ETV Bharat / state

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಸುತ್ತೂರು ಶ್ರೀ ಸಂತಾಪ - SUTTUR SRI CONDOLENCE MESSAGE

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ನಿಧನಕ್ಕೆ ಸುತ್ತೂರಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

dr-manmohan-singh
ಡಾ.ಮನಮೋಹನ್‌ ಸಿಂಗ್ ಅವರು ಸುತ್ತೂರು ಕ್ಷೇತ್ರಕ್ಕೆ ಆಗಮಿಸಿದ ಸಂದರ್ಭ (ETV Bharat)
author img

By ETV Bharat Karnataka Team

Published : 16 hours ago

ಮೈಸೂರು: ಭಾರತದ ಖ್ಯಾತ ಆರ್ಥಿಕ ತಜ್ಞರು, ಅಭಿವೃದ್ಧಿಯ ಹರಿಕಾರರು, ರಾಜಕೀಯದ ಅಜಾತಶತ್ರುಗಳು, ಸಜ್ಜನ ಮುತ್ಸದ್ದಿಗಳೂ ಆಗಿದ್ದ ಡಾ.ಮನಮೋಹನ್ ಸಿಂಗ್‌ ಅವರು ಅಗಲಿರುವುದು ಅತೀವ ದುಃಖದ ಸಂಗತಿ ಎಂದು ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ.ಸಿಂಗ್‌ ಅವರು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಅತ್ಯುನ್ನತ ಪದವಿ ಪಡೆದಿದ್ದರು. ಪಂಜಾಬ್ ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಮೂಲತಃ ಖ್ಯಾತ ಶಿಕ್ಷಣ ತಜ್ಞರು. ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲೂ ಅಧ್ಯಾಪನ ಮಾಡಿದ್ದರು. ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಹಣಕಾಸು ಸಚಿವಾಲಯದ ಪ್ರಧಾನ ಸಲಹೆಗಾರರು, ಕಾರ್ಯದರ್ಶಿಗಳು, ಯೋಜನಾ ಆಯೋಗದ ಸದಸ್ಯರು, ರಿಸರ್ವ್ ಬ್ಯಾಂಕ್ ಗವರ್ನರ್, ಯೋಜನಾ ಆಯೋಗದ ಉಪಾಧ್ಯಕ್ಷರು, ಅಂದಿನ ಪ್ರಧಾನಿಗಳ ಆರ್ಥಿಕ ಸಲಹೆಗಾರರು, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ(UGC) ಅಧ್ಯಕ್ಷರು - ಹೀಗೆ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದರು ಎಂದು ಶ್ರೀಗಳು ಸ್ಮರಿಸಿದ್ದಾರೆ.

sutturu-sri-condolences-to-dr-manmohan-singh
ಸುತ್ತೂರು ಕ್ಷೇತ್ರದಲ್ಲಿ ಮಠದ ದಾಸೋಹ ಭವನ ಉದ್ಘಾಟನೆ ನೆರವೇರಿಸಿದ್ದ ಮನಮೋಹನ್ ಸಿಂಗ್ (ETV Bharat)

ಅಪ್ರತಿಮ ಪ್ರತಿಭಾವಂತರಾಗಿದ್ದರೂ ಅತ್ಯಂತ ಸರಳ, ಸಜ್ಜನ, ನಿಗರ್ವಿ, ವಿನೀತರಾಗಿದ್ದರು. ಇವೆಲ್ಲಕ್ಕೂ ಕಿರೀಟವಿಟ್ಟಂತೆ ಪಿ.ವಿ.ನರಸಿಂಹರಾವ್‌ ಅವರ ಸಂಪುಟದಲ್ಲಿ ಅರ್ಥಸಚಿವರಾಗಿ ಜಾಗತೀಕರಣ, ಉದಾರೀಕರಣ ಮೊದಲಾದವುಗಳ ಹರಿಕಾರರಾಗಿ ಭಾರತದ ಆರ್ಥಿಕ ಚಿತ್ರಣವನ್ನೇ ಬದಲಾಯಿಸಿದವರು ಎಂದು ತಿಳಿಸಿದ್ದಾರೆ.

ಡಾ.ಮನಮೋಹನ್ ಸಿಂಗ್‌ ಜೆಎಸ್‌ಎಸ್ ದಂತವೈದ್ಯಕೀಯ ಕಾಲೇಜಿನ ಕಟ್ಟಡದ ಭೂಮಿಪೂಜೆ ನೆರವೇರಿಸಿದ್ದುದು ಹಾಗೂ ಸುತ್ತೂರು ಶ್ರೀಕ್ಷೇತ್ರದಲ್ಲಿ ದಾಸೋಹ ಭವನ ಉದ್ಘಾಟಿಸಿದ್ದು ನಮ್ಮೆಲ್ಲರ ನೆನಪಿನಲ್ಲಿ ಚಿರಸ್ಥಾಯಿಯಾಗಿದೆ. ಪಕ್ಷಗಳ ಚೌಕಟ್ಟನ್ನು ಮೀರಿ ಬೆಳೆದಿದ್ದರು. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುತ್ತಿದ್ದ ಧೀಮಂತ ಚೇತನ. ರಾಜಕೀಯದಲ್ಲಿ ಸಜ್ಜನಿಕೆಯ ಕೊಂಡಿಯಂತಿದ್ದ ಹಳೆಯ ತಲೆಮಾರಿನ ಈ ಹಿರಿಯರ ಅಗಲುವಿಕೆ ಒಂದು ನಿರ್ವಾತ ಸ್ಥಿತಿ ನಿರ್ಮಿಸಿದೆ ಎಂದು ತಿಳಿಸಿದ್ದಾರೆ.

ದಿವಂಗತರ ಅಗಲುವಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸುತ್ತಾ ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು, ಅವರ ಕುಟುಂಬವರ್ಗದವರು, ಬಂಧುಮಿತ್ರರು ಹಾಗೂ ಕೋಟ್ಯಂತರ ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲೆಂದು ಹಾರೈಸುತ್ತೇವೆ ಎಂದು ಪ್ರಕಟಣೆಯಲ್ಲಿ ಶ್ರೀಗಳು ತಿಳಿಸಿದ್ದಾರೆ.

ಇದನ್ನೂ ಓದಿ: 'ಡಾ‌‌.ಮನಮೋಹನ್‌ ಸಿಂಗ್ ಅವರ ಜೊತೆ ನಾನೂ ರಾಜ್ಯಸಭಾ ಸದಸ್ಯನಾಗಿದ್ದೆ' - DR PRABHAKAR KORE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.