ETV Bharat / entertainment

'ನಾನು ಕುಗ್ಗೋದಿಲ್ಲ, ಬಗ್ಗೋದೂ ಇಲ್ಲ': ಕಳಪೆ ಸ್ವೀಕರಿಸಿ ಆರಾಮಾಗಿ ಜೈಲಿಗೋದ ಹನುಮಂತು; ಬಿಗ್​ಬಾಸ್​​​​ನಲ್ಲಿ ಇದೇ ಮೊದಲು - HANUMANTHU

''ಕಳಪೆ ಪಟ್ಟ ಹನುಮಂತುನಾ ಕಿಂಚಿತ್ತೂ ಡಿಸ್ಟರ್ಬ್ ಮಾಡಿಲ್ವಾ?''.... ನಿಮ್ಮ ಅಭಿಪ್ರಾಯವೇನು?!.

Hanumanthu
ಹನುಮಂತು (Photo: Bigg Boss Team)
author img

By ETV Bharat Entertainment Team

Published : 17 hours ago

''ಬಿಗ್​ ಬಾಸ್​ ಕನ್ನಡ ಸೀಸನ್​ 11''ರ ಆಟ ಫಿನಾಲೆಗೆ ಹತ್ತಿರವಾಗುತ್ತಿದೆ. ಈ ವಾರ ಮನೆಯಲ್ಲಿ ಬಿಗ್​ ಬಾಸ್​ ರೆಸಾರ್ಟ್​ ಟಾಸ್ಕ್​​​ ನೀಡಲಾಗಿತ್ತು. ಕ್ಯಾಪ್ಟನ್​ ಭವ್ಯಾ ಅವರ ಮಾರ್ಗದರ್ಶನದಲ್ಲಿ ಒಂದು ತಂಡ ಮತ್ತು ಚೈತ್ರಾ ಕುಂದಾಪುರ ನೇತೃತ್ವದಲ್ಲಿ ಮತ್ತೊಂದು ತಂಡವನ್ನಾಗಿಸಿ ಟಾಸ್ಕ್​ ನೀಡಲಾಗಿತ್ತು. ಇದೀಗ ಕಳಪೆ ಮತ್ತು ಉತ್ತಮ ಪಟ್ಟ ಕೊಡುವ ಸಮಯ. ಮನೆ ಮಂದಿ ಪೈಕಿ ಹೆಚ್ಚಿನವರು ಹನುಮಂತು ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ.

ಈ ವಾರದ ಕಳಪೆ ಪಟ್ಟ ತೊಟ್ಟು ಬಿಗ್​ ಬಾಸ್​ ಜೈಲಿಗೆ ಹನುಮಂತು ಸೇರಿರುವ ದೃಶ್ಯವನ್ನು ಇಂದಿನ ಪ್ರೋಮೋದಲ್ಲಿ ಕಾಣಬಹುದಾಗಿದೆ. ''ಕಳಪೆ ಪಟ್ಟ ಹನುಮಂತುನಾ ಕಿಂಚಿತ್ತೂ ಡಿಸ್ಟರ್ಬ್ ಮಾಡಿಲ್ವಾ?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸೋ ಪ್ರೇಕ್ಷಕರ ಕಾತರ ಹೆಚ್ಚಿದೆ.

ಪ್ರೋಮೋದಲ್ಲಿ, ಮೋಕ್ಷಿತಾ, ರಜತ್, ಗೌತಮಿ, ಮಂಜು, ಧನರಾಜ್​​, ಚೈತ್ರಾ ಕುಂದಾಪುರ ಅವರುಗಳು ಹನುಮಂತು ಅವರ ಹೆಸರನ್ನು ವಾರದ ಕಳಪೆಗೆ ತೆಗೆದುಕೊಂಡಿದ್ದಾರೆ. ನಂತರ, ಎಲ್ಲರೂ ತಮ್ಮ ಕಾರಣಗಳನ್ನು ಒದಗಿಸಿದ್ದಾರೆ. ಅದರಲ್ಲೂ ಆತ್ಮೀಯ ಸ್ನೇಹಿತ ಧನರಾಜ್​ ಆಚಾರ್​ ಅವರೇ ಹನುಮಂತು ಅವರ ಹೆಸರು ತೆಗೆದುಕೊಂಡಿದ್ದು ಬಹುತೇಕರ ಆಶ್ಚರ್ಯಕ್ಕೆ ಕಾರಣವಾಗಿದೆ.

