ETV Bharat / entertainment

ಗೇಮ್ ಚೇಂಜರ್ ನಿರ್ಮಾಪಕ ದಿಲ್ ರಾಜು, ಪುಷ್ಪ 2ರ ಮೈತ್ರಿ ಮೂವಿ ಮೇಕರ್ಸ್ ಮೇಲೆ ಐಟಿ ದಾಳಿ - ವಿಡಿಯೋ - IT RAIDS

ನಿರ್ಮಾಪಕರಿಗೆ ಸಂಬಂಧಿಸಿದ 8ಕ್ಕೂ ಹೆಚ್ಚು ಸ್ಥಳಗಳನ್ನು ಪರಿಶೀಲಿಸಲು 55ಕ್ಕೂ ಹೆಚ್ಚಿನ ತಂಡಗಳನ್ನು ರಚಿಸಲಾಗಿದೆ.

IT Raids on producers
ನಿರ್ಮಾಪಕರ ಮೇಲೆ ಐಟಿ ದಾಳಿ (Photo: ETV Bharat/ Film Poster)
author img

By ETV Bharat Entertainment Team

Published : Jan 21, 2025, 12:24 PM IST

ಹೈದರಾಬಾದ್: ಗೇಮ್ ಚೇಂಜರ್ ನಿರ್ಮಾಪಕ ಮತ್ತು ತೆಲಂಗಾಣ ಚಲನಚಿತ್ರ ಅಭಿವೃದ್ಧಿ ನಿಗಮ (ಎಫ್‌ಡಿಸಿ) ಅಧ್ಯಕ್ಷ ದಿಲ್ ರಾಜು ಅವರ ಕಚೇರಿ ಮತ್ತು ನಿವಾಸ ಹಾಗೂ ಪುಷ್ಪ ಫ್ರಾಂಚೈಸ್ ಹಿಂದಿರುವ ಪ್ರೊಡಕ್ಷನ್​ ಬ್ಯಾನರ್​ ಮೈತ್ರಿ ಮೂವಿ ಮೇಕರ್ಸ್‌ ಮೇಲೆ ಇಂದು ಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎರಡೂ ಸಿನಿಮಾಗಳಿಂದ ಗಳಿಕೆಯಾದ ಹಣ ಮತ್ತು ಐಟಿ ರಿಟರ್ನ್ಸ್ ನಡುವಿನ ವ್ಯತ್ಯಾಸಗಳ ಕುರಿತು ಪ್ರಾಥಮಿಕ ಮಾಹಿತಿಯ ಆಧಾರದ ಮೇಲೆ ಐಟಿ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

ದಾಳಿಗೆ 55ಕ್ಕೂ ಹೆಚ್ಚು ತಂಡಗಳ ರಚನೆ : ವ್ಯಾಪಕ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ದಿಲ್ ರಾಜು ಮತ್ತು ಮೈತ್ರಿ ಮೂವಿ ಮೇಕರ್ಸ್ ಮುಖ್ಯಸ್ಥರಾದ ನವೀನ್ ಯೆರ್ನೇನಿ, ಯಲಮಂಚಿಲಿ ರವಿಶಂಕರ್ ಅವರಿಗೆ ಸಂಬಂಧಿಸಿದ 8ಕ್ಕೂ ಹೆಚ್ಚು ಸ್ಥಳಗಳನ್ನು ಪರಿಶೀಲಿಸಲು 55ಕ್ಕೂ ಹೆಚ್ಚಿನ ತಂಡಗಳನ್ನು ರಚಿಸಲಾಗಿದೆ.

ನಿರ್ಮಾಪಕರ ಕಚೇರಿ, ನಿವಾಸದ ಮೇಲೆ ಐಟಿ ದಾಳಿ (Video: PTI)

ದಿಲ್ ರಾಜು, ನವೀನ್ ಯೆರ್ನೇನಿ, ರವಿಶಂಕರ್ ಮತ್ತು ಅವರ ಸಂಬಂಧಿಕರಿಗೆ ಸಂಬಂಧಿಸಿದ ಜುಬಿಲಿ ಹಿಲ್ಸ್ ಹಾಗೂ ಬಂಜಾರ ಹಿಲ್ಸ್ ನಲ್ಲಿರುವ ಆಸ್ತಿಪಾಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವರದಿಯಾದ ಹಣಕಾಸಿನ ವ್ಯತ್ಯಾಸಗಳ ಹಿನ್ನೆಲೆ, ದಿಲ್ ರಾಜು ಅವರ ಸಹೋದರ ಶಿರೀಶ್, ಮಗಳು ಹನ್ಶಿತಾ ರೆಡ್ಡಿ ಮತ್ತು ಇತರೆ ಸಂಬಂಧಿಕರ ತನಿಖೆಯೂ ನಡೆಯುತ್ತಿದೆ. ಸಿನಿಮಾ ನಿರ್ಮಾಣ ವ್ಯವಹಾರ ಮಾತ್ರವಲ್ಲದೇ, ದಿಲ್​ ರಾಜು ರಿಯಲ್ ಎಸ್ಟೇಟ್‌ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದು, ತನಿಖೆಯ ಭಾಗವಾಗಿ ಅಧಿಕಾರಿಗಳು ಪ್ರತೀ ವಹಿವಾಟನ್ನು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ಶೂಟಿಂಗ್​ ಸೆಟ್​ಗೆ ಬಾರದ ನಟ; ಮನೆಗೆ ಹೋಗಿ ನೋಡಿದ್ರೆ ಯೋಗೇಶ್ ಮಹಾಜನ್ ಶವವಾಗಿ ಪತ್ತೆ!

ನವೀನ್ ಯೆರ್ನೇನಿ ಮತ್ತು ಯಲಮಂಚಿಲಿ ರವಿಶಂಕರ್ ನೇತೃತ್ವದ ಮೈತ್ರಿ ಮೂವಿ ಮೇಕರ್ಸ್ ಪ್ರೊಡಕ್ಷನ್​ ಬ್ಯಾನರ್​ ಬಗ್ಗೆ ಗಮನಿಸೋದಾದ್ರೆ, ಅಲ್ಲು ಅರ್ಜುನ್ ಅಭಿನಯದ ಪುಷ್ಪ 2: ದಿ ರೂಲ್ ಚಿತ್ರದೊಂದಿಗೆ 2024ರಲ್ಲಿ ಭರ್ಜರಿ ಯಶಸ್ಸನ್ನು ಕಂಡಿದೆ. 400 ರಿಂದ 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾದ ಈ ಚಿತ್ರವು ವಿಶ್ವದಾದ್ಯಂತ 1,800 ಕೋಟಿ ರೂಪಾಯಿಗೂ ಹೆಚ್ಚು ಗಳಿಸಿದೆ. ವರದಿಗಳ ಪ್ರಕಾರ, ಚಿತ್ರ ಗಳಿಸಿರೋ ಆದಾಯ ಮತ್ತು ಪಾವತಿಸಿದ ಆದಾಯ ತೆರಿಗೆಯಲ್ಲಿ ವ್ಯತ್ಯಾಸವಿದ್ದು, ಇದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಹಾಗಾಗಿ, ಇಂದು ದಾಳಿ ನಡೆದಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಸೈಫ್​ಗೆ ಚಾಕುವಿನಿಂದ ಇರಿದ ಬಳಿಕ ಆರೋಪಿ ಚೆನ್ನಾಗಿ ನಿದ್ರಿಸಿದ್ದ, ಬಟ್ಟೆ ಬದಲಿಸಿ ಪ್ರಯಾಣ ಬೆಳೆಸಿದ್ದ: ಪೊಲೀಸ್

ಐಟಿ ದಾಳಿ ಹಿಂದಿನ ಕಾರಣ ಅಸ್ಪಷ್ಟವಾಗಿದ್ದರೂ, ಟಾಲಿವುಡ್​ನ ಪ್ರಮುಖ ನಿರ್ಮಾಪಕರು ಮತ್ತು ಬ್ಯಾನರ್‌ಗಳ ಸಂಭವನೀಯ ಹಣಕಾಸಿನ ಅಕ್ರಮದ ಬಗ್ಗೆ ಸುಳಿವು ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.