ಕರ್ನಾಟಕ

karnataka

ETV Bharat / entertainment

ಪುಷ್ಪ 2 ಚಿತ್ರದ ಎರಡನೇ ಸಿಂಗಲ್‌ನ ಅನೌನ್ಸ್‌ಮೆಂಟ್ ವಿಡಿಯೋ ಅನಾವರಣ - Pushpa 2 Songs - PUSHPA 2 SONGS

Pushpa 2: ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಪುಷ್ಪ 2' ಚಿತ್ರದ ಎರಡನೇ ಸಿಂಗಲ್‌ನ ಅನೌನ್ಸ್‌ಮೆಂಟ್ ವಿಡಿಯೋವನ್ನು ಗುರುವಾರ ಅನಾವರಣಗೊಳಿಸಲಾಗಿದೆ.

Pushpa 2 Second Single: Makers Drop Announcement Video Ft Rashmika; Song to Be out on THIS Date
ರಶ್ಮಿಕಾ ಮಂದಣ್ಣ (Pushpa 2 movie pic)

By ETV Bharat Karnataka Team

Published : May 23, 2024, 5:26 PM IST

ಹೈದರಾಬಾದ್:ಬಹು ನಿರೀಕ್ಷಿತ ಚಿತ್ರ 'ಪುಷ್ಪ 2' ಚಿತ್ರದ ಎರಡನೇ ಸಿಂಗಲ್‌ನ ಅನೌನ್ಸ್‌ಮೆಂಟ್ ವಿಡಿಯೋವನ್ನು ಗುರುವಾರ ಅನಾವರಣಗೊಳಿಸಲಾಗಿದೆ. ಇಂದು ಹಾಡಿನ ಝಲಕ್ ವಿಡಿಯೋ ಅಷ್ಟೇ ರಿಲೀಸ್ ಆಗಿದ್ದು ಫುಲ್ ಸಾಂಗ್ ಮೇ 29ರಂದು 11:07ಕ್ಕೆ ಬಿಡುಗಡೆ ಆಗಲಿದೆ. ಅಂದು ಶ್ರೀವಲ್ಲಿ (ರಶ್ಮಿಕಾ ಮಂದಣ್ಣ) ಮತ್ತು ಪುಷ್ಪಾ ರಾಜ್ (ಅಲ್ಲು ಅರ್ಜುನ್) ಅವರ ರೋಮ್ಯಾಂಟಿಕ್​ ದೃಶ್ಯವನ್ನು ಫ್ಯಾನ್ಸ್​ ಕಣ್ತುಂಬಿಕೊಳ್ಳಬಹುದು.

ಇತ್ತೀಚಿಗಷ್ಟೇ ಪುಷ್ಪ 2 ಸಿನಿಮಾ ಮೊದಲ ಸಾಂಗ್ ರಿಲೀಸ್ ಆಗಿತ್ತು. ಪುಷ್ಪ 2 ಸಿನಿಮಾದ 2ನೇ ಸಾಂಗ್​ ರಿಲೀಸ್​ ಬಗ್ಗೆ ನಟಿ ರಶ್ಮಿಕಾ ಮಂದಣ್ಣ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಹಾಡಿನ ಚಿತ್ರೀಕರಣ ಶೂಟ್ ಮಾಡಲು ತುಂಬಾ ಚೆನ್ನಾಗಿತ್ತು. ನಿಮ್ಮೆಲ್ಲರಿಗೂ ಈ ಹಾಡು ಇಷ್ಟವಾಗುತ್ತೆ ಎಂದು ಶೀರ್ಷಿಕೆ ಕೂಡ ಬರೆದುಕೊಂಡಿದ್ದರು. ಅಲ್ಲದೇ ಚಿತ್ರದ ಎರಡನೇ ಸಿಂಗಲ್​ ವಿಡಿಯೋ ಬಿಡುಗಡೆಯಾಗಲಿದೆ. ನಟಿ ಶ್ರೀವಲ್ಲಿ ಪಾತ್ರದ ಕುರಿತ ವಿಡಿಯೋದ ಘೋಷಣೆ ಇದಾಗಿದ್ದು, ನಾಳೆ ಬೆಳಗ್ಗೆ 11.07ಕ್ಕೆ ಈ ವಿಡಿಯೋ ನಿಮ್ಮ ಕಣ್ಣ ಮುಂದೆ ಇರಲಿದೆ. ಈ ಹಾಡು ದೊಡ್ಡ ಬ್ಲಾಸ್​ ಆಗಿದ್ದು, ನೀವು ಕೂಡ ಇದನ್ನು ಇಷ್ಟ ಪಡುತ್ತೀರಿ ಎಂದು ಪೋಸ್ಟ್​​ ಹಂಚಿಕೊಂಡಿದ್ದರು. ಅದರಂತೆ ಇಂದು ಚಿತ್ರದ 2ನೇ ಹಾಡಿನ ಝಲಕ್ ವಿಡಿಯೋ ಅಷ್ಟೇ ರಿಲೀಸ್ ಆಗಿದ್ದು, ಫುಲ್ ಸಾಂಗ್ ಮೇ 29ರಂದು 11:07ಕ್ಕೆ ಬಿಡುಗಡೆ ಆಗಲಿದೆ.

