ETV Bharat / health

ನೀವು ಶೀತ, ಕೆಮ್ಮಿನಿಂದ ಬಳಲುತ್ತಿದ್ದೀರಾ? ವೈದ್ಯರು ಸೂಚಿಸಿದ ಮನೆಮದ್ದು ಸೇವಿಸಿದರೆ ಪರಿಹಾರ - COLD COUGH HOME REMEDIES

ಕೆಮ್ಮು ಹಾಗೂ ಶೀತ ಸಮಸ್ಯೆಗಳಿಗೆ ಮನೆಯಲ್ಲಿ ಲಭಿಸುವ ಪದಾರ್ಥಗಳಿಂದಲೇ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ. ನಿಮಗಾಗಿ ಆಯುರ್ವೇದ ವೈದ್ಯರು ತಿಳಿಸಿದ ಮನೆಮದ್ದು ಇಲ್ಲಿದೆ ನೋಡಿ.

COLD COUGH HOME REMEDIES  HOW TO TREAT COLD COUGH AT HOME  HOW TO CURE COLD AND COUGH NATURAL  COLD AND COUGH REMEDIES
ಸಾಂದರ್ಭಿಕ ಚಿತ್ರ (Getty Images)
author img

By ETV Bharat Health Team

Published : Jan 11, 2025, 3:40 PM IST

Cold Cough Home Remedies: ಚಳಿಗಾಲದಲ್ಲಿ ಅನೇಕ ಜನರು ಸಾಮಾನ್ಯವಾಗಿ ಕೆಮ್ಮು, ಶೀತದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಮಕ್ಕಳು, ಯುವಕರು ಹಾಗೂ ವೃದ್ಧರು ಸೇರಿದಂತೆ ಹಲವು ಜನರು ಈ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ನಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಈ ಸಮಸ್ಯೆಗಳಿಂದ ತ್ವರಿತವಾಗಿ ಪರಿಹಾರ ಪಡೆಯಬಹುದು ಎಂದು ತಜ್ಞರು.

ಶುಂಠಿ ಮತ್ತು ಜೇನುತುಪ್ಪದಿಂದ ತಯಾರಿಸಿದ ಚಹಾ ಕುಡಿಯುವುದರಿಂದ ಕೆಮ್ಮು ಮತ್ತು ಶೀತ ನಿವಾರಣೆಯಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ. 2019ರಲ್ಲಿ ಜರ್ನಲ್ ಆಫ್ ಆಲ್ಟರ್ನೇಟಿವ್ ಅಂಡ್ ಕಾಂಪ್ಲಿಮೆಂಟರಿ ಮೆಡಿಸಿನ್‌ನಲ್ಲಿ (Journal of Alternative and Complementary Medicine) ಪ್ರಕಟವಾದ 'ಜೇನುತುಪ್ಪ ಮತ್ತು ಶುಂಠಿ, ಶೀತ ಮತ್ತು ಕೆಮ್ಮಿಗೆ ನೈಸರ್ಗಿಕ ಪರಿಹಾರ' (Honey and ginger, a natural remedy for cold and cough) ಎಂಬ ಅಧ್ಯಯನದಲ್ಲಿ ಈ ವಿಷಯವು ಬಹಿರಂಗವಾಗಿದೆ.

ಇದರಿಂದ ಉರಿಯೂತ ನಿವಾರಕ, ಉತ್ಕರ್ಷಣ ನಿರೋಧಕ ಮತ್ತು ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಕೆಮ್ಮು ಹಾಗೂ ಶೀತಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. (ಸಂಶೋಧನಾ ವರದಿಗಾಗಿ ಇಲ್ಲಿ ಕ್ಲಿಕ್ ಮಾಡಿ)

