ETV Bharat / bharat

ಭೀಕರ ರಸ್ತೆ ಅಪಘಾತ: ಆಟೋದಲ್ಲಿದ್ದ ಏಳು ಕೂಲಿ ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ - PATNA ROAD ACCIDENT 7 DIED

ಪಾಟ್ನಾದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ ಮತ್ತು ಆಟೋ ನಡುವೆ ಡಿಕ್ಕಿಯಾಗಿ 7 ಮಂದಿ ಮೃತಪಟ್ಟಿದ್ದಾರೆ.

Patna Road Accident
ಭೀಕರ ರಸ್ತೆ ಅಪಘಾತ: ಆಟೋದಲ್ಲಿದ್ದ ಏಳು ಕೂಲಿ ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ (ETV Bharat)
author img

By ETV Bharat Karnataka Team

Published : Feb 24, 2025, 7:57 AM IST

ಪಾಟ್ನಾ: ಬಿಹಾರ ರಾಜಧಾನಿ ಪಾಟ್ನಾದಲ್ಲಿ ಭಾನುವಾರ ತಡರಾತ್ರಿ ಟ್ರಕ್ ಮತ್ತು ಆಟೋ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಅಪಘಾತದ ಭೀಕರತೆಗೆ 7 ಮಂದಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಅನೇಕರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪಾಟ್ನಾದ ಮಸೌರಿಯಿಂದ ನೌಬತ್‌ಪುರ ಕಡೆಗೆ ತೆರಳುತ್ತಿದ್ದ ಆಟೋ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಘಟನೆಯಲ್ಲಿ 7 ಮಂದಿ ಸಾವನ್ನಪ್ಪಿದ್ದಾರೆ. ಆಟೋದಲ್ಲಿ 10 ಜನರಿದ್ದರು ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಎಲ್ಲ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಅಪಘಾತ ಸಂಭವಿಸಿದ್ದು ಹೇಗೆ?: ಮಸೌರಿ ಪಿತ್ವಾನ್ಸ್ ಮಾರ್ಗದ ನೂರಾ ಬಜಾರ್‌ನ ಮೋರಿ ಬಳಿ ಟ್ರಕ್ ಮತ್ತು ಆಟೋ ನಡುವೆ ಭಾರಿ ಡಿಕ್ಕಿ ಸಂಭವಿಸಿದೆ. ಅಪಘಾತದ ನಂತರ ಎರಡೂ ವಾಹನಗಳು ರಸ್ತೆ ಬದಿಯ ನೀರಿನಲ್ಲಿ ಬಿದ್ದಿವೆ. ಮೃತರ ಸಂಬಂಧಿಕರು ಹೇಳುವ ಪ್ರಕಾರ, ಕಾರ್ಮಿಕರೆಲ್ಲರೂ ಮಸೌರಿಯಿಂದ ಖಾರತ್ ಗ್ರಾಮಕ್ಕೆ ಆಟೋದಲ್ಲಿ ಹೋಗುತ್ತಿದ್ದರು. ಇವರೆಲ್ಲ ನಿತ್ಯ ಕೂಲಿ ಕೆಲಸಕ್ಕಾಗಿ ಪಾಟ್ನಾಕ್ಕೆ ತೆರಳಿ ರಾತ್ರಿ ವಾಪಸಾಗುತ್ತಿದ್ದರು. ಭಾನುವಾರ ರಾತ್ರಿಯೂ ಎಂದಿನಂತೆ ಕೆಲಸ ಮುಗಿಸಿಕೊಂಡು ತಮ್ಮೂರುಗಳಿಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.

Patna Road Accident
ಭೀಕರ ರಸ್ತೆ ಅಪಘಾತ: ಆಟೋದಲ್ಲಿದ್ದ ಏಳು ಕೂಲಿ ಕಾರ್ಮಿಕರ ದುರ್ಮರಣ, ಹಲವರಿಗೆ ಗಾಯ (ETV Bharat)

ಸತ್ತವರಲ್ಲಿ ಹೆಚ್ಚಿನವರು ಕಾರ್ಮಿಕರು: ಮೃತರಲ್ಲಿ 4 ಮಂದಿ ಡೋರಿಪರ್ ಗ್ರಾಮದ ನಿವಾಸಿಗಳು, ಇಬ್ಬರು ಬೇಗಮ್ಚಕ್ ನಿವಾಸಿಗಳಾಗಿದ್ದರೆ, ಚಾಲಕ ಹನ್ಸ್ದಿಹ್ ಗ್ರಾಮದ ನಿವಾಸಿಯಾಗಿದ್ದಾರೆ. ಮೃತರನ್ನು ಹಸದಿಹ್ ನಿವಾಸಿ 30 ವರ್ಷದ ಸುಶೀಲ್ ರಾಮ್ (ತಂದೆ ಲೇಟ್ ಶತ್ರುಘ್ನ ರಾಮ್), ಟೆಂಪೋ ಚಾಲಕ 40 ವರ್ಷದ ಮೆಶ್ ಬಿಂದ್ (ತಂದೆ ಶಿವನಾಥ್ ಬಿಂದ್), 40 ವರ್ಷದ ವಿನಯ್ ಬಿಂದ್ (ತಂದೆ ಲೇಟ್ ಸಂತೋಷಿ ಬಿಂದ್), 30 ವರ್ಷದ ಮಾತೇಂದ್ರ ಬಿಂದ್ (ತಂದೆ ಬಿಂದ್‌ಮೆರ್), 30 ವರ್ಷದ ಉಮೇಶ್ ಬಿಂದ್ (ತಂದೆ ಮಚ್ರು ಬಿಂದ್) ಮತ್ತು ವಯಸ್ಸನ್ನು ಬೇಗಂಚಾಕ್ ನಿವಾಸಿ 20 ವರ್ಷದ ಸೂರಜ್ ಠಾಕೂರ್ (ತಂದೆ ಅರ್ಜುನ್ ಠಾಕೂರ್) ಎಂದು ಗುರುತಿಸಲಾಗಿದೆ.

ಘಟನಾ ಸ್ಥಳಕ್ಕೆ ಶಾಸಕಿ ರೇಖಾದೇವಿ ಭೇಟಿ: ಘಟನೆಯ ಮಾಹಿತಿ ಸಿಕ್ಕ ತಕ್ಷಣ ಮಸೌರಿ ಶಾಸಕಿ ರೇಖಾದೇವಿ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದರು. ಅಪಘಾತಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ಮೃತರ ಅವಲಂಬಿತರಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

Patna Road Accident
ಭೀಕರ ರಸ್ತೆ ಅಪಘಾತ: ಆಟೋದಲ್ಲಿದ್ದ ಏಳು ಕೂಲಿ ಕಾರ್ಮಿಕರ ದುರ್ಮರಣ (ETV Bharat)

ಇದು ಅತ್ಯಂತ ನೋವಿನ ಘಟನೆ. ಇದುವರೆಗೆ ಏಳು ಜನರ ಶವಗಳನ್ನು ಹೊರತೆಗೆಯಲಾಗಿದೆ. ತಡರಾತ್ರಿಯಿಂದ ನಾವು ಘಟನಾ ಸ್ಥಳದಲ್ಲಿ ಇದ್ದೇವೆ. ಎಲ್ಲ ಮೃತರ ಅವಲಂಬಿತರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು. ಎಂದು ಮಸೌರಿ ಶಾಸಕಿ ರೇಖಾದೇವಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪೊಲೀಸರು ಹೇಳಿದ್ದೇನು?: ಮಸೌರಿ ಠಾಣೆ ವ್ಯಾಪ್ತಿಯ ನೂರಾ ಸೇತುವೆ ಬಳಿ ಟ್ರಕ್ ಮತ್ತು ಟೆಂಪೋ ನಡುವೆ ಡಿಕ್ಕಿ ಸಂಭವಿಸಿದ ಬಗ್ಗೆ ಮಾಹಿತಿ ಲಭಿಸಿದೆ ಎಂದು ಮಸೌರಿ ಪೊಲೀಸರು ತಿಳಿಸಿದ್ದಾರೆ. ಮಾಹಿತಿ ಪಡೆದ ಪೊಲೀಸ್ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಉಪವಿಭಾಗೀಯ ಪೊಲೀಸ್ ಅಧಿಕಾರಿ - 01 ಮಸೌರಿ ಸ್ಥಳವನ್ನು ಪರಿಶೀಲಿಸಿದ್ದು, 7 ಜನರ ಸಾವು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಎಸ್​ಎಚ್​​ಒ ವಿಜಯ್ ಯಾದವೆಂದು ತಿಳಿಸಿದ್ದಾರೆ.

ಇದನ್ನು ಓದಿ: ಶ್ರೀಲಂಕಾ ನೌಕಾಪಡೆಯಿಂದ 32 ತಮಿಳು ಮೀನುಗಾರರ ಬಂಧನ, 5 ದುಬಾರಿ ಬೋಟ್​ ವಶಕ್ಕೆ

ರೈಲ್ವೆ ಕಾಮಗಾರಿಗಾಗಿ ಮುಸ್ಲಿಮರಿಂದಲೇ 168 ವರ್ಷಗಳ ಹಳೆಯ ಮಸೀದಿ ತೆರವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.