ETV Bharat / entertainment

ಅಮಿತಾಭ್​, ಶಾರುಖ್​​​ To ದೀಪಿಕಾ: ನಯಾ ಪೈಸೆ ಪಡೆಯದೇ ನಟಿಸಿದ ಸೂಪರ್​​ ಸ್ಟಾರ್​ಗಳಿವರು - STARS WHO ACTED FOR FREE

ಸಿನಿಮಾವನ್ನು ಆರಾಧಿಸುವ ಭಾರತೀಯ ಚಿತ್ರರಂಗದ ಕೆಲವು ಸೂಪರ್​ ಸ್ಟಾರ್‌ಗಳು ತಮ್ಮ ಕೆಲ ಚಿತ್ರಗಳಿಗಾಗಿ ಒಂದೇ ಒಂದು ರೂಪಾಯಿ ಸಂಭಾವನೆಯನ್ನೂ ಪಡೆದಿಲ್ಲ ಎಂಬುದು ಕುತೂಹಲದ ವಿಷಯ.

Amitabh and Deepika
ಅಮಿತಾಭ್​, ದೀಪಿಕಾ (Photo: ANI, IANS)
author img

By ETV Bharat Entertainment Team

Published : 16 hours ago

ಬಾಲಿವುಡ್ ಕಲಾವಿದರು ತಮ್ಮ ಅಮೋಘ ಅಭಿನಯಕ್ಕಾಗಿ ದೊಡ್ಡ ಮಟ್ಟದ ಶುಲ್ಕ ಪಡೆಯುತ್ತಾ ಸುದ್ದಿ ಮಾಡುತ್ತಿರುತ್ತಾರೆ. ಯಂಗ್​​ ಸ್ಟಾರ್ ಕಾರ್ತಿಕ್ ಆರ್ಯನ್ ಅವರು 'ಭೂಲ್ ಭುಲೈಯಾ 2' ಚಿತ್ರಕ್ಕೆ 15 ಕೋಟಿ ರೂಪಾಯಿ ಸಂಭಾವನೆ ಪಡೆದು ಗಮನ ಸೆಳೆದಿದ್ದರು. ಇದರ ಮುಂದುವರಿದ ಭಾಗವಾದ ಭೂಲ್ ಭುಲೈಯ್ಯಾ ಚಿತ್ರಕ್ಕೆ 45ರಿಂದ 50 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಎಂಬ ವದಂತಿಗಳಿವೆ. ಆದಾಗ್ಯೂ, ಒಂದೇ ಒಂದು ರೂಪಾಯಿ ಶುಲ್ಕ ಪಡೆಯದೇ ಸಿನಿಮಾಗಳಲ್ಲಿ ನಟಿಸಿರುವ ಉದಾಹರಣೆಗಳೂ ಇವೆ.

ಅಮಿತಾಭ್ ಬಚ್ಚನ್: ಐದು ದಶಕಗಳಿಂದ ಪ್ರೇಕ್ಷಕರನ್ನು ರಂಜಿಸುತ್ತಿರುವ ಪ್ರಸಿದ್ಧ ನಟ ಅಮಿತಾಭ್​​ ಬಚ್ಚನ್ ಅವರು ಹಣದ ಪ್ರತಿಫಲಕ್ಕಿಂತ ಸಿನಿಮಾ ಕಲೆಯನ್ನು ಹೆಚ್ಚಾಗಿ ಗೌರವಿಸುತ್ತಾರೆ. ಇದಕ್ಕೊಂದು ನಿದರ್ಶನವೆಂದರೆ 2005ರ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬ್ಲ್ಯಾಕ್​ ಸಿನಿಮಾ. ಸ್ಕ್ರಿಪ್ಟ್‌ನಿಂದಾಗಿ ಪ್ರಭಾವಿತರಾದ ಬಿಗ್​ ಬಿ, ಯಾವುದೇ ಶುಲ್ಕವನ್ನು ಪಡೆಯದೇ ಚಿತ್ರದಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದರು. ರಾಣಿ ಮುಖರ್ಜಿ ಪ್ರಮುಖ ಪಾತ್ರ ನಿರ್ವಹಿಸಿರುವ ಚಿತ್ರ ವಿಮರ್ಶಾತ್ಮಕವಾಗಿ ಮಾತ್ರವಲ್ಲದೇ ಬಾಕ್ಸ್​ ಆಫೀಸ್​ನಲ್ಲೂ ಯಶಸ್ಸು ಕಂಡಿತ್ತು. ಅಮಿತಾಭ್‌ರ ಅಮೋಘ ಅಭಿನಯ ವ್ಯಾಪಕ ಪ್ರಶಂಸೆ ಗಿಟ್ಟಿಸಿತ್ತು.

ಔದಾರ್ಯದ ಮತ್ತೊಂದು ಉದಾಹರಣೆಯಲ್ಲಿ, ಬರಹಗಾರ-ನಿರ್ದೇಶಕ ರೂಮಿ ಜಾಫ್ರಿ 2021ರ ಚಲನಚಿತ್ರ 'ಚೆಹ್ರೆ'ಯಲ್ಲಿ ಬಚ್ಚನ್ ತೊಡಗಿಸಿಕೊಂಡ ಬಗೆಯನ್ನು ಬಹಿರಂಗಪಡಿಸಿದರು. ಜಾಫ್ರಿ ಪ್ರಕಾರ, ಬಚ್ಚನ್ ಯಾವುದೇ ಶುಲ್ಕವನ್ನು ವಿಧಿಸಲು ನಿರಾಕರಿಸಿದರಲ್ಲದೇ, ಸಿನಿಮಾ ಬಜೆಟ್‌ಗೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಲು ಪೋಲೆಂಡ್‌ನ ಅವರ ಪ್ರಯಾಣ ಮತ್ತು ವಸತಿ ವೆಚ್ಚಗಳನ್ನೂ ಸಹ ಪಾವತಿಸಿದ್ದರು. ನಿರ್ಮಾಪಕ ಆನಂದ್ ಪಂಡಿತ್ ಅವರು ಬಜೆಟ್ ನಿರ್ಬಂಧಗಳಿಂದಾಗಿ ಬಚ್ಚನ್ ಅವರನ್ನು ಸಂಪರ್ಕಿಸಲು ಆರಂಭದಲ್ಲಿ ಹಿಂಜರಿದಿದ್ದರು ಎಂದು ಜಾಫ್ರಿ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅವರಿಗೆ ಆಶ್ಚರ್ಯವಾಗುವಂತೆ "ಈ ಚಿತ್ರಕ್ಕೆ ನಾನು ಯಾವುದೇ ಶುಲ್ಕ ಪಡೆಯುವುದಿಲ್ಲ, ಉಚಿತವಾಗಿ ಮಾಡುತ್ತೇನೆ" ಎಂದು ತಿಳಿಸಿದರು.

ಶಾರುಖ್ ಖಾನ್: ತಮ್ಮ ವರ್ಚಸ್ಸು ಮತ್ತು ಜಾಗತಿಕ ಆಕರ್ಷಣೆಗೆ ಹೆಸರುವಾಸಿಯಾಗಿರುವ ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರು ಶುಲ್ಕ ಪಡೆಯದೇ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅದಕ್ಕೆ ಕೆಲವು ಉದಾಹರಣೆಗಳೆಂದರೆ ಭೂತ್​​ನಾಥ್, ಕ್ರೇಜಿ 4 ಮತ್ತು ದುಲ್ಹಾ ಮಿಲ್ ಗಯಾ ಸೇರಿ ಹಲವು ಚಿತ್ರಗಳು. ಇವುಗಳಲ್ಲಿ ಅವರು ಅತಿಥಿ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇವಲ್ಲದೇ, ಆರ್.ಮಾಧವನ್ ಅವರ 'ರಾಕೆಟ್ರಿ: ದಿ ನಂಬಿ ಎಫೆಕ್ಟ್' ಮತ್ತು ಕಮಲ್ ಹಾಸನ್ ಅವರ ತಮಿಳು ಚಿತ್ರ 'ಹೇ ರಾಮ್'ನಲ್ಲಿ ಕಾಣಿಸಿಕೊಂಡ ಖಾನ್ ಅವರು ಯಾವುದೇ ಸಂಭಾವನೆಯನ್ನು ಸ್ವೀಕರಿಸಲಿಲ್ಲ. ರಾಕೆಟ್ರಿಯ ಕಥೆ ಕೇಳಿ, ಪ್ರಾಜೆಕ್ಟ್​ ಮೇಲೆ ಎಷ್ಟು ಉತ್ಸಾಹ ವ್ಯಕ್ತಪಡಿಸಿದರೆಂಬುದನ್ನು ಮಾಧವನ್​ ಬಹಿರಂಗಪಡಿಸಿದ್ದರು. ಅವರು ಹಣದ ಬಗ್ಗೆ ಚರ್ಚಿಸದೇ ತಕ್ಷಣವೇ ಚಿತ್ರದ ಭಾಗವಾಗಲು ಒಪ್ಪಿಕೊಂಡರು. ಅವರ ಒಳಗೊಳ್ಳುವಿಕೆ ಸಿನಿಮಾದ ತೂಕ ಹೆಚ್ಚಿಸಿತ್ತು.

ದೀಪಿಕಾ ಪಡುಕೋಣೆ: ನಟಿ ದೀಪಿಕಾ ಪಡುಕೋಣೆ ಸದ್ಯ ಬಾಲಿವುಡ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲೋರ್ವರು. ಆದ್ರೆ ಅವರ ಚೊಚ್ಚಲ ಚಿತ್ರ ಓಂ ಶಾಂತಿ ಓಂ (2007) ಸಮಯದಲ್ಲಿ ನಟಿ ಒಂದೇ ಒಂದು ಪೈಸೆಯನ್ನೂ ತೆಗೆದುಕೊಳ್ಳದೇ ಕೆಲಸ ಮಾಡಿದರು. ಫರಾ ಖಾನ್ ನಿರ್ದೇಶಿಸಿದ ಮತ್ತು ಶಾರುಖ್ ಖಾನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಚಿತ್ರವು ಪಡುಕೋಣೆಯ ಬಾಲಿವುಡ್​ ಭವಿಷ್ಯವನ್ನು ರೂಪಿಸಿತು. ದೀಪಿಕಾ ಎಸ್‌ಆರ್‌ಕೆ ಜೊತೆ ಕೆಲಸ ಮಾಡಲು ಮತ್ತು ಅಂಥ ದೊಡ್ಡ ಪ್ರಾಜೆಕ್ಟ್​ನ ಭಾಗವಾಗಲು ಬಹಳಾನೇ ಥ್ರಿಲ್​ ಆಗಿದ್ದರು ಎಂಬುದನ್ನು ವರದಿಗಳು ಹೇಳಿವೆ. ಹಣ ಅವರ ಕೊನೆಯ ವಿಷಯವಾಗಿತ್ತು. ಚಿತ್ರವು ಬ್ಲಾಕ್‌ಬಸ್ಟರ್ ಆಗಿದ್ದರಿಂದ ನಟಿಯ ಈ ನಿರ್ಧಾರ ಫಲ ನೀಡಿತು ಮತ್ತು ಅವರನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಪ್ರಮುಖ ನಟಿಯಾಗಿ ರೂಪಿಸಿತು.

ಶಾಹಿದ್ ಕಪೂರ್: ತಮ್ಮ ಅಮೋಘ ಅಭಿನಯ ಮತ್ತು ಅವರ ಪಾತ್ರಗಳ ಮೇಲಿನ ಬದ್ಧತೆಗೆ ಹೆಸರುವಾಸಿಯಾಗಿರುವ ಶಾಹಿದ್ ಕಪೂರ್ 2014ರಲ್ಲಿ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ 'ಹೈದರ್' ಸಿನಿಮಾಗೆ ಸಂಭಾವನೆ ಪಡೆದಿಲ್ಲ. ಷೇಕ್ಸ್‌ಪಿಯರ್‌ನ ಹ್ಯಾಮ್ಲೆಟ್‌ನ ರೂಪಾಂತರವಾದ ಈ ಚಿತ್ರಕ್ಕೆ ವಿಶಾಲ್ ಭಾರದ್ವಾಜ್ ಆ್ಯಕ್ಷನ್​ ಕಟ್​ ಹೇಳಿದ್ದರು. ಕಲಾತ್ಮಕ ದೃಷ್ಟಿಯನ್ನು ಕಾಪಾಡಿಕೊಳ್ಳಲು ಹೈ ಬಜೆಟ್‌ನ ಅಗತ್ಯವಿತ್ತು. ಶಾಹಿದ್ ಎಲ್ಲವನ್ನು ಅರ್ಥಮಾಡಿಕೊಂಡು ಚಿತ್ರಕ್ಕೆ ಯಾವುದೇ ಶುಲ್ಕವನ್ನು ವಿಧಿಸದಿರಲು ನಿರ್ಧರಿಸಿದರು. ಯಾವುದೇ ರಾಜಿಯಿಲ್ಲದೇ ಸಿನಿಮಾ ಉತ್ತಮವಾಗಿ ಮೂಡಿಬರಬೇಕೆಂಬುದು ಶಾಹಿದ್​ ಆಲೋಚನೆಯಾಗಿತ್ತು. 2023ರ ಸಂದರ್ಶನದಲ್ಲಿ, ನಟ ಈ ಚಿತ್ರದಲ್ಲಿ ಶುಲ್ಕ ಪಡೆಯದೇ ಕೆಲಸ ಮಾಡಿದ ಏಕೈಕ ವ್ಯಕ್ತಿ ಎಂಬುದನ್ನು ಬಹಿರಂಗಪಡಿಸಿದರು. ಅವರ ಸಾಮಾನ್ಯ ಸಂಭಾವನೆ ಚಿತ್ರದ ಬಜೆಟ್ ಅನ್ನು ಮೀರಿತ್ತು. ನಿರ್ಮಾಪಕರು ಅದನ್ನು ಪಾವತಿಸುವುದರಿಂದ ಯೋಜನೆಯನ್ನು ಪೂರ್ಣಗೊಳಿಸುವುದು ಅಸಾಧ್ಯ ಎಂಬುದನ್ನು ಸ್ಪಷ್ಟಪಡಿಸಿದ್ದರು.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಕೈಜೋಡಿಸಿದ ಟಾಲಿವುಡ್​ ಪ್ರೊಡಕ್ಷನ್​ ಹೌಸ್​: ಗಣಿ ಹೊಸ ಸಿನಿಮಾ ಅನೌನ್ಸ್

ಸಲ್ಮಾನ್ ಖಾನ್: ಬಾಲಿವುಡ್‌ನ ಬಿಗ್​ ಸ್ಟಾರ್‌ಗಳಲ್ಲಿ ಒಬ್ಬರಾದ ಸಲ್ಮಾನ್ ಖಾನ್, ಇಂಡಸ್ಟ್ರಿಯ ಸ್ನೇಹಿತರಿಗಾಗಿ ಸಹಾಯ ಹಸ್ತ ಚಾಚುವುದು ಹೊಸ ವಿಚಾರವಲ್ಲ. 2009ರ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ 'ಅಜಬ್ ಪ್ರೇಮ್ ಕಿ ಗಜಬ್ ಕಹಾನಿ'ಯಲ್ಲಿ ಸಲ್ಮಾನ್ ಖಾನ್​ ಅವರು ರಣ್​ಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಜೊತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಅವರ ಪಾತ್ರಕ್ಕಾಗಿ, ಯಾವುದೇ ಶುಲ್ಕ ಪಡೆಯಲಿಲ್ಲ ಎಂದು ವರದಿಯಾಗಿದೆ. ಸೌಹಾರ್ದತೆ ಮತ್ತು ಔದಾರ್ಯಕ್ಕೆ ಹೆಸರುವಾಸಿಯಾಗಿರುವ ಸಲ್ಮಾನ್ ಖಾನ್​​ ಸಂಭಾವನೆ ಪಡೆಯದೇ ಸ್ನೇಹಿತರು ಮತ್ತು ಸಹೋದ್ಯೋಗಿಗಳ ಚಲನಚಿತ್ರಗಳಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 35 ಕೋಟಿ ಬಜೆಟ್, 90 ಕೋಟಿಗೂ ಅಧಿಕ ಕಲೆಕ್ಷನ್​​​: ಈ ಸಿನಿಮಾ ಸೆಟ್​ನಲ್ಲಿ 35 ಸೀರೆಗಳನ್ನು ವಿತರಿಸಿದ್ದ ಸಲ್ಮಾನ್ ಖಾನ್

ನವಾಜುದ್ದೀನ್ ಸಿದ್ದಿಕಿ: ಅಮೋಘ ಅಭಿನಯಕ್ಕೆ ಹೆಸರುವಾಸಿಯಾಗಿರುವ ನವಾಜುದ್ದೀನ್ ಸಿದ್ದಿಕಿ ಅವರು ನಂದಿತಾ ದಾಸ್ ನಿರ್ದೇಶನದ 2018ರ ಬಯೋಪಿಕ್ 'ಮಂಟೋ'ದಲ್ಲಿ ಅಪ್ರತಿಮ ಉರ್ದು ಬರಹಗಾರ ಸಾದತ್ ಹಸನ್ ಮಂಟೋ ಪಾತ್ರಕ್ಕೆ ಜೀವ ತುಂಬಿದ್ದರು. ಪಾತ್ರದ ಮಹತ್ವ ಮತ್ತು ಚಿತ್ರದ ಸೀಮಿತ ಬಜೆಟ್ ಅರಿತ ಸಿದ್ದಿಕಿ ಯಾವುದೇ ಶುಲ್ಕ ಪಡೆಯದೇ ಕೆಲಸ ಮಾಡಲು ನಿರ್ಧರಿಸಿದರು. ನಿರ್ದೇಶಕಿ ನಂದಿತಾ ದಾಸ್ ಅವರು ಸಂದರ್ಶನವೊಂದರಲ್ಲಿ, ಸಿದ್ದಿಕಿ ಅವರ ನಿಸ್ವಾರ್ಥತೆಯನ್ನು ಹಾಡಿ ಹೊಗಳಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.