ಕರ್ನಾಟಕ

karnataka

ETV Bharat / entertainment

ಹಂಗೇರಿಯಲ್ಲಿ ಉಪೇಂದ್ರ ಸಿನಿಮಾದ ಸಂಗೀತ ಸಂಯೋಜನೆ: ಸಖತ್​ ಥ್ರಿಲ್ಲಿಂಗ್​ ಆಗಿದೆ 'ಸೌಂಡ್​ ಆಫ್​ ಯಐ' - Sound of UI

ಟೈಟಲ್​, ಟೀಸರ್, ಟ್ರೋಲ್ ಸಾಂಗ್​​ನಿಂದಲೇ ಪ್ರೇಕ್ಷಕರಲ್ಲಿ ಕೌತುಕ ಹುಟ್ಟಿಸಿರುವ 'ಯು ಐ' ಚಿತ್ರತಂಡ ತನ್ನ ಹಾಡುಗಳಿಗೆ ಸಾಕಷ್ಟು ಒತ್ತು ಕೊಟ್ಟಿದೆ. ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಚಿತ್ರತಂಡ ಹಲವು ದಿನಗಳ ಕಾಲ ಇದ್ದು ಅಲ್ಲೇ ಸಂಗೀತ ಸಂಯೋಜನೆ ಮಾಡಿಕೊಂಡು ಬಂದಿದೆ. ಸದ್ಯ ವಿಡಿಯೋವೊಂದನ್ನು ಅನಾವರಣಗೊಳಿಸಿ ನೆಟ್ಟಿಗರ ಕುತೂಹಲ ಹೆಚ್ಚಿಸಿದೆ.

'Sound of UI'
ಹಂಗೇರಿಯಲ್ಲಿ ಉಪೇಂದ್ರ ಸಿನಿಮಾದ ಸಂಗೀತ ಸಂಯೋಜನೆ (ETV Bharat)

By ETV Bharat Karnataka Team

Published : Aug 24, 2024, 5:32 PM IST

ಕನ್ನಡ ಚಿತ್ರರಂಗವೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಕೊಂಡಿರುವ ಹಿನ್ನೆಲೆ, ಮತ್ತಷ್ಟು ಗುಣಮಟ್ಟದ ಸಿನಿಮಾಗಳನ್ನು ಮಾಡಬೇಕೆನ್ನೋದು ಪ್ರತೀ ನಟ, ನಿರ್ದೇಶಕ ಹಾಗೂ ನಿರ್ಮಾಪಕರ ಕನಸು. ಅದರಂತೆ ಸ್ಯಾಂಡಲ್​​​ವುಡ್​ ಮಾತ್ರವಲ್ಲದೇ ಸೌತ್​ ಸಿನಿಮಾ ಇಂಡಸ್ಟ್ರಿಯಲ್ಲೇ ಬುದ್ಧಿವಂತ ನಿರ್ದೇಶಕ ಹಾಗೂ ನಟ ಎಂದು ಕರೆಸಿಕೊಳ್ಳುವ ರಿಯಲ್ ಸ್ಟಾರ್ ಉಪೇಂದ್ರ ಅವರೀಗ ''ಯು ಐ'' ಎಂಬ ಕುತೂಹಲಕಾರಿ ಶೀರ್ಷಿಕೆಯ ಚಿತ್ರದಲ್ಲಿ ನಟಿಸುವ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರತಂಡದಿಂದ ಹೊಸ ಪ್ರಮೋಶನಲ್​ ಕಂಟೆಂಟ್​ ಹೊರಬಿದ್ದಿದ್ದು, ಪ್ರೇಕ್ಷಕರ ಸಿನಿಮಾ ಮೇಲಿನ ಕುತೂಹಲ ದ್ವಿಗುಣಗೊಂಡಿದೆ.

ಟೈಟಲ್​, ಟೀಸರ್, ಟ್ರೋಲ್ ಸಾಂಗ್​​ನಿಂದಲೇ ಪ್ರೇಕ್ಷಕರಲ್ಲಿ ಕೌತುಕ ಹುಟ್ಟಿಸಿರುವ 'ಯು ಐ' ಚಿತ್ರತಂಡ ತನ್ನ ಹಾಡುಗಳಿಗೆ ಎಷ್ಟು ಒತ್ತು ಕೊಟ್ಟಿದೆ ಅನ್ನೋದಿಕ್ಕೆ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ಹಲವು ದಿನಗಳ ಕಾಲ ಇದ್ದು, ಅಲ್ಲೇ ಸಂಗೀತ ಸಂಯೋಜನೆ ಮಾಡಿಕೊಂಡು ಬಂದಿದೆ. ಅಲ್ಲಿ ಯುಐ ಬಿಜಿಎಂ ಹಾಗೂ ಕೆಲ ಹಾಡುಗಳನ್ನೂ ರೆಕಾರ್ಡಿಂಗ್ ಮಾಡಿಕೊಳ್ಳಲಾಗಿದೆ. ನೂರಾರು ವಾದ್ಯಗಳನ್ನು ಬಳಸಿ ಒಮ್ಮೆಲೆ ಸಂಗೀತ ನುಡಿಸಲಾಗಿದೆ. ಇದರ ವಿಡಿಯೋವನ್ನು ಚಿತ್ರತಂಡ ರಿಲೀಸ್ ಮಾಡಿದೆ. 'ಸೌಂಡ್​ ಆಫ್​ ಯಐ' ಶೀರ್ಷಿಕೆಯಡಿ ವಿಡಿಯೋವೊಂದನ್ನು ಚಿತ್ರತಂಡ ಅನಾವರಣಗೊಳಿಸಿದ್ದು, ಸಖತ್​ ಥ್ರಿಲ್ಲಿಂಗ್​​ ಆಗಿದೆ. ಈ ವಿಡಿಯೋ ಸಿನಿಮಾ ಮೇಲಿರುವ ಕುತೂಹಲ, ನಿರೀಕ್ಷೆಯನ್ನು ಹೆಚ್ಚಿಸಿದೆ.

