ಕರ್ನಾಟಕ

karnataka

ETV Bharat / entertainment

ದರ್ಶನ್ ಪ್ರಕರಣದ ಬಗ್ಗೆ ನಿರ್ಮಾಪಕ ಉಮಾಪತಿ ಹೇಳಿದ್ದೇನು? - Umapathy on Darshan case - UMAPATHY ON DARSHAN CASE

ನಿರ್ಮಾಪಕ ಉಮಾಪತಿ, ಹೆಚ್ಚು ಸುದ್ದಿಯಲ್ಲಿರುವ ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.

ನಿರ್ಮಾಪಕ ಉಮಾಪತಿ
ನಿರ್ಮಾಪಕ ಉಮಾಪತಿ (ETV Bharat)

By ETV Bharat Karnataka Team

Published : Jun 18, 2024, 2:22 PM IST

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರುವ ನಟ ದರ್ಶನ್ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಕಳೆದ ಒಂದು ವಾರದಿಂದ ಸುದ್ದಿಯಲ್ಲಿರುವ ನಟನ ಬಗ್ಗೆ ಹೇಳಿಕೆ ಕೊಡಲು ಕನ್ನಡ ಚಿತ್ರರಂಗದವರು ಮೀನಮೇಷ ಎಣಿಸುತ್ತಿದ್ದರು. ‌ನಿನ್ನೆ ಸುದೀಪ್ ಹಾಗೂ ಉಪೇಂದ್ರ ಪ್ರತಿಕ್ರಿಯಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದ್ದಾರೆ. ಇದರ ಬೆನ್ನಲ್ಲೇ ದರ್ಶನ್​ ನಟನೆಯ ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ, ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ‌.

ಆತ್ಮೀಯ ಸ್ನೇಹಿತರಾಗಿ ಗುರುತಿಸಿಕೊಂಡಿದ್ದ ದರ್ಶನ್ ಹಾಗೂ ಉಮಾಪತಿ ನಡುವೆ ಒಂದು ವರ್ಷದ ಹಿಂದೆ ಹಣದ ವಿಚಾರವಾಗಿ ಮುನಿಸು ಆರಂಭವಾಯ್ತು‌. ಆ ಬಳಿಕ ಒಬ್ಬರಿಗೊಬ್ಬರು ಪರೋಕ್ಷವಾಗಿ ಆರೋಪಗಳನ್ನ ಮಾಡಿಕೊಂಡಿದ್ದರು‌. ಕೆಲ ತಿಂಗಳ ಹಿಂದೆ ದರ್ಶನ್ ಅವರು ಕಾಟೇರ ಸಿನಿಮಾ ಸಕ್ಸಸ್ ಸಂದರ್ಭ, ನಿರ್ಮಾಪಕ ಉಮಾಪತಿ ಅವರಿಗೆ 'ನಿನಗೆ ರಾಬರ್ಟ್ ಸಿನಿಮಾ ಕಥೆ ಕೊಟ್ಟಿದ್ದು ನಾನು ತಗಡು' ಎಂದು ಹೇಳುವ ಮೂಲಕ ಮುನಿಸನ್ನು ಮುಂದುವರಿಸಿದ್ದರು‌. ಈ ಹೇಳಿಕೆಗೆ ನಿರ್ಮಾಪಕ ಉಮಾಪತಿ ಪ್ರತಿಕ್ರಿಯಿಸಿ, 'ಕಾಲ ಉತ್ತರ ಕೊಡುತ್ತೆ' ಎಂದು ತಿಳಿಸಿದ್ದರು.

ಇದೀಗ ರೇಣುಕಾಸ್ವಾಮಿ ಕೊಲೆ ಆರೋಪ ಹೊತ್ತಿರುವ ದರ್ಶನ್​​ ಬಗ್ಗೆ ನಿರ್ಮಾಪಕ ಉಮಾಪತಿ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಅವರು ಈ‌ ಸ್ಥಿತಿಗೆ ಬರಲು ಕಾರಣ ಅಹಂ, ಹಣ. ಮೊದಲು ಒಬ್ಬ ವ್ಯಕ್ತಿಗೆ ತಾಳ್ಮೆ ಇರಬೇಕು. ನಾನು ರಾಬರ್ಟ್ ಸಿನಿಮಾ ಮಾಡಬೇಕಾದ್ರೆ ಅವರ ವರ್ತನೆ ನೋಡಿದ್ದೇನೆ. ಕೆಲ ವಿಚಾರಗಳನ್ನು ತಿದ್ದಿಕೊಳ್ಳುವಂತೆ ನಾನು ಸಲಹೆ ನೀಡಿದ್ದೆ. ಮನುಷ್ಯನಿಗೆ ತಾಳ್ಮೆ ಇರಬೇಕು.‌ ಕರ್ಮ ಅನ್ನೋದು ಯಾರನ್ನೂ ಬಿಡಲ್ಲ. ಇನ್ನೂ ಈ ಕೊಲೆ ಪ್ರಕರಣದಲ್ಲಿ, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ತಿಳಿಸಿದ್ದಾರೆ. ನಿರ್ಮಾಪಕರ ಇನ್​ಸ್ಟಾಗ್ರಾಮ್​ ಸ್ಟೋರಿ ಸೆಕ್ಷನ್​ ಗಮನಿಸಿದ್ರೆ, ದರ್ಶನ್​​ ಅವರಿಗೆ ಟಾಂಗ್​ ಕೊಟ್ಟಿರೋದು ನಿಮಗೆ ತಿಳಿಯುತ್ತದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು : ಕಿಚ್ಚ ಸುದೀಪ್ - ACTOR SUDEEP REACTION

ನಾನು ಬೇರೆ ನಟರ ಜೊತೆ ಸಿನಿಮಾ‌ ಮಾಡುತ್ತೇನೆ ಎಂದಾಗ, ಹಣಕಾಸಿನ ವಿಚಾರದಲ್ಲಿ ನನ್ನನ್ನು ಸಿಲುಕಿಸಬೇಕು ಎಂಬ ಪ್ಲ್ಯಾನ್​ ಇತ್ತು. ಆ ವಿಚಾರದಿಂದ ನಾನು ಹೊರಬಂದಿದ್ದೆ. ಈ ಘಟನೆ ಆಗಿ ಒಂದು ವಾರದ ಬಳಿಕ ಮತ್ತೆ ಯಾವುದೋ ಜಮೀನಿನ ವಿಚಾರಕ್ಕೆ ನಿಮ್ಮ ಜೊತೆ ಮಾತನಾಡಬೇಕೆಂದು ದರ್ಶನ್ ಕರೆ ಮಾಡಿ ಮೈಸೂರಿನ ಒಂದು ಹೋಟೆಲ್​​ಗೆ ಬರಲು ತಿಳಿಸಿದ್ದರು. ಹೀಗೆ, ಆ ಹೋಟೆಲ್​ಗೆ ಹೋದ ಉಮಾಪತಿ ಸಾಕಷ್ಟು ಬಾರಿ ದರ್ಶನ್ ಅವರಿಗೆ ಫೋನ್ ಮಾಡಿದ್ರೂ ಸಂಪರ್ಕಕ್ಕೆ ಸಿಗಲ್ಲ. ಹೀಗೆ ನಾನಾ ವಿಚಾರಗಳಿಂದ ಉಮಾಪತಿ ಮತ್ತು ದರ್ಶನ್​​ ನಡುವೆ ಮನಸ್ತಾಪ ಉಂಟಾಗಿದೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ನಟ, ನಿರ್ದೇಶಕ ಉಪೇಂದ್ರ ಹೇಳಿದ್ದೇನು ಗೊತ್ತಾ! - Actor Upendra

ABOUT THE AUTHOR

...view details