ಕರ್ನಾಟಕ

karnataka

ETV Bharat / entertainment

ರಕ್ಷಿತ್​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ ಹೊಸ ಗೀತೆ ಅನಾವರಣ: ನೋಡಿ ರಾಧೆ ಸಾಂಗ್ - Radhe Song - RADHE SONG

ಕನ್ನಡದ ಹಲವು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ಭರವಸೆಯ ಕಿರಣ ಮೂಡಿಸಿದೆ. ಈ ಸಾಲಿನಲ್ಲಿ ರಕ್ಷಿತ್​​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಸಿನಿಮಾ ಕೂಡಾ ಒಂದು. ಇದೀಗ ಚಿತ್ರದ 'ರಾಧೆ - ದಿ ವೆಡ್ಡಿಂಗ್​​ ಸಾಂಗ್​' ಅನಾವರಣಗೊಂಡಿದೆ. ಚಂದ್ರಜಿತ್​​ ಬೆಳ್ಳಿಯಪ್ಪ ಸಾಹಿತ್ಯಕ್ಕೆ ಗಗನ್​ ಬಡೇರಿಯಾ ಸಂಗೀತ ನೀಡಿದ್ದು, ಶ್ರೀಲಕ್ಷ್ಮಿ ಬೆಳ್ಮಣ್ಣು ದನಿಯಲ್ಲಿ ಮಧುರ ಗೀತೆ ಮೂಡಿಬಂದಿದೆ.

Rakshit Shetty, Radhe Song Poster
ರಕ್ಷಿತ್​ ಶೆಟ್ಟಿ, ರಾಧೆ ಸಾಂಗ್ ಪೋಸ್ಟರ್ (ETV Bharat, Producer Rakshit Shetty X account)

By ETV Bharat Karnataka Team

Published : Aug 10, 2024, 3:04 PM IST

2024ರ ಏಳು ತಿಂಗಳುಗಳು ಉರುಳಿದ್ದು ತಿಳಿಯಲೇ ಇಲ್ಲ. ಆದ್ರೆ ಈ ಸಾಲಿನಲ್ಲಿ ಕನ್ನಡದ ಯಾವು ಸಿನಿಮಾಗಳೂ ಕೂಡ ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ ಅನ್ನೋ ಬೇಸರ ಸ್ಯಾಂಡಲ್​​ವುಡ್ ಸೇರಿದಂತೆ​ ಕನ್ನಡಿಗರಲ್ಲೂ ಇದೆ. ಹಲವು ಸಿನಿಮಾಗಳು ಬಿಡುಗಡೆ ಆಗಿ ಯಶಸ್ವಿ ಆದವಾದರೂ ಭಾರತೀಯ ಚಿತ್ರರಂಗದ ಗಮನ ಸೆಳೆಯುವಂತ ಸಿನಿಮಾಗಳು ಬರಲಿಲ್ಲ. ಆದ್ರೀಗ ಹಲವು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ಭರವಸೆಯ ಕಿರಣ ಮೂಡಿದೆ. ಆ ಸಾಲಿನಲ್ಲಿ ಖ್ಯಾತ ನಟ ರಕ್ಷಿತ್​​ ಶೆಟ್ಟಿ ನಿರ್ಮಾಣದ 'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರವೂ ಒಂದು.

2022ರಲ್ಲಿ ಕೆಜಿಎಫ್​ 2, ಕಾಂತಾರ, ವಿಕ್ರಾಂತ್​ ರೋಣದಂತಹ ಸಿನಿಮಾಗಳು ತೆರೆಕಂಡು ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆಯುವಲ್ಲಿ ಯಶಸ್ಸು ಕಂಡಿತ್ತು. ರಾಕಿಂಗ್​​ ಸ್ಟಾರ್​​​ ಯಶ್​ ಮುಖ್ಯಭೂಮಿಕೆಯ ಕೆಜಿಎಫ್​ 2 ಬಾಕ್ಸ್​ ಅಫೀಸ್​​ ದಾಖಲೆಗಳನ್ನೆಲ್ಲಾ ಪುಡಿಗಟ್ಟಿ, ಸ್ಯಾಂಡಲ್​ವುಡ್​ನ ಬ್ಲಾಕ್​ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಸುದೀಪ್​ ನಟನೆಯ ವಿಕ್ರಾಂತ್​ ರೋಣ ಕೂಡ ನಿರೀಕ್ಷೆಗೂ ಮೀರಿ ಸಕ್ಸಸ್​ ಕಂಡಿತ್ತು. ಇನ್ನು, ಕಾಂತಾರ ಚಿತ್ರದ್ದು ಇತಿಹಾಸ ಅಂತಲೇ ಹೇಳಬಹುದು. ಸಿನಿಪ್ರಿಯರು, ಅಭಿಮಾನಿಗಳು ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಖ್ಯಾತನಾಮರು ಮೆಚ್ಚಿ ಕೊಂಡಾಡಿದರು. ಕಥೆ, ನಿರ್ದೇಶನಾ ಶೈಲಿಗೆ ಪ್ರಶಂಸೆಯ ಮಳೆ ಹರಿದು ರಿಷಬ್​​ ಡಿವೈನ್​ ಸ್ಟಾರ್​ ಎಂದೇ ಜನಪ್ರಿಯರಾದರು. ನಂತರ 2023ರಲ್ಲಿ ಕಾಟೇರ ಜೊತೆ ಒಂದಿಷ್ಟು ಚಿತ್ರಗಳು ಯಶಸ್ವಿಯಾದವು. ಆದ್ರೆ ಈ ಸಾಲಿನಲ್ಲಿ ಕಳೆದ ಅರ್ಧ ವರ್ಷ ಯಾವ ಸ್ಟಾರ್​​ ನಟರ ಸಿನಿಮಾಗಳೂ ಬಿಡುಗಡೆ ಆಗದೇ ಸ್ಯಾಂಡಲ್​​ವುಡ್​ ಕೊಂಚ ಸೈಲೆಂಟ್​ ಆಗಿತ್ತು ಎಂದೇ ಹೇಳಬಹುದು.