ಬರೋಬ್ಬರಿ 7 ವರ್ಷಗಳ ಬಳಿಕ ಉಪೇಂದ್ರ ನಿರ್ದೇಶನ ಮಾಡಿರುವ 'ಯು ಐ' ಚಿತ್ರ ಅವರ ವೃತ್ತಿಬದುಕಿನ ವಿಶಿಷ್ಟ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಸದಾ ವಿಭಿನ್ನವಾಗೇ ಯೋಚಿಸುವ ಉಪೇಂದ್ರ ಅವರು ಯು ಐ ಚಿತ್ರದ ಮೂಲಕ ಒಂದು ಮೆಸೇಜ್ ಕೊಡಲು ಸಜ್ಜಾಗಿದ್ದಾರೆ. ಸದ್ಯ ಟ್ರೋಲ್ ಸಾಂಗ್​​ ಸಖತ್​​ ಸದ್ದು ಮಾಡಿದೆ. ಕರ್ನಾಟಕದಲ್ಲಿ ನಡೆದ ಘಟನೆ, ವಿವಾದಗಳನ್ನು ಈ ಹಾಡಿನಲ್ಲಿ ಹೇಳುವ ಮೂಲಕ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿರುವ ರಿಯಲ್ ಸ್ಟಾರ್ ತಮ್ಮ ಈ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಹಾಗೂ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಜೊತೆಗೂಡಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ:ಶಸ್ತ್ರಚಿಕಿತ್ಸೆಗೊಳಗಾದ ಸೂಪರ್​ ಸ್ಟಾರ್ ರವಿತೇಜ: 6 ವಾರ ಬೆಡ್ ರೆಸ್ಟ್​​ಗೆ ವೈದ್ಯರ ಸಲಹೆ - Ravi Teja Injury

ಇನ್ನು 'ಯು ಐ' ಸಿನಿಮಾದಲ್ಲಿ 3ಡಿ ಬಾಡಿ ಸ್ಕ್ಯಾನ್ ತಂತ್ರಜ್ಞಾನ ಬಳಸಿರೋದು ವಿಶೇಷ. ಸುಮಾರು 200 ಕ್ಯಾಮರಾಗಳನ್ನು ಬಳಸಿ ಶೂಟ್ ಮಾಡಲಾಗಿದೆ. ಈ ತಂತ್ರಜ್ಞಾನವನ್ನು ಜೇಮ್ಸ್ ಕ್ಯಾಮರಾನ್ 'ಅವತಾರ್ 2' ಸಿನಿಮಾಗೆ ಬಳಸಿದ್ದರು. ಅಷ್ಟೇ ಅಲ್ಲದೇ ಸುಮಾರು 14 ಸಾವಿರ ವಿಎಫ್‌ಎಕ್ಸ್ ಶಾಟ್ಸ್ ಅನ್ನು ಬಳಸಲಾಗಿದೆ.

ಇದನ್ನೂ ಓದಿ:ಇನ್​​​ಸ್ಟಾಗ್ರಾಮ್​ನಲ್ಲಿ ಪಿಎಂ ಮೋದಿ ಬಳಿಕ ಪ್ರಿಯಾಂಕಾ ಚೋಪ್ರಾರನ್ನು ಹಿಂದಿಕ್ಕಿದ ಶ್ರದ್ಧಾ ಕಪೂರ್​​: ಈಗ ನಂಬರ್ 1 ನಟಿ - Most Followed Indian actress

ಅಲ್ಲದೇ ಉಪ್ಪಿ ನಿರ್ದೇಶನದ ಸಿನಿಮಾಗಳಲ್ಲೇ 'ಯುಐ' ದುಬಾರಿ ಚಿತ್ರವಂತೆ. ಸಿನಿಮಾ ಬಜೆಟ್ ಸುಮಾರು 100 ಕೋಟಿ ರೂಪಾಯಿ. ಟಗರು, ಸಲಗ ಸಿನಿಮಾ ಬಳಿಕ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹಾಗೂ ನವೀನ್ ಮನೋಹರ್ ಜೊತೆ ಜಂಟಿಯಾಗಿ ನಿರ್ಮಾಣ ಮಾಡಿರುವ ಬಹುಕೋಟಿ ವೆಚ್ಚದ ಸಿನಿಮಾ ಇದಾಗಿದೆ. ಹಲವು ಸ್ಪೆಷಾಲಿಟಿಗಳಿಂದ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್​​ ಟಾಕ್ ಆಗುತ್ತಿರುವ ಯು ಐ ಸಿನಿಮಾ ಅಕ್ಟೋಬರ್​​​ ತಿಂಗಳಲ್ಲಿ ರಿಲೀಸ್ ಆಗಲಿದೆ. ಉಪೇಂದ್ರ ಅವರು ಈ ಚಿತ್ರದ ಮೂಲಕ ಏನು ಹೇಳಲು ಹೊರಟಿದ್ದಾರೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದಲ್ಲೇ ಇದೆ.

ABOUT THE AUTHOR

...view details