  • ನೀರಿಗೆ 7 ರಿಂದ 8 ತುಳಸಿ ಎಲೆಗಳು, ಒಂದು ಸಣ್ಣ ತುಂಡು ಶುಂಠಿ, ಕೆಲವು ಬೆಳ್ಳುಳ್ಳಿ ತುಂಡುಗಳು, ಜೀರಿಗೆ, ಅರಿಶಿನ, ಮೆಂತ್ಯ ತಲಾ ಒಂದು ಟೀಸ್ಪೂನ್​ ಹಾಗೂ 4ರಿಂದ 5 ಕಾಳುಮೆಣಸು ಸೇರಿಸಿ ಕುದಿಸಿ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಈ ಮಿಶ್ರಣವನ್ನು ಕುಡಿಯುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ.
  • ಇದರ ಜೊತೆಗೆ ಸ್ವಲ್ಪ ಅರಿಶಿನ, ಕಾಳು ಮೆಣಸು ಮತ್ತು ಜೇನುತುಪ್ಪದ ಮಿಶ್ರಣವನ್ನು ಸೇವಿಸಬಹುದು.
  • ಪ್ರತಿದಿನ ಕನಿಷ್ಠ 2ರಿಂದ 3 ಬಾರಿ ತುಳಸಿ ನೀರು ಅಥವಾ ಚಹಾ ಕುಡಿಯಬೇಕು. ಇಲ್ಲದಿದ್ದರೆ ತುಳಸಿ ಎಲೆಗಳನ್ನು ಅಗಿಯುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.
  • ಆಮ್ಲಾ, ಅನಾನಸ್, ನಿಂಬೆ, ಕಿವಿ ಮುಂತಾದ ಹಣ್ಣುಗಳನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಇದರಿಂದ ಕೆಮ್ಮು ಮತ್ತು ಶೀತ ಕಡಿಮೆ ಮಾಡಲು ಸಾಧ್ಯವಾಗುತ್ತದೆ ಎಂದು ವಿವರಿಸಲಾಗಿದೆ.
  • ಜೀರ್ಣಕ್ರಿಯೆಯನ್ನು ಸುಧಾರಿಸಲು ಬೆಚ್ಚಗಿನ ನೀರನ್ನು ಕುಡಿಯಲು ಆಯುರ್ವೇದ ತಜ್ಞರು ತಿಳಿಸುತ್ತಾರೆ.
  • ಗಂಟಲಿನ ಸಮಸ್ಯೆ ಇರುವ ಜನರು ಜೇನುತುಪ್ಪ ಸೇವಿಸುವುದರಿಂದ ಬೇಗನೇ ಪರಿಹಾರ ಲಭಿಸುತ್ತದೆ.
  • ಕೆಮ್ಮು ಮತ್ತು ಶೀತ ಸಮಸ್ಯೆಯನ್ನು ಪರಿಹರಿಸಲು ನಾವು ದಿನನಿತ್ಯ ಸೇವಿಸುವ ಸಾಮಾನ್ಯ ಚಹಾ ಮತ್ತು ಕಾಫಿಯ ಬದಲಿಗೆ ಶುಂಠಿ ಮತ್ತು ನಿಂಬೆ ಚಹಾವನ್ನು ಕುಡಿಯಲು ಸೂಚಿಸಲಾಗುತ್ತದೆ.
  • ಬೆಚ್ಚಗಿನ ಹಾಲಿಗೆ ಸ್ವಲ್ಪ ಅರಿಶಿನ ಬೆರೆಸಿ ಕುಡಿಯುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
  • ಬೆಚ್ಚಗಿನ ನೀರಿನಲ್ಲಿ ಸ್ವಲ್ಪ ಅರಿಶಿನ ಹಾಗೂ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
  • ಈ ಸಲಹೆಗಳೊಂದಿಗೆ ಕರಿದ ಆಹಾರಗಳು, ಹೊರಗಿನ ಆಹಾರ ಮತ್ತು ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳ ಬಳಕೆ ಕಡಿಮೆ ಮಾಡಬೇಕು ಎಂದು ತಜ್ಞರು ತಿಳಿಸುತ್ತಾರೆ. ಸಾಧ್ಯವಾದಷ್ಟು ಮನೆಯಲ್ಲಿ ಬೇಯಿಸಿದ ಆಹಾರ ಸೇವನೆಗೆ ಆದ್ಯತೆ ನೀಡಬೇಕು ಎಂದು ತಜ್ಞರು ವಿವರಿಸುತ್ತಾರೆ.

ಹೆಚ್ಚಿನ ಮಾಹಿತಿಗಾಗಿ ಈ ವೆಬ್​ಸೈಟ್​ನ್ನು ವೀಕ್ಷಿಸಬಹುದು: https://pmc.ncbi.nlm.nih.gov/articles/PMC7644455/

ಓದುಗರಿಗೆ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಶೀತ, ಕೆಮ್ಮು, ಕಫದ ಸಮಸ್ಯೆಯೇ?: ಅಜವಾನ ಎಲೆ ಕಷಾಯದ ಪ್ರಯೋಜನಗಳೇನು ಅಂತಾ ಇಲ್ಲಿ ತಿಳಿಯಿರಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.