ಕರ್ನಾಟಕ

karnataka

ETV Bharat / entertainment

'ಡಿಯರ್​'ಗಾಗಿ ಬಣ್ಣ ಹಚ್ಚಿದ ಸ್ಪಿನ್​ ಮಾಂತ್ರಿಕ ಆರ್.ಅಶ್ವಿನ್ - R Ashwin - R ASHWIN

ತಮಿಳಿನ 'ಡಿಯರ್​' ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅಭಿನಯಿಸಿದ್ದಾರೆ. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ.

Ravichandran Ashwin Makes Debut in Film Industry
'ಡಿಯರ್​'ಗಾಗಿ ಬಣ್ಣ ಹಚ್ಚಿದ ಸ್ಪಿನ್​ ಮಾಂತ್ರಿಕ ಅಶ್ವಿನ್

By ETV Bharat Karnataka Team

Published : Apr 5, 2024, 9:54 PM IST

ಹೈದರಾಬಾದ್:ಟೀಂ ಇಂಡಿಯಾದ ಸ್ಟಾರ್ ಆಟಗಾರ, ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮೊದಲ ಬಾರಿಗೆ ಸಿನಿಮಾಕ್ಕಾಗಿ ಬಣ್ಣ ಹಚ್ಚಿದ್ದಾರೆ. ಕ್ರಿಕೆಟ್​ ಮೈದಾನದಲ್ಲಿ ಸ್ಪಿನ್​ ಮಾಂತ್ರಿಕ ಎಂದೇ ಹೆಸರಾಗಿರುವ ಅಶ್ವಿನ್ ಈಗ ತೆರೆ ಮೇಲೆ ಬರಲು ಸಜ್ಜಾಗಿದ್ದು, ತಮಿಳಿನ 'ಡಿಯರ್​' ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದ ಟ್ರೇಲರ್​ ಶುಕ್ರವಾರ ಬಿಡುಗಡೆಯಾಗಿದೆ.

'ಡಿಯರ್​' ಚಿತ್ರದಲ್ಲಿ ಜಿ.ವಿ.ಪ್ರಕಾಶ್ ಕುಮಾರ್ ಮತ್ತು ಐಶ್ವರ್ಯಾ ರಾಜೇಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದಾಗಿ ಖುದ್ದು ಆರ್​.ಅಶ್ವಿನ್​ ಬಹಿರಂಗಪಡಿಸಿದ್ದಾರೆ. ಕ್ರಿಕೆಟರ್​ ಅಶ್ವಿನ್ ಅವರೊಂದಿಗೆ ನಟಿ ಐಶ್ವರ್ಯಾ ಅವರಿಗೂ ಇದು ಚೊಚ್ಚಲ ಚಿತ್ರವಾಗಿದೆ. ಆನಂದ್ ರವಿಚಂದ್ರನ್ ನಿರ್ದೇಶಿಸಿದ್ದಾರೆ.

ಇಂದು ಚಿತ್ರದ ಟ್ರೇಲರ್ ​ಅನ್ನು ನಿರ್ಮಾಪಕರು ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ್ದಾರೆ. ಏಪ್ರಿಲ್ 11ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಂತೆಯೇ, ಅಶ್ವಿನ್ ಸಹ 'ಎಕ್ಸ್' ಖಾತೆಯಲ್ಲಿ 'ಡಿಯರ್​' ಟ್ರೇಲರ್ ಹಂಚಿಕೊಂಡಿದ್ದಾರೆ. ''#DeAr ಟ್ರೇಲರ್ ಅನಾವರಣಗೊಳಿಸಲು ಉತ್ಸುಕನಾಗಿದ್ದೇನೆ! ಅದರಲ್ಲಿ ಸಣ್ಣ ಪಾತ್ರವನ್ನು ವಹಿಸಿದ್ದಕ್ಕಾಗಿ ಸಂತೋಷವಾಗಿದೆ. ನಿಮ್ಮ ಅನಿಸಿಕೆಗಳನ್ನು ನನಗೆ ತಿಳಿಸಿ" ಎಂದು ಅಶ್ವಿನ್ ಬರೆದುಕೊಂಡಿದ್ದಾರೆ. ಅಲ್ಲದೇ, ಟ್ರೇಲರ್‌ನಲ್ಲಿ ಚಿತ್ರದ ಪ್ರಮುಖ ತಾರೆಯರನ್ನು ಪರಿಚಯಿಸಲು ಸ್ಪಿನ್ನರ್ ತಮ್ಮ ಧ್ವನಿಯನ್ನು ನೀಡಿದ್ದಾರೆ.

ತಮಿಳಿನ ಬಹುಮುಖ ಪ್ರತಿಭೆಯ ನಟರಲ್ಲಿ ಜಿ.ವಿ.ಪ್ರಕಾಶ್ ಕೂಡ ಒಬ್ಬರು. 'ಡಿಯರ್​' ಚಿತ್ರದಲ್ಲಿ ಪ್ರಕಾಶ್ ಮತ್ತು ಐಶ್ವರ್ಯಾ ರಾಜೇಶ್ ಅವರು ದೀಪಿಕಾ ಮತ್ತು ಅರ್ಜುನ್ ಆಗಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನವ ದಂಪತಿಗಳ ನಡುವಿನ ಸಮಸ್ಯೆಗಳ ಸುತ್ತ ಚಿತ್ರಯು ಕಥೆ ಸುತ್ತುತ್ತದೆ.

ಇದನ್ನೂ ಓದಿ:25 ದಿನ ಪೂರೈಸಿದ ಸಂಭ್ರಮದಲ್ಲಿ 'ಫಾರ್ ರಿಜಿಸ್ಟ್ರೇಷನ್' ಸಿನಿಮಾ ತಂಡ

ABOUT THE AUTHOR

...view details