಳಯರಾಜ ಅವರ ಪಾತ್ರಕ್ಕೆ ಜೀವ ತುಂಬಲು ದಕ್ಷಿಣದ ಖ್ಯಾತ ನಟ ಸಜ್ಜಾಗಿದ್ದಾರೆ. ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ.

ಇಂದು ಚೆನ್ನೈನಲ್ಲಿ ಮೂವಿ ಲಾಂಚ್​ ಈವೆಂಟ್​​ ಜರುಗಿತು. ಸಮಾರಂಭದಲ್ಲಿ, ದಿಗ್ಗಜ ಸಂಗೀತಗಾರನ ಪಾತ್ರದಲ್ಲಿ ನಟಿಸುವ ಬಗ್ಗೆ ಮಾತನಾಡುವ ವೇಳೆ ಧನುಷ್ ಭಾವುಕರಾಗಿದ್ದಾರೆ. ಈವೆಂಟ್​ನ ಫೋಟೋ-ವಿಡಿಯೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ.

ಕಾರ್ಯಕ್ರಮದಲ್ಲಿ ಧನುಷ್ ತಮ್ಮ ಪಾತ್ರದ ಬಗ್ಗೆ ಮಾತನಾಡುತ್ತ ಭಾವುಕರಾದರು. ತಮಿಳಿನಲ್ಲಿ ಮಾತನಾಡಿದ ನಟ, "ಇಳಯರಾಜ ಅವರ ಸಂಗೀತವು ಅದೆಷ್ಟೋ ಜನರ ಬದುಕಲ್ಲಿ ನಿದ್ರೆಯ ಔಷಧದಂತೆ ಕೆಲಸ ಮಾಡುತ್ತದೆ. ಆದರೆ ನಾನು ಇಳಯರಾಜ ಅವರ ಪಾತ್ರವನ್ನು ನಿರ್ವಹಿಸಿದರೆ ಹೇಗಿರುತ್ತದೆ ಎಂದು ಯೋಚಿಸುತ್ತಾ ನಿದ್ರೆಯಿಲ್ಲದ ಅನೇಕ ರಾತ್ರಿಗಳನ್ನು ಕಳೆದಿದ್ದೇನೆ. ನನ್ನ ಜೀವಿತಾವಧಿಯಲ್ಲಿ ನಾನು 2 ಬಯೋಪಿಕ್​ಗಳಲ್ಲಿ ನಟಿಸಲು ಬಯಸುತ್ತೇನೆ. ಒಬ್ಬರು ರಜನಿಕಾಂತ್, ಇನ್ನೊಬ್ಬರು ಇಳಯರಾಜ. ಅವರು ಅಪಾರ ಸಾಧನೆಗೈದಿದ್ದಾರೆ. ಇದು ನನಗೆ ಹೆಮ್ಮೆಯ ವಿಷಯ" ಎಂದು ತಿಳಿಸಿದರು.

ಈ ಪ್ರೊಜೆಕ್ಟ್​ ಅನ್ನು ಕಳೆದ ವರ್ಷ ಘೋಷಿಸಲಾಯಿತು. 2025ರ ಮೇನಲ್ಲಿ ಸಿನಿಮಾ ತೆರೆಕಾಣುವ ನಿರೀಕ್ಷೆಯಿದೆ. ಇದು ಧನುಷ್ ಮತ್ತು ಅರುಣ್ ಮಾಥೇಶ್ವರನ್ ಕಾಂಬಿನೇಶನ್​​ನ ಎರಡನೇ ಪ್ರೊಜೆಕ್ಟ್​​. ಇತ್ತೀಚೆಗಷ್ಟೇ ತೆರೆಕಂಡು ಯಶಸ್ವಿಯಾದ 'ಕ್ಯಾಪ್ಟನ್ ಮಿಲ್ಲರ್'ನಲ್ಲಿ ಜೊತೆಯಾಗಿ ಕೆಲಸ ಮಾಡಿದ್ದರು.