ಆದ್ರೆ ಆಗಸ್ಟ್​​ನಲ್ಲಿ ಸ್ಯಾಂಡಲ್​ವುಡ್​ನಲ್ಲಿ ಸಿನಿಸುಗ್ಗಿ ಶುರುವಾಗಿದೆ. ಹಲವು ಬಹುನಿರೀಕ್ಷಿತ ಚಿತ್ರಗಳು ಬಿಡುಗಡೆ ಹೊಸ್ತಿಲಿನಲ್ಲಿದ್ದು, ನಿನ್ನೆಯಷ್ಟೇ ತೆರೆಕಂಡಿರೋ ಭೀಮ ಭರವಸೆ ಮೂಡಿಸಿದ್ದಾನೆ. ಅದರಂತೆ 'ಇಬ್ಬನಿ ತಬ್ಬಿದ ಇಳೆಯಲಿ' ಬಿಡುಗಡೆಗೆ ಸಜ್ಜಾಗಿರುವ ಕನ್ನಡ ಚಿತ್ರರಂಗದ ಹೊಸ ಚಿತ್ರ.

ಆಕರ್ಷಕ ಟೈಟಲ್​ ಮೂಲಕ ಗಮನ ಸೆಳೆಯುತ್ತಿರುವ 'ಇಬ್ಬನಿ ತಬ್ಬಿದ ಇಳೆಯಲಿ' ಮುಂದಿನ ತಿಂಗಳು ಚಿತ್ರಮಂದಿರ ಪ್ರವೇಶಿಸಲಿದೆ. ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ನಿರ್ಮಾಣ ಮಾಡಿರೋ ಹಿನ್ನೆಲೆ ಸಿನಿಮಾ ಹೆಚ್ಚು ಗಮನ ಸೆಳೆದಿದೆ. ಈಗಾಗಲೇ ಪ್ರಚಾರ ಪ್ರಾರಂಭವಾಗಿದ್ದು, ಚಿತ್ರದ ಕೆಲ ಗೀತೆಗಳು ಅನಾವರಣಗೊಂಡಿವೆ. ಇಂದು ರಾಧೆ ಶೀರ್ಷಿಕೆಯ ಹೊಸ ಹಾಡು ರಿಲೀಸ್​ ಆಗಿದ್ದು, ಸಖತ್​ ಸದ್ದು ಮಾಡುತ್ತಿದೆ.

ಇದನ್ನೂ ಓದಿ:ಅರಿಶಿಣ ಶಾಸ್ತ್ರದ ಸಂಭ್ರಮದಲ್ಲಿ ತರುಣ್​​ ಸುಧೀರ್​ ​- ಸೋನಾಲ್​​: ಫೋಟೋಗಳನ್ನು ನೋಡಿ - Tharun Sonal Haldi Ceremony

'ರಾಧೆ - ದಿ ವೆಡ್ಡಿಂಗ್​​ ಸಾಂಗ್​'ಗೆ ಚಂದ್ರಜಿತ್​​ ಬೆಳ್ಳಿಯಪ್ಪ ಅವರ ಸಾಹಿತ್ಯವಿದ್ದು, ಗಗನ್​ ಬಡೇರಿಯಾ ಸಂಗೀತ ನೀಡಿದ್ದಾರೆ. ಜೊತೆಗೆ ಶ್ರೀಲಕ್ಷ್ಮಿ ಬೆಳ್ಮಣ್ಣು ದನಿಯಲ್ಲಿ ಮಧುರ ಗೀತೆ ಮೂಡಿಬಂದಿದೆ. ಹಾಡಿಗೆ ದೀಕ್ಷಿತ್​​ ಕುಮಾರ್​ ನೃತ್ಯ ಸಂಯೋಜನೆ ಮಾಡಿದ್ದಾರೆ. ​

ಇದನ್ನೂ ಓದಿ:'ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರದ 'ಹೇಳು ಗೆಳತಿ' ಹಾಡು ನೋಡಿ!: ಕುತೂಹಲ ಕೆರಳಿಸಿದ ರಕ್ಷಿತ್​ ಶೆಟ್ಟಿ ಸಿನಿಮಾ - Ibbani Tabbida Ileyali Movie

ಚಂದ್ರಜಿತ್ ಬೆಳ್ಳಿಯಪ್ಪ ನಿರ್ದೇಶನದ ಈ ಚಿತ್ರದಲ್ಲಿ ವಿಹಾನ್, ಅಂಕಿತ ಅಮರ್ ಹಾಗೂ ಮಯೂರಿ ನಟರಾಜ್ ನಟಿಸಿದ್ದಾರೆ. ಪರಂವಃ ಸ್ಟುಡಿಯೋಸ್ ಮೂಲಕ ಜಿ.ಎಸ್.ಗುಪ್ತಾ, ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ABOUT THE AUTHOR

...view details