ಮೈಸೂರು: ನಗರದ ಸಂತ ಫಿಲೋಮಿನಾ ಚರ್ಚ್ ರಸ್ತೆಯಲ್ಲಿ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಕಂಪನಿಯೊಂದರ 11ನೇ ಶಾಖೆಯನ್ನು ಬಾಲಿವುಡ್ ಬೆಡಗಿ ರವೀನಾ ಟಂಡನ್ ಇಂದು ಲೋಕಾರ್ಪಾಣೆಗೊಳಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಸ್ತ್ ಮಸ್ತ್ ಹುಡ್ಗಿ ಬಂದ್ಲು ಹಾಡಿಗೆ ಸಕತ್ ಸ್ಟೆಪ್ ಹಾಕಿದ್ರು.
ವಯೋಲಿನ್ ಹಾಗೂ ಚಂಡೆ ಮೂಲಕ ಮಸ್ತ್ ಮಸ್ತ್ ಹುಡ್ಗಿ ಬಂದ್ಲು ಹಾಡನ್ನು ನುಡಿಸೋ ಮೂಲಕ ಭಾರತೀಯ ಚಿತ್ರರಂಗದ ಬಹುಬೇಡಿಕೆ ನಟಿ ರವೀನಾ ಟಂಡನ್ ಅವರನ್ನು ಸ್ವಾಗತಿಸಲಾಯಿತು. ಪ್ರಸಿದ್ಧ ಕಂಪನಿಯ 11ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಉಪೇಂದ್ರ ಅವರ ಮೂಲಕ ನಾನು ಕನ್ನಡ ಚಲನಚಿತ್ರಕ್ಕೆ ಪರಿಚಯವಾದೆ. ಅಲ್ಲದೇ ಬಾಲಿವುಡ್ನಲ್ಲಿ ಹಲವು ಸಿನಿಮಾಗಳ ಮೂಲಕ ಹೆಸರು ಮಾಡಿದೆ. ನಾನು ಎಲ್ಲೇ ಹೋದರೂ, ಕನ್ನಡ ನಾಡಿನ ಜನರನ್ನು ಮರೆಯುವುದಿಲ್ಲ ಎಂದು ತಿಳಿಸಿದರು. ಜೊತೆಗೆ ಯಾವುದೇ ಕಂಪನಿಗಳು ಉಳಿಯಬೇಕಾದರೆ ಗ್ರಾಹಕರ ನಂಬಿಕೆ ಮುಖ್ಯವಾಗಿದೆ ಎಂದು ಕೂಡ ತಿಳಿಸಿದರು.
ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಸಂತ ಫಿಲೋಮಿನಾ ಚರ್ಚ್ನ ಸ್ಟ್ಯಾನ್ಲಿ ಅಲ್ಮೆಂಡ, ಮಾಜಿ ಮಿಸೆಸ್ ಇಂಡಿಯಾ ಯೂನಿವರ್ಸ್ ಡಾ. ಹೇಮಮಾಲಿನಿ ಲಕ್ಷ್ಮಣ್, ವೆಲ್ಫೀನ್ ಇಂಡಸ್ಟ್ರಿಸ್ನ ಗೌವ್ಹರ್ ನಾಜ್, ಸುಲ್ತಾನ್ ಆಡಳಿತ ಮಂಡಳಿಯ ನಿರ್ದೇಶಕ ಡಾ. ಅಬ್ದುಲ್ ರಹೂಫ್ ಮತ್ತು ಅಬ್ದುಲ್ ರಹೀಮ್ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.