ಬಾಲಿವುಡ್ ಸೂಪರ್ ಸ್ಟಾರ್ ರಣ್‌ಬೀರ್ ಕಪೂರ್ ಪ್ರಸ್ತುತ ಯಶಸ್ವಿ ವೃತ್ತಿಜೀವನ ಮುನ್ನಡೆಸುತ್ತಿದ್ದಾರೆ. ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ದಿನಗಳನ್ನು ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಬಹುಕೋಟಿ ಮೌಲ್ಯದ ಐಷಾರಾಮಿ ಕಾರು ಖರೀದಿಸಿದ್ದು, ಇಂದು ಮುಂಬೈ ನಗರದ ಬೀದಿಗಳಲ್ಲಿ ಸಂಚರಿಸಿ ಅಚ್ಚರಿ ಮೂಡಿಸಿದರು.
ಇನ್ಸ್ಟಾಗ್ರಾಮ್ನಲ್ಲಿ ಪಾಪರಾಜಿಗಳ ಖಾತೆಯಿಂದ ಶೇರ್ ಆದ ವಿಡಿಯೋದಲ್ಲಿ, ಮುಂಬೈನಲ್ಲಿ ರಣ್‌ಬೀರ್ ಕಪೂರ್ ತಮ್ಮ ಹೊಸ ಕಾರನ್ನು ಓಡಿಸುತ್ತಿರುವುದನ್ನು ಕಾಣಬಹುದು. ಕಾರು ತನ್ನ ಐಷಾರಾಮಿತನದಿಂದ ನೋಡುಗರ ಗಮನ ಸೆಳೆದಿದೆ. ಗ್ರ್ಯಾಂಡ್ ಬೆಂಟ್ಲಿ ಕಾಂಟಿನೆಂಟಲ್ ಕಾರನ್ನು ರಣ್‌ಬೀರ್ ಖರೀದಿಸಿದ್ದಾರೆ. ಇದು ಸದ್ಯ ಲಭ್ಯವಿರುವ ಅತ್ಯಂತ ದುಬಾರಿ ಬೆಂಟ್ಲಿ ಮಾಡೆಲ್ ಆಗಿದೆ. ಹೊಸ ಕಾರಿಗೆ ನಟ 8 ಕೋಟಿ ರೂ. ಕೊಟ್ಟಿದ್ದಾರೆ.