ETV Bharat / bharat

ಪೊಲೀಸ್​​​​​​​ ಪರೀಕ್ಷೆಗೆ ತಯಾರಿ ಮಾಡುತ್ತಿದ್ದ ಐವರ ಮೇಲೆ ಹರಿದ ಬಸ್​: ಮೂವರ ದುರ್ಮರಣ - ST BUS HIT 5 PEOPLE

ಪೊಲೀಸ್​ ನೌಕರಿ ಕನಸು ಕಾಣುತ್ತಿದ್ದ ಐವರ ಮೇಲೆ ಸಾರಿಗೆ ಬಸ್​ ಹರಿದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

MH Beed Accident speeding ST bus crushed 3 youth
ಪೊಲೀಸ್​​​​​​​ ಪರೀಕ್ಷೆಗೆ ತಯಾರಿ ಮಾಡುತ್ತಿದ್ದ ಐವರ ಮೇಲೆ ಹರಿದ ಬಸ್​: ಮೂವರ ದುರ್ಮರಣ (ETV Bharat)
author img

By ETV Bharat Karnataka Team

Published : Jan 19, 2025, 11:59 AM IST

ಬೀಡ್​, ಮಹಾರಾಷ್ಟ್ರ: ಪೊಲೀಸ್​ ನೇಮಕಾತಿ ಪರೀಕ್ಷೆಗೆ ತಯಾರಿ ಮಾಡುತ್ತಿದ್ದ ಐವರ ಮೇಲೆ ಹರಿದ ಮಹಾರಾಷ್ಟ್ರ ಸಾರಿಗೆ ಬಸ್​​. ಸ್ಥಳದಲ್ಲೇ ಮೂವರು ಪರೀಕ್ಷಾರ್ಥಿಗಳ ಸಾವು. ಇದರಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಇವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀಡ್​ ತಾಲೂಕಿನ ಘೋಡ್ಕ ರಾಜೂರಿ ಬಳಿ ನಡೆದಿದೆ.

ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೀಡಿನಿಂದ ಪರ್ಭಾನಿಗೆ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಪೊಲೀಸ್ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವಕರಿಗೆ ಡಿಕ್ಕಿ ಹೊಡೆದಿದೆ. ಅವರಲ್ಲಿ ಇಬ್ಬರು ವೇಗವಾಗಿ ಬರುತ್ತಿದ್ದ ಬಸ್​​​​ ನೋಡಿ ಬೇರೆ ಕಡೆ ಜಿಗಿದು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಇನ್ನು ಮೂವರಿಗೆ ಅಪಾಯದಿಂದ ಪಾರಾಗಲು ಸಾಧ್ಯವಾಗಿಲ್ಲ. ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಮೃತ ಮೂವರು ಯುವಕರ ಶವಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸುಬೋಧ್ (ಬಾಲು) ಬಾಬಾಸಾಹೇಬ್ ಮೋರೆ (20), ವಿರಾಟ್ ಬಬ್ರುವಾನ್ ಘೋಡ್ಕೆ (19) ಮತ್ತು ಓಂ ಸುಗ್ರೀವ್ ಘೋಡ್ಕೆ (20) ಮೃತ ಯುವಕರಾಗಿದ್ದಾರೆ. ಉಳಿದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ: ಸೈಫ್ ಅಲಿ ಖಾನ್ ಮೇಲೆ ಚಾಕು ಇರಿತ ಪ್ರಕರಣ: ಆರೋಪಿ ಅರೆಸ್ಟ್, ಬಾಂಗ್ಲಾದೇಶದಿಂದ ಅಕ್ರಮವಾಗಿ ಬಂದಿರುವ ಶಂಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.