ದೋಸ್ತ ಧನರಾಜ್​ ಮಾತನಾಡಿ, ತುಂಬಾ ತಪ್ಪು ಅಂತಾ ಕಾಣಿಸಿದ್ದು ಹನುಮಂತು ಅವರು ಎಂದು ತಿಳಿಸಿದ್ದಾರೆ. ಚೈತ್ರಾ ಕುಂದಾಪುರ ಮಾತನಾಡಿ, ರೆಸಾರ್ಟ್ ಸಿಬ್ಬಂದಿ ಶುಚಿತ್ವ ಕಾಪಾಡಿಕೊಳ್ಳಬೇಕೆಂಬುದು ಪ್ರಮುಖ ವಿಷಯವಾಗಿತ್ತು. ಅದಕ್ಕೆಲ್ಲೋ ಹೊಡೆತ ಬಿತ್ತು ಅನಿಸುತ್ತೆ ಎಂದು ತಿಳಿಸಿದ್ದಾರೆ. ಗೌತಮಿ ಮಾತನಾಡಿ, ಅವ್ರು ಕೆಲಸ ಕೊಡೋದ್ರು ಜೊತೆ ನೀವೂ ಕೆಲಸ ಕೊಡ್ತಿದ್ರಿ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಮಂಜು, ನಮಗೆಲ್ಲ ಒಂದಿಷ್ಟು ಕಿರಿಕಿರಿ ಅನಿಸಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 2ನೇ ದಿನ ಗಳಿಕೆಯಲ್ಲಿ ಇಳಿಕೆ: ಸುದೀಪ್​ 'ಮ್ಯಾಕ್ಸ್​' ಒಟ್ಟು ಕಲೆಕ್ಷನ್​ ಎಷ್ಟು?

ಹೀಗೆ ಎಲ್ಲರೂ ಕಾರಣಗಳನ್ನು ಕೊಟ್ಟ ಬಳಿಕ ತಮಗೇನೂ ನಾಟೇ ಇಲ್ಲ ಎಂಬಂತೆ ಥ್ಯಾಂಕ್ಯೂ, ಧನ್ಯವಾದಗಳು ಎಂದು ಹನುಮಂತು ತಿಳಿಸಿದ್ದಾರೆ. ನೀವು ಕಳಪೆ ಕೊಟ್ರೀ ಅಂತಾ ನಾನ್​ ಕುಗ್ಗೋದೂ ಇಲ್ಲ, ಬಗ್ಗೋದೂ ಇಲ್ಲ ಎಂದು ಹೇಳಿದ್ದಾರೆ. ನಂತರ ಕಳಪೆ ಬಟ್ಟೆ ಧರಿಸಿ, ರಾಜಾರೋಷದಿಂದಲೇ ಜೈಲಿಗೆ ಹೋಗಿದ್ದಾರೆ. ಸಹಜವಾಗಿ ಕಳಪೆ ಪಟ್ಟ ಸ್ವೀಕರಿಸುವಾಗ ವಾದ ವಿವಾದಗಳು ಹೆಚ್ಚೇ ಇರುತ್ತದೆ. ಜಗಳಗಳೂ ನಡೆಯುತ್ತವೆ. ಈ ಹಿಂದೆ ರಜತ್​ ಅವರು ಧನರಾಜ್​​ ಅವರಿಗೆ ಹೊಡೆಯಲು ಹೋಗಿದ್ದು ನಿಮಗೆ ತಿಳಿದೇ ಇದೆ. ಆದ್ರೆ ಹನುಮಂತು ಅವರ ಈ ವರ್ತನೆ ಬಹುತೇಕರ ತಲೆ ಬಿಸಿ ಮಾಡಿರೋದಂತೂ ಪಕ್ಕಾ. ನೀವೇನಂದ್ರೂ ನನಗೇನೂ ಆಗೋಲ್ಲ, ನಾಟೋದಿಲ್ಲ ಎಂಬ ದಿಟ್ಟ ನಡೆ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದಾರೆ ಹನುಮಂತು. ಈಗಾಗಲೇ ತಮ್ಮ ಬುದ್ಧಿವಂತಿಕೆ, ನಡೆ ನುಡಿಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ತಲುಪಿರುವ ಹನುಮಂತು ಅವರು ಇಂದಿನ ಸಂಚಿಕೆಯಲ್ಲಿ ತಮ್ಮ ತಾಳ್ಮೆ, ಪ್ರಬುದ್ಧತೆ ನಡೆಯಿಂದ ಮತ್ತೆ ಸದ್ದು ಮಾಡಲಿದ್ದಾರೆ ಅನ್ನೋದು ಪಕ್ಕಾ ಆಗಿದೆ. ಬಹುಶಃ ಕಳಪೆ ಪಟ್ಟ ಸಿಕ್ಕಿದಾದ ಇಷ್ಟು ಆರಾಮಾಗಿ ಜೈಲಿಗೆ ಹೋಗಿದ್ದು ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲೆನ್ನಬಹುದು.