ಇದನ್ನೂ ಓದಿ:'ಆರ್​ಸಿ 16' ಮುಹೂರ್ತ: ರಾಮ್ ಚರಣ್ ಜೊತೆ ಜಾಹ್ನವಿ- ವಿಡಿಯೋ ನೋಡಿ

ಸಮಾರಂಭದಲ್ಲಿ ಧನುಷ್​, ಇಳಯರಾಜ ಸೇರಿದಂತೆ ಚಿತ್ರತಂಡ ಮಾತ್ರವಲ್ಲದೇ ದಕ್ಷಿಣದ ಪ್ರಸಿದ್ಧ ನಟ ಕಮಲ್ ಹಾಸನ್ ಕೂಡ ಉಪಸ್ಥಿತರಿದ್ದರು. ಸಿನಿಮಾ ಲಾಂಚ್​ ಈವೆಂಟ್​ನಲ್ಲಿ, ಚಿತ್ರದ ಮೊದಲ ಪೋಸ್ಟರ್ ಅನ್ನೂ ಅನಾವರಣಗೊಳಿಸಲಾಯಿತು. ತಮ್ಮ ಅಧಿಕೃತ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್ ಹಂಚಿಕೊಂಡ ಧನುಷ್, "ಗೌರವ" ಎಂಬರ್ಥದ ಕ್ಯಾಪ್ಷನ್​ ಕೊಟ್ಟಿದ್ದಾರೆ.

ಇದನ್ನೂ ಓದಿ:ಮಾ.20ಕ್ಕೆ ಸೆಟ್ಟೇರಲಿದೆ ಸಂಗೀತ ಮಾಂತ್ರಿಕ ಇಳಯರಾಜ ಜೀವನಚರಿತ್ರೆ

ನಟ ಧನುಷ್‌ ಅವರ ಇತರೆ ಪ್ರೊಜೆಕ್ಟ್​​​ ಗಮನಿಸಿದರೆ, ಶೇಖರ್ ಕಮ್ಮುಲ ನಿರ್ದೇಶನದ 'ಕುಬೇರ' ಚಿತ್ರವನ್ನು ಹೊಂದಿದ್ದಾರೆ. ಇದರಲ್ಲಿ ನಾಗಾರ್ಜುನ ಅಕ್ಕಿನೇನಿ ಮತ್ತು ರಶ್ಮಿಕಾ ಮಂದಣ್ಣ ಕೂಡ ಪ್ರಮುಖ ಪಾತ್ರ ವಹಿಸಲಿದ್ದಾರೆ. ಅಲ್ಲದೇ, ಪ್ರಸ್ತುತ ತಮ್ಮ ನಿರ್ದೇಶನದ ಎರಡು ಚಿತ್ರಗಳಾದ ನಿಲವುಕು ಎನ್ ಮೇಲ್ ಎನ್ನದಿ ಕೋಬಮ್ ಮತ್ತು ರಾಯನ್ ಎಂಬ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತೇರೆ ಇಷ್ಕ್ ಮೇ ನಟನ ಮತ್ತೊಂದು ಸಿನಿಮಾ. 2023ರ ಜೂನ್​ನಲ್ಲಿ ಘೋಷಿಸಲಾಗಿದ್ದು, ಇನ್ನೂ ಸೆಟ್ಟೇರಿಲ್ಲ. 'ತೇರೆ ಇಷ್ಕ್ ಮೇ' ಧನುಷ್ ಮತ್ತು ಆನಂದ್ ಎಲ್ ರೈ ಅವರ ಮೂರನೇ ಸಿನಿಮಾ. ಇದಕ್ಕೂ ಮುನ್ನ ರಾಂಝಾನಾ (2013) ಮತ್ತು ಅತ್ರಂಗಿ ರೇ (2021) ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

Last Updated : Mar 20, 2024, 4:14 PM IST

ABOUT THE AUTHOR

...view details