ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 59ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಭಾಯ್ಜಾನ್ಗೆ ಕುಟುಂಬಸ್ಥರು, ಸಿನಿಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಭಾರತೀಯ ಚಿತ್ರರಂಗದಲ್ಲೇ ವಿಶೇಷ ಸ್ಟಾರ್ಡಮ್ ಹೊಂದಿರುವ ಸಲ್ಮಾನ್ ಖಾನ್ ಬರ್ತ್ಡೇ ಸ್ಪೆಷಲ್ ಆಗಿ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಸಿಕಂದರ್'ನ ಟೀಸರ್ ಬಿಡುಗಡೆಯಾ ಆಗಬೇಕಿತ್ತು. ಆದ್ರೆ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಮುಂದೂಡಲ್ಪಟ್ಟಿದೆ. ಡಿಸೆಂಬರ್ 27ರ ಶುಕ್ರವಾರ 11:07ಕ್ಕೆ ಬಿಡುಗಡೆಯಾಗಬೇಕಿದ್ದ ಟೀಸರ್ ಡಿಸೆಂಬರ್ 28ರ ಅದೇ ಸಮಯಕ್ಕೆ ಅನಾವರಣಗೊಳ್ಳಲಿದೆ. ಭಾರತ ಸರ್ಕಾರ ಇಂದು ರಾಷ್ಟ್ರೀಯ ಶೋಕಾಚರಣೆ ಘೋಷಿಸಿದೆ.
ಸಿಕಂದರ್ ಸಿನಿಮಾ ನಿರ್ಮಾಣ ಮಾಡುತ್ತಿರುವ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ನಾಡಿಯಾಡ್‌ವಾಲಾ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್ ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ನಲ್ಲಿ ನೀಡಿರುವ ಹೇಳಿಕೆಯಲ್ಲಿ, ಮಾಜಿ ಪ್ರಧಾನಿ ನಿಧನಕ್ಕೆ ತಮ್ಮ ಸಂತಾಪ ವ್ಯಕ್ತಪಡಿಸಿ ಗೌರವ ಸೂಚಿಸಿದೆ. ಹೇಳಿಕೆಯಲ್ಲಿ, "ನಮ್ಮ ಗೌರವಾನ್ವಿತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಜಿ ಅವರ ನಿಧನದ ಹಿನ್ನೆಲೆಯಲ್ಲಿ ಸಿಕಂದರ್ ಟೀಸರ್ ಬಿಡುಗಡೆಯನ್ನು ಡಿಸೆಂಬರ್ 28ರ ಬೆಳಗ್ಗೆ 11:07ಕ್ಕೆ ಮುಂದೂಡಲಾಗಿದೆ. ಈ ಶೋಕಾಚರಣೆಯ ಸಮಯದಲ್ಲಿ ನಮ್ಮ ಆಲೋಚನೆಗಳು ರಾಷ್ಟ್ರದೊಂದಿಗೆ ಇವೆ. ಅರ್ಥಮಾಡಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಬರೆಯಲಾಗಿದೆ.
ಇದನ್ನೂ ಓದಿ: 35 ಕೋಟಿ ಬಜೆಟ್, 90 ಕೋಟಿಗೂ ಅಧಿಕ ಕಲೆಕ್ಷನ್: ಈ ಸಿನಿಮಾ ಸೆಟ್ನಲ್ಲಿ 35 ಸೀರೆಗಳನ್ನು ವಿತರಿಸಿದ್ದ ಸಲ್ಮಾನ್ ಖಾನ್
ಡಿಸೆಂಬರ್ 26ರಂದು ತಮ್ಮ 92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಡಾ.ಮನಮೋಹನ್ ಸಿಂಗ್ ಅವರು ಭಾರತೀಯ ರಾಜಕೀಯದಲ್ಲಿ ಅಪ್ರತಿಮ ನಾಯಕನಾಗಿ ಗುರುತಿಸಿಕೊಂಡಿದ್ದರು. 2004ರಿಂದ 2014ರವರೆಗಿನ ಪ್ರಧಾನಿಯಾಗಿ ಅವರ ಅಧಿಕಾರಾವಧಿಯಲ್ಲಿ ಪ್ರಮುಖ ಸುಧಾರಣೆಗಳು ನಡೆದಿವೆ. ಭಾರತದ ಆಧುನಿಕ ಆರ್ಥಿಕ ಪಥವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರಬಲ ರಾಜಕಾರಣಿಯಾಗಿ ಅವರು ದೇಶಕ್ಕೆ ನೀಡಿರುವ ಕೊಡುಗೆಗಳ ಗೌರವಾರ್ಥವಾಗಿ, ಭಾರತ ಸರ್ಕಾರ 7 ದಿನಗಳ ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಿದ್ದು, ಜನವರಿ 1, 2025ರವರೆಗೆ ಇರಲಿದೆ.
ಇದನ್ನೂ ಓದಿ: 'ನಾನು ಕುಗ್ಗೋದಿಲ್ಲ, ಬಗ್ಗೋದೂ ಇಲ್ಲ': ಕಳಪೆ ಸ್ವೀಕರಿಸಿ ಆರಾಮಾಗಿ ಜೈಲಿಗೋದ ಹನುಮಂತು; ಬಿಗ್ಬಾಸ್ನಲ್ಲಿ ಇದೇ ಮೊದಲು
ಸಿಕಂದರ್ ಚಿತ್ರದ ಫಸ್ಟ್ ಲುಕ್ ಅನ್ನು ಸಲ್ಮಾನ್ ಅವರೇ ಕಳೆದ ಸಂಜೆ ಅನಾವರಣಗೊಳಿಸಿದ್ದರು. ಇಂದು ಟೀಸರ್ ಬಿಡುಗಡೆಯಾಗಬೇಕಿತ್ತು. ಆದ್ರೀಗ ಬಿಡುಗಡೆ ವಿಳಂಬವಾಗಿದೆ. ಅಭಿಮಾನಿಗಳು ನಾಳೆವರೆಗೂ ಕಾಯಬೇಕಿದೆ. ಪೋಸ್ಟರ್ ನಟನನ್ನು ಹೊಸ ಅವತಾರದಲ್ಲಿ ಪ್ರದರ್ಶಿಸಿದೆ. ಟೀಸರ್ನಲ್ಲಿ ಅವರ ಪಾತ್ರದ ನೋಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಉತ್ಸುಕರಾಗಿದ್ದಾರೆ. ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ಜೊತೆ ತೆರೆ ಹಂಚಿಕೊಂಡಿರುವ ಕನ್ನಡತಿಯ ಚೊಚ್ಚಲ ಚಿತ್ರವಿದು. ಎ.ಆರ್.ಮುರುಗದಾಸ್ ನಿರ್ದೇಶನದ ಸಿನಿಮಾ ಮುಂದಿನ ಈದ್‌ಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.