ಮಂಗಳೂರು: ಚಿಟ್ಟೆ, ಮಿಡತೆ, ಜೀರುಂಡೆ, ಜೇನುಹುಳು, ಏರೋಪ್ಲೇನ್ ಚಿಟ್ಟೆ, ಚೇಳು, ಹಾರುವ ಇರುವೆ... ಹೀಗೆ ವಿಭಿನ್ನ ಕೀಟಗಳು ಮಂಗಳೂರಿನ ಕದ್ರಿಪಾರ್ಕ್‌ನಲ್ಲಿ ಗಮನ ಸೆಳೆಯುತ್ತಿವೆ. ಬೃಹದಾಕಾರದ ರೂಪದಲ್ಲಿರುವ ಈ ಕೀಟಗಳನ್ನು ನೋಡಿದವರೆಲ್ಲಾ ಬೆರಗಾಗುತ್ತಿದ್ದಾರೆ. ಅಷ್ಟಕ್ಕೂ ಇವೆಲ್ಲಾ ಜೀವಂತ ಚಿಟ್ಟೆಗಳಲ್ಲ ಬದಲಿಗೆ ರೋಬೊಟಿಕ್ ಮಾದರಿಗಳಾಗಿವೆ.
ಕರಾವಳಿ ಉತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ರೋಬೋಟಿಕ್ ಬಟರ್ ಫ್ಲೈ ಶೋ ಆಯೋಜನೆಗೊಂಡಿದೆ. ಡಿಸೆಂಬರ್ 22ರಿಂದ ಜನವರಿ 19ರವರೆಗೆ 1 ತಿಂಗಳವರೆಗೆ ಸಂಜೆ 4ರಿಂದ ರಾತ್ರಿ 9ರವರೆಗೆ ಈ ಪ್ರದರ್ಶನವಿರಲಿದೆ. ಸೈಮನ್ ಎಕ್ಸಿಬಿಷನ್ ಸಂಸ್ಥೆ ಈ ರೊಬೊಟಿಕ್ ಬಟರ್ ಫ್ಲೈ ಶೋ ಆಯೋಜಿಸಿದೆ.
ಸಾಧಾರಣವಾಗಿ ನೋಡಲು ಸಿಗದ ವೈವಿಧ್ಯಮಯ ಕೀಟಗಳನ್ನು ರೋಬೊಟಿಕ್ ಮಾದರಿಯಲ್ಲಿ ಕಂಡು ನಗರವಾಸಿಗಳು ಸಂಭ್ರಮಪಟ್ಟರು. ಮಕ್ಕಳೊಂದಿಗೆ ಹಿರಿಯರೂ ರೋಬೋಟಿಕ್ ಬಟರ್ ಫ್ಲೈ ಶೋ ವೀಕ್ಷಿಸಿ, ಮೊಬೈಲ್‌ನಲ್ಲಿ ವಿಡಿಯೋ ಸೆರೆಹಿಡಿದು ಸಂತೋಷಪಡುತ್ತಿದ್ದಾರೆ. ಜೊತೆಗೆ, ಸೆಲ್ಫಿ ಸ್ಪಾಟ್‌ಗಳನ್ನು ಅಳವಡಿಸಲಾಗಿದ್ದು, ಎಲ್ಲರೂ ಸೆಲ್ಫಿ ತೆಗೆದು ಸಂಭ್ರಮಿಸುತ್ತಿರುವುದು ಕಂಡುಬರುತ್ತಿದೆ. ಒಟ್ಟಾರೆ ಕದ್ರಿಪಾರ್ಕ್‌ನಲ್ಲಿ ಆಯೋಜಿಸಲಾಗಿರುವ ರೊಬೊಟಿಕ್ ಬಟರ್ ಫ್ಲೈ ಮಂಗಳೂರು ಜನತೆಯನ್ನು ಪುಳಕಿತರನ್ನಾಗಿಸಿದೆ.
ಸೈಮನ್ ಎಕ್ಸಿಬಿಷನ್ ಸಂಸ್ಥೆ ಮ್ಯಾನೇಜರ್ ವೆಂಕಟೇಶ್ ಮಾತನಾಡಿ, "ರೊಬೊಟಿಕ್ ಅನಿಮಲ್ಸ್ ಅನ್ನು ಮಂಗಳೂರಿನಲ್ಲಿ ಮೊದಲ ಬಾರಿಗೆ ಪ್ರದರ್ಶನ ಮಾಡುತ್ತಿದ್ದೇವೆ. ಮಕ್ಕಳಿಗೆ ತುಂಬಾ ಮನೋರಂಜನೆ ಸಿಗುತ್ತಿದೆ. ಎಲ್ಲಾ ತರಹದ ಚಿಟ್ಟೆಗಳನ್ನು ಪ್ರದರ್ಶನಕ್ಕಿಟ್ಟಿದ್ದೇವೆ. ಎಲ್ಲವೂ ವಿದ್ಯುತ್ ಚಾಲಿತವಾಗಿವೆ. ಕಣ್ಣಿಗೆ ಕಾಣದ ಚಿಟ್ಟೆಗಳನ್ನು ದೊಡ್ಡ ಗಾತ್ರದಲ್ಲಿ ನೋಡುವ ವ್ಯವಸ್ಥೆ ಮಾಡಲಾಗಿದೆ" ಎಂದರು.
ಇದನ್ನೂ ಓದಿ: ಹೊಸವರ್ಷಕ್ಕೆ ಮೈಸೂರಿನತ್ತ ಪ್ರವಾಸಿಗರ ದಂಡು: ಹೋಟೆಲ್ ರೂಮ್ಗಳು ಭರ್ತಿ