ಈಗಾಗಲೇ ಚಿತ್ರದ 'ಪುಷ್ಪ ಪುಷ್ಪ' ಹಾಡಿನ ಮೊದಲ ವಿಡಿಯೋ ಆರು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಇದು ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿತ್ತು. ದೇವಿ ಶ್ರೀ ಪ್ರಸಾದ್​ ಸಂಯೋಜನೆಯಲ್ಲಿ ಮೂಡಿ ಬಂದ ಈ ಹಾಡಿನಲ್ಲಿ ನಟ ಅಲ್ಲು ಅರ್ಜುನ್​ ಅವರ ಹೈ ಎನರ್ಜಿ ಡ್ಯಾನ್ಸ್​ ಕಾಣಬಹುದಾಗಿದೆ. ಇನ್ನು ಮೇ 29ರಂದು 11:07ಕ್ಕೆ ಬಿಡುಗಡೆ ಆಗಲಿರುವ ಹಾಡು ಶ್ರೀವಲ್ಲಿ ಪಾತ್ರದ ಕುರಿತು ಆಗಿರಬಹುದು ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.

ಚಿತ್ರದ ಮೊದಲ ಭಾಗದಲ್ಲಿದ್ದ 'ಸಾಮಿ ಸಾಮಿ' ಅಂತಹ ಮತ್ತೊಂದು ಚಾರ್ಟ್‌ಬಸ್ಟರ್ ಎಂದು ಹೇಳಲಾದ ಈ ಹಾಡು ತೆಲುಗು, ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ಬೆಂಗಾಲಿ ಸೇರಿ ಆರು ಭಾಷೆಗಳಲ್ಲಿ ಲಭ್ಯವಿರುತ್ತದೆ. ಮೇ 29 ರಂದು ಬೆಳಗ್ಗೆ 11.07ಕ್ಕೆ ಚಿತ್ರತಂಡ ಬಿಡುಗಡೆ ಮಾಡಲಿದೆ. #ಪುಷ್ಪಾ2ಸೆಕೆಂಡ್ ಸಿಂಗಲ್ - #ಸೂಸೆಕಿ (ತೆಲುಗು), #ಅಂಗಾರೋನ್ (ಹಿಂದಿ), #ಸೂದನ (ತಮಿಳು), #ನೋಡೋಕಾ (ಕನ್ನಡ), #ಕಂದಾಲೋ (ಮಲಯಾಳಂ), # ಆಗುನರ್ (ಬೆಂಗಾಲಿ) ಎಂಬ ಸಾಲಿನೊಂದಿಗೆ ಅಭಿಮಾನಿಗಳು ಮನ ತುಂಬಲಿದೆ. 5ನೇ AUG 2024 ರಂದು ವಿಶ್ವದಾದ್ಯಂತ ಗ್ರ್ಯಾಂಡ್ ಬಿಡುಗಡೆ ಎಂದು ಚಿತ್ರತಂಡ ಹೇಳಿಕೊಂಡಿದೆ.

ಸುಕುಮಾರ್ ನಿರ್ದೇಶನ ಹೇಳಿರುವ ಪುಷ್ಪ 2 ಚಿತ್ರದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ ಸೇರಿದಂತೆ ದೊಡ್ಡ ತಾರಾ ಬಳಗವೇ ನಟಿಸಿದೆ. ಚಿತ್ರವು ತೆಲುಗಿನ ಜೊತೆಗೆ ದಕ್ಷಿಣ ಭಾರತದ ಇತರ ಭಾಷೆಗಳಲ್ಲಿ ಆಗಸ್ಟ್ 15 ರಂದು ಗ್ರ್ಯಾಂಡ್ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ: 'ಪುಷ್ಪ 2' ಎರಡನೇ ಸಿಂಗಲ್​ ವಿಡಿಯೋಗೆ ಮುಹೂರ್ತ ಫಿಕ್ಸ್​; ಬ್ಲಾಸ್ಟ್​ ಸಾಂಗ್​ನಲ್ಲಿ ನಟಿ ರಶ್ಮಿಕಾ ಮಂದಣ್ಣ - Pushpa 2 Rashmika Mandanna Song

ABOUT THE AUTHOR

...view details