ಸ್ಯಾಂಡಲ್‌ವುಡ್ ಗೋಲ್ಡನ್ ಸ್ಟಾರ್ ಗಣೇಶ್ ಸದ್ಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಗೆದ್ದ ಖುಷಿಯಲ್ಲಿದ್ದಾರೆ. ಗಣಿ ನಟನೆಯ ಈ ಸಿನಿಮಾ ಚಿತ್ರಮಂದಿರಗಳಲ್ಲಿ ಶತದಿನೋತ್ಸವ ಆಚರಿಸಿಕೊಂಡು, ಸದ್ಯ ಒಟಿಟಿಯಲ್ಲಿಯೂ ಕಮಾಲ್ ಮಾಡುತ್ತಿದೆ. ಹೀಗಿರುವಾಗಲೇ ಗಣೇಶ್ ಅಭಿಮಾನಿಗಳಿಗೆ ಸರ್ಪ್ರೈಸ್ ಸಿಕ್ಕಿದೆ.
ತೆಲುಗಿನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಪೀಪಲ್ ಮೀಡಿಯಾ ಫ್ಯಾಕ್ಟರಿ' ಈಗ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈ ಜೋಡಿಸಿದೆ. ಟಾಲಿವುಡ್ನ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡಲಿರುವ '#PMF49' ಸಿನಿಮಾದಲ್ಲಿ ನಾಯಕನಾಗಿ ಗಣೇಶ್ ನಟಿಸಲಿದ್ದಾರೆ. ಇದು ತಾತ್ಕಾಲಿಕ ಶೀರ್ಷಿಕೆಯಷ್ಟೇ. ಈ ಮೂಲಕ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆಯಿಂದ ಕನ್ನಡದ ಸಿನಿಮಾಗಳು ಮೂಡಿಬರಲಿವೆ.
ಕಾರ್ತಿಕೇಯ 2, ವೆಂಕಿ ಮಾಮಾ, ಓ ಬೇಬಿ, ಧಮಾಕಾ ಮತ್ತು ನ್ಯೂ-ಸೆನ್ಸ್‌ನಂತಹ ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ಕೊಟ್ಟ ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ತೆಲುಗು ಚಿತ್ರೋದ್ಯಮಕ್ಕೆ ಗಣನೀಯ ಕೊಡುಗೆ ನೀಡಿದೆ. ಇದೀಗ #PMF49 ಮೂಲಕ ಚಂದನವನದ ಬಹುಬೇಡಿಕೆ ನಟ ಗಣೇಶ್ ಅವರ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದೆ. ಅದ್ಧೂರಿ ಸಿನಿಮಾ ನಿರ್ಮಾಣದ ಪ್ಲ್ಯಾನ್ ನಡೆಯುತ್ತಿದೆ.
Thrilled to announce that @peoplemediafcy has struck a dynamic synergy with Golden Star @Official_Ganesh for the iconic project #PMF49 🔥
— People Media Factory (@peoplemediafcy) December 27, 2024
Stay tuned for a spectacular ride ahead!
Producer: @vishwaprasadtg
Director: #Dhananjaya @vivekkuchibotla #KrithiPrasad @dophari… pic.twitter.com/uY3hBAckY1
ಟಿ.ಜಿ.ವಿಶ್ವ ಪ್ರಸಾದ್ ನೇತೃತ್ವದ ಪೀಪಲ್ ಮೀಡಿಯಾ ಫ್ಯಾಕ್ಟರಿ, ಒಂದೊಳ್ಳೆ ಕಥೆ ಮತ್ತು ಅದ್ಧೂರಿ ನಿರ್ಮಾಣದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದೆ. ಈ ಮೂಲಕ ಸ್ಯಾಂಡಲ್‌ವುಡ್, ಟಾಲಿವುಡ್ ಸಾಮರ್ಥ್ಯವನ್ನು, ಜನಪ್ರಿಯತೆಯನ್ನು ಮಗದಷ್ಟು ಹಿರಿದಾಗಿಸುವ ಧ್ಯೇಯ ಈ ತಂಡದ್ದು.
ಇದನ್ನೂ ಓದಿ: 'ನಾನು ಕುಗ್ಗೋದಿಲ್ಲ, ಬಗ್ಗೋದೂ ಇಲ್ಲ': ಕಳಪೆ ಸ್ವೀಕರಿಸಿ ಆರಾಮಾಗಿ ಜೈಲಿಗೋದ ಹನುಮಂತು; ಬಿಗ್ಬಾಸ್ನಲ್ಲಿ ಇದೇ ಮೊದಲು
ಖ್ಯಾತ ನೃತ್ಯ ನಿರ್ದೇಶಕ ಧನಂಜಯ್ ಈ ಸಿನಿಮಾ ಮೂಲಕ ದೊಡ್ಡ ಪ್ರಾಜೆಕ್ಟ್ ಒಂದರ ಜವಾಬ್ದಾರಿ ಹೊತ್ತಿದ್ದಾರೆ. ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರ. ಟಿ.ಜಿ.ವಿಶ್ವ ಪ್ರಸಾದ್ ನಿರ್ಮಾಣದಲ್ಲಿ ಗೋಲ್ಡನ್ ಸ್ಟಾರ್ ಸಿನಿಮಾ ಮೂಡಿಬರಲಿದ್ದು, ಅದ್ಧೂರಿಯಾಗಿಯೇ ಸಿನಿಮಾ ಸೆಟ್ಟೇರಲಿದೆ. ಇನ್ನುಳಿದಂತೆ ಚಿತ್ರದ ಶೀರ್ಷಿಕೆ, ತಾರಾಗಣ ಮತ್ತು ತಾಂತ್ರಿಕ ವರ್ಗದ ಬಗ್ಗೆ ಮಾಹಿತಿಯನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಮುಂದಿನ ದಿನಗಳಲ್ಲಿ ನೀಡಲಿದೆ.
ಇದನ್ನೂ ಓದಿ: 2ನೇ ದಿನ ಗಳಿಕೆಯಲ್ಲಿ ಇಳಿಕೆ: ಸುದೀಪ್ 'ಮ್ಯಾಕ್ಸ್' ಒಟ್ಟು ಕಲೆಕ್ಷನ್ ಎಷ್ಟು?
ಗಣೇಶ್ ಅಭಿನಯಿಸುತ್ತಿರುವ ಮತ್ತೊಂದು ಸಿನಿಮಾ 'Your's sincerely ರಾಮ್'. ಸ್ಯಾಂಡಲ್‌ವುಡ್ ತ್ಯಾಗರಾಜರೆಂದೇ ಹೆಸರು ಮಾಡಿರುವ ರಮೇಶ್ ಅರವಿಂದ್ ಹಾಗೂ ಗಣೇಶ್ ಕಾಂಬಿನೇಶನ್ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿತ್ತು. ಟೀಸರ್ ನೋಡಿದ ಪ್ರೇಕ್ಷಕರು ಸಿನಿಮಾ ಕುರಿತು ಕುತೂಹಲ ವ್ಯಕ್ತಪಡಿಸಿದ್ದರು. ವಿಖ್ಯಾತ್ ಎ.ಆರ್. ನಿರ್ದೇಶಿಸುತ್ತಿದ್ದಾರೆ. ದಿ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿ ಸತ್ಯ ರಾಯಲ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.