ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಆರ್‌ಆರ್‌ಆರ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್ನ ಬಹುನಿರೀಕ್ಷಿತ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಶುರುವಾಗಿದೆ. '#NTRNeel' ಎಂಬ ತಾತ್ಕಾಲಿಕ ಶೀರ್ಷಿಕೆಯ ಸಿನಿಮಾ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಫೆಬ್ರವರಿ 20ರಂದು ಸೆಟ್ಟೇರಿದೆ.
ಚಿತ್ರದ ಹಿಂದಿರುವ ಕ್ರಿಯೇಟಿವ್ ಟೀಮ್ ಮತ್ತು ಬಿಗ್ ಬಜೆಟ್ನಿಂದಾಗಿ ಆರಂಭದಿಂದಲೂ ಚರ್ಚೆಯ ವಿಷಯವಾಗಿದೆ. ಬಜೆಟ್ ಮತ್ತು ಎಕ್ಸಿಕ್ಯೂಷನ್ ವಿಷಯದಲ್ಲಿ 'ಎನ್ಟಿಆರ್ನೀಲ್' ಇತ್ತೀಚಿನ ವರ್ಷಗಳಲ್ಲಿನ ಅತಿದೊಡ್ಡ ಚಲನಚಿತ್ರಗಳ ಪಟ್ಟಿ ಸೇರುವ ಗುರಿ ಹೊಂದಿದೆ.
ಇತ್ತೀಚಿನ ವರ್ಷಗಳಲ್ಲಿ ಸಿನಿಮಾ ಇಂಡಸ್ಟ್ರಿಯು ಕೆಲ ಬಿಗ್ ಬಜೆಟ್ ಸಿನಿಮಾಗಳಿಗೆ ಸಾಕ್ಷಿಯಾಗಿದೆ. ನಾವಿಲ್ಲಿ ಮಾತನಾಡುತ್ತಿರುವುದು 50-100 ಕೋಟಿ ರೂ. ವೆಚ್ಚದ ಸಿನಿಮಾಗಳಲ್ಲ. ಬದಲಾಗಿ, ಅದಕ್ಕೂ ದೊಡ್ಡ ಮಟ್ಟದ್ದು. ಅದರಂತೆ ಮುಂಬರುವ ತೆಲುಗು ಆ್ಯಕ್ಷನ್ ಸಿನಿಮಾ ಚಲನಚಿತ್ರೋದ್ಯಮದ ವಿಷಯಗಳನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ಯುವ ಭರವಸೆ ಮೂಡಿಸಿದೆ.
ಹೌದು, ಈ ಬಹುನಿರೀಕ್ಷಿತ ಚಿತ್ರ 360 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಈವರೆಗಿನ ಬಿಗ್ ಬಜೆಟ್‌ನ ಭಾರತೀಯ ಚಿತ್ರಗಳಲ್ಲಿ ಒಂದಾಗಿದೆ. ಆ್ಯಕ್ಷನ್ ಸನ್ನಿವೇಶಗಳಿಂದ ಚಿತ್ರದ ಖರ್ಚುವೆಚ್ಚಗಳನ್ನು ಅಂದಾಜಿಸಬಹುದು. ಎನ್ಟಿಆರ್ನೀಲ್ ಪ್ರೊಜೆಕ್ಟ್ಗೆ ಸಂಬಂಧಿಸಿದ ಫೋಟೋಗಳು ಈಗಾಗಲೇ ಇಂಟರ್ನೆಟ್ನಲ್ಲಿ ಬಿರುಗಾಳಿಯೆಬ್ಬಿಸಿವೆ.
ಕಳೆದ ಗುರುವಾರ ನಿರ್ಮಾಪಕರು ಚಿತ್ರೀಕರಣವನ್ನು ಹೈ ಇಂಟೆನ್ಸಿಟಿ ಆ್ಯಕ್ಷನ್ ಸೀಕ್ವೆನ್ಸ್‌ನೊಂದಿಗೆ ಪ್ರಾರಂಭಿಸಿದ್ದು, ಇದು ಪ್ರೊಡಕ್ಷನ್ನ ಪ್ರಮಾಣಕ್ಕೆ ಸಾಕ್ಷಿಯಾಗಿದೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾದ ಗಲಭೆಯ ಅಥವಾ ಪ್ರತಿಭಟನೆಯ ದೃಶ್ಯವು ಸುಮಾರು 3,000 ಹೆಚ್ಚುವರಿ ಕಲಾವಿದರನ್ನು ಒಳಗೊಂಡಿದ್ದು, ಚಲನಚಿತ್ರ ನಿರ್ಮಾಣ ವಿಷಯದಲ್ಲಿ ಹೊಸ ಮಾನದಂಡಗಳನ್ನು ಸೃಷ್ಟಿಸಿದೆ.
ಪ್ರಶಾಂತ್ ನೀಲ್ ಅವರು ತಮ್ಮ ವಿಶಾಲ ದೃಷ್ಟಿಕೋನದಿಂದ ನಿರ್ದೇಶನಾ ಶೈಲಿಯನ್ನು ಒಂದು ಹಂತ ಮೇಲೇರಿಸಿದ್ದಾರೆ. ಕೆಜಿಎಫ್ ಫ್ರಾಂಚೈಸಿಯಂತಹ ಚಲನಚಿತ್ರಗಳೊಂದಿಗೆ, ತಮ್ಮ ಪ್ರತಿಭಾ ಪ್ರದರ್ಶನವನ್ನು ಮುಂದುವರಿಸಲು ಯೋಜಿಸುತ್ತಿದ್ದಾರೆ. ಅವರೊಂದಿಗೆ ಎಸ್ಎಸ್ ರಾಜಮೌಳಿ ಅವರ ಬ್ಲಾಕ್ಬಸ್ಟರ್ 'ಆರ್‌ಆರ್‌ಆರ್'ನಲ್ಲಿನ ಗಮನಾರ್ಹ ನಟನೆಯಿಂದ ಹೆಸರುವಾಸಿಯಾಗಿರುವ ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುವ ಹಿನ್ನೆಲೆಯಲ್ಲಿ ಸಿನಿಮಾ ಮೇಲಿನ ನಿರೀಕ್ಷೆಗಳು ದೊಡ್ಡಮಟ್ಟದಲ್ಲಿದೆ. ಜೂ.ಎನ್‌ಟಿಆರ್ - ನೀಲ್ ಕಾಂಬಿನೇಷನ್ನಲ್ಲಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.
ಇದನ್ನೂ ಓದಿ:ಏಕಕಾಲದಲ್ಲಿ ಕನ್ನಡ, ಇಂಗ್ಲಿಷ್ನಲ್ಲಿ ಚಿತ್ರೀಕರಣಗೊಳ್ಳುತ್ತಿದೆ 'ಟಾಕ್ಸಿಕ್' : ಪ್ರಪಂಚದಾದ್ಯಂತದ ಪ್ರೇಕ್ಷಕರನ್ನು ತಲುಪುವ ಗುರಿ
ಚಿತ್ರತಂಡ 360 ಕೋಟಿ ರೂಪಾಯಿ ಬಜೆಟ್ ಅನ್ನು ಅಧಿಕೃತವಾಗಿ ದೃಢಪಡಿಸದಿದ್ದರೂ, ದಿನಪತ್ರಿಕೆಗಳು ಈ ಅಂಕಿಅಂಶವನ್ನು ಉಲ್ಲೇಖಿಸಿವೆ. ಬಹುನಿರೀಕ್ಷಿತ ಯೋಜನೆಯಾಗಿದ್ದು, ಇತ್ತೀಚಿನ ದಿನಗಳ ತೆಲುಗು ಚಿತ್ರರಂಗದ ಬಿಗ್ ಬಜೆಟ್ ಚಿತ್ರಗಳಲ್ಲಿ ಒಂದು. ಬಾಲಿವುಡ್ ಚಿತ್ರ 'ಛಾವಾ', ಅಕ್ಷಯ್ ಕುಮಾರ್ ಅವರ 'ಹೌಸ್‌ಫುಲ್ 5' ಮತ್ತು ಜೂನಿಯರ್ ಎನ್‌ಟಿಆರ್ ಅವರದ್ದೇ ಮತ್ತೊಂದು ಚಿತ್ರ 'ವಾರ್ 2'ಗೂ ಹೆಚ್ಚಿನ ಬಜೆಟ್ ಅನ್ನು ಎನ್‌ಟಿಆರ್ ನೀಲ್ ಹೊಂದಿದೆ.
ಇದನ್ನೂ ಓದಿ:ಛಾವಾ: 10 ದಿನಗಳಲ್ಲಿ 326 ಕೋಟಿ ಕಲೆಕ್ಷನ್ ಮಾಡಿದ ಸಂಭಾಜಿ ಮಹಾರಾಜರ ಜೀವನಾಧಾರಿತ ಚಿತ್ರ
ಜೂನಿಯರ್ ಎನ್‌ಟಿಆರ್ ಅವರ ವೃತ್ತಿಜೀವನದಲ್ಲೇ ಈ ಸಿನಿಮಾ ಒಂದು ಮೈಲಿಗಲ್ಲು ಸೃಷ್ಟಿಸಲಿದೆ ಎಂದು ನಂಬಲಾಗಿದೆ. ಆರ್‌ಆರ್‌ಆರ್ ನಂತರ ದೇವರ ತೆರೆಕಂಡು ಹಿಟ್ ಆಗಿದ್ದು, ಎನ್ಟಿಆರ್ನೀಲ್ ಮತ್ತೊಂದು ಬಹುನಿರೀಕ್ಷಿತ ಚಿತ್ರ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು, ಮಾರ್ಚ್ ತಿಂಗಳಲ್ಲಿ ಸೆಟ್‌ಗೆ ಆಗಮಿಸುವ ನಿರೀಕ್ಷೆಯಿದೆ. ಮೈತ್ರಿ ಮೂವಿ ಮೇಕರ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ನಿರ್ಮಾಣದ ಈ ಚಿತ್ರವು ಮುಂದಿನ ವರ್ಷ ಜನವರಿ 9ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.