ಕರ್ನಾಟಕ

karnataka

ETV Bharat / entertainment

'ಪುಷ್ಪ 2' ಎರಡನೇ ಸಿಂಗಲ್​ ವಿಡಿಯೋಗೆ ಮುಹೂರ್ತ ಫಿಕ್ಸ್​; ಬ್ಲಾಸ್ಟ್​ ಸಾಂಗ್​ನಲ್ಲಿ ನಟಿ ರಶ್ಮಿಕಾ ಮಂದಣ್ಣ - Pushpa 2 Rashmika Mandanna Song - PUSHPA 2 RASHMIKA MANDANNA SONG

ಪುಷ್ಪ: ದಿ ರೈಸ್​ನಲ್ಲಿ ಸಾಮಿ ಸಾಮಿ ಹಾಡಿನಲ್ಲಿ ಮೋಡಿ ಮಾಡಿದ್ದ ರಶ್ಮಿಕಾ ಪುಷ್ಪ 2: ದಿ ರೂಲ್​ನಲ್ಲಿ ಮತ್ತೊಂದು ಹಾಡಿನಲ್ಲಿ ಧೂಳೆಬ್ಬಿಸಲು ಸಜ್ಜಾಗಿದ್ದಾರೆ.

Rashmika Mandanna Had a 'Blast' Shooting Pushpa 2 Song; Second Single to Be out Soon
Rashmika Mandanna Had a 'Blast' Shooting Pushpa 2 Song; Second Single to Be out Soon (etv bharat)

By ETV Bharat Karnataka Team

Published : May 22, 2024, 4:14 PM IST

ಹೈದರಾಬಾದ್​: ನಟ ಅಲ್ಲು ಅರ್ಜುನ್​, ನಟಿ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿರುವ 'ಪುಷ್ಪ 2: ದಿ ರೂಲ್'​ ಚಿತ್ರ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಹುಟ್ಟಿಸಿರುವ ಚಿತ್ರ. ಈ ಚಿತ್ರತಂಡ ಇದೀಗ ಅಭಿಮಾನಿಗಳ ಕಾತರತೆ ಹೆಚ್ಚಿಸಲು ಸಿನಿಮಾದ ಎರಡನೇ ವಿಡಿಯೋ ಬಿಡುಗಡೆಗೆ ಸಜ್ಜಾಗಿದೆ. ಈ ಕುರಿತು ನಟಿ ರಶ್ಮಿಕಾ ಮಂದಣ್ಣ ಮಾಹಿತಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಶ್ರೀವಲ್ಲಿಯಾಗಿ ಕಾಣಿಸಿಕೊಂಡಿರುವ ನಟಿಯ ಹೈಲೈಟ್​​ ವಿಡಿಯೋ ಹಾಡು ಇದಾಗಿದೆ.

ರಶ್ಮಿಕಾ ಮಂದಣ್ಣ ಹಂಚಿಕೊಂಡ ಪೋಸ್ಟ್​ (ಇನ್ಸ್​ಟಾಗ್ರಾಂ)

ತಮ್ಮ ಇನ್​​ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಸಂಬಂಧ ಮಾಹಿತಿ ಹಂಚಿಕೊಂಡಿರುವ ನಟಿ ರಶ್ಮಿಕಾ ಮಂದಣ್ಣ, ಎರಡನೇ ಸಿಂಗಲ್​ ವಿಡಿಯೋ ಬಿಡುಗಡೆಯಾಗಲಿದೆ. ನಟಿ ಶ್ರೀವಲ್ಲಿ ಪಾತ್ರದ ಕುರಿತ ವಿಡಿಯೋದ ಘೋಷಣೆ ಇದಾಗಿದ್ದು, ನಾಳೆ ಬೆಳಗ್ಗೆ 11.07ಕ್ಕೆ ಈ ವಿಡಿಯೋಗೆ ಬಿಡುಗಡೆ ಆಗಲಿದೆ. ಈ ಹಾಡು ದೊಡ್ಡ ಬ್ಲಾಸ್​ ಆಗಿದ್ದು, ನೀವು ಕೂಡ ಇದನ್ನು ಇಷ್ಟ ಪಡುತ್ತೀರಾ ಎಂಬ ನಂಬಿಕೆ ಇದೆ. ಈ ಬಗ್ಗೆ ಹೆಚ್ಚು ಉತ್ಸಾಹದಿಂದ ಇರುವುದಾಗಿ ತಿಳಿಸಿ ಪೋಸ್ಟ್​​ ಹಂಚಿಕೊಂಡಿದ್ದಾರೆ.

ಈಗಾಗಲೇ ಚಿತ್ರದ 'ಪುಷ್ಪ ಪುಷ್ಪ' ಹಾಡಿನ ಮೊದಲ ವಿಡಿಯೋ ಬಿಡುಗಡೆಯಾಗಿದ್ದು, ಇದು ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿತ್ತು. ದೇವಿ ಶ್ರೀ ಪ್ರಸಾದ್​ ಸಂಯೋಜನೆಯಲ್ಲಿ ಮೂಡಿ ಬಂದ ಈ ಹಾಡಿನಲ್ಲಿ ನಟ ಅಲ್ಲು ಅರ್ಜುನ್​ ಅವರ ಹೈ ಎನರ್ಜಿ ಡ್ಯಾನ್ಸ್​ ಕಾಣಬಹುದಾಗಿದೆ.

​​ 2021ರಲ್ಲಿ ಬಿಡುಗಡೆಯಾದ ಪುಷ್ಪ: ದಿ ರೈಸ್ ರಶ್ಮಿಕಾ ಮಂದಣ್ಣರ ಸಾಮಿ ಸಾಮಿ ಹಾಡು ಕೂಡ ಸಾಕಷ್ಟು ಕ್ರೇಜ್​ ಹುಟ್ಟಿಸಿತು. ಅದರಲ್ಲೂ ಈ ಹಾಡಿನಲ್ಲಿ ನಟಿ ನಡು ಬಳಕಿಸಿದ ನೃತ್ಯ ಇಂಟರ್​ನೆಟ್​ನಲ್ಲಿ ಹವಾ ಸೃಷ್ಟಿಸಿತು. ಇದೀಗ ಮತ್ತೊಮ್ಮೆ ಅದೇ ರೀತಿಯ ಭರ್ಜರಿ ಹಿಟ್​​ ಹಾಡು ಮತ್ತು ನೃತ್ಯದ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಮುಂದಾಗಿದ್ದಾರೆ.

ಈಗಾಗಲೇ ರಶ್ಮಿಕಾ ಮತ್ತೊಮ್ಮೆ ಶ್ರೀವಲ್ಲಿಯಾಗಿ ಹೇಗೆ ಮೋಡಿ ಮಾಡಲಿದ್ದಾರೆ ಎಂಬ ಕುತೂಹಲ ಮೂಡಿದ್ದು, ಇದಕ್ಕೆಲ್ಲ ನಾಳೆ ಉತ್ತರ ಸಿಗಲಿದೆ. 2021ರಲ್ಲಿ ಬಿಡುಗಡೆಯಾದ 'ಪುಷ್ಪ: ದಿ ರೈಸ್'​ ಚಿತ್ರದ ಭರ್ಜರಿ ಯಶಸ್ಸಿನ ಹಿನ್ನೆಲೆಯಲ್ಲಿ ಇದೀಗ 'ಪುಷ್ಪ 2: ದಿ ರೂಲ್'​ ಬಗ್ಗೆ ಭಾರೀ ನಿರೀಕ್ಷೆ ಮೂಡಿದೆ. ಸುಕುಮಾರ್​ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರದ ಎರಡನೇ ಭಾಗದಲ್ಲಿ ಇದೀಗ ಫಹಾದ್​ ಫಸಿಲ್​ ಪಾತ್ರ ಎಸ್​ಪಿ ಭನ್ವಾರ್​ ಸಿಂಗ್​ ಶೇಖಾವತ್​ ಹೆಚ್ಚಿನ ಪ್ರಾಮುಖ್ಯತೆ ಪಡೆಯಲಿದೆ.

ಚಿತ್ರದ ಮೊದಲ ಭಾಗದಲ್ಲಿದ್ದ ಬಹುತೇಕ ನಟ - ನಟಿಯರೇ ಎರಡನೇ ಭಾಗದಲ್ಲಿ ಕಾಣಲಿದ್ದಾರೆ. ಇದೇ ವರ್ಷ ಅಂದರೆ, 2024ರ ಆಗಸ್ಟ್​ 15ರ ಸ್ವಾತಂತ್ರ್ಯ ದಿನಾಚರಣೆಯಂದು ಚಿತ್ರ ಬಿಡುಗಡೆಯಾಗಲಿದೆ.

ಇದನ್ನೂ ಓದಿ:ದೇವರ 'ಭಯ'ವಿಲ್ಲದ ಹಾಡು ಬಿಡುಗಡೆ: ಎನ್​ಟಿಆರ್​ ಜನ್ಮದಿನಕ್ಕೆ ಸಿನಿಮಾ ತಂಡದಿಂದ ಭರ್ಜರಿ ಗಿಫ್ಟ್​

ABOUT THE AUTHOR

...view details