ಕರ್ನಾಟಕ

karnataka

ETV Bharat / entertainment

Oscars ಅವಾರ್ಡ್ಸ್ 2024: ಈ ವರ್ಷವೂ ಆಸ್ಕರ್​ ಅಂಗಳದಲ್ಲಿ ಸದ್ದು ಮಾಡಿದ ರಾಮ್​ ಚರಣ್​-ಜೂ ಎನ್​ಟಿಆರ್​ - Ram Charan and Jr NTRs RRR

ವಿಶ್ವದಾದ್ಯಂತ ಸಿನಿಮಾಗಳಲ್ಲಿನ ಸಾಹಸ ದೃಶ್ಯಗಳ ಸಂಯೋಜಕರಿಗೆ ಗೌರವ ಸಲ್ಲಿಸುವ ವಿಡಿಯೋ ಕ್ಲಿಪ್​ನಲ್ಲಿ ಆರ್​ಆರ್​ಆರ್​ ಸಿನಿಮಾ ದೃಶ್ಯವನ್ನು ಕೂಡ ಸೇರಿಸಲಾಗಿದೆ.

oscars-2024-ss-rajamouli-rrr-roars-again-at-96th-academy-awards
oscars-2024-ss-rajamouli-rrr-roars-again-at-96th-academy-awards

By ETV Bharat Karnataka Team

Published : Mar 11, 2024, 10:28 AM IST

Updated : Mar 11, 2024, 1:34 PM IST

ಲಾಸ್​ ಏಂಜಲ್ಸ್​: ಇಲ್ಲಿನ ಡಾಲ್ಬಿ ಥಿಯೇಟರ್​ನಲ್ಲಿ ನಡೆದ 96ನೇ ಆಸ್ಕರ್​ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜಮೌಳಿ ನಿರ್ದೇಶನದ 'ಆರ್​ಆರ್​​ಆರ್'​ ಸಿನಿಮಾ ಸದ್ದು ಮಾಡಿದ್ದು, ಭಾರತೀಯರು ಸೇರಿದಂತೆ ಜಗತ್ತಿನ ಗಮನ ಸೆಳೆಯಿತು. ಆಸ್ಕರ್​ ನಾಮ ನಿರ್ದೇಶಿತ ನಟ ರಿಯನ್​​ ಗೊಸ್ಲಿಂಗ್​ ಮತ್ತು ಸಾಹಸ ಸಂಯೋಜಕ ಎಮಿಲಿ ಬ್ಲಂಟ್ ಅವರು​ ವಿಶ್ವದಾದ್ಯಂತ ಸಿನಿಮಾಗಳಲ್ಲಿ ಸ್ಟಂಟ್​ (ಸಾಹಸ) ಸಂಯೋಜಕರ ಕೆಲಸಕ್ಕೆ ಗೌರವವನ್ನು ಸಲ್ಲಿಸಿದರು.

ಈ ವೇಳೆ ಹಲವು ಪ್ರಮುಖ ಸಿನಿಮಾಗಳಲ್ಲಿನ ಸಾಹಸ ದೃಶ್ಯಗಳನ್ನು ಪ್ರದರ್ಶನದ ಮಾಡಲಾಯಿತು. ಈ ವಿಡಿಯೋದಲ್ಲಿ 'ಆರ್​ಆರ್​ಆರ್'​ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ಸಾಹಸದ ದೃಶ್ಯಗಳು ಪ್ರದರ್ಶಿತವಾಗಿದ್ದು, ಇದು ಇಂಟರ್ನೆಟ್​​​ನಲ್ಲಿ ಗಮನವನ್ನು ಸೆಳೆಯಿತು.

ರಿಯಾನ್ ಗೊಸ್ಲಿಂಗ್ ಮತ್ತು ಎಮಿಲಿ ಬ್ಲಂಟ್ ಅವರು ಸಾಹಸ ಪ್ರದರ್ಶನಕಾರರಿಗೆ ವಿಶೇಷ ಗೌರವವನ್ನು ಸಲ್ಲಿಸಲಾಯಿತು. ಈ ಇಬ್ಬರೂ ಸಹ ನಟರು ಈ ವರ್ಷ ಆಸ್ಕರ್​​ಗೆ ನಾಮ ನಿರ್ದೇಶನಗೊಂಡಿದ್ದಾರೆ. ಬ್ಲಾಕ್​ ಬಸ್ಟರ್​ ಸಿನಿಮಾಗಳಾದ 'ಓಪೆನ್‌ಹೈಮರ್‌'ಗಾಗಿ ಬ್ಲಂಟ್ ನಾಮ ನಿರ್ದೇಶನಗೊಂಡರೆ, 'ಬಾರ್ಬಿ'ಗಾಗಿ ಗೊಸ್ಲಿಂಗ್ ನಾಮ ನಿರ್ದೇಶಿತಗೊಂಡಿದ್ದಾರೆ.

ಆಸ್ಕರ್​ ಅಂಗಳದಲ್ಲಿ 'ಆರ್​ಆರ್​ಆರ್​' ದೃಶ್ಯವನ್ನು ಸ್ಟಂಟ್​​ ಎವಿ ಕ್ಲಿಪ್​ನಲ್ಲಿ ಪ್ರದರ್ಶಿತವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಚರ್ಚೆ ವಿಷಯವಾಗಿದೆ ಈ ಕುರಿತು ಎಕ್ಸ್​ನಲ್ಲಿ ಪ್ರತಿಕ್ರಿಯಿಸಿರುವ ಒಬ್ಬ ಬಳಕೆದಾರರು, ಮತ್ತೆ ನಮಗೆ ಸಿಹಿಯಾದ ಅಚ್ಚರಿಯನ್ನು ತಂದಿದೆ. ಅಕಾಡೆಮಿ ಆರ್​ಆರ್​ಆರ್​ ಚಿತ್ರದ ಸಾಹಸ ದೃಶ್ಯವನ್ನು ಸೇರಿಸುವ ಮೂಲಕ ವಿಶ್ವದ ಸಿನಿಮಾದಲ್ಲಿನ ಅದ್ಬುತ ಸಾಹಸ ದೃಶ್ಯಗಳಿಗೆ ಗೌರವ ಸಲ್ಲಿಸಿದೆ ಎಂದಿದ್ದಾರೆ.

ಕಳೆದ ವರ್ಷ ದಕ್ಷಿಣ ಭಾರತದ ಚಲನಚಿತ್ರಗಳಲ್ಲಿನ ಸಾಹಸ ದೃಶ್ಯಗಳನ್ನು ತಮಾಷೆ ಎಂದು ಪರಿಗಣಿಸಲಾಗಿತ್ತು. ಇದೇ ಕಾರಣದಿಂದ ನಮ್ಮನ್ನು ಗುರುತಿಸಿರಲಿಲ್ಲ. ಆದರೆ ಈಗ, ಆರ್‌ಆರ್‌ಆರ್‌ನ ಚಿತ್ರದ ಕೆಲವು ತುಣುಕುಗಳನ್ನು ಆಸ್ಕರ್‌ನಲ್ಲಿ 'ಅತ್ಯುತ್ತಮ ಸ್ಟಂಟ್ ಎವಿ ಕ್ಲಿಪ್' ನಲ್ಲಿ ತೋರಿಸಲಾಗಿದೆ. ರಾಜಮೌಳಿ, ನೀವು ಬಹಳ ದೂರ ಬಂದಿದ್ದೀರಿ ಎಂದು ಆರ್​ಆರ್​​ಆರ್​ ಚಿತ್ರಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ 'ಆರ್​ಆರ್​ಆರ್' ಸಿನಿಮಾ​​ ಜಾಗತಿಕ ಪ್ರಶಸ್ತಿ ಸಮಾರಂಭದಲ್ಲಿ ಮುಂಚೂಣಿಯಲ್ಲಿತು. ಕ್ರಿಟಿಕಲ್​ ಆಯ್ಕೆ ಪ್ರಶಸ್ತಿಯಲ್ಲಿ ಚಿತ್ರವೂ ಅತ್ಯುತ್ತಮ ವಿದೇಶಿ ಭಾಷಾ ಸಿನಿಮಾ ಮತ್ತು ಅತ್ಯುತ್ತಮ ಪ್ರಾದೇಶಿಕ ಹಾಡಿನ ಪ್ರಶಸ್ತಿಯನ್ನು 'ನಾಟು ನಾಟು' ಹಾಡಿ ಪಡೆದಿತ್ತು. ನಾಟು ನಾಟು ಹಾಡು ಲಾಸ್​ ಏಜಂಲ್ಸ್​ನಲ್ಲಿ ಕಳೆದ ವರ್ಷ ನಡೆದ 80ನೇ ಗೋಲ್ಡನ್​ ಗ್ಲೋಬ್​ ಪ್ರಶಸ್ತಿ ಸಮಾರಂಭದಲ್ಲೂ ಕೂಡ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಇದನ್ನೂ ಓದಿ: Oscars ಅವಾರ್ಡ್ಸ್ 2024: ಅತ್ಯುತ್ತಮ ಚಿತ್ರ-ಓಪನ್‌ಹೈಮರ್, ಅತ್ಯುತ್ತಮ ನಿರ್ದೇಶಕ-ಕ್ರಿಸ್ಟೋಫರ್ ನೋಲನ್

Last Updated : Mar 11, 2024, 1:34 PM IST

ABOUT THE AUTHOR

...view details