  • ಭವ್ಯಾ ತಂಡ - ತ್ರಿವಿಕ್ರಮ್​​, ಧನರಾಜ್​​​ ಆಚಾರ್​, ರಜತ್​ ಕಿಶನ್​​​ ಹಾಗೂ ಮೋಕ್ಷಿತಾ.
  • ಚೈತ್ರಾ ಕುಂದಾಪುರ ತಂಡ - ಉಗ್ರಂ ಮಂಜು, ಗೌತಮಿ ಜಾಧವ್​, ಹನುಮಂತು ಮತ್ತು ಐಶ್ವರ್ಯಾ.

ಇದನ್ನೂ ಓದಿ: 'ಮ್ಯಾಕ್ಸ್'​ ಅಬ್ಬರದ ನಡುವೆಯೂ ಕುಗ್ಗದ 'ಯುಐ': ಉಪೇಂದ್ರ ಸಿನಿಮಾದ ಕಲೆಕ್ಷನ್​ ಮಾಹಿತಿ

ಮೊದಲು ಭವ್ಯಾ ಅವರ ತಂಡ ರೆಸಾರ್ಟ್​​ ಸಿಬ್ಬಂದಿಯಾಗಿ ಸೇವೆ ಒದಗಿಸಿದ್ದರೆ, ಅತಿಥಿಗಳಾಗಿ ಚೈತ್ರಾ ಕುಂದಾಪುರ ಟೀಮ್​ ಮಜಾ ಮಾಡಿತ್ತು. ಟಾಸ್ಕ್​​ ನೆಪದಲ್ಲಿ ಚೈತ್ರಾ ಕುಂದಾಪುರ ಅವರು ರಜತ್​ ಅವರ ಬೆಂಡೆತ್ತಿದ್ದರು. ನಂತರ ರಜತ್​ ಅವರ ಸರದಿ ಬಂದಾಗ ಚೈತ್ರಾ ಕುಂದಾಪುರ ಅವರ ಬೆವರಿಳಿಸಿದ್ದರು. ಚೈತ್ರಾ ಕುಂದಾಪುರ ತಂಡ ರೆಸಾರ್ಟ್ ಸಿಬ್ಬಂದಿಯಾಗಿ ನರಕಯಾತನೆಯೇ ಅನುಭವಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.