ಕರ್ನಾಟಕ

karnataka

ETV Bharat / entertainment

ವಿಚ್ಛೇದನ ವದಂತಿಗೆ ಫುಲ್​ಸ್ಟಾಪ್: ​ಪತಿ, ಮಕ್ಕಳೊಂದಿಗಿನ ಫೋಟೋ ಹಂಚಿಕೊಂಡ ನಯನತಾರಾ - Nayanthara with her boys

ಪತಿ ಹಾಗೂ ತಮ್ಮ ಅವಳಿ ಮಕ್ಕಳ ಜೊತೆಗೆ ಫೋಟೋ ಹಂಚಿಕೊಳ್ಳುವ ಮೂಲಕ 'ಲೇಡಿ ಸೂಪರ್​ ಸ್ಟಾರ್' ಜನಪ್ರಿಯತೆಯ ನಟಿ​ ನಯನತಾರಾ ಇತ್ತೀಚೆಗಿನ ವಿಚ್ಛೇದನ ವದಂತಿಯನ್ನು ಅಲ್ಲಗಳೆದಿದ್ದಾರೆ.

Nayanthara shared photo with her boys hubby
ಪತಿ, ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡ ನಯನತಾರಾ

By ETV Bharat Karnataka Team

Published : Mar 8, 2024, 2:26 PM IST

ಲೇಡಿ ಸೂಪರ್​ಸ್ಟಾರ್​ ನಯನತಾರಾ ಇನ್​ಸ್ಟಾಗ್ರಾಂನಲ್ಲಿ ಪತಿ ವಿಘ್ನೇಶ್​ ಅವರನ್ನು ಅನ್​ಫಾಲೋ ಮಾಡಿದ್ದ ಸುದ್ದಿಯ ಬಳಿಕ ಇದೀಗ ಪತಿ ಹಾಗೂ ತಮ್ಮ ಅವಳಿ ಮಕ್ಕಳ ಜೊತೆ ವಿಮಾನ ಪ್ರಯಾಣ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಯನತಾರಾ ಇತ್ತೀಚೆಗೆ ಇನ್​ಸ್ಟಾಗ್ರಾಂನಲ್ಲಿ ಪತಿ ವಿಘ್ನೇಶ್​ ಅವರನ್ನು ಅನ್​ಫಾಲೋ ಮಾಡಿದ್ದರು. ಇದರ ಬೆನ್ನಲ್ಲೇ ವಿಚ್ಛೇದನದ ಸುದ್ದಿಗಳು ಹರಿದಾಡಿದ್ದವು. ಆದರೆ ಇದೀಗ ವಿಘ್ನೇಶ್​ ಮತ್ತು ಮಕ್ಕಳಾದ ಉಳಗ್​ ಹಾಗೂ ಉಯಿರ್​ ಜೊತೆಗಿನ ಫೋಟೋಗಳನ್ನು ಶೇರ್​ ಮಾಡಿಕೊಳ್ಳುವ ಮೂಲಕ ವಿಚ್ಛೇದನ ವದಂತಿಯನ್ನು ತಳ್ಳಿಹಾಕಿದ್ದಾರೆ.

ಫೋಟೋದಲ್ಲಿ ಅವಳಿ ಮಕ್ಕಳಲ್ಲಿ ಒಬ್ಬ ಮಗನನ್ನು ತಾವೂ, ಇನ್ನೊಬ್ಬ ಮಗನನ್ನು ಪತಿ ವಿಘ್ನೇಶ್​ ಹಿಡಿದುಕೊಂಡು ನಗುತ್ತಿರುವುದನ್ನು ನೋಡಬಹುದು. ಇಬ್ಬರೂ ಮ್ಯಾಚಿಂಗ್​ ಬಟ್ಟೆ ಧರಿಸಿದ್ದಾರೆ. ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಫೋಟೋ ಹಂಚಿಕೊಂಡಿರುವ ನಯನತಾರಾ, "@wikkiofficial ಟ್ರಾವೆಲ್ ವಿಥ್​ ಮೈ ಬಾಯ್ಸ್ ಆಫ್ಟರ್​ ಸೋ ಲಾಂಗ್​" ಎಂದು ಹಾರ್ಟ್​ ಎಮೋಜಿಗಳೊಂದಿಗೆ ಶೀರ್ಷಿಕೆ ನೀಡಿದ್ದಾರೆ.

ಪತಿ, ಮಕ್ಕಳ ಜೊತೆಗಿನ ಫೋಟೋ ಹಂಚಿಕೊಂಡ ನಯನತಾರಾ

ಇದಕ್ಕೂ ಮೊದಲು ನಯನತಾರಾ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ, "ನಾನು ಕಳೆದುಹೋಗಿದ್ದೇನೆ" ಎಂದು ಪೋಸ್ಟ್​ ಮಾಡಿದ್ದರು. ನಯನತಾರಾ ವಿಘ್ನೇಶ್​ ಅವರನ್ನು ಅನ್​ಫಾಲೋ ಮಾಡಿದಂತಹ ಸಂದರ್ಭದಲ್ಲಿ ಅಭಿಮಾನಿಗಳು ಸೋಶಿಯಲ್​ ಮೀಡಿಯಾಗಳಲ್ಲಿ ಕಳವಳ ವ್ಯಕ್ತಪಡಿಸಿದ್ದರು. ಇದೀಗ ನಟಿಯ ಹೊಸ ಇನ್​ಸ್ಟಾಗ್ರಾಂ ಸ್ಟೋರಿ ನೋಡಿ ಅಭಿಮಾನಿಗಳು ಸಂತೋಷಗೊಂಡಿದ್ದು, ಜೋಡಿಯನ್ನು ಹರಸುತ್ತಿದ್ದಾರೆ.

ಪತಿಯನ್ನು ಅನ್​ಫಾಲೋ ಮಾಡಿದ ವೇಳೆ ಕೆಲವರು, ನಟಿಯ ಹೊಸ ಪ್ರಾಜೆಕ್ಟ್​ ಬಗ್ಗೆ ಈ ರೀತಿ ಬರೆದುಕೊಂಡಿದ್ದಾರೆ. ಇಲ್ಲದಿದ್ದಲ್ಲಿ ಸುಮ್ಮನೆ ಸುದ್ದಿಯಾಗಲು ಹೀಗೆ ಮಾಡಿರಬಹುದು ಎಂಬೆಲ್ಲ ಕಮೆಂಟ್​ಗಳನ್ನು ಮಾಡಿದ್ದರು.

ನಯನತಾರಾ ಮತ್ತು ವಿಘ್ನೇಶ್​ 2022ರ ಜೂನ್​ 9ರಂದು ಮಾದುವೆಯಾಗಿದ್ದರು. 2022 ಅಕ್ಟೋಬರ್‌ನಲ್ಲಿ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳಿಗೆ ತಂದೆ ತಾಯಿಯಾದರು. ನಯನತಾರಾ ಕೊನೆಯದಾಗಿ ಬಾಲಿವುಡ್​ ಸ್ಟಾರ್​ ಶಾರುಖ್​ ಖಾನ್​ ಜೊತೆಗೆ ಜವಾನ್​ ಚಿತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ:'ಅವತಾರ ಪುರುಷ 2' ಬಿಡುಗಡೆಗೆ ಮುಹೂರ್ತ ಫಿಕ್ಸ್

ABOUT THE AUTHOR